ಬಡ ಮಕ್ಕಳಿಗೆ ಸಂಸ್ಥೆಗಳ ನೆರವು ಸಿಗಲಿ

ಬಡ ಮಕ್ಕಳಿಗೆ ಸಂಸ್ಥೆಗಳ ನೆರವು ಸಿಗಲಿ

ಮಲೇಬೆನ್ನೂರಿನಲ್ಲಿ ಬಿಇಓ ಹನುಮಂತಪ್ಪ ಮನವಿ 

ಮಲೇಬೆನ್ನೂರು, ಜ. 2 – ಇಲ್ಲಿನ ಆಶ್ರಯ ಕಾಲೋನಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಉರ್ದು ಶಾಲೆಯ ವಿದ್ಯಾರ್ಥಿ ಗಳಿಗೆ  ಬೆಂಗಳೂರಿನ ಆಪತ್ ಸಹಾಯ ಸಂಸ್ಥೆ ನೀಡಿದ ಶಾಲಾ ಬ್ಯಾಗ್ ಮತ್ತು ನೋಟ್ಸ್ ಪುಸ್ತಕಗಳನ್ನು ಕ್ಷೇತ್ರ ಶಿಕ್ಷಣಾಧಿ ಕಾರಿ ಹನುಮಂತಪ್ಪ ವಿತರಿಸಿದರು.

ನಂತರ ಮಾತನಾಡಿದ ಬಿಇಓ ಹನುಮಂತಪ್ಪ ಬಡ ಮಕ್ಕಳು ಅಭ್ಯಾಸ ಮಾಡುತ್ತಿರುವ ಶಾಲೆಗಳನ್ನು ಗುರುತಿಸಿ, ಸಂಸ್ಥೆಯಿಂದ ನೀಡುವ ವಸ್ತುಗಳನ್ನು ಆದ್ಯತೆ ಮೇರೆಗೆ ನೀಡಲು ಶಿಕ್ಷಕ ಸಂಘದ ಪದಾಧಿಕಾರಿಗಳು ಗಮನಹರಿಸಬೇಕೆಂದು ಸಲಹೆ ನೀಡಿದರು.

ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣ್ ಕುಮಾರ್ ಹೆಗ್ಡೆ ಮಾತನಾಡಿ ಬೆಂಗಳೂರಿನ ಸುಧಾರ್, ಕೃತಗ್ಯತಾ ಟ್ರಸ್ಟ್ ಹಾಗೂ ಆಪತ್ ಸಹಾಯ ಸಂಸ್ಥೆಯಿಂದ ಹರಿಹರ ತಾಲ್ಲೂಕಿನ 40 ಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್, ನಲಿಕಲಿ ಪೀಠೋ ಪಕರಣಗಳನ್ನು ನೀಡಲಾಗಿದೆ. 

ಶಾಲೆಗಳಿಂದ ಬೇಡಿಕೆ ಬಂದಲ್ಲಿ ಸಂಸ್ಥೆಗಳ ಜೊತೆ ಚರ್ಚಿಸುತ್ತೇನೆ ಎಂದರು. ಶಾಲಾ ಮುಖ್ಯ ಶಿಕ್ಷಕ ಮಹ್ಮದ್ ಖಲೀಲ್, ಶಿಕ್ಷಕರಾದ ಪೀರುನಾಯ್ಕ, ಪ್ರವೀಣ್, ಆನಂದ್, ಯಸ್ಮಿನ್, ಸೈಯಿದಾ,
ಮ. ರಜಾಕವುಲ್ಲಾ, ಅಲ್ತಾಫ್, ಮುಸ್ತಾಫಾ, ವೀರಣ್ಣ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!