ಮಲೆಬೆನ್ನೂರು, ಜು. 24- ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪದ ದುರುಗಮ್ಮ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಎರೆಬೂದಿಹಾಳು ಗ್ರಾಮದ ವೆಂಕಟೇಶ್, ಹೊನ್ನಾಳಿ ತಾಲ್ಲೂಕು ಬುಳ್ಳಾಪುರದ ನಾಗೇಶ್, ದಾವಣಗೆರೆ ತಾಲ್ಲೂಕು ಲೋಕಿಕೆರೆ ಗ್ರಾಮದ ಹನುಮಂತಪ್ಪ ಬಂಧಿತರು.
ಕಳೆದ ಜುಲೈ 1ರಂದು ರಾತ್ರಿ ಕಾಣಿಕೆ ಹುಂಡಿ ಕಳ್ಳತನ ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು. ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಪ್ರಭು ಡಿ. ಕೆಳಗಿನ ಮನಿ, ಮಹದೇವ ಸಿದ್ದಪ್ಪ ಭತ್ತೆ (ತನಿಖೆ) ಪಿ.ಎಸ್.ಐ, ಸಿಬ್ಬಂದಿಯವರಾದ ವಿನಾಯಕ, ಲಕ್ಷ್ಮಣ, ಶಿವಕುಮಾರ, ರಾಜಶೇಖರ್, ಪ್ರಶಾಂತ ಕುಮಾರ, ಮಲ್ಲಿಕಾರ್ಜುನ, ಕಡೇಮನಿ ನಾಗಪ್ಪ, ರಾಜಪ್ಪ, ಮುರುಳಧರ ರವರ ತಂಡವು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.