ದಾವಣಗೆರೆ, ಏ.1- ಜಮೀನಿನ ಬೆಳೆಗಾಗಿ ಮಾಡಿದ್ದ ಸಾಲದಿಂದ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ಜಗಡನಹಳ್ಳಿ ಗ್ರಾಮದ ಗುರುರಾಜ್ (25) ಮೃತ ಪಟ್ಟವರಾಗಿದ್ದು, ಈತ ಬಿಎಸ್ಸಿ ಮುಗಿಸಿ ಬೆಂಗಳೂರಿನ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ವಾಸವಾಗಿದ್ದ. ನಂತರ ಕೊರೊನಾ ಕಾರಣದಿಂದಾಗಿ ವರ್ಕ್ ಫ್ರಮ್ ಹೋಮ್ ಕೆಲಸ ಮಾಡಿಕೊಂಡಿದ್ದ. ಅಲ್ಲದೇ ಜಮೀನಿನ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದ.
ಸಾಲ ಮಾಡಿ ಜಮೀನಿಗೆ ಅಡಿಕೆ ಸಸಿಗಳನ್ನು ನೆಟ್ಟಿದ್ದು, ನಂತರವೂ ಸಾಕಷ್ಟು ಸಾಲ ಮಾಡಿದ್ದ. ಎರಡು ಬೋರ್ ಹಾಕಿಸಿದರೂ ನೀರು ಬೀಳದೆ ವಿಫಲವಾಗಿದ್ದವು. ಮಾಡಿದ್ದ ಸಾಲಕ್ಕಾಗಿ ಮನನೊಂದು ಭಾನುವಾರ ಕೊಠಡಿಯ ಮೇಲ್ಛಾವಣಿಯ ಕಬ್ಬಿಣದ ಕೊಂಡಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮೃತನ ತಂದೆ ಮಹೇಶ್ವರಪ್ಪ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.