ನ್ಯಾಷನಲ್ ಸ್ಪೀಡ್ ಸ್ಕೇಟಿಂಗ್ ಕರ್ನಾಟಕ ತಂಡಕ್ಕೆ ದ್ವಿತೀಯ ಸ್ಥಾನ

ನ್ಯಾಷನಲ್ ಸ್ಪೀಡ್ ಸ್ಕೇಟಿಂಗ್  ಕರ್ನಾಟಕ ತಂಡಕ್ಕೆ ದ್ವಿತೀಯ ಸ್ಥಾನ

 ದಾವಣಗೆರೆ, ಫೆ.5- ತಮಿಳುನಾಡು ಕೊಯಿಮತ್ತೂರಿನ ಸ್ವಸ್ತಿಕಾ ಸ್ಕೇಟಿಂಗ್ ರಿಂಕ್, ಸೋಮಯ್ಯಪಾಳ್ಯಂನಲ್ಲಿ ಸ್ಪೀಡ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ  ಆಯೋಜಿಸಿದ್ದ 23ನೇ  ನ್ಯಾಷನಲ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‍ಶಿಪ್‌ನಲ್ಲಿ ಭಾಗವಹಿಸಿದ್ದ  ಕರ್ನಾಟಕ ರಾಜ್ಯ ತಂಡ ದ್ವಿತೀಯ ಸ್ಥಾನ ಪಡೆದಿದೆ.

ರಾಜ್ಯ ತಂಡದ ಅರ್ಚಿತ್ 4 ಚಿನ್ನ,  ವೈಭವ್ 1 ಚಿನ್ನ,  ಜೀವನ್ 1 ಚಿನ್ನ,  ರುದ್ರಾಂಶ 1 ಚಿನ್ನ, ವಿನಮ್ರತಾ 1 ಚಿನ್ನ, ಪ್ರಥಮ್ 1 ಚಿನ್ನ, ಲಕ್ಷಿತ್ 1 ಬೆಳ್ಳಿ, ಶ್ರೇಯಸ್ 1 ಬೆಳ್ಳಿ ಹಾಗೂ ಫಲಕ್ 2 ಕಂಚು, ಅರುಣ್ 1 ಕಂಚು, ಅರ್ನವ್ 1 ಕಂಚು, ಷಣ್ಮುಖ 1 ಕಂಚು ಪಡೆದಿದ್ದಾರೆ.

ಬೇರೆ ಬೇರೆ ರಾಜ್ಯಗಳ ಒಟ್ಟು ಹದಿನೈದು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.   ಕರ್ನಾಟಕ ತಂಡದ ಮುಖ್ಯ ಕೋಚ್ ಆದ ಪೃಥ್ವಿಕಾಂತ್ ಎನ್ ಕೋಟ್ಗಿ ಮತ್ತು ಕ್ರೀಡಾಪಟುಗಳಿಗೆ  ಕೆಎಸ್‍ಎಸ್‍ಎ ರಾಜ್ಯ ಕಾರ್ಯದರ್ಶಿ ಮಣಿಕಂಠ,   ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷ ನಾಯಕ    ಗಡಿಗುಡಾಳ್ ಮಂಜುನಾಥ್, ಸೌಭಾಗ್ಯ ನಾಗರಾಜ್‌, ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಆಕಾಶ್, ನೀಲಕಂಠ, ಶೈಲಾ ನೀಲಕಂಠ,  ಬಸಮ್ಮ ದೊಡ್ಡಬಸಪ್ಪ  ಅಭಿನಂದಿಸಿದ್ದಾರೆ.    

error: Content is protected !!