ದಾವಣಗೆರೆ, ಫೆ.3- ಜಿಲ್ಲೆಯ ಶ್ರೇಷ್ಠ ಕವಿ, ಹಿರಿಯ ಸಾಹಿತಿ ಹಾಗೂ ವೈಚಾರಿಕ ಲೇಖಕರೆಂದೇ ಹೆಸರಾಗಿದ್ದ ಜೆ.ಕಲೀಂ ಭಾಷಾ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು, ವೈಯಕ್ತಿಕವಾಗಿ ಆಘಾತ ತಂದಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಸಂತಾಪ ಸೂಚಿಸಿದ್ದಾರೆ.
ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸದಾ ಸಾಹಿತ್ಯಿಕ ಚಿಂತನೆಯಲ್ಲಿ ತೊಡಗಿಸಿಕೊಂಡು ವೈಚಾರಿಕ ಕವನ ಸಂಕಲನ ಮತ್ತು ಹಲವು ಕೃತಿಗಳನ್ನು ರಚಿಸಿ ಪ್ರಖ್ಯಾತಿ ಪಡೆದ ಹಿರಿಯ ಸಾಹಿತಿಗಳ ಅಗಲುವಿಕೆಯಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.