ಮೀನುಗಳ ಆನಂದ

ಒಮ್ಮೆ ಝೆನ್ ಗುರು ಚುವಾಂಗ್ ತ್ಸು ತನ್ನ ಸ್ನೇಹಿತನ ಜೊತೆ ನದಿ ತೀರದಲ್ಲಿ ವಿಹಾರಕ್ಕೆ ತೆರಳಿದ್ದರು. 

`ಅಲ್ಲಿ ನೋಡು ಆ ಮೀನುಗಳನ್ನು. ಅವು ಎಷ್ಟು ಆನಂದದಿಂದ ವಿಹರಿಸುತ್ತಿವೆ¬ ಎಂದು ಚುವಾಂಗ್ ತ್ಸು ಹೇಳಿದರು.

ಆಗ ಸ್ನೇಹಿತ, `ನೀನೇನು ಮೀನಲ್ಲ. ಹೀಗಾಗಿ ಅವು ನಿಜವಾಗಿಯೂ ಸಂತೋಷವಾಗಿವೆಯೇ ಎಂಬುದನ್ನು ಅರಿತುಕೊಳ್ಳಲು ನಿನಗೆ ಸಾಧ್ಯವಿಲ್ಲ¬ ಎಂದ.

ಆಗ ಚುವಾಂಗ್ ತ್ಸು, `ನೀನೂ ಸಹ ನಾನಲ್ಲ. ಹೀಗಾಗಿ ಮೀನುಗಳು ಸಂತೋಷವಾಗಿಯೇ ಎಂಬುದು ನನಗೆ ಗೊತ್ತಾಗುವುದಿಲ್ಲ ಎಂದು ನಿನಗೆ ಹೇಗೆ ತಿಳಿಯಲು ಸಾಧ್ಯ?¬

error: Content is protected !!