ನ್ಯಾಮತಿ, ಮಾ. 9 – ತಾಲ್ಲೂಕಿನ ಬೆಳಗುತ್ತಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬೆಳಗುತ್ತಿಯ ಡಿ. ಜಗದೀಶಪ್ಪ, ಉಪಾಧ್ಯಕ್ಷರಾಗಿ ಮಲ್ಲಿಗೇನಹಳ್ಳಿ ಜಿ. ಪಾಲಾಕ್ಷಪ್ಪ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಜಿ. ನವೀನ್ ಕುಮಾರ್ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಗಾದಿ ತೀರ್ಥಲಿಂಗಪ್ಪ, ಪ್ರಕಾಶ ಒಡೆಯರ್, ಬಿ.ಎಚ್. ಉಮೇಶ, ಎ.ಕೆ. ನಾಗರಾಜಪ್ಪ, ಎನ್. ಹಾಲೇಶಪ್ಪ, ಟಿ. ಸುರೇಶಪ್ಪ , ಸಿ.ಆರ್. ತೀರ್ಥ ಲಿಂಗಪ್ಪ, ರೇವಣಸಿದ್ದಪ್ಪ ಶಿವೋಳ್, ಆಶಾರಾಣಿ, ರೇಣುಕಮ್ಮ ಹಾಗೂ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಕೆ. ತೀರ್ಥಪ್ಪ ಇದ್ದರು.