ಹರಪನಹಳ್ಳಿ, ಏ. 23 – ಪಟ್ಟಣದ ಶ್ರೀ ಕೋಟೆ ಆಂಜನೇಯ ಸ್ವಾಮಿ ರಥೋತ್ಸವ ಮಂಗಳವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ಪ್ರತಿ ವರ್ಷವೂ ದವನದ ಹುಣ್ಣಿಮೆಯಂದು ಶ್ರೀ ಹನುಮ ಜಯಂತಿಯ ಪ್ರಯುಕ್ತ ಸ್ವಾಮಿಯ ರಥೋತ್ಸವ ಜರುಗುತ್ತದೆ. ಬೆಳಿಗ್ಗೆಯಿಂದಲೇ ಭಕ್ತರು ದೀವಟಿಗೆ ನಮಸ್ಕಾರ ಹಾಕುತ್ತಿದ್ಧುದು ಕಂಡು ಬಂದಿತು.
ರಥೋತ್ಸವಕ್ಕಿಂತ ಮುಂಚೆ ಸ್ವಾಮಿಯ ಪಟವನ್ನು ಹರಾಜು ಮಾಡಲಾಯಿತು. ಕಟ್ಟಿಂಗ್ ಶಾಪ್ ಗಣೇಶ್ ಅವರು 30 ಸಾವಿರ ರೂ.ಗೆ ಹರಾಜು ಮಾಡಿಕೊಂಡರೆ, ಎಲಕ್ಕಿ ಹಾರ 27 ಸಾವಿರ ರೂ.ಗೆ ಹರಾಜಾಯಿತು. ಹೂವಿನ ಹಾರವನ್ನು ರವಿ 8 ಸಾವಿರಕ್ಕೆ ಕೂಗಿಕೊಂಡರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಮುಖಂಡರಾದ ಚಿಕ್ಕೇರಿ ವೆಂಕಟೇಶ್, ದ್ಯಾಮಜ್ಜಿ, ದಂಡೆಪ್ಪ, ಹೆಚ್ ವಿ.ವೇಣು ಗೋಪಾಲ್, ಬೇಕರಿ ಮಂಜು ನಾಥ್, ರಾಜು ಪೂಜಾರ್, ಜಂಗ್ಲಿ ಅಂಜಿನಪ್ಪ, ದಾಸಪ್ಪ, ನಿಟ್ಟೂರು ತಿಮ್ಮಣ್ಣ, ಪ್ರಧಾನ ಅರ್ಚಕ ಮಾರುತಿ ಪೂಜಾರ್, ಪಟ್ನಾಮದ ಪರಶುರಾಮ, ಧರ್ಮಕರ್ತರಾದ ಕಟ್ಟಿ ಹರ್ಷ, ದಂಡಿನ ಹರೀಶ್, ರೈತ ಸಂಘದ ಮುಖಂಡ ದ್ಯಾಮಜ್ಜಿ ಹನುಮಂತಪ್ಪ, ಹೆಚ್.ಎ.ಸುರೇಂದ್ರ ಬಾಬು, ಹೂವುಮಾರ್ ಮಂಜಣ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್.ಬಿ. ಪರಶುರಾಮಪ್ಪ, ಗಿಡ್ಡಳ್ಳಿ ನಾಗರಾಜ್, ಬಡಗಿ ಮಂಜುನಾಥ್, ಮರಿಯಪ್ಪ, ರಾಯದುರ್ಗದ ಆಲೂರು ಶ್ರೀನಿವಾಸ್, ಕೆಂಗಹಳ್ಳಿ ಪ್ರಕಾಶ್, ಪ್ರತಾಪ್ ಛಲವಾದಿ, ಆದಿ ಧೀರಾಜ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.