ದಾವಣಗೆರೆ, ಏ. 16- ಕೇಂದ್ರ ಲೋಕಸೇವಾ ಆಯೋಗ ನಡೆಸಿದ (ಯುಪಿಎಸ್ಸಿ) 2023 ನೇ ಸಾಲಿನ ನಾಗರಿಕರ ಸೇವೆಗಳ ಪರೀಕ್ಷೆಯಲ್ಲಿ ಇನ್ಸೈಟ್ಸ್ ಐಎಎಸ್ನಲ್ಲಿ ತರಬೇತಿ ಪಡೆದ 150 ಕ್ಕೂ ಹೆಚ್ಚು ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ.
ಕರ್ನಾಟಕದಿಂದ ಈ ಬಾರಿ 28 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ ಉತ್ತಮ ರಾಂಕಿಂಗ್ ಪಡೆದ 20 ಅಭ್ಯರ್ಥಿಗಳಿಗೆ ತರಬೇತಿ, ಮಾರ್ಗದರ್ಶನ ನೀಡಿರುವುದು ಬೆಂಗಳೂರಿನ ಇನ್ಸೈಟ್ಸ್ ಐಎಎಸ್ ಎಂದು ಸಂಸ್ಥೆಯ ಸಂಸ್ಥಾಪಕ ವಿನಯ್ ಕುಮಾರ್ ಜಿ.ಬಿ ಹರ್ಷ ವ್ಯಕ್ತಪಡಿಸಿದ್ದಾರೆ.
ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆಯಾದ ಈ ಅಭ್ಯರ್ಥಿಗಳಲ್ಲಿ ಹಲವರು ಇನ್ಸೈಟ್ಸ್ ಐಎಎಸ್ನ ನೇರವಾದ ಬೋಧನಾ ತರಬೇತಿಗೆ (ಒಜಿಪಿ ಕೋರ್ ಬ್ಯಾಚ್) ಹಾಜರಾಗಿದ್ದರೆ, ಬಹಳಷ್ಟು ಅಭ್ಯರ್ಥಿಗಳು ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ಸರಣಿ ಮತ್ತು ಅಣಕು ಸಂದರ್ಶನಗಳಂತಹ ಹಲವಾರು ಕಾರ್ಯಕ್ರಮಗಳ ವಿದ್ಯಾರ್ಥಿಗಳಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.