ನಗರದಲ್ಲಿ ಇಂದು ಮತದಾನ ಜಾಗೃತಿ ಪಥ ಸಂಚಲನ

ಭಾವಸಾರ ವಿಷನ್ ಇಂಡಿಯಾ ದಾವಣಗೆರೆ ವತಿಯಿಂದ ಮತದಾನದ ಜಾಗೃತಿಯನ್ನು ಪಥ ಸಂಚಲನ ಮೂಲಕ ಇಂದು ಬೆಳಗ್ಗೆ 9 ಗಂಟೆಗೆ ನಗರದಲ್ಲಿ ನಡೆಯಲಿದೆ. ಜನರಿಗೆ ಮತದಾನದ ಅರಿವು, ಮಹತ್ವ ಹಾಗೂ ಜಾಗೃತಿ ಮೂಡಿಸಲು ಈ ಪಥ ಸಂಚಲನ ನಡೆಸುತ್ತಿರುವುದಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸರಳ ಅಮಟೆ ತಿಳಿಸಿದ್ದಾರೆ.   ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ವಿಧ್ಯುಕ್ತವಾಗಿ ಚಾಲನೆ ನೀಡುವರು. ಪಥ ಸಂಚಲನವು ಬಿ.ಕೆ. ಹಾಸ್ಟೆಲ್ ಜಯದೇವ ಸರ್ಕಲ್ ನಿಂದ ಪ್ರಾರಂಭವಾಗುವುದು ಎಂದು ಕಾರ್ಯದರ್ಶಿ ರಮೇಶ್ ಬಾಬು ಗುಜ್ಜರ್ ತಿಳಿಸಿದ್ದಾರೆ.

error: Content is protected !!