ದಾವಣಗೆರೆ, ಜೂ. 13 – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾಗದ ವತಿಯಿಂದ 2024-25ನೇ ಶೈಕ್ಷಣಿಕ ವರ್ಷದ ಉಚಿತ ರಿಯಾಯಿತಿ ಬಸ್‍ಪಾಸ್‍ಗಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಐಡಿ https://sevasindhusevrvice.karnataka.in/buspas services ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಪಾಸ್ ವಿತರಣೆ ಮಾಡುವ ಕೌಂಟರ್‍ಗಳ ವಿವರಗಳಿಗಾಗಿ http://ksrtc.karnataka.gov.in ವೆಬ್‍ಸೈಟ್ ಮೂಲಕ ತಿಳಿಯಬಹುದು ಎಂದು ಕ.ರಾ.ರ.ಸಾ. ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.