ದಾವಣಗೆರೆ, ನ.29- ರಾಜ್ಯ ರಾಜ್ಯಗಳ ನಡುವೆ ಭಾಷಾ ಬಾಂಧವ್ಯವೂ ಪರಸ್ಪರ ಅಭಿ ವೃದ್ಧಿಗೆ ಪೂರಕವಾಗಿದ್ದು, ರಾಷ್ಟ್ರಾಭಿವೃದ್ಧಿಗೂ ಇದು ಅವಶ್ಯ ಎಂದು ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ ಅಭಿಪ್ರಾಯ ಪಟ್ಟರು.
ಅವರಿಂದು ದಾವಣಗೆರೆ ಕೇರಳ ಸಮಾಜದ ವತಿಯಿಂದ ಏರ್ಪಾಡಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕವಾಗಲೀ ಕೇರಳವಾಗಲೀ ಮೂಲತಃ ಹೊಂದಿರುವುದು ಭಾರತೀಯ ಸಂಸ್ಕೃತಿಯನ್ನು, ಭಾರತೀಯ ಸಂಸ್ಕೃತಿಯು ವಿಶ್ವದಲ್ಲೇ ಮೌಲ್ಯಯುತ ಸಂಸ್ಕೃತಿಯಾಗಿದೆ, ಮಾತೃಭಾಷೆಯೊಂದಿಗೆ ಮಾತೃ ಸಂಸ್ಕೃತಿಯೂ ಇರುತ್ತದೆ, ಹಾಗಾಗಿ ಮಾತೃಭಾಷೆಯ ಉಳಿವು ಅವಶ್ಯ, ಬಳಸಿದ ಭಾಷೆ ಉಳಿಯುತ್ತದೆ, ಕನ್ನಡ ಭಾಷೆ ಹಾಗೂ ಕರ್ನಾಟಕದ ಸಂಸ್ಕೃತಿ ಅತ್ಯುತ್ತ ಮವಾಗಿದ್ದು ಈ ರಾಜ್ಯದಲ್ಲಿ ಬಂದು ನೆಲೆಸಿ ದವರು ಇದನ್ನು ಮೈಗೂಡಿಸಿಕೊಂಡು ರಾಜ್ಯೋತ್ಸವ ಆಚರಿಸುತ್ತಿರುವುದು ಸಂತೋಷದ ವಿಷಯ ಎಂದರು. ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಮೃತ್ಯುಂಜಯ ತಿಗಡಿಮಠ ಆಗಮಿಸಿದ್ದು, ದಾವಣಗೆರೆ ಕೇರಳ ಸಮಾಜದ ಅಧ್ಯಕ್ಷ ಪವಿತ್ರನ್ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷೆ ಮಂಜುಶಾ ಸಿಮೋನ್, ಕಾರ್ಯದರ್ಶಿ ಮಣಿಕುಟ್ಟನ್, ಖಜಾಂಚಿ ಅನೀಶ್, ದಾವಣಗೆರೆ ಕೇರಳ ಸಮಾಜ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಪ್ರಸನ್ನಾ, ಕಾರ್ಯದರ್ಶಿ ಸೀಮಪ್ರಿಯ, ಖಜಾಂಚಿ ರೋಷಣಿ ಮುಂತಾದವರು ಉಪಸ್ಥಿತರಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ಅನನ್ಯ ಹಿರೇಮಠ ಮಾಡಿದರೆ, ಸುಚಿತ್ರ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.
ಕರ್ನಾಟಕ ಏಕೀಕರಣ ಕುರಿತಾಗಿ ಕೋಟೇಶ್ ಮಾತಾಡಿದರೆ, ಸಿಂಧೂ ಜಾಯ್ ಮತ್ತು ಸಂಗಡಿಗರು ಕನ್ನಡ ನೃತ್ಯ ಪ್ರದರ್ಶಿಸಿದರು. ಬಿ.ಆರ್.ಸುಚಿತ್ರ ವಂದನೆ ಸಲ್ಲಿಸಿದರು.
ರಾಘವೇಂದ್ರ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು.