ಲಂಬಾಣಿ ತಾಂಡಾ ಸೇರಿ ವಿವಿಧೆಡೆ ವಿನಯ್ ಪ್ರಚಾರ

ಲಂಬಾಣಿ ತಾಂಡಾ ಸೇರಿ ವಿವಿಧೆಡೆ ವಿನಯ್ ಪ್ರಚಾರ

ದಾವಣಗೆರೆ, ಮೇ 5 – ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು ಲಂಬಾಣಿ ತಾಂಡಾಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. 

ದಾವಣಗೆರೆ ತಾಲ್ಲೂಕಿನ ನೀಲಾನಹಳ್ಳಿ, ಹಳೇಬಾತಿ, ಓಬಜಿಹಳ್ಳಿ, ಬದಿನಾಯ್ಕನ ತಾಂಡ, ಮಾಗಾನಹಳ್ಳಿ, ಪುಟಗನಾಳ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಲಂಬಾಣಿ ತಾಂಡಗಳಲ್ಲಿ ಮಹಿಳೆಯರು ವಿನಯ್ ಕುಮಾರ್ ಅವರ ಬಳಿ ಸಮಸ್ಯೆ ಹೇಳಿದರು. 

ಬದಿನಾಯ್ಕನ ತಾಂಡಾಕ್ಕೆ ವಿನಯ್ ಕುಮಾರ್ ಅವರು ಬರುತ್ತಿದ್ದಂತೆ ಬಂಜಾರ ಸಮುದಾಯದ ಮಹಿಳೆಯರು ಸಂಪ್ರಾದಾಯಿಕ ಉಡುಗೆ ತೊಟ್ಟು ಆರತಿ ಬೆಳಗಿ ಅದ್ಧೂರಿಯಾಗಿ ಬರಮಾಡಿಕೊಂಡರು. 

ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಅವರು, ಮಹಿಳೆಯರ ಪರಿಸ್ಥಿತಿ ಅರ್ಥವಾಗುತ್ತದೆ. ತಾಯಂದಿರು, ಅಕ್ಕಂದಿರು, ತಂಗಿಯರು, ಯುವತಿ ಯರು ಆರ್ಥಿಕವಾಗಿ ಸಬಲರಾಗಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ನಾಗುತ್ತೇನೆ. ಆರ್ಥಿಕ ಶಕ್ತಿ ತುಂಬಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಈ  ವೇಳೆ  ಗ್ರಾಮದ ಪ್ರಮುಖ ರಾದ ರಮೇಶ್, ಕೃಷ್ಣನಾಯ್ಕ, ಕಾಳ್ಯ ನಾಯ್ಕ, ಮಂಜನಾಯ್ಕ, ಮೂರ್ತಿ ನಾಯ್ಕ, ಲಿಂಗೇಶ ನಾಯ್ಕ, ಪ್ರಕಾಶ ನಾಯ್ಕ ಮತ್ತಿತರರು ಹಾಜರಿದ್ದರು. 

ಓಬಜಿಹಳ್ಳಿ ಗ್ರಾಮದಲ್ಲಿ ಪ್ರಚಾರ: ಓಬೇಜಿಹಳ್ಳಿ ಗ್ರಾಮದಲ್ಲಿ ರೋಡ್ ಶೋಗೆ ಜನರಿಂದ ಅದ್ಧೂರಿ ಸ್ವಾಗತ ಸಿಕ್ಕಿತು. ಗ್ರಾಮದ ಜಾತಿ, ಧರ್ಮ ಮರೆತು ಎಲ್ಲರೂ ಒಟ್ಟಾಗಿ ವಿನಯ್ ಕುಮಾರ್ ಅವರನ್ನು ಬೆಂಬಲಿಸಲು ನಿರ್ಧರಿಸಿದರು. ಈ ವೇಳೆ ಗ್ರಾಮದ ಪ್ರಮುಖರಾದ ಪರಮೇಶ್ವರ ನಾಯ್ಕ, ನಾಗನಾಯ್ಕ, ಹಾಲೇನಾಯ್ಕ, ನೇಮಾ ನಾಯ್ಕ, ಉಗ್ರ ನಾಯ್ಕ, ಸತ್ಯ ನಾಯ್ಕ, ಕೃಷ್ಣ ನಾಯ್ಕ, ಮಂಜ ನಾಯ್ಕ ಮತ್ತಿತರರು ಹಾಜರಿದ್ದರು. 

ಪುಟಗನಾಳ್ ಗ್ರಾಮದಲ್ಲಿಯೂ ವಿನಯ್ ಕುಮಾರ್ ಪ್ರಚಾರ ನಡೆಸಿದರು.  

error: Content is protected !!