ನಗರದಲ್ಲಿ ಇಂದು ಕದಳಿ ವೇದಿಕೆಯಿಂದ ಪರಿಸರ ದಿನಾಚರಣೆ

ಶರಣ ಸಾಹಿತ್ಯ ಪರಿಷತ್ತಿನ  ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಘಟಕದಿಂದ 154ನೇ ಕದಳಿ ಕಮ್ಮಟದಲ್ಲಿ ವಚನಕಾರ ಶರಣ ಕುರುಬ ಗೊಲ್ಲಾಳೇಶ್ವರ ಸಂಸ್ಮರಣೆ ಪರಿಸರ ದಿನಾಚರಣೆ ಹಾಗೂ ದತ್ತಿ ಕಾರ್ಯಕ್ರಮವು ಇಂದು  ಮಧ್ಯಾಹ್ನ 3 ಗಂಟೆಗೆ ಸೇಂಟ್ ಜಾನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಡೆಯಲಿದೆ.

ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷ ರಾದ ಗಾಯತ್ರಿ ವಸ್ತ್ರದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸೇಂಟ್ ಜಾನ್ಸ್ ಶಾಲೆಯ ಟಿ.ಎಂ. ಉಮಾಪತಯ್ಯ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು.

ಲಿಂ. ಕೆ.ಜಿ. ಕಲ್ಲಪ್ಪ ಮತ್ತು ಲಿಂ. ಕೆ.ಜಿ. ಲೋಕೇಶ್ವರಮ್ಮ ದತ್ತಿ (ದಾನಿ -ಕೆ.ಜಿ. ಸದಾಶಿವಪ್ಪ ಮತ್ತು ಸಹೋದರರು) ಕಾರ್ಯಕ್ರಮ ನಡೆಯಲಿದೆ. ಸಮಾಜ ಸೇವಕರಾದ ಜಿ.ಎಂ. ರೂಪ `ಶರಣರಲ್ಲಿ ಪರಿಸರ ಪ್ರಜ್ಞೆ’ ವಿಷಯವಾಗಿ ದತ್ತಿ ಅನು ಭಾವ ನೀಡುವರು. ಸೈಯದ್ ಆರೀಫ್ ಆರ್., ಪ್ರೀತಾ ಟಿ.ರೈ, ಪ್ರಮೀಳ ನಟ ರಾಜ್, ಕೆ.ಬಿ. ಪರಮೇಶ್ವರಪ್ಪ, ವಿನೋದ ಅಜಗಣ್ಣನವರ್, ಮಮತ ನಾಗರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಚಂದ್ರಿಕಾ ಮಂಜುನಾಥ್ ತಿಳಿಸಿದ್ದಾರೆ.

error: Content is protected !!