ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದ ಬಳಿ ಇರುವ ಶಂಕರಮಠ ಆವರಣದಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಇಂದು ಸಂಜೆ 5 ರಿಂದ ಕಾರ್ತಿಕ ದೀಪೋತ್ಸವ ನಡಯೆಲಿದೆ.
ಯೋಗ ಬಂಧುಗಳು ಹಾಗೂ ಸಮಸ್ತ ಶ್ರೀ ರಾಮ ಭಕ್ತರಿಂದ ಕಾರ್ಯಕ್ರಮವನ್ನು ನೆರವೇರಿಸಲಾಗುವುದು.ಸಂಜೆ 5 ರಿಂದ ವಿಷ್ಣು ಸಹಸ್ರನಾಮ ಹಾಗೂ ಸಂಜೆ 6 ರಿಂದ ಶ್ರೀ ರಾಮ ಭಜನೆ ಕಾರ್ಯಕ್ರಮ ನಂತರ ದೀಪೋತ್ಸವ ಕಾರ್ಯಕ್ರಮ ನೆರವೇರಲಿದೆ.