ಡಿಕೆಎಸ್ ತಂಡ ಪ್ರಥಮ, ಎಸ್.ಡಿ.ಕೆ ಮತ್ತು ಶಿವಸೈನ್ಯ ದ್ವಿತೀಯ, ಎಸ್.ಎಸ್.ಎಂ ತಂಡ ತೃತೀಯ
ದಾವಣಗೆರೆ, ಫೆ.5- ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮತ್ತು ದೇವನಗರಿ ಕ್ರೀಡಾ ಸಮಿತಿ ವತಿಯಿಂದ ದಾವಣಗೆರೆ ಯಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂ ಡಿದ್ದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿ ಯರ್ ಲೀಗ್ ಪಂದ್ಯಾ ವಳಿಯು ಇಂದು ವಿಧ್ಯುಕ್ತವಾಗಿ ತೆರೆ ಕಂಡಿತು. ಡಿಕೆಎಸ್ ತಂಡ ಪ್ರಥಮ ಬಹುಮಾನವನ್ನು ಪಡೆದುಕೊಂಡರೆ, ಎಸ್‌ಡಿಕೆ ಮತ್ತು ಶಿವಸೈನ್ಯ ತಂಡವು ದ್ವಿತೀಯ ಬಹುಮಾನವನ್ನು ಹಂಚಿಕೊಂಡವು. ಎಸ್ಸೆಸ್ಸೆಂ ತಂಡ ತೃತೀಯ ಬಹು ಮಾನಕ್ಕೆ ತೃಪ್ತಿ ಪಟ್ಟು ಕೊಂಡಿತು. ವಿಜೇತ ತಂಡಗಳನ್ನು ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಅವರು ಅಭಿನಂದಿಸಿದ್ದಾರೆ.