Category: ಹರಿಹರ

ಜಿ.ಬೇವಿನಹಳ್ಳಿಯಲ್ಲಿ ಡಾ. ಪ್ರಭಾ ಪರ ಪುತ್ರ ಸಮರ್ಥ್ ಮತಯಾಚನೆ

ಮಲೇಬೆನ್ನೂರು : ಜಿ.ಬೇವಿನಹಳ್ಳಿ ಗ್ರಾಮದಲ್ಲಿ ಭಾನುವಾರ ಸಮರ್ಥ್ ಮಲ್ಲಿಕಾರ್ಜುನ್ ಅವರು, ತಮ್ಮ ತಾಯಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ಬರಿಗಾಲಿನಿಂದ ಸಂಚರಿಸಿ, ಮತಯಾಚನೆ ಮಾಡುವ ಮೂಲಕ ಗ್ರಾಮಸ್ಥರ ಗಮನ ಸೆಳೆದರು.

ಭಾನುವಳ್ಳಿ : ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಚಿವ ರೇವಣ್ಣ ಮತಯಾಚನೆ

ಮಲೇಬೆನ್ನೂರು : ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಗಳಿಂದ ಹೆಣ್ಣು ಮಕ್ಕಳು ಹಾದಿ ತಪ್ಪುತಿದ್ದಾರೆ ಎಂದವರ ಕುಟುಂಬವೇ ಹಾದಿ ತಪ್ಪಿರುವ ಘಟನೆ ನಿಮ್ಮ ಮುಂದಿದೆ ಎಂದು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಹೇಳಿದರು.

ಹರಿಹರ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ : ವಿನಯ್

ಹರಿಹರ : ನಾನು ಲೋಕಸಭೆ ಸದಸ್ಯನಾದರೆ ಹರಿಹರ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ. ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತೇನೆ ಎಂದು   ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಭರವಸೆ ನೀಡಿದರು. 

ಮಂಡಕ್ಕಿ-ಮಿರ್ಚಿ ಸವಿದ ಪ್ರಭಾ, ಸೌಮ್ಯ ರೆಡ್ಡಿ

ಮಲೇಬೆನ್ನೂರು : ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಬುಧವಾರ ಕೊಮಾರನಹಳ್ಳಿಯ ಪ್ರಸಿದ್ದ ಮಧು ಮಂಡಕ್ಕಿ ಹೋಟೆಲ್‌ನಲ್ಲಿ ಮಂಡಕ್ಕಿ-ಮಿರ್ಚಿ ಸವಿದರು.

ಜಿ.ಬಿ. ವಿನಯ್ ಕುಮಾರ್ ನೀನು ಗೆದ್ದೇ ಗೆಲ್ತೀಯಾ : ಗೊರವಯ್ಯ ಭವಿಷ್ಯ

ಹರಿಹರ : ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ನೀನು ಗೆದ್ದೇ ಗೆಲ್ಲುತ್ತೀಯಾ ಎಂದು ಗೊರವಯ್ಯ ಅವರು ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್‌ಗೆ ಅಭಯ ನೀಡಿದರು. 

ಶ್ರೀಮಂತರ ಪರ ಇರುವ ಬಿಜೆಪಿಯನ್ನು ಎಂದಿಗೂ ನಂಬಬೇಡಿ

ಮಲೇಬೆನ್ನೂರು : ಶ್ರೀಮಂತರ ಪರ ಆಡಳಿತ ನೀಡುವ ಬಿಜೆಪಿಯನ್ನು ಎಂದಿಗೂ ನಂಬಬೇಡಿ. ಬಡವರ, ರೈತರ, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗಗಳ ಜನರ ಹಿತ ಕಾಪಾಡುವ ಕಾಂಗ್ರೆಸ್ ಅನ್ನು ಎಂದಿಗೂ ಕೈ ಬಿಡಬೇಡಿ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಗ್ಗೆರೆ ರಂಗಪ್ಪ ಹೇಳಿದರು.

ಹರಿಹರ ನಗರಕ್ಕೆ ಇಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್

ಹರಿಹರ : ಇದೇ ದಿನಾಂಕ 7 ರಂದು ನಡೆಯುವ ದಾವಣಗೆರೆ ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ನಾಳೆ ದಿನಾಂಕ 3 ರ ಶುಕ್ರವಾರ ಸಂಜೆ 6 ಗಂಟೆಗೆ ಹರಿಹರ ನಗರದಲ್ಲಿ ಬೃಹತ್ ರೋಡ್ ಶೋ ಮಾಡಲಿದ್ದಾರೆ

ಬಿಜೆಪಿ ಸರ್ಕಾರದ 10 ವರ್ಷದ ಸಾಧನೆಗಳೇ ನನ್ನ ಗೆಲುವಿಗೆ ಶ್ರೀರಕ್ಷೆ : ಗಾಯತ್ರಿ ಸಿದ್ದೇಶ್ವರ

ಹರಿಹರ : ಕಳೆದ ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ಮಾಡಿರುವ  ಬಿಜೆಪಿ ಸರ್ಕಾರದ ಸಾಧನೆಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜಿ.ಎಂ. ಸಿದ್ದೇಶ್ವರ ಹೇಳಿದರು.

ಹರಿಹರ: ಮೂಲಭೂತ ಸೌಕರ್ಯಗಳ ಕೊರತೆ ; 1356 ಮತದಾರರು ಚುನಾವಣಾ ಬಹಿಷ್ಕಾರಕ್ಕೆ ತೀರ್ಮಾನ

ಹರಿಹರ : ನಗರದ 10ನೇ ವಾರ್ಡಿನ ವಿನಾಯಕ ನಗರ, ಭಾರತ್ ಆಯಿಲ್ ಮಿಲ್ ಕಾಂಪೌಂಡ್ ಹಾಗೂ ಪೌರಕಾರ್ಮಿಕರ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳು ಸರಿಯಾಗಿ ಇಲ್ಲದೇ ಇರುವುದರಿಂದ ಬರುವ ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನದ ದಿನದಂದು ಮತದಾನದ ಮಾಡದೇ ಬಹಿಷ್ಕಾರ ಹಾಕುವುದಾಗಿ ಬಡಾವಣೆಯ ಮುಖಂಡ ಹೆಚ್.ಕೆ.ಮೂರ್ತಿ ಮತ್ತು ಕೃಷ್ಣ ತಿಳಿಸಿದರು.

ಸಂಸತ್ತಿನಲ್ಲಿ ಒಂದು ಬಾರಿಯೂ ಧ್ವನಿ ಎತ್ತದ ಬಿಜೆಪಿ ಸಂಸದರು : ವಿನಯ್‌ ಕುಲಕರ್ಣಿ

ಹರಿಹರ : ರಾಜ್ಯದ ಜ್ವಲಂತ ಸಮಸ್ಯೆಗಳ ಪರವಾಗಿ ಕೇಂದ್ರದ ಸಂಸತ್ ಭವನದಲ್ಲಿ ಒಂದು ಬಾರಿ ಕೂಡ ಧ್ವನಿ ಎತ್ತದೇ ಇರುವಂತಹ ರಾಜ್ಯದ ಬಿಜೆಪಿ ಸಂಸದರನ್ನು ಆಯ್ಕೆ ಮಾಡುವುದಕ್ಕಿಂತ ಜನರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಹೇಳುವಂತಹ ಬುದ್ಧಿವಂತಿಕೆ ಇರುವ ಕಾಂಗ್ರೆಸ್ ಪಕ್ಷದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಶಾಸಕ ವಿನಯ್ ಕುಲಕರ್ಣಿ ಕರೆ ನೀಡಿದರು.

ದಲಿತ ಸಮಾಜದ ಏಳಿಗೆಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟ ಕಾಂಗ್ರೆಸ್

ಹರಿಹರ : ಕಾಂಗ್ರೆಸ್ ಪಕ್ಷವು ದಲಿತ ಸಮಾಜದ ಏಳಿಗೆಗಾಗಿ ಸಾಕಷ್ಟು ಅನುಕೂಲ ಮಾಡಿದ್ದರಿಂದ ಹರಿಹರ ತಾಲ್ಲೂಕಿನ ದಲಿತ ಸಮಾಜದವರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತವನ್ನು ಹಾಕುವುದರ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭಾರೀ ಬಹುಮತದೊಂದಿಗೆ ಗೆಲ್ಲಿಸಬೇಕು

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಬೇಕು

ಹರಿಹರ : ಮತದಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೀಡುವ ಒಂದು ಮತ  ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

error: Content is protected !!