ಜಿಲ್ಲಾ ಯೋಗ ಒಕ್ಕೂಟ, ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ 6ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಭಿನ್ನವಾಗಿ ಆಯೋಜಿಸಿದೆ ಎಂದು ವಾಸುದೇವ ರಾಯ್ಕರ್ ತಿಳಿಸಿದ್ದಾರೆ.
ಹೆಲ್ಮೆಟ್ ನಿಂದ ವಿನಾಯತಿ ನೀಡಲು ಒತ್ತಾಯ
ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ನಿಂದ ವಿನಾಯಿತಿ ನೀಡುವಂತೆ ಬಿಜೆಪಿ ಮುಖಂಡ ಅಜ್ಜಂಪುರ ಶೆಟ್ರು ಮೃತ್ಯುಂಜಯ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದಿನಿಂದ ವ್ಯಾಪಾರ ಆರಂಭ
ಕೆಂಪು ವಲಯದಲ್ಲಿ ಆರ್ಥಿಕತೆಗೆ ನೀಡಲಾಗಿರುವ ವಿನಾಯಿತಿಗಳನ್ನು ನಗರಕ್ಕೂ ಅನ್ವಯಿಸಿ ವ್ಯಾಪಾರ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.
ಜಿಲ್ಲೆಯ ವರ್ತಕರ ಸಮಸ್ಯೆಗಳ ಬಗ್ಗೆ ಅರಿವಿದೆ
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ನಾಳೆ ಬುಧವಾರದಿಂದ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ವ್ಯಾಪಾರಕ್ಕೆ ಅನುಮತಿ ನೀಡಿದ್ದಾರೆ
ಹರಿಹರದಲ್ಲಿ ನಾಳೆ ಬಿಸಿಯೂಟ ತಯಾರಕರಿಂದ ಪ್ರತಿಭಟನೆ
ಹರಿಹರದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರು ನಾಡಿದ್ದು ದಿನಾಂಕ 23ರ ಗುರುವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ಬಿಸಿ ಊಟ ತಯಾರಕರ ಫೆಡರೇಶನ್ನ ಜಿಲ್ಲಾಧ್ಯಕ್ಷ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ.
ದೊಡ್ಡಬಾತಿ : ಇಂದು ಉಡುಸಲಮ್ಮ ಜಾತ್ರೆ
ದಾವಣಗೆರೆ ತಾಲ್ಲೂಕು ದೊಡ್ಡಬಾತಿಯಲ್ಲಿ ಕಳೆದ ಎರಡು ದಿನಗಳಿಂದ ಶ್ರೀ ಉಡುಸಲಮ್ಮ ದೇವಿಯ ಜಾತ್ರಾ ಮಹೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ನಗರದಲ್ಲಿಂದು ಸಂದಲ್, ನಾಳೆ ಉರುಸ್
ಹೊಂಡದ ಸರ್ಕಲ್ ಸುಲ್ತಾನ್ ಪೇಟೆಯಲ್ಲಿರುವ ಹಜರತ್ ಸೈಯದ್ ರತನ್ ಷಾವಲಿ ಚಿಸ್ತಿ (ರತನ್ ಬುಡನ್ ಬಾದೇಷಾ ರ. ಅ) ಅವರ ಉರುಸ್ ನಾಡಿದ್ದು ದಿನಾಂಕ 23ರ ಗುರುವಾರ ಜರುಗಲಿದೆ.
ಬೈಕ್ ಅಪಘಾತ: ಅಪರಿಚಿತ ಶವ ಪತ್ತೆ
ಹರಿಹರ : ತಾಲ್ಲೂಕಿನ ಮಿಟ್ಲಕಟ್ಟೆ-ದೇವರಬೆಳಕೆರೆ ರಸ್ತೆಯಲ್ಲಿ ಬೈಕ್ ಅಪಘಾತವಾಗಿ ಅಪರಿಚಿತ ವ್ಯಕ್ತಿ (73) ಮೃತಪಟ್ಟಿದ್ದು, ವಾರಸು ದಾರರ ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ.
ರಾಣೇಬೆನ್ನೂರು : ನಗರಸಭೆ ಚುನಾವಣೆಗೆ ಶೀಘ್ರದಲ್ಲೇ ಮುಹೂರ್ತ ಫಿಕ್ಸ್..!
ರಾಣೇಬೆನ್ನೂರು : ವರ್ಷಕ್ಕೂ ಅಧಿಕ ಕಾಲದಿಂದ ಖಾಲಿ ಇರುವ ರಾಣೇಬೆನ್ನೂರು ನಗರಸಭೆಯ ಹಿಂದುಳಿದ `ಅ' ವರ್ಗದ ಮಹಿಳೆಯ ಅಧ್ಯಕ್ಷ ಸ್ಥಾನ, ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದ್ದು, ಚುನಾವಣೆ ನಡೆಸಲು ಚುನಾವಣಾಧಿಕಾರಿ ಹಾವೇರಿ ಉಪವಿಭಾಗಾಧಿಕಾರಿ ಜ.28 ರಂದು ಸಭೆ ಕರೆದಿದ್ದಾರೆ.
ಹರಿಹರದಲ್ಲಿ ನಾಳೆ ದೂಡಾದಿಂದ ಜನ ಸಂಪರ್ಕ ಸಭೆ
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಾಡಿದ್ದು ದಿನಾಂಕ 23ರ ಗುರುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ ಅವರ ನೇತೃತ್ವದಲ್ಲಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ. ಹ
ಬೆಂಗಳೂರು ಕ.ನಿ.ನಿ.ನಿ ಕಚೇರಿ ದಾವಣಗೆರೆಗೆ ಸ್ಥಳಾಂತರಿಸಲು ಆಗ್ರಹ
ಬೆಂಗಳೂರಿನಲ್ಲಿರುವ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಚೇರಿಯನ್ನು ಕೂಡಲೇ ದಾವಣಗೆರೆಗೆ ಸ್ಥಳಾಂತರಿಸಿ, ಕಾರ್ಯಾರಂಭಿಸಬೇಕು ಎಂದು ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಷ್ಠಾನ ಹಾಗೂ ಜಿಲ್ಲಾ ಸಾರ್ವಜನಿಕರ ಹಿತರಕ್ಷಣಾ ಒಕ್ಕೂಟವು ಸರ್ಕಾರಕ್ಕೆ ಒತ್ತಾಯಿಸಿದೆ.
ನಿಟುವಳ್ಳಿಗೆ ಇಂದು ಪಾರಂಪರಿಕ ವೈದ್ಯ ಮಹದೇವಯ್ಯ
ನಿಟುವಳ್ಳಿಯ ಹೆಚ್.ಕೆ.ಆರ್. ಸರ್ಕಲ್ ಹತ್ತಿರದ ಪತಂಜಲಿ ವೆಲ್ನೆಸ್ ಸೆಂಟರ್ಗೆ ಇಂದು ಮಧ್ಯಾಹ್ನ 3 ಗಂಟೆಗೆ ಕುದೂರಿನ ಮೂಳೆ ತಜ್ಞರೂ, ಪಾರಂಪರಿಕ ವೈದ್ಯರೂ ಆದ ಮಹದೇವಯ್ಯ ಅವರು ಭೇಟಿ ನೀಡಲಿದ್ದಾರೆ.
ಎಐಸಿಟಿಇ ಐಡಿಯಾ ಲ್ಯಾಬ್ ಯೋಜನೆ ಅಡಿಯಲ್ಲಿ ಜೈನ್ ಕಾಲೇಜಿಗೆ ಅನುದಾನ
ನಗರದ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಎಐಸಿಟಿಇ ಐಡಿಯಾ ಲ್ಯಾಬ್ ಯೋಜನೆ ಅಡಿಯಲ್ಲಿ ಆಯ್ಕೆಯಾಗಿದೆ.
ನಗರದಲ್ಲಿ ನಾಡಿದ್ದು ಉದ್ಯೋಗ ಮೇಳ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರ ಇವರ ವತಿಯಿಂದ ಇದೇ ದಿನಾಂಕ 24 ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ
ಅನುಭವಿ ನಾಯಕರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ : ಹರೀಶ್
ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಮುನ್ನಡೆಸುವ ಪ್ರಬಲವಾದ ಶಕ್ತಿ ಬಿ.ವೈ. ವಿಜಯೇಂದ್ರ ಅವರಿಗೆ ಇಲ್ಲವಾದ್ದರಿಂದ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಅನುಭವಿ ಮತ್ತು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಶಾಸಕ ಬಿ.ಪಿ. ಹರೀಶ್ ಆಗ್ರಹಿಸಿದರು.
ನಗರದಲ್ಲಿಂದು ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ, ಪುತ್ಥಳಿ ಅನಾವರಣ
ಡಾ. ಶಿವಕುಮಾರ ಸ್ವಾಮೀಜಿ ಸರ್ಕಲ್ ಗೆಳೆಯರ ಬಳಗದಿಂದ ತ್ರಿವಿಧ ದಾಸೋಹಿ, ಶ್ರೀಮನ್ನಿರಂಜನ ಪ್ರಣವಸ್ವರೂಪಿ ಸಿದ್ದಗಂಗಾ ಡಾ. ಶ್ರೀ ಶಿವಕುಮಾರ ಮಹಸ್ವಾಮಿಗಳ ಆರನೇ ವರ್ಷದ ಪುಣ್ಯ ಸ್ಮರಣೋತ್ಸವ ಮತ್ತು ಶ್ರೀಗಳ ಪುತ್ಥಳಿ ಅನಾವರಣ ಹಾಗೂ ದಾಸೋಹ ದಿನ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ನಗರದಲ್ಲಿ ಇಂದು `ಮುದುಕನ ಮದುವೆ’ ನಾಟಕ
ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಇಂದು `ಮುದುಕನ ಮದುವೆ' ನಾಟಕ ಉಚಿತ ಪ್ರದರ್ಶನ ನಡೆಯಲಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಅಖಾಡಕ್ಕೆ ನಾವೂ ಸಿದ್ಧ: ರೇಣುಕಾಚಾರ್ಯ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆ ಸಂಬಂಧ ಚುನಾವಣಾ ಅಖಾಡಕ್ಕೆ ನಾವೂ ಸಿದ್ಧರಿದ್ದೇವೆ. ತಾಕತ್ತಿದ್ದರೆ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಸ್ಪರ್ಧೆ ಮಾಡಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು.
ನಾಳೆ ವೇಮನ, ಅಂಬಿಗರ ಚೌಡಯ್ಯ ಜಯಂತಿ ಆಚರಣೆ
ಶ್ರೀ ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿಯನ್ನು ನಾಡಿದ್ದು ದಿನಾಂಕ 21 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಆಚರಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ತಿಳಿಸಿದ್ದಾರೆ.
ಕೈ ಕಸೂತಿ ತರಬೇತಿ
ಭಾರತ ವಿಕಾಸ ಪರಿಷತ್ ಗೌತಮ ಶಾಖೆ ದಾವಣಗೆರೆ ವತಿಯಿಂದ ಇಲ್ಲಿನ ವಿದ್ಯಾನಗರದಲ್ಲಿ ಮಹಿಳೆಯರಿಗೆ ಉಚಿತ ಕೈ ಕಸೂತಿ ತರಬೇತಿ ಅರ್ಜಿ ಆಹ್ವಾನಿಸಲಾಗಿದೆ ಆರ್ಥಿಕವಾಗಿ ಹಿಂದುಳಿದವರು ಇದರ ಉಪಯೋಗ ಪಡೆದೊಳ್ಳಬಹುದು.
28 ರಂದು ದಿಶಾ ಸಮಿತಿ ಸಭೆ
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ಇದೇ ದಿನಾಂಕ 28 ರಂದು ಬೆಳಿಗ್ಗೆ 11 ಕ್ಕೆ ಜಿ.ಪಂ. ಮುಖ್ಯ ಸಭಾಂಗಣದಲ್ಲಿ ದಿಶಾ ಸಮಿತಿ ಸಭೆ ನಡೆಯಲಿದೆ.
ದೊಡ್ಡಬಾತಿಯಲ್ಲಿ ಇಂದಿನಿಂದ 3 ದಿನ ಉಡಿಸಲಮ್ಮನ ಸಂಭ್ರಮೋತ್ಸವ
ಮಾನವನು ಮೂಲದಲ್ಲಿ ಕಾಡಿನಲ್ಲಿದ್ದು, ಕಾಡು ಮನುಷ್ಯನಾಗಿ ಪ್ರಾಣಿ ಜೀವನದಂತೆ ನಡೆಸುತ್ತಿದ್ದುದು ಪ್ರಾಗೈತಿಹಾಸಿಕದ ಅವಲೋಕನದಿಂದ ತಿಳಿದುಬರುತ್ತದೆ.
ಸೇವಾಲಾಲ್ ಜಯಂತಿ ನಗರದಲ್ಲಿ ಇಂದು ಸಭೆ
ಶ್ರೀ ಸಂತ ಸೇವಾಲಾಲ್ ಮಹಾರಾಜರ 286ನೇ ಜನ್ಮ ದಿನಾಚರಣೆ ಪ್ರಯುಕ್ತ ಜಾತ್ರಾ ಮಹೋತ್ಸವ ಆಚರಣೆಯ 1ನೇ ಪೂರ್ವಭಾವಿ ಸಭೆಯನ್ನು ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ
ವಿನೋಬನಗರದ ಪಾಳು ಬಿದ್ದ ಬಾವಿ ಮುಚ್ಚುವಂತೆ ಆಗ್ರಹ
ಇಲ್ಲಿನ ವಿನೋಬ ನಗರದ 4ನೇ ಮುಖ್ಯ ರಸ್ತೆ, 4ನೇ ಅಡ್ಡ ರಸ್ತೆಯಲ್ಲಿ ಪಾಳು ಬಿದ್ದ ಅನುಪಯುಕ್ತ ಬಾವಿಯನ್ನು ಮುಚ್ಚುವಂತೆ ಇಲ್ಲಿನ ಸಾರ್ವಜನಿಕರು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ.
ಮೈಸೂರು : ಪರೀಕ್ಷಾ ಕಾರ್ಯಾಗಾರ
ಇದೇ ದಿನಾಂಕ 23 ರಂದು ಬೆಳಿಗ್ಗೆ 10.35 ಕ್ಕೆ ಮೈಸೂರಿನ ಊಟಗಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 2024-25 ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಭಾವಿ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ನಾಳೆ ರಸ್ತೆ ಸುರಕ್ಷತಾ ಸಮಿತಿ ಸಭೆ
ದಿನಾಂಕ 21 ರಂದು ಬೆಳಗ್ಗೆ 11 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಲಿದೆ ಎಂದು ಲೋಕೋಪ ಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯಕಾರ್ಯದರ್ಶಿ ತಿಳಿಸಿದ್ದಾರೆ.
ನಗರದಲ್ಲಿ ಇಂದು ಪ್ರತಿಭಟನೆ
ಜೀವನಪೂರ್ತಿ ಇಡೀ ಮನುಕುಲಕ್ಕೆ ಹಾಲುಣಿಸಿ, ಪೋಷಿಸುವ ಪೂಜ್ಯ ಗೋಮಾತೆಯ ಕೆಚ್ಚಲನ್ನೇ ಕತ್ತರಿಸಿ ವಿಕೃತಿ ಮೆರೆದ ಮತಾಂಧರ ದುಷ್ಕೃತ್ಯ ಖಂಡಿಸಿ, ಗೋ ಸಂರಕ್ಷಣಾ ಸಂವರ್ಧನಾ ಸಮಿತಿಯಿಂದ ನಗರದ ಜಯದೇವ ವೃತ್ತದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ನಾಳೆ ವಾಸ್ಕ್ಯುಲರ್ ಚಿಕಿತ್ಸೆ
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವಾಸ್ಕ್ಯುಲರ್ ತಜ್ಞ ಡಾ. ಬಿ. ರಾಜೇಂದ್ರ ಪ್ರಸಾದ್ ಅವರು ನಗರದ ಆರೈಕೆ ಆಸ್ಪತ್ರೆ ಯಲ್ಲಿ ಇದೇ ದಿನಾಂಕ 19ರ ಭಾನವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಸಮಾಲೋ ಚನೆಗೆ ಲಭ್ಯವಿರುತ್ತಾರೆ.
ಎಸ್ಸೆಸ್ಗೆ ಆವರಗೊಳ್ಳ ಶ್ರೀಗಳಿಂದ ಗುರುರಕ್ಷೆ
ಆವರಗೊಳ್ಳದ ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಸ್ವಾಮೀಜಿ ಅವರು ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರನ್ನು ಇಂದು ನಗರದ ಅವರ ನಿವಾಸದಲ್ಲಿ ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿ ದರು. ಎಸ್ಸೆಸ್ ಅವರು ಶತಾಯುಷಿ ಗಳಾಗಲಿ ಎಂದು ಗುರುರಕ್ಷೆ ನೀಡಿದರು.
ನಿರ್ಲಕ್ಷ್ಯತೆ, ಮಾಹಿತಿ ಕೊರತೆಯಿಂದ ಬ್ಯಾಂಕ್ ದರೋಡೆ ಹೆಚ್ಚಳ
ಬ್ಯಾಂಕ್ಗಳ ದರೋಡೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಭದ್ರತಾ ಮಾನದಂಡದ ಜೊತೆಗೆ ಸಿಬ್ಬಂದಿಗಳ ಮಾಹಿತಿ ಸಂಗ್ರಹದಲ್ಲಿ ನಿರ್ಲಕ್ಷ್ಯತೆ ಕಾರಣವಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದರು.
ಪಾಲಿಕೆಯಿಂದ ಹೊಸ ಟ್ರ್ಯಾಕ್ಟರ್ ವಿತರಣೆ
ಮಹಾನಗರ ಪಾಲಿಕೆಯಿಂದ ವಾರ್ಡ್ ನಂ. 23 ಮತ್ತು 44ರ ತ್ಯಾಜ್ಯ ವಿಲೇವಾರಿಗೆ ಹೊಸ ಟ್ರ್ಯಾಕ್ಟರ್ ನೀಡಿದ್ದು, ಎಸ್ ನಿಜಲಿಂಗಪ್ಪ ಲೇಔಟ್ನ ಶ್ರೀ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾಲಿಕೆಯ ಕಾರ್ಯಪಾಲಕ ಅಭಿಯಂತರ (ಪರಿಸರ ) ಜಗದೀಶ್ ಚಾಲನೆ ನೀಡಿದರು.
ಮಾನವ ಕುಲಕ್ಕೆ ಉದ್ದಾರದ ಮಾರ್ಗ ತೋರಿದ ಅಂಬಿಗರ ಚೌಡಯ್ಯ
ಹರಪನಹಳ್ಳಿ : ಅಂಬಿಗರ ಚೌಡಯ್ಯ ಸಮಾಜ ಸುಧಾರಣೆಗೆ ನೇರ ನಿಷ್ಠೂರ ವಚನ ರಚಿಸಿ, ಸಮಾಜ ತಿದ್ದುವ ಕೆಲಸ ಮಾಡಿದರೆಂದು ಗಂಗಾಮತ ಸಮಾಜದ ಮುಖಂಡ ಹೇಮಣ್ಣ ಮೋರಿಗೆರೆ ಹೇಳಿದರು.
ಪೋಷಕರು ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯದ ಕಾಳಜಿ ವಹಿಸಿ
ಹಿಂದಿನ ಕಾಲದಲ್ಲಿ ಆಸ್ಪತ್ರೆಗಳ ಸಂಖ್ಯೆ ಕಡಿಮೆ ಇತ್ತು. ಪ್ರತಿಯೊಬ್ಬರೂ ನೂರು ವರ್ಷಗಳ ತನಕ ಬಾಳುತ್ತಿದ್ದರು. ಇತ್ತೀಚೆಗೆ ಆಹಾರದ ಬಗ್ಗೆ ಕ್ರಮಬದ್ಧತೆ ಇಲ್ಲದಿರುವುದರಿಂದ ಮನುಷ್ಯನ ಆಯಸ್ಸು ಕೂಡ ಕಡಿಮೆಯಾಗಿದೆ.
ಅಚ್ಚುಕಟ್ಟಿನ ಕೊನೆ ಭಾಗಕ್ಕೆ ಇನ್ನೂ ತಲುಪದ ನೀರು
ಮಲೇಬೆನ್ನೂರು : ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಿ 12 ದಿನ ಕಳೆದಿದ್ದರೂ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಕಾಲುವೆಗಳಿಗೆ ಇನ್ನೂ ನೀರು ತಲುಪಿಲ್ಲ ಎಂದು ಭಾನುವಳ್ಳಿ, ಹೊಳೆಸಿರಿಗೆರೆ, ಕೆ.ಎನ್.ಹಳ್ಳಿ, ಪಾಳ್ಯ, ಕೊಕ್ಕನೂರು, ಕಮಲಾಪುರ, ಯಲವಟ್ಟಿ ಗ್ರಾಮಗಳ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಾಲ್ಕು ರ್ಯಾಂಕ್ ಗಳು
ನಗರದ ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಆಂಗ್ಲ ವಿಭಾಗಕ್ಕೆ 2023-24ನೇ ಶೈಕ್ಷಣಿಕ ಸಾಲಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ನಾಲ್ಕು ರ್ಯಾಂಕ್ ಗಳು ಬಂದಿವೆ ಎಂದು ಕಾಲೇಜಿನ ಪ್ರಾಚಾರ್ಯ ಬಿ.ಸಿ. ತಹಶೀಲ್ದಾರ್ ತಿಳಿಸಿದ್ದಾರೆ.
ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ
ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ, ರಾಜ್ಯ ರೈತ ಸಂಘ, ಹಸಿರುಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ತಹಶೀಲ್ದಾರ್ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.
ನಗರದಲ್ಲಿ ನಾಳೆ ಸಿದ್ಧ ಕಣ್ಣಿನ ಹನಿ
ದಿನಾಂಕ 23 ರ ಗುರುವಾರ ಬೆಳಿಗ್ಗೆ 10 ರಿಂದ 12 ರವರೆಗೆ ಹಾಗೂ ಹರಿಹರ ಸಮೀಪದ ಕೋಡಿಯಾಲ - ಹೊಸಪೇಟೆಯ ಪುಣ್ಯಕೋಟಿ ಮಠದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ.
ಜಿಹ್ವೇಶ್ವರ ಮಂದಿರದಲ್ಲಿಂದು ರಾಮ ಪೂಜೆ
ಹೊಂಡದ ಸರ್ಕಲ್ನಲ್ಲಿನ ಸ್ವಕುಳಸಾಳಿ ಸಮಾಜದ ಜಿಹ್ವೇಶ್ವರ ಮಂದಿರದಲ್ಲಿ ಅಯೋಧ್ಯ ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಶ್ರೀ ರಾಮನ ಪೂಜೆ ನಡೆಸಲಾಗುವುದು.
ನಗರಕ್ಕೆ ಇಂದು ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ರಾಜ್ಯ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರು ಇಂದು ನಗರಕ್ಕೆ ಆಗಮಿಸಲಿದ್ದಾರೆ.
ಹರಪನಹಳ್ಳಿ `ಪಿಕಾರ್ಡ್’ ಆಡಳಿತ ಕೈ ತೆಕ್ಕೆಗೆ
ಹರಪನಹಳ್ಳಿ : ಪಟ್ಟಣದ ಸಹಕಾರಿ ಕೃಷಿ ಗ್ರಾಮೀಣಾಭಿವೃದ್ದಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಹುಮತ ಸಾಧಿಸಿರುವ ಕಾಂಗ್ರೆಸ್ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯಲಿದೆ.
ದೇವರಾಜ ಅರಸು ಬಡಾವಣೆಯಲ್ಲಿ ಇಂದು ಲಿಂ. ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ
ನಗರದ ದೇವರಾಜ ಅರಸು ಬಡಾವಣೆ `ಎ' ಬ್ಲಾಕ್ನ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಬೆಳಿಗ್ಗೆ 11 ಕ್ಕೆ ಹೊಸ ಕೋರ್ಟ್ ಪಕ್ಕ, ಎಸ್.ಎಸ್. ಉದ್ಯಾನವನದ ಹತ್ತಿರ ಜ್ಞಾನದಾಸೋಹಿ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 6ನೇ ವರ್ಷದ ಪುಣ್ಯಸ್ಮರಣೆ ಹಾಗು ಪೂಜ್ಯರ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಗಳೂರು : ಲಾರಿಗೆ ಆಕಸ್ಮಿಕ ಬೆಂಕಿ
ಒಕ್ಕಣೆಗೆ ರೈತರು ಹರಡಿದ್ದ ಹುರುಳಿ ಸೊಪ್ಪಿನ ಮೇಲೆ ಸಂಚರಿಸಿದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪ ನಡೆದಿದೆ.
ಭೂಮಿ ಉಳಿಸಿಕೊಳ್ಳಲು ರೈತರಿಂದ ಪಾದಯಾತ್ರೆ, ಬೃಹತ್ ಪ್ರತಿಭಟನೆ
ಜಗಳೂರು : ತಾಲ್ಲೂಕಿನ ಗೌಡಗೊಂಡನಹಳ್ಳಿ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಬಗರ್ಹುಕ್ಕುಂ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಮಹಾಯೋಗಿ ವೇಮನ ಜಯಂತಿ
ಹರಿಹರ : ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು.
ಹನಗವಾಡಿ ಪಿಎಸಿಎಸ್ ಅಧ್ಯಕ್ಷರಾಗಿ ಎ.ಬಿ.ಮಂಜುನಾಥ್
ಮಲೇಬೆನ್ನೂರು : ಹನಗವಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎ.ಬಿ.ಮಂಜುನಾಥ್ (ಅಪ್ಪಿ) ಮತ್ತು ಉಪಾಧ್ಯಕ್ಷರಾಗಿ ತಳವಾರ ನಿಂಗರಾಜ್ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಗಳಿ ಪಿಎಸಿಎಸ್ ಅಧ್ಯಕ್ಷರಾಗಿ ಹಳ್ಳಿಹಾಳ್ ಉಮೇಶ್, ಉಪಾಧ್ಯಕ್ಷರಾಗಿ ಜಿಗಳಿ ಕುಸುಮ
ಜಿಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಳ್ಳಿಹಾಳ್ ಊರಮುಂದ್ಲರ ಉಮೇಶ್ (ಹೆಚ್.ಟಿ. ಶಾಂತನಗೌಡರ ಮಗ) ಮತ್ತು ಉಪಾಧ್ಯಕ್ಷರಾಗಿ ಜಿಗಳಿಯ ಶ್ರೀಮತಿ ಕುಸುಮ ಜಿ.ಎಂ. ಜಯದೇವ ಅವರು ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವೇಮನರದ್ದು ಸರ್ವರಲ್ಲಿ ಸಮಭಾವ ತರುವ ಪ್ರಯತ್ನ
ರಾಣೇಬೆನ್ನೂರು : ಅಂಧ ಶ್ರದ್ಧೆ, ಜಾತೀಯತೆ, ಬಡವ-ಬಲ್ಲಿದ, ಮೇಲು-ಕೀಳು ಎನ್ನುವ ಭಾವನೆಗಳನ್ನು ಕಿತ್ತೊಗೆದು, ಸರ್ವರಲ್ಲಿ ಸಮಭಾವ ತರುವ ಪ್ರಯತ್ನವು ಮಹಾಯೋಗಿ ವೇಮನರದಾಗಿತ್ತು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಶಿರಮಗೊಂಡನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ಬಿ. ಕರಿಬಸಪ್ಪ
ತಾಲ್ಲೂಕಿನ ಶಿರಮಗೊಂಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ಬಿ. ಕರಿಬಸಪ್ಪ ಹಾಗೂ ಉಪಾಧ್ಯಕ್ಷರಾಗಿ ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಲೇಬೆನ್ನೂರು: ಇಂದು ಸಿದ್ದಗಂಗಾ ಶ್ರೀ ಸ್ಮರಣೆ, ದಾಸೋಹ
ಪಟ್ಟಣದ ಜಿಗಳಿ ಸರ್ಕಲ್ನಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ನಡೆದಾಡುವ ದೇವರು ತ್ರಿವಿಧ ದಾಸೋಹಿ ನಡೆದಾಡುವ ದೇವರು ಶ್ರೀ ಡಾ. ಶಿವಕುಮಾರ್ ಮಹಾಸ್ವಾಮಿಗಳವ ರ 6ನೇ ವರ್ಷದ ಪುಣ್ಮಸ್ಮರಣೆ ಹಾಗು ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ನಗರಕ್ಕೆ ನಾಳೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ರಾಜ್ಯ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರು ನಾಡಿದ್ದು ದಿನಾಂಕ 22ರ ಬುಧವಾರ ದಾವಣಗೆರೆ ನಗರಕ್ಕೆ ಆಗಮಿಸಲಿದ್ದಾರೆ.
ಗುರುಕುಲ ಕ್ರೀಡೋತ್ಸವ ಯಶಸ್ವಿ
ಗುರುಕುಲ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯಲ್ಲಿ `ಗುರುಕುಲ ಕ್ರೀಡೋತ್ಸವ' ಯಶಸ್ವಿಯಾಗಿ ನಡೆಯಿತು. ಈ ವೇಳೆ ಭವ್ಯ ಮೇಘರಾಜ್, ನಿವೃತ್ತ ಡಿವೈಎಸ್ಪಿ ರುದ್ರಮುನಿ, ಮೇಘರಾಜ್, ಡಾ. ನಾಗರಾಜ್, ಸದಾನಂದ ಮೂರ್ತಿ ಮತ್ತಿತರರಿದ್ದರು.
ತುಂಗಭದ್ರಾ ನದಿ ಶುಚಿ ಕಾರ್ಯ
ಹರಿಹರ : ಸಂಕ್ರಾಂತಿ ಹಬ್ಬಕ್ಕೆ ಕಲುಷಿತಗೊಂಡಿದ್ದ ನಗರದ ಜೀವನಾಡಿ ತುಂಗಭದ್ರಾ ನದಿಯನ್ನು `ನನ್ನ ಊರು, ನನ್ನ ಹೊಣೆ' ತಂಡದವರು ಶುಚಿಗೊಳಿಸುವ ಮೂಲಕ ಅಲ್ಲಿದ್ದ ಬಟ್ಟೆ, ಕಸ, ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನ್ನು ವಾಹನದ ಮೂಲಕ ಹೊರಗಡೆ ಸಾಗಿಸಿದರು.
ಪಿಜೆ ಬಡಾವಣೆ ಶ್ರೀ ಗುರು ಸಾರ್ವಭೌಮರಿಗೆ ಭಕ್ತಾದಿಗಳಿಂದ ಕವಚ ಸಮರ್ಪಣೆ
ಶ್ರೀ ಗುರು ಸಾರ್ವಭೌಮರಿಗೆ ಗೌಡ್ರ ಜಯದೇವಪ್ಪ ನವರ ಪುತ್ರ ಮಲ್ಲಿಕಾರ್ಜುನ್ (ಮುತ್ತಣ್ಣ), ಐಗೂರು ವಿಜಯಕುಮಾರ್, ಶ್ರೀ ಸಾಯಿ ಗಾರ್ಮೆಂಟ್ ಶಿವಕುಮಾರ್, ಪೇಂಟರ್ ವೀರೇಶ್ ಅವರುಗಳು ನೀಡಿರುವ ಕವಚವನ್ನು ಶ್ರೀ 1008 ಸತ್ಯಾತ್ಮತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತದಿಂದ ಶ್ರೀ ಗುರು ಸಾರ್ವಭೌಮರಿಗೆ ಸಮರ್ಪಿಸಲಾಯಿತು.
ಸ್ವಕುಳಸಾಳಿ ಶ್ರೀ ಜಿಹ್ವೇಶ್ವರ ಮಂದಿರದಲ್ಲಿ ನಾಳೆ ಶ್ರೀ ರಾಮನ ಪೂಜೆ
ಹೊಂಡದ ಸರ್ಕಲ್ನಲ್ಲಿನ ಸ್ವಕುಳಸಾಳಿ ಸಮಾಜದ ಜಿಹ್ವೇಶ್ವರ ಮಂದಿರದಲ್ಲಿ ಅಯೋಧ್ಯ ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಾಡಿದ್ದು ದಿನಾಂಕ 22ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ರಾಮನ ಪೂಜೆ ನಡೆಸಲಾಗುವುದು.
ದಾವಣಗೆರೆ-ಹರಿಹರ ಸಹಕಾರ ಬ್ಯಾಂಕ್ ಉಪಾಧ್ಯಕ್ಷರಾಗಿ ಎಸ್ಕೆ ಪ್ರಭುಪ್ರಸಾದ್
ದಿ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಎಸ್.ಕೆ. ಪ್ರಭುಪ್ರಸಾದ್ ಅವರು ಉಳಿದ ಅವಧಿಗೆ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಹೊಸ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಎಂಟ್ರಿ
ಹುಂಡೈ ಮೋಟಾರ್ ಇಂಡಿಯಾ ಕಂಪನಿಯ ಬಹು ನಿರೀಕ್ಷಿತ ಹೊಸ ಹುಂಡೈ ಎಲೆಕ್ಟ್ರಿಕ್ ಕ್ರೆಟಾ ಕಾರನ್ನು ನಗರದ ಕೆ.ಜೆ. ಹುಂಡೈ ಶೋ ರೂಂ ನಲ್ಲಿ ಆರ್.ಟಿ.ಓ. ಅಧಿಕಾರಿ ಸಿ.ಎಸ್. ಪ್ರಮೂತೇಶ್ ಅವರು ಮಾರುಕಟ್ಟೆಗೆ ಪರಿಚಯಿಸಿದರು.
ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಭೇಟಿ
ಬಾಲಾಜಿ ನಗರದ ಕುಂದುವಾಡ ಕೆರೆ ಬಳಿಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಬೆಂಗಳೂರಿನ ಶ್ರೀ ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಅವರು ಭೇಟಿ ನೀಡಿದರು.
ದಾವಣಗೆರೆ ಜಿಲ್ಲಾ ಶಿರಸ್ತೇದಾರ್, ಉಪತಹಶೀಲ್ದಾರ್ ಸಂಘದ ಅಧ್ಯಕ್ಷರಾಗಿ ರವಿ
ಕರ್ನಾಟಕ ರಾಜ್ಯ ಶಿರಸ್ತೇದಾರ್ ಮತ್ತು ಉಪತಹಶೀಲ್ದಾರ್ ಸಂಘದ ದಾವಣಗೆರೆ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಮಲೇಬೆನ್ನೂರು ನಾಡ ಕಚೇರಿಯ ಉಪತಹಶೀಲ್ದಾರ್ ಆರ್.ರವಿ ಅವರು ಶನಿವಾರ ಎಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಯ್ಕೆಯಾಗಿದ್ದಾರೆ.
ಎಸ್ಎಲ್ಎನ್ ಕಾನ್ವೆಂಟ್ ಶಾಲೆಯಲ್ಲಿ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ
ನಗರದ ಸಿದ್ದವೀರಪ್ಪ ಬಡಾವಣೆಯ ಎಸ್ಎಲ್ಎನ್ ಕಾನ್ವೆಂಟ್ನ 26ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹಿರೇಮಠದಲ್ಲಿ ನಡೆಯಿತು.
ಜಲ ಸಂರಕ್ಷಣೆಯಲ್ಲಿ ಸಿದ್ದರಾಮೇಶ್ವರರ ಕಾರ್ಯ ಸ್ಮರಣೀಯ
ಕೊಟ್ಟೂರು : ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಆಚರಣೆ ಮಾಡಲಾಯಿತು.
ಸಂಸ್ಕೃತಿ-ಸಂಸ್ಕಾರದಿಂದ ವ್ಯಕ್ತಿತ್ವ ವೃದ್ಧಿ
ಮಲೇಬೆನ್ನೂರು : ವಿದ್ಯಾರ್ಥಿಗಳ ಪ್ರತಿಭೆಗೆ ಸಂಸ್ಕೃತಿ-ಸಂಸ್ಕಾರ ದೊರೆತರೆ, ಅವರ ವ್ಯಕ್ತಿತ್ವ ಬೆಳಗುತ್ತದೆ ಎಂದು ನಿವೃತ್ತ ಶಿಕ್ಷಕ ಎಸ್.ಹೆಚ್. ಹೂಗಾರ್ ಹೇಳಿದರು.