ಚಿತ್ರದುರ್ಗ ತಾಲ್ಲೂಕು ಭರಮಸಾಗರದಲ್ಲಿ ಇಂದಿನಿಂದ ಇದೇ ದಿನಾಂಕ 12 ರವರೆಗೆ `ತರಳಬಾಳು ಹುಣ್ಣಿಮೆ ಮಹೋತ್ಸವ’ ಜರುಗಲಿದೆ.
ಇಂದು ಸಂಜೆ 6.30 ಕ್ಕೆ `ಶಿಕ್ಷಣ-ಕಲೆ-ಸಂಸ್ಕೃತಿ’ ಶೀರ್ಷಿಕೆಯಡಿ ಮೊದಲ ದಿನದ ಕಾರ್ಯಕ್ರಮ ನಡೆಯಲಿದ್ದು, ಗದಗ-ವಿಜಯಪುರದ ರಾಮಕೃಷ್ಣ-ವಿವೇಕಾನಂದಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು ಆಶೀರ್ವಚನ ನೀಡಲಿದ್ದು, ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಚಿವರಾದ ಎಂ.ಬಿ.ಪಾಟೀಲ್, ಮಧು ಬಂಗಾ ರಪ್ಪ, ಡಿ. ಸುಧಾಕರ್, ಶಾಸಕ ಡಾ. ಎಂ.ಚಂದ್ರಪ್ಪ, ಚಿತ್ರದುರ್ಗ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ್, ವಿಧಾನ ಪರಿಷತ್ ಸದಸ್ಯ ಎನ್.ರವಿ ಕುಮಾರ್, ಚಿತ್ರನಟ ಡಾಲಿ ಧನಂ ಜಯ, ಬೆಂಗಳೂರಿನ ಗಾಯಕಿ ಕವಿತಾ ವೆಂಕಟರಾಜು ಉಡುಪ, ಅಮೆ ರಿಕಾದ ಚಿಕಾಗೋ ವಿಜ್ಞಾನಿ ಅಣ್ಣಾ ಪುರ ಶಿವಕುಮಾರ್ ಭಾಗವಹಿಸಲಿದ್ದಾರೆ.
ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ, ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಹಿರೇಮಗಳೂರಿನ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್, ಉಪನ್ಯಾಸಕರಾದ ನಾಗಶ್ರೀ ತ್ಯಾಗರಾಜ್ ಉಪನ್ಯಾಸ ನೀಡಲಿದ್ದಾರೆ. ಇಲಕಲ್ ಆಕಾಶವಾಣಿ ಕಲಾವಿದರೂ, ಸಂಗೀತ ಬಳಗದ ಗಣೇಶ್ ಎನ್. ರಾಯಭಾಗಿ ಅವರಿಂದ ವಚನಗೀತೆ, ಸಿರಿಗೆರೆ ತರಳಬಾಳು ಕಲಾ ಸಂ ಘದ ಕಲಾವಿದರಿಂದ ಮಲ್ಲಿಹಗ್ಗ ಜಾನಪದ ಸಿರಿ, ಸಿರಿಗೆರೆ ಬಿ.ಲಿಂಗಯ್ಯ ವಸತಿಯುತ ಪದವಿ ಪೂರ್ವ ಕಾಲೇಜಿನ ವತಿಯಿಂದ ಜಾನಪದ ನೃತ್ಯ ಹಾಗೂ ತರಳಬಾಳು ಕಲಾ ಸಂಘದಿಂದ ವಚನ ನೃತ್ಯ ಕಾರ್ಯಕ್ರಮ ನಡೆಯಲಿದೆ.