ರೈತ, ಕಾರ್ಮಿಕ, ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ರೈತ ಬೆಳೆಯುವ ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಕೊರೊನಾ ಹರಡುವಿಕೆಯಲ್ಲಿ ದಾವಣಗೆರೆ ಮುಂಚೂಣಿ
ರಾಜ್ಯ ಸರ್ಕಾರ ನಿನ್ನೆಯಷ್ಟೇ ಪ್ರಕಟಿಸಿದ ಕೊರೊನಾ ಸೆರೋ ಸಮೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಯು ರಾಜ್ಯ ದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿದೆ.
ಕೆಹೆಚ್ಬಿ ಕಾಲೋನಿಗೆ ನಗರ ಸಾರಿಗೆ
ದಾವಣಗೆರೆ : ನಗರದ ಕೆ.ಹೆಚ್.ಬಿ ಕಾಲೋನಿ ತುಂಗಭದ್ರಾ ಬಡಾವಣೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೌಕರ್ಯವನ್ನು ನೂತನವಾಗಿ ಇಂದಿನಿಂದ ಆರಂಭಿಸಲಾಯಿತು.
ಕಲೆ ಆರಾಧಿಸಿದರೆ ಬದುಕು ಹಸನು: ನಳಿನಿ ಅಚ್ಯುತ್
ಮಕ್ಕಳನ್ನು ಕೇವಲ ಅಂಕ ಗಳಿಕೆಗಷ್ಟೇ ಸೀಮಿತಗೊಳಿಸದೇ ಅವರಲ್ಲಿರುವ ಸುಪ್ತ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಿದರೆ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುವುದಲ್ಲದೇ, ಮುಂದೆ ಭವಿಷ್ಯದಲ್ಲಿ ಬದುಕು ರೂಪಿಸಿಕೊಳ್ಳಲು ದಾರಿಯಾಗಲಿದೆ
ಡಿಸೆಂಬರ್ ಮೊದಲ ವಾರ ಶಾಲಾರಂಭ
ಬೆಂಗಳೂರು : ಮಾಸಾಂತ್ಯ ಇಲ್ಲವೇ ಡಿಸೆಂಬರ್ ಮೊದಲ ವಾರದಲ್ಲಿ 8 ರಿಂದ 12ನೆ ತರಗತಿವರೆಗಿನ ಶಾಲಾ ತರಗತಿಗಳನ್ನು ಆರಂಭಿಸಲು ಸರ್ಕಾರ ಸಿದ್ದತೆ ನಡೆಸಿದೆ.
ಡಿ.ಇ.ಎಲ್.ಇಡಿ ದಾಖಲಾತಿಗೆ ಅರ್ಜಿ ಆಹ್ವಾನ
ಪ್ರಸಕ್ತ ಸಾಲಿನ ಪ್ರಥಮ ವರ್ಷದ ಡಿ.ಇ.ಎಲ್.ಇಡಿ.ಗೆ ದಾಖಲಾತಿ ಪಡೆಯಲು ಇದೇ ದಿನಾಂಕ 31ರವರೆಗೆ ಆಫ್ಲೈನ್ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.
ತೋಟದ ಮನೆಯಲ್ಲಿ ಕಳ್ಳತನ
ಚನ್ನಗಿರಿ ತಾಲ್ಲೂಕು ಹಿರೇಮಳಲಿ ಗ್ರಾಮದ ತೋಟದ ಮನೆಯಲ್ಲಿ ಕಳ್ಳತನವಾಗಿದ್ದು, ಕಳ್ಳರು 1.25 ಲಕ್ಷ ರೂ. ಮೌಲ್ಯದ ಮೋಟಾರ್ ಹಾಗೂ ವಿವಿಧ ವಸ್ತುಗಳನ್ನು ಕಳ್ಳತನ ಮಾಡಿರುವುದಾಗಿ ಮಾಲೀಕ ಪುನಿತ್ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಗರದಲ್ಲಿಂದು ಅಬ್ದುಲ್ ಕಲಾಂ ಸ್ಮರಣೆ
ಭಾರತೀಯ ಜನತಾ ಪಾರ್ಟಿ ಅಲ್ಪ ಸಂಖ್ಯಾತರ ಮೋರ್ಚಾದ ವತಿಯಿಂದ ನಗರದ ಸೀತಮ್ಮ ಬಾಲಕಿಯ ಶಾಲೆಯಲ್ಲಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ 9ನೇ ಪುಣ್ಯತಿಥಿ ಅಂಗವಾಗಿ ಇಂದು ಬೆಳಿಗ್ಗೆ 10.30ಕ್ಕೆ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ
ಇಂದು ಸಿಎಂ ಮಾಧ್ಯಮ ಸಲಹೆಗಾರರ ಪ್ರವಾಸ
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆ ಗಾರ ಕೆ.ವಿ ಪ್ರಭಾಕರ್ ಅವರು ಶನಿವಾರ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಇಂದು ಸಂಜೆ 4ಕ್ಕೆ ಹರಿಹರಕ್ಕೆ ಆಗಮಿಸಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ 6ಕ್ಕೆ ಹುಬ್ಬಳ್ಳಿಗೆ ಪ್ರಯಾಣಿಸಲಿದ್ದಾರೆ.
ಕಾರ್ಮಿಕ ಇಲಾಖೆಯ ವಿವಿಧ ಸೌಲಭ್ಯಗಳ ಅರ್ಜಿ ವಿಸ್ತರಣೆ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾ ರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಅಭಿವೃದ್ಧಿಪಡಿಸಿರುವ ನೂತನ ತಂತ್ರಾಂಶವು ಪುನರಾರಂಭಿಸಲು ಸಾಧ್ಯವಾಗದ ಕಾರಣ ಮಂಡಳಿಯ ವಿವಿಧ ಸೌಲಭ್ಯಗಳ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸುವ ಅವಧಿ ಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ.
ನ್ಯಾಮತಿಯಲ್ಲಿ ಮತ್ತೊಂದು ಮನೆ ಕಳ್ಳತನ
ನ್ಯಾಮತಿ : ನ್ಯಾಮತಿ ನಗರದ ಪೋಸ್ಟ್ ಆಫೀಸ್ ಹಿಂಭಾಗದ ಮನೆಯೊಂ ದರಲ್ಲಿ ಕಳ್ಳತನವಾಗಿದ್ದು, 1.18 ಲಕ್ಷ ರೂ. ಬೆಲೆಯ ಆಭರಣ ಹಾಗೂ ನಗದನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಹರಿಹರದಲ್ಲಿ ಇಂದು ಪತ್ರಿಕಾ ದಿನಾಚರಣೆ
ಇಂದು ಸಂಜೆ 4 ಗಂಟೆಗೆ ಪತ್ರಿಕಾ ಭವನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳ ಲಾಗಿದೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಕಾರ್ಯಕ್ರಮ ಉದ್ಘಾಟಿಸುವರು.
ನ್ಯಾಮತಿಯಲ್ಲಿ ಇಂದು ಪತ್ರಿಕಾ ದಿನಾಚರಣೆ
ನ್ಯಾಮತಿ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಪಬ್ಲಿಕ್ ಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಲಾಕುಂಚದಿಂದ ನಗರದಲ್ಲಿ ಇಂದು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ
2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವು ನಾಳೆ ದಿನಾಂಕ 27 ಮತ್ತು 28 ರಂದು ನಡೆಯಲಿದೆ ಎಂದು ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾರ್ಥಿಗಳನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ ಕೇಂದ್ರ ಬಜೆಟ್
ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಿಬಂಧನೆ ಆಧಾರಿತ ಸಾಲಗಳನ್ನು ನೀಡುವ ಕೇಂದ್ರ ಸರ್ಕಾರದ ಬಜೆಟ್ ಘೋಷಣೆಯು ಆಘಾತಕಾರಿಯಾಗಿದೆ.
ಪ್ರೊ. ಕೃಷ್ಣಪ್ಪ ಭವನದಲ್ಲಿ ಇಂದು - ನಾಳೆ ಬಂಜಾರ ಸಮಾಜದ ರಾಜ್ಯಮಟ್ಟದ ಉದ್ಯಮಶೀಲತಾ ತರಬೇತಿ ಕಾರ್ಯಗಾರ
ಬಂಜಾರ ಸಮಾಜದಿಂದ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಬಂಜಾರ ಯುವ ಜನರಿಗಾಗಿ ರಾಜ್ಯ ಮಟ್ಟದ ಉದ್ಯಮಶೀಲತೆ ಮತ್ತು ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಹರಿಹರ ತಾಲ್ಲೂಕಿನ ಹನಗವಾಡಿ ಸಮೀಪದ ಪ್ರೊ. ಬಿ. ಕೃಷ್ಣಪ್ಪ ಭವನದಲ್ಲಿ ಇಂದು - ನಾಳೆ ಆಯೋಜಿಸಲಾಗಿದೆ.
ಮಲೇಬೆನ್ನೂರಿನಲ್ಲಿ ಅಡುಗೆ ಕೋಣೆ ಕುಸಿತ
ಮಲೇಬೆನ್ನೂರು : 7ನೇ ವಾರ್ಡ್ ನಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಹಾಗೂ ಅಡುಗೆ ಕೋಣೆಯು ಸತತ ಮಳೆಯಿಂದಾಗಿ ಬುಧವಾರ ಬೆಳಗಿನ ಜಾವ ಭಾಗಶಃ ಕುಸಿದು ಬಿದ್ದಿದೆ
ನಗರದಲ್ಲಿ ದಲಿತ ಉದ್ಯಮಿದಾರರ ಸಭೆ
ಕರ್ನಾಟಕ ದಲಿತ ಉದ್ಯಮಿದಾರರ ಸಂಘದ ದಾವಣಗೆರೆ - ಚಿತ್ರ ದುರ್ಗ ಜಿಲ್ಲಾ ಶಾಖೆಯಿಂದ ಎಸ್ಸಿ, ಎಸ್ಟಿ ಕೈಗಾರಿಕೋದ್ಯಮಿಗಳ ಸಭೆಯನ್ನು ಇಂದು ಬೆಳಿಗ್ಗೆ 10 ಗಂಟೆಗೆ ರೋಟರಿ ಬಾಲಭವನದಲ್ಲಿ ಕರೆಯಲಾಗಿದೆ.
ನಾಳಿನ ಛಲವಾದಿ ಸಮಾಜದ ಕಾರ್ಯಕ್ರಮಕ್ಕೆ ಸಚಿವ ಡಾ. ಮಹಾದೇವಪ್ಪ
ಜಿಲ್ಲಾ ಛಲವಾದಿ ಮಹಾಸಭಾದ ವತಿಯಿಂದ 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 75 ರಷ್ಟು ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 80 ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 28 ರಂದು ಬೆಳಿಗ್ಗೆ 11 ಕ್ಕೆ ಬಿಐಇಟಿ ಕಾಲೇಜಿನ ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ನಡೆಸಲಾಗುವುದು
ನಾಡಿದ್ದು ಭದ್ರಾ ಐಸಿಸಿ ಸಭೆ
ಭದ್ರಾ ಅಚ್ಚುಕಟ್ಟಿನ 2024-25 ನೇ ಸಾಲಿನ ಮುಂಗಾರು ಬೆಳೆಗಳಿಗೆ ನೀರು ಹರಿಸುವ ಕುರಿತು ತೀರ್ಮಾನಿಸಲು ಭದ್ರಾ 85 ನೇ ನೀರಾವರಿ ಸಲಹಾ ಸಮಿತಿ ಸಭೆಯನ್ನು ಇದೇ ದಿನಾಂಕ 29 ರ ಸೋಮವಾರ ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ
ಟ್ರೇಡಿಂಗ್ ಲಾಭ ತೋರಿಸಿ 1.35 ಕೋಟಿ ರೂ. ವಂಚನೆ
ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭ ಮಾಡಬಹುದೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಆನ್ಲೈನ್ ಮೂಲಕ 1.35 ಕೋಟಿ ರೂ. ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.
ಭಗತ್ ಸಿಂಗ್ ನಗರದಲ್ಲಿ ವ್ಯಕ್ತಿಯ ಸುಲಿಗೆ, ಕೊಲೆಗೆ ಯತ್ನ
ಭಗತ್ ಸಿಂಗ್ ನಗರದ ಅಂಜುಮನ್ ಶಾಲೆ ಬಳಿ ಬುಧವಾರ ರಾತ್ರಿ 11.15ರ ವೇಳೆ ವ್ಯಕ್ತಿಯೊಬ್ಬರ ಸುಲಿಗೆ ನಡೆದಿದ್ದು, ತಲೆ ಮೇಲೆ ಕಲ್ಲು ಹಾಕಿ ಕೊಲೆಗೂ ಯತ್ನಿಸಲಾಗಿದೆ. ಈ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಿಲ್ಲೆಯಲ್ಲಿ ವಾಡಿಕೆಗಿಂತ 41 ಮಿ.ಮೀ. ಹೆಚ್ಚು ಮಳೆ
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರಿ ನಲ್ಲಿ ವಾಡಿಕೆಗಿಂತ 41 ಮಿ.ಮೀ ಹೆಚ್ಚು ಮಳೆಯಾಗಿದೆ.
ಕರಾಟೆಯಲ್ಲಿ ಸಾದತ್ಗೆ ಬಂಗಾರ
ನಗರದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಇಲ್ಲಿನ ಚಾಣಕ್ಯ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ ಸಾದತ್ ಮಹಮ್ಮದ್ ಅವರು ಕಾಟಾ ಮತ್ತು ಕುಮುಟೆ ಈ ಎರಡು ವಿಭಾಗದಲ್ಲಿ ಭಾಗವಹಿಸಿ ಬಂಗಾರದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.
ಹರಿಹರ : 29 ರಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆಡಿ ಕೃತಿಕ ಪೂಜೆ
ಹರಿಹರ : ನಗರದ ಹೊಸಭರಂಪುರ ಬಡಾವಣೆಯ ನೂರ ಎಂಟು ಲಿಂಗೇಶ್ವರ ದೇವಸ್ಥಾನ ಹಿಂಬದಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇದೇ ದಿನಾಂಕ 29 ರ ಸೋಮವಾರ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಆಡಿ ಕೃತ್ತಿಕ ಪೂಜೆ ನಡೆಯಲಿದೆ.
ಹರಿಹರದಲ್ಲಿ ಹಡಪದ ಅಪ್ಪಣ್ಣ ಜಯಂತಿ
ಹರಿಹರ : ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ದಾರ್ಶನಿಕ ಹಡಪದ ಅಪ್ಪಣ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಕೃಷಿಯಲ್ಲಿ ನೀರಿನ ವೈಜ್ಞಾನಿಕ ಬಳಕೆಗೆ ಸರ್ಕಾರ ಚಿಂತಿಸಲಿ : ಎಎಪಿ
ಕೃಷಿಯಲ್ಲಿ ನೀರನ್ನು ವೈಜ್ಞಾನಿಕವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ ಹಾಗೂ ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಮುಂದಾಗಲಿ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ.ಎಸ್. ಶಿವಕುಮಾರಪ್ಪ ಒತ್ತಾಯಿಸಿದ್ದಾರೆ.
ಮಲೇಬೆನ್ನೂರಿನಲ್ಲಿ ಹಸು ಕಳ್ಳನ ಬಂಧನ
ಮಲೇಬೆನ್ನೂರು : ಹಸು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಲೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ನಾಳೆ ಆರೂಢ ದಾಸೋಹಿ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ
ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಾಡಿದ್ದು ದಿನಾಂಕ 27ರಂದು ಬೀದರ್ನ ಡಾ.ಚನ್ನಬಸವ ಪಟ್ಟದೇವರ ರಂಗ ಮಂದಿರ ಹಾಗೂ ಬರುವ ಆಗಸ್ಟ್ 3ರಂದು ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿ ಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
![27 bhadra 27-07-2024 ಮಲೆನಾಡಿನಲ್ಲಿ ಮಳೆ: ತುಂಗಾ, ಭದ್ರಾ ಒಳ ಹರಿವು ಮತ್ತಷ್ಟು ಹೆಚ್ಚಳ](https://janathavani.com/wp-content/uploads/2024/07/27-bhadra-27-07-2024-580x440.jpg)
ಮಲೆನಾಡಿನಲ್ಲಿ ಮಳೆ: ತುಂಗಾ, ಭದ್ರಾ ಒಳ ಹರಿವು ಮತ್ತಷ್ಟು ಹೆಚ್ಚಳ
ಮಲೇಬೆನ್ನೂರು : ಮಲೆನಾಡಿನಲ್ಲಿ ಮುಂಗಾರು ಮಳೆ ಶುಕ್ರವಾರದಿಂದ ಮತ್ತೆ ಜೋರಾಗಿದ್ದು, ತುಂಗಾ ಮತ್ತು ಭದ್ರಾ ನದಿಯಲ್ಲಿ ನೀರಿನ ಹರಿವು ಮತ್ತಷ್ಟು ಏರಿಕೆಯಾಗಿದೆ.
![25 gadigudal 27-07-2024 ಕಾರ್ಗಿಲ್ ಹುತಾತ್ಮರನ್ನು ಸ್ಮರಿಸೋಣ](https://janathavani.com/wp-content/uploads/2024/07/25-gadigudal-27-07-2024-580x440.jpg)
ಕಾರ್ಗಿಲ್ ಹುತಾತ್ಮರನ್ನು ಸ್ಮರಿಸೋಣ
ನಗರದ ಎಂಸಿಸಿ `ಬಿ' ಬ್ಲಾಕ್ನಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
![24 spyss 27-07-2024 ಎಸ್ಪಿವೈಎಸ್ಎಸ್ ನಿಂದ ಯೋಧರಿಗೆ ಗೌರವ](https://janathavani.com/wp-content/uploads/2024/07/24-spyss-27-07-2024-580x440.jpg)
ಎಸ್ಪಿವೈಎಸ್ಎಸ್ ನಿಂದ ಯೋಧರಿಗೆ ಗೌರವ
ಕಾರ್ಗಿಲ್ ಯುದ್ಧದ 25 ನೇ ವಿಜಯೋತ್ಸವ ರಜತ ಸಂಭ್ರಮಾಚರಣೆ ಯನ್ನು ಎಸ್ಪಿವೈಎಸ್ಎಸ್ ವತಿಯಿಂದ ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಠದಲ್ಲಿ ಅಗ್ನಿಹೋತ್ರ ಹೋಮದೊಂದಿಗೆ ಆಚರಿಸಲಾಯಿತು.
![23 lions logo 27-07-2024 ನಗರದಲ್ಲಿ ಇಂದು ವೈದ್ಯರ ದಿನಾಚರಣೆ](https://janathavani.com/wp-content/uploads/2024/07/23-lions-logo-27-07-2024.jpg)
ನಗರದಲ್ಲಿ ಇಂದು ವೈದ್ಯರ ದಿನಾಚರಣೆ
ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ ವೈದ್ಯರ ದಿನಾಚರಣೆ ಕಾರ್ಯಕ್ರಮವು ಲಯನ್ಸ್ ಭವನದಲ್ಲಿ ಇಂದು ಸಂಜೆ 7.45ಕ್ಕೆ ನಡೆಯಲಿದ್ದು, ಲಯನ್ಸ್ ಅಧ್ಯಕ್ಷ ಎಸ್.ಜಿ. ಉಳವಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ
![22 cong kargil 27-07-2024 ನಗರದಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ](https://janathavani.com/wp-content/uploads/2024/07/22-cong-kargil-27-07-2024-580x440.jpg)
ನಗರದಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ
25 ವರ್ಷದ ವಿಜಯೋತ್ಸವದ ಅಂಗವಾಗಿ ಭಾರತೀಯ ವೀರ ಯೋಧರಿಗೆ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ವೀರ ಯೋಧರಿಗೆ ಸೆಲ್ಯೂಟ್ ಸಲ್ಲಿಸಿ ನಾಗರಿಕರಿಗೆ ಸಿಹಿ ವಿತರಿಸಿ, ವಿಜಯೋತ್ಸವವನ್ನು ಆಚರಿಸಲಾಯಿತು.
![21 hanumasagara 27-07-2024 ಹನುಮಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನಾಗರಾಜ್ ನಾಯ್ಕ್](https://janathavani.com/wp-content/uploads/2024/07/21-hanumasagara-27-07-2024-580x440.jpg)
ಹನುಮಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನಾಗರಾಜ್ ನಾಯ್ಕ್
ಹೊನ್ನಾಳಿ : ತಾಲ್ಲೂಕಿನ ಹನುಮಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನಾಗರಾಜ್ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿರುವು ದಾಗಿ ಚುನಾವಣಾಧಿಕಾರಿಯಾಗಿದ್ದ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಡಿ.ಎಂ. ಷಣ್ಮುಖ ತಿಳಿಸಿದ್ದಾರೆ.
![19 sharifa 27-07-2024 ತೊಟ್ಟಿಲು ತೂಗುವ ಕೈ ದೇಶ ಆಳ ಬಲ್ಲದು](https://janathavani.com/wp-content/uploads/2024/07/19-sharifa-27-07-2024-580x440.jpg)
ತೊಟ್ಟಿಲು ತೂಗುವ ಕೈ ದೇಶ ಆಳ ಬಲ್ಲದು
ತೊಟ್ಟಿಲು ತೂಗುವ ಕೈಗೆ ದೇಶ ಆಳುವ ಶಕ್ತಿ ಇದೆ. ಆದ್ದರಿಂದ ಮಹಿಳೆ ತನ್ನ ಸ್ವತಂತ್ರದ ವಿಚಾರದಲ್ಲಿ ಕುಗ್ಗದೇ ಕಡ್ಡಾಯವಾಗಿ ಶಿಕ್ಷಣ ಪಡೆದರೆ ಮಹಿಳಾ ಸಬಲೀಕರಣ ಆಗಬಹುದು ಎಂದು ಸಾಹಿತಿ ಡಾ.ಕೆ. ಷರೀಫಾ ತಿಳಿಸಿದರು.
![20 lions kargil 27-07-2024 ಲಯನ್ಸ್ ಕ್ಲಬ್ನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮಾಚರಣೆ](https://janathavani.com/wp-content/uploads/2024/07/20-lions-kargil-27-07-2024-580x440.jpg)
ಲಯನ್ಸ್ ಕ್ಲಬ್ನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮಾಚರಣೆ
ನಗರದ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮಾಚರಣೆಯನ್ನು ಲಯನ್ಸ್ ಭವನದಲ್ಲಿ ಇಂದು ಆಚರಿಸಲಾಯಿತು.
![18 rain water 27-07-2024 ಮಳೆಯ ನೀರಲ್ಲಿ ಚರ್ಚ್ನ ಪ್ರತಿಬಿಂಬ](https://janathavani.com/wp-content/uploads/2024/07/18-rain-water-27-07-2024-552x440.jpg)
ಮಳೆಯ ನೀರಲ್ಲಿ ಚರ್ಚ್ನ ಪ್ರತಿಬಿಂಬ
ದಾವಣಗೆರೆ ನಗರದಲ್ಲಿ ನಿರಂತರ ಸುರಿದ ಮಳೆಯಿಂದಾಗಿ ನಗರದ ಸೇಂಟ್ ಥಾಮಸ್ ಚರ್ಚಿನ ಕಟ್ಟಡದ ಪ್ರತಿಬಿಂಬ ನೆಲದಲ್ಲಿ ನಿಂತಿರುವ ಮಳೆ ನೀರಿನಲ್ಲಿ ಕಂಡು ಬಂದದ್ದು ಹೀಗೆ..
![15 parisara 27-07-2024 ಪರಿಸರ ಸ್ವಚ್ಛ ಇದ್ದರೆ ಮಾತ್ರ ರೋಗಗಳು ದೂರ](https://janathavani.com/wp-content/uploads/2024/07/15-parisara-27-07-2024-580x440.jpg)
ಪರಿಸರ ಸ್ವಚ್ಛ ಇದ್ದರೆ ಮಾತ್ರ ರೋಗಗಳು ದೂರ
ಮಲೇಬೆನ್ನೂರು : ಇಲ್ಲಿನ ಪುರಸಭೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಕಾಯಿಲೆಗಳ ಹರಡುವಿಕೆ ಹಾಗೂ ಅದನ್ನು ತಡೆಗಟ್ಟುವಿಕೆ ಕುರಿತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ಜಾಗೃತಿ ಜಾಥಾ ನಡೆಸಲಾಯಿತು.
![17 panchakshari 27-07-2024 ಪಂ. ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ](https://janathavani.com/wp-content/uploads/2024/07/17-panchakshari-27-07-2024-580x440.jpg)
ಪಂ. ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ
ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಪಂ.ಪಂಚಾಕ್ಷರಿ ಗವಾಯಿಗಳ ಪುಣ್ಯ ಸ್ಮರಣೆ `ಗುರು ಗುಣಗಾನ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
![16 ssk 27-07-2024 ನೂತನ ಸಂಸದ ನಾರಾಯಣ ಸಾ ಬಾಂಡಗೆ ಅವರಿಗೆ ಎಸ್ಎಸ್ಕೆ ಸಮಾಜದಿಂದ ಸನ್ಮಾನ](https://janathavani.com/wp-content/uploads/2024/07/16-ssk-27-07-2024-580x440.jpg)
ನೂತನ ಸಂಸದ ನಾರಾಯಣ ಸಾ ಬಾಂಡಗೆ ಅವರಿಗೆ ಎಸ್ಎಸ್ಕೆ ಸಮಾಜದಿಂದ ಸನ್ಮಾನ
ಎಸ್.ಎಸ್.ಕೆ. ಸಮಾಜದ ಹಿರಿಯರೂ, ರಾಜ್ಯಸಭೆಯ ನೂತನ ಸದಸ್ಯರೂ ಆದ ನಾರಾಯಣಸಾ ಬಾಂಡಗೆ ಅವರು ಬಾಗಲಕೋಟೆ ನಗರಕ್ಕೆ ಇಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ದಾವಣಗೆರೆಯ ಎಸ್.ಎಸ್.ಕೆ. ಸಮಾಜದ ವತಿಯಿಂದ ಅಧ್ಯಕ್ಷ ಮಲ್ಲಾರಸಾ ಆರ್. ಕಾಟ್ವೆ ಅವರ ನೇತೃತ್ವದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
![13 rangabhoumi 27-07-2024 ಪ್ರೇಕ್ಷಕರನ್ನು ಆಕರ್ಷಿಸುವ ಗುಣವನ್ನು ಹವ್ಯಾಸಿ ರಂಗಭೂಮಿ ಅಳವಡಿಸಿಕೊಳ್ಳಲಿ](https://janathavani.com/wp-content/uploads/2024/07/13-rangabhoumi-27-07-2024-580x440.jpg)
ಪ್ರೇಕ್ಷಕರನ್ನು ಆಕರ್ಷಿಸುವ ಗುಣವನ್ನು ಹವ್ಯಾಸಿ ರಂಗಭೂಮಿ ಅಳವಡಿಸಿಕೊಳ್ಳಲಿ
ಚಿತ್ರದುರ್ಗ : ವೃತ್ತಿ ರಂಗಭೂಮಿ ಯಲ್ಲಿರುವ ಪ್ರೇಕ್ಷಕರನ್ನು ಹವ್ಯಾಸಿ ರಂಗ ತಂಡಗಳು ತಮ್ಮ ಪ್ರಯೋಗಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
![14 ravikumar 27-07-2024 ರೋಗಮುಕ್ತ ಸಮಾಜಕ್ಕೆ ಪರಿಸರ ಸ್ವಚ್ಛತೆ ಅಗತ್ಯ](https://janathavani.com/wp-content/uploads/2024/07/14-ravikumar-27-07-2024-580x440.jpg)
ರೋಗಮುಕ್ತ ಸಮಾಜಕ್ಕೆ ಪರಿಸರ ಸ್ವಚ್ಛತೆ ಅಗತ್ಯ
ಜಗಳೂರು : ಪರಿಸರ ಸ್ವಚ್ಛತೆ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಅತ್ಯಗತ್ಯವಾಗಿದೆ ಎಂದು ಪ್ರೀತಿ ಆರೈಕೆ ಟ್ರಸ್ಟ್ನ ಕಾರ್ಯದರ್ಶಿ ಡಾ.ಟಿ. ಜಿ ರವಿಕುಮಾರ್ ಅಭಿಪ್ರಾಯಿಸಿದರು.
![12 pyaralisisi 27-07-2024 ಪಾರ್ಶ್ವವಾಯು ತಡೆಗಟ್ಟಲು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಬೇಕು](https://janathavani.com/wp-content/uploads/2024/07/12-pyaralisisi-27-07-2024-580x440.jpg)
ಪಾರ್ಶ್ವವಾಯು ತಡೆಗಟ್ಟಲು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಬೇಕು
ನರ ರೋಗಗಳಿಗೆ ಸಂಬಂಧಿಸಿದಂತೆ ಪಾರ್ಶ್ವವಾಯು ಕಾಯಿಲೆಯಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಅನೇಕ ಜನರು ಜೀವನವಿಡಿ ಅಂಗವೈಕಲ್ಯತೆ ಹೊಂದಿದ್ದಾರೆ, ಇದನ್ನು ತಡೆಯಲು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ
![11 kakkaragolla 27-07-2024 ಕಕ್ಕರಗೊಳ್ಳ ಗ್ರಾ.ಪಂ ಅಧ್ಯಕ್ಷರಾಗಿ ಸಿ. ಆಶಾ ಸಿದ್ದೇಶ್](https://janathavani.com/wp-content/uploads/2024/07/11-kakkaragolla-27-07-2024-580x432.jpg)
ಕಕ್ಕರಗೊಳ್ಳ ಗ್ರಾ.ಪಂ ಅಧ್ಯಕ್ಷರಾಗಿ ಸಿ. ಆಶಾ ಸಿದ್ದೇಶ್
ತಾಲ್ಲೂಕು ಕಕ್ಕರಗೊಳ್ಳ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶ್ರೀಮತಿ ಸಿ. ಆಶಾ ಸಿದ್ದೇಶ್ ಕೆ.ಆರ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
![10 kiran 27-07-2024 ಜಿಲ್ಲಾ ಜನೌಷಧಿ ಕೇಂದ್ರಗಳ ಮಾಲೀಕರ ಸಂಘದ ಅಧ್ಯಕ್ಷರಾಗಿ ಟಿ.ಎಸ್.ಕಿರಣ್](https://janathavani.com/wp-content/uploads/2024/07/10-kiran-27-07-2024-580x440.jpg)
ಜಿಲ್ಲಾ ಜನೌಷಧಿ ಕೇಂದ್ರಗಳ ಮಾಲೀಕರ ಸಂಘದ ಅಧ್ಯಕ್ಷರಾಗಿ ಟಿ.ಎಸ್.ಕಿರಣ್
ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳ ಮಾಲೀಕರ ಜಿಲ್ಲಾ ಸಂಘದ ಅಧ್ಯಕ್ಷರಾಗಿ ಟಿ. ಎಸ್. ಕಿರಣ್, ಉಪಾಧ್ಯಕ್ಷರಾಗಿ ವಾಸಿಕ್, ಕಾರ್ಯದರ್ಶಿ ಆಗಿ ಮಹೇಶ್ವರಪ್ಪ, ಸಹ ಕಾರ್ಯದರ್ಶಿ ರುದ್ರೇಶ್, ಖಜಾಂಚಿಯಾಗಿ ಗಣೇಶ್ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
![09 mbr 27-07-2024 ಮಲೇಬೆನ್ನೂರು : ಕಣ್ಣಿನ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಬೇಡ](https://janathavani.com/wp-content/uploads/2024/07/09-mbr-27-07-2024-580x440.jpg)
ಮಲೇಬೆನ್ನೂರು : ಕಣ್ಣಿನ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಬೇಡ
ಮಲೇಬೆನ್ನೂರು : ಕಣ್ಣುಗಳು ನಮ್ಮ ದೇಹದ ಪ್ರಮುಖ ಇಂದ್ರಿಯಗಳಾಗಿವೆ. ಕಣ್ಣುಗಳಲ್ಲಿನ ಸಮಸ್ಯೆಯು ವ್ಯಕ್ತಿಗಳ ಆರೋಗ್ಯದ ಮೇಲೂ ಸಹ ಪರಿಣಾಮ ಬೀರಬಹುದು. ಕಣ್ಣಿನ ಗಾಯ, ಕಣ್ಣಿನ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸದೇ ತಕ್ಷಣಕ್ಕೆ ನೇತ್ರ ತಜ್ಞರನ್ನು ಸಂಪರ್ಕಿಸಬೇಕೆಂದು ವೈದ್ಯಾಧಿಕಾರಿ ಡಾ. ಜಿ.ಎಸ್.ಅರ್ಚಿತ್ ತಿಳಿಸಿದರು.
![07 kottur 27-07-2024 ಗ್ರಾ. ಪಂ.ನಲ್ಲೇ ಮಲಗಿ ವಿನೂತನ ಪ್ರತಿಭಟನೆ](https://janathavani.com/wp-content/uploads/2024/07/07-kottur-27-07-2024-580x375.jpg)
ಗ್ರಾ. ಪಂ.ನಲ್ಲೇ ಮಲಗಿ ವಿನೂತನ ಪ್ರತಿಭಟನೆ
ಕೊಟ್ಟೂರು : ತಾಲ್ಲೂಕಿನ ಉಜ್ಜಿನಿ ಗ್ರಾಮ ಪಂಚಾಯತಿಯ ಬೈರದೇವರ ಗುಡ್ಡದ ಸದಸ್ಯ ಚಂದ್ರಪ್ಪ ಪೈಪ್ಲೈನ್ ರಿಪೇರಿ ಮಾಡಿದ ಕೆಲಸಕ್ಕೆ ಹಣ ಕೊಡದೇ ಸತಾಯಿಸುತ್ತಿರುವ ಪಿಡಿಒ ಜಯಮ್ಮನವರ ವಿರುದ್ಧ ಗ್ರಾಮ ಪಂಚಾಯತಿಯಲ್ಲೆ ಹಾಸಿಗೆ ಸಮೇತ ಮಲಗಿ ವಿನೂತನವಾಗಿ ಪ್ರತಿಭಟಿಸಿದ್ದಾರೆ.
![08 hrr 27-07-2024 ಪರಸ್ಪರರ ಧಾರ್ಮಿಕ ಕೇಂದ್ರಗಳ ಭೇಟಿಯಿಂದ ಸಾಮರಸ್ಯ, ಸ್ನೇಹ, ವಿಶ್ವಾಸ ಬೆಳೆಯಲು ಸಾಧ್ಯ](https://janathavani.com/wp-content/uploads/2024/07/08-hrr-27-07-2024-580x440.jpg)
ಪರಸ್ಪರರ ಧಾರ್ಮಿಕ ಕೇಂದ್ರಗಳ ಭೇಟಿಯಿಂದ ಸಾಮರಸ್ಯ, ಸ್ನೇಹ, ವಿಶ್ವಾಸ ಬೆಳೆಯಲು ಸಾಧ್ಯ
ಹರಿಹರ : ಜಮಾತೆ ಇಸ್ಲಾಂ ಹಿಂದ್ ಹರಿಹರ ಘಟಕದಿಂದ ಸ್ಥಳೀಯ ಪ್ರಶಾಂತ ನಗರದ ಮಸ್ಜಿದ್ - ಎ - ಅಲಿ ಮಸೀದಿಯಲ್ಲಿ ಇಂದು ಆಯೋಜಿಸಿದ್ದ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಿತು.
![04 hrr smashana 27-07-2024 ಗುತ್ತೂರು ಸ್ಮಶಾನ ಜಲಾವೃತ: ಅಂತ್ಯಕ್ರಿಯೆಗೆ ಪರದಾಟ](https://janathavani.com/wp-content/uploads/2024/07/04-hrr-smashana-27-07-2024-580x440.jpg)
ಗುತ್ತೂರು ಸ್ಮಶಾನ ಜಲಾವೃತ: ಅಂತ್ಯಕ್ರಿಯೆಗೆ ಪರದಾಟ
ಹರಿಹರ : ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ನದಿ ಪಾತ್ರದಲ್ಲಿರುವ ತಾಲ್ಲೂಕಿನ ಗುತ್ತೂರು ಗ್ರಾಮದ ಸ್ಮಶಾನ ಜಲಾವೃತವಾದ ಹಿನ್ನೆಲೆಯಲ್ಲಿ ಗುರುವಾರ ಮೃತಪಟ್ಟ ವ್ಯಕ್ತಿಯೊಬ್ಬರು ಅಂತ್ಯಕ್ರಿಯೆಗೆ ಗ್ರಾಮಸ್ಥರು ಪರದಾಡಿದ ಘಟನೆ ನಡೆಯಿತು.
![28 gmit 27-07-2024 ಜಿ.ಎಂ.ಐ.ಟಿ. ಕಾಲೇಜಿನ ವಿದ್ಯಾರ್ಥಿನಿಯರಿಗೆ ರ್ಯಾಂಕ್](https://janathavani.com/wp-content/uploads/2024/07/28-gmit-27-07-2024.jpg)
ಜಿ.ಎಂ.ಐ.ಟಿ. ಕಾಲೇಜಿನ ವಿದ್ಯಾರ್ಥಿನಿಯರಿಗೆ ರ್ಯಾಂಕ್
ಜಿ.ಎಂ.ಐ.ಟಿ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ 2023-24 ಬ್ಯಾಚ್ನ ಡಿ. ಜನನಿ ಪ್ರಥಮ ರ್ಯಾಂಕ್ , ಸಿ.ಯು. ಅನುಷ ದ್ವಿತೀಯ ರ್ಯಾಂಕ್ , ಕೆ. ಜೀವಿತಾ 4ನೇ ರ್ಯಾಂಕ್ ನ್ನು ಬಿ.ಇ. ಬಯೋಟೆಕ್ನಾಲಜಿಯಲ್ಲಿ ಪಡೆದಿದ್ದಾರೆ.
![29 h karibasappa 27-07-2024 ರೈಲ್ವೆ ನಿಲ್ದಾಣದ ಅಧಿಕಾರಿಯಾಗಿ ಎಚ್. ಕರಿಬಸಪ್ಪ](https://janathavani.com/wp-content/uploads/2024/07/29-h-karibasappa-27-07-2024-358x440.jpg)
ರೈಲ್ವೆ ನಿಲ್ದಾಣದ ಅಧಿಕಾರಿಯಾಗಿ ಎಚ್. ಕರಿಬಸಪ್ಪ
ನಗರದ ರೈಲ್ವೆ ನಿಲ್ದಾಣದ ಅಧಿಕಾರಿಯಾಗಿ ಎಚ್.ಕರಿಬಸಪ್ಪ ಅವರು ನಾಡಿದ್ದು ದಿನಾಂಕ 28ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
![31 tehresa news 26.07.2024 ಮದರ್ ಥೆರೆಸಾ, ಡಾ. ಬಿ.ಸಿ. ರಾಯ್ ಸೇವಾ ಪ್ರಶಸ್ತಿ ಪ್ರದಾನ](https://janathavani.com/wp-content/uploads/2024/07/31-tehresa-news-26.07.2024-580x440.jpg)
ಮದರ್ ಥೆರೆಸಾ, ಡಾ. ಬಿ.ಸಿ. ರಾಯ್ ಸೇವಾ ಪ್ರಶಸ್ತಿ ಪ್ರದಾನ
ಕರುಣಾ ಜೀವ ಕಲ್ಯಾಣ ಟ್ರಸ್ಟ್ನಿಂದ ನಗರದ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ಈಚೆಗೆ ಮದರ್ ಥೆರೆಸಾ ಮತ್ತು ಡಾ. ಬಿ.ಸಿ. ರಾಯ್ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
![29 togari news 26.07.2024 ತೊಗರಿ ಬೆಳೆ ನಿರ್ವಹಣೆಗೆ ಬೇಸಾಯ ತಜ್ಞರ ಸಲಹೆ](https://janathavani.com/wp-content/uploads/2024/07/29-togari-news-26.07.2024-580x440.jpg)
ತೊಗರಿ ಬೆಳೆ ನಿರ್ವಹಣೆಗೆ ಬೇಸಾಯ ತಜ್ಞರ ಸಲಹೆ
ಜಿಲ್ಲೆಯಲ್ಲಿ ತೊಗರಿ ಬೆಳೆಯ ವಿಸ್ತರಣೆ ಮುಂಗಾರಿನಲ್ಲಿ ಹೆಚ್ಚಾಗಿದೆ. ತೊಗರಿ ಅಂತರ ಬೆಳೆಯಾಗಿ ಮೆಕ್ಕೆಜೋಳ, ಅಡಿಕೆ ಹಾಗೂ ಇತರೆ ಬೆಳೆಗಳಲ್ಲಿ ಬೆಳೆಯಲಾಗಿದೆ ಈ ನಿಟ್ಟಿನಲ್ಲಿ ತೊಗರಿಯ ಇಳುವರಿ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಗತ್ಯ
![25 sneha news 26.07.2024 ಸ್ನೇಹದಿಂದ ಸಂಸ್ಥೆಯ ವಾರ್ಷಿಕೋತ್ಸವ](https://janathavani.com/wp-content/uploads/2024/07/25-sneha-news-26.07.2024-580x440.jpg)
ಸ್ನೇಹದಿಂದ ಸಂಸ್ಥೆಯ ವಾರ್ಷಿಕೋತ್ಸವ
ರಾಣೇಬೆನ್ನೂರು : ಇಲ್ಲಿನ ಶ್ರೀರಾಮ ನಗರದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯಲ್ಲಿ ಶನಿವಾರ ಸಂಸ್ಥೆಯ 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉಪಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಿದರು.
![24 ganesh bisleri news 26.07.2024 ಶ್ರೀ ಗುರು ವಾದ್ಯ ವೃಂದದಿಂದ ಗಣೇಶ್ ಬಿಸಲೇರಿ ಅವರಿಗೆ ಸನ್ಮಾನ](https://janathavani.com/wp-content/uploads/2024/07/24-ganesh-bisleri-news-26.07.2024-580x440.jpg)
ಶ್ರೀ ಗುರು ವಾದ್ಯ ವೃಂದದಿಂದ ಗಣೇಶ್ ಬಿಸಲೇರಿ ಅವರಿಗೆ ಸನ್ಮಾನ
ಚಿತ್ರದುರ್ಗ : ದಾವಣಗೆರೆಯ ಹಿರಿಯ ರಂಗಭೂಮಿ ಕಲಾವಿದ ಚಿಂದೋಡಿ ಶಂಭುಲಿಂಗಪ್ಪ ಅವರ ಶ್ರೀ ಗುರು ವಾದ್ಯ ವೃಂದದಿಂದ ಚಿತ್ರದುರ್ಗದ ತ.ರಾ.ಸು ರಂಗಮಂದಿರದಲ್ಲಿ ನಿನ್ನೆ ನಡೆದ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ನಗರದ ಬಿ.ಕೆ. ಗಣೇಶ್ ಬಿಸಲೇರಿ ಅವರನ್ನು ಸನ್ಮಾನಿಸಲಾಯಿತು.