ಶಿಬಾರದಲ್ಲಿ ಪರವು, ವಿಜೃಂಭಣೆಯ ಮೆರವಣಿಗೆ

ಶಿಬಾರದಲ್ಲಿ ಪರವು, ವಿಜೃಂಭಣೆಯ ಮೆರವಣಿಗೆ

ದಾವಣಗೆರೆ, ಸೆ. 13- ನಗರದ ಕೊಂಡಜ್ಜಿ ರಸ್ತೆಯ ಶ್ರೀ ಕ್ಷೇತ್ರ ಶಿಬಾರದ  ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ 37 ನೇ ವರ್ಷದ ಶ್ರಾವಣ ಮಾಸದ ಕಡೆಯ ದಿನದ ಪ್ರಯುಕ್ತ ಪರವು, ಪವಾಡ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗಿನ ಜಾವ ಸ್ವಾಮಿಗೆ ಅಭಿಷೇಕ, ನಂತರ ರಾಜ ಬೀದಿಗಳಲ್ಲಿ ಮುತ್ತೈದೆಯರ ಕುಂಭ ಮೇಳ, ಕಳಸ ಆರತಿ ಯೊಂದಿಗೆ ವಿಜೃಂಭಣೆ ಮೆರವಣಿಗೆ ನಡೆಸಲಾಯಿತು.

ಹದಡಿ ಚಂದ್ರಗಿರಿ ಮಠದ ಶ್ರೀ ಮರುಳೀಧರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಟ್ರಸ್ಟ್ ಅಧ್ಯಕ್ಷ ಮಲ್ಲೇಶ್ ಖಂಡ್ರಳ್ಳಿ, ಕಾರ್ಯದರ್ಶಿ ವೀರಣ್ಣ, ಸಹ ಕಾರ್ಯದರ್ಶಿ ಗೋಪಾಲರಾವ್ ಸಾವಂತ್, ಖಜಾಂಚಿ ಬಳ್ಳಾರಿ ಜಯಣ್ಣ, ದೂಡಾ ಮಾಜಿ ಅಧ್ಯಕ್ಷ ಮಾಲತೇಶರಾವ್ ಜಾಧವ್ ಮತ್ತಿತರರು ಭಾಗವಹಿಸಿದ್ದರು.

error: Content is protected !!