ಮೌನೇಶ್ವರ ದೇವಸ್ಥಾನ, ವಿಶ್ವಕರ್ಮ ಸಮಾಜ, ಕಾಳಿಕಾದೇವಿ ಮಹಿಳಾ ಮಂಡಳ ಹಾಗೂ ನೌಕರರ ಸಂಘದಿಂದ ಜಗದ್ಗುರು ಮೌನೇಶ್ವರ ಜಯಂತಿಯನ್ನು ಇಂದು ಆಚರಿಸಲಾಗುವುದು ಎಂದು ಸಮಾಜದ ಗೌರವ ಸಮಿತಿ ಅಧ್ಯಕ್ಷ ಬಸವರಾಜ ಬಡಿಗೇರ ತಿಳಿಸಿದರು.
ಅಂತರವಳ್ಳಿ ಮೂರುಜಾವೇಶ್ವರ ಮಠದ ನಿರಂಜನ ಸ್ವಾಮೀಜಿ, ವಡ್ನಾಳ ಸಾವಿತ್ರಿ ಪೀಠದ ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.ಪರಮೇಶ್ವರಾಚಾರ್ ಬಡಿಗೇರ ಅಧ್ಯಕ್ಷತೆ ವಹಿಸುವರು. ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣ ಪೂಜಾರ, ಜೆಡಿಎಸ್ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣವರ ಆಗಮಿಸುವರು.