ಮಹಾನಗರ ಪಾಲಿಕೆಯಿಂದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಇಂದು ಸಂಜೆ 5.30ಕ್ಕೆ ನಗರ ಪಾಲಿಕೆ ಆವರಣದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಹೆಸರಾಂತ ದಾನಿಗಳಾದ ಚನ್ನಗಿರಿ ವಂಶದ ಚನ್ನಗಿರಿ ವಿರೂಪಾಕ್ಷಪ್ಪನವರಿಗೆ `ನಾಗರಿಕ ಸನ್ಮಾನ’ ನೀಡಿ ಗೌರವಿಸಲಾಗುವುದು.
ಒಂದು ಶತಮಾನ ಹತ್ತಿರದಲ್ಲೇ ಆಯುಷ್ಯ ಇರುವ ಇಂತಹ ಇಳಿ ವಯಸ್ಸಿನಲ್ಲೂ ಯುವಕರಿಗೆ ಮಾದರಿಯಂತೆ ನಗರದ ನಾಗರಿಕರಿಗೆ ಸಮಯ ಪ್ರಜ್ಞೆ ಮೂಡಿಸುವ ಗಡಿಯಾರ ಗೋಪುರ ಅಂದಿನಿಂದ ಇಂದಿನವರೆಗೂ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಸಮಾಜ ಸೇವೆಗಳಲ್ಲಿ ನಿರಂತರವಾಗಿ ಕಠಿಣ ಪರಿಶ್ರಮದಿಂದ ಆರ್ಥಿಕ ಸಹಕಾರ, ಸಹಯೋಗ ನೀಡುತ್ತಿರುವ, ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ,
ಉಚಿತ ಕಲ್ಯಾಣ ಮಂಟಪ, ಉಚಿತವಾಗಿ ವಿದ್ಯಾರ್ಥಿಗಳಿಗೆ ವಸತಿ, ಗೃಹ ಹೀಗೆ ನೂರಾರು ದಾನ ಧರ್ಮ ಮಾಡಿದ್ದಾರೆ.
99ನೇ ವಯಸ್ಸಿನ ಬಾಲ್ಯದಿಂದಲೇ ಚನ್ನಗಿರಿ ಮನೆತನ ನಿರ್ವಹಿಸುತ್ತಿರುವ ಚನ್ನಗಿರಿ ವಿರೂಪಾಕ್ಷಪ್ಪನವರಿಗೆ ಚನ್ನಗಿರಿ ವಂಶ, ರಾಜನಹಳ್ಳಿ ಮನೆತನ, ಆರ್ಯ ವೈಶ್ಯ ಸಮಾಜ, ಕಲಾಕುಂಚ, ಸಿನಿಮಾಸಿರಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸರ್ವಸದಸ್ಯರು ಈ ಪ್ರಶಸ್ತಿಗೆ ಭಾಜನರಾಗುತ್ತಿರುವ ಇವರಿಗೆ ಅಭಿಮಾನದಿಂದ ಅಭಿನಂದಿಸಿದ್ದಾರೆ.