ಸಹಕಾರಿ ರಾಜ್ಯಾಧ್ಯಕ್ಷರಾಗಿ ಪ್ರಭುದೇವ್ ಆರ್.ಮಾಗನೂರು

ಸಹಕಾರಿ ರಾಜ್ಯಾಧ್ಯಕ್ಷರಾಗಿ ಪ್ರಭುದೇವ್ ಆರ್.ಮಾಗನೂರು

ದಾವಣಗೆರೆ, ನ.26- ನಗರದಲ್ಲಿ ಮೊನ್ನೆ ನಡೆದ ಸಹಕಾರ ಭಾರತೀಯ ರಾಜ್ಯ ಸಹಕಾರಿ ಸಮಾವೇಶದಲ್ಲಿ ಪ್ರಭುದೇವ್ ಆರ್. ಮಾಗನೂರು ಅವರನ್ನು   ಸಹಕಾರಿ ರಾಜ್ಯಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನಿಕಟಪೂರ್ವ ರಾಜ್ಯಾಧ್ಯಕ್ಷ ರಾಜಶೇಖರ್ ಶೀಲವಂತ್ ಅವರು ಪ್ರಭುದೇವ್ ಆರ್. ಮಾಗನೂರು ಅವರಿಗೆ ಬಾವುಟ ನೀಡುವುದರ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಮಹೇಂದ್ರನಾಯ್ಕ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ್ ಪಾಚಪೂರ್, ಡಿಸಿಸಿ ಬ್ಯಾಂಕ್‍ನ ರಾಯಚೂರು ಜಿಲ್ಲೆಯ ಅಧ್ಯಕ್ಷ ಮಹೇಶ್ ಪಾಟೀಲ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕ ಜಿ.ಎನ್.ಪಾಟೀಲ್, ಪ್ರಧಾನ ಕಾರ್ಯದರ್ಶಿ ನರಸಿಂಹ ಕಾಮತ್ ಸೇರಿದಂತೆ ಜಿಲ್ಲೆಯ ಎಲ್ಲಾ ಸಹಕಾರಿ ಸದಸ್ಯರು, ಪ್ರತಿನಿಧಿಗಳು ಉಪಸ್ಥಿತರಿದ್ದರು.

error: Content is protected !!