ಮಲೇಬೆನ್ನೂರು : ದೇವರಬೆಳಕೆರೆ ಪಿಕಪ್ ಜಲಾಶಯದಲ್ಲಿ ಗೋಡ್ಬಳೆ ಗೇಟ್ ಬಳಿ ಜಮಾವಣೆಗೊಂಡಿದ್ದ ಜಲಸಸ್ಯ ರಾಶಿಯನ್ನು ಶಾಸಕ ಎಸ್. ರಾಮಪ್ಪ ಅವರು ಸ್ವಂತ ಖರ್ಚಿನಲ್ಲಿ ಹಿಟಾಚಿ ಮೂಲಕ ತೆರವುಗೊಳಿಸುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಿದರು.
ಬಾಪೂಜಿ ಸಹಕಾರಿ ಬ್ಯಾಂಕಿಗೆ 5.97 ಕೋಟಿ ರೂ. ನಿವ್ವಳ ಲಾಭ
ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಸಂಕಷ್ಟದಿಂದ ಎಲ್ಲ ವ್ಯವಹಾರಗಳೂ ನಷ್ಟ ಅನುಭವಿಸಿವೆ ಅಂತಹದರಲ್ಲಿಯೂ ಬಾಪೂಜಿ ಕೋ-ಆಪರೇಟಿವ್ ಬ್ಯಾಂಕ್ 5.97 ಕೋಟಿ ರೂ ನಿವ್ವಳ ಲಾಭ ಗಳಿಸಿ ರಾಜ್ಯದಲ್ಲಿಯೇ ಅತ್ಯುತ್ತಮ ಕೆಲಸ ಮಾಡುತ್ತಿರುವ ಮುಂಚೂಣಿ ಬ್ಯಾಂಕ್ ಆಗಿದೆ
ಕಸಾಪ ಚುನಾವಣೆ : ಹರಿಹರ ತಾ.ನಲ್ಲಿ ಶೇ.40 ಮತದಾನ
ಹರಿಹರ : ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಹರಿಹರ ತಾಲ್ಲೂಕಿನಲ್ಲಿ ಶೇ. 40 ರಷ್ಟು ಮತದಾನ ನಡೆದಿದೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.
ದೇವಸ್ಥಾನಗಳು ಧಾರ್ಮಿಕ, ಸಾಂಸ್ಕೃತಿಕ ಕೇಂದ್ರಗಳು
ಹೊನ್ನಾಳಿ : ದೇವಸ್ಥಾನಗಳು ಭಾರತ ದೇಶದ ಧಾರ್ಮಿಕ, ಸಾಂಸ್ಕೃತಿಕ ಕೇಂದ್ರಗಳಾಗಿವೆ ಎಂದು ಶ್ರೀ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸತತ ಲಾಭದಾಯಕದಲ್ಲಿ ಜಿ.ಎಂ. ಸೌಹಾರ್ದ ಪತ್ತಿನ ಸಹಕಾರಿ
ನಗರದ ಜಿ.ಎಂ. ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ವಾರ್ಷಿಕ ಮಹಾಸಭೆಯು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ನಡೆಯಿತು.
ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ 10ರಂದು ವೈಕುಂಠ ಏಕಾದಶಿ ಉತ್ಸವ
ನಗರದ ಎಂ.ಸಿ.ಸಿ. `ಬಿ' ಬ್ಲಾಕ್ನಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದೇ ದಿನಾಂಕ 10ರ ಶುಕ್ರವಾರ ವೈಕುಂಠ ಏಕಾದಶಿ ಮಹೋತ್ಸವ ಮಹೋತ್ಸವ ನಡೆಯಲಿದೆ.
ವಿಕಲಚೇತನ ಫಲಾನುಭವಿಗಳಿಗೆ ರಿಯಾಯಿತಿ ದರದ ಬಸ್ ಪಾಸ್
ವಿಕಲಚೇತನ ಫಲಾನುಭವಿಗಳು ರಿಯಾಯಿತಿ ದರದ ಬಸ್ಪಾಸ್ (ಹೊಸ, ನವೀಕರಣ) ಗಳನ್ನು ಪಡೆಯಲು ಸೇವಾ ಸಿಂಧು ಫೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ನಗರದಲ್ಲಿ ಇಂದು ಸತ್ವ ಸಂಗಮ
ಆತ್ಮಿ ಅಸೋಸಿಯೇಷನ್ ಅರ್ಪಿಸುವ 2ನೇ ಸತ್ವ ಸಂಗಮ ಕಾರ್ಯಕ್ರಮವು ಇಂದು ಸಂಜೆ 5ಕ್ಕೆ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾಭವನದಲ್ಲಿ ನಡೆಯಲಿದೆ.
ಪ್ರಿಯಾಂಕ್ ಖರ್ಗೆ ವಿರುದ್ಧದ ಆರೋಪ ಸಲ್ಲದು
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇವಲ ರಾಜಕೀಯ ದ್ವೇಷದಿಂದ ಆರೋಪ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ದೂರಿದರು.
ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಇಂದು
ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಾಲಾ ವಾರ್ಷಿಕೋತ್ಸವ, ಬಹುಮಾನ ವಿತರಣಾ ಸಮಾರಂಭ ವನ್ನು ಇಂದು ಸಂಜೆ 4ಕ್ಕೆ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ.
ನಗರದಲ್ಲಿ ನಾಳೆ ಕನಕ ಜಯಂತ್ಯುತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ
ದಾವಣಗೆರೆ ಕುರುಬ ಸಮಾಜ ಹಾಗೂ ಸಿದ್ಧರಾಮಯ್ಯ ಅಭಿಮಾನಿ ಬಳಗದ ವತಿಯಿಂದ ನಾಡಿದ್ದು ದಿನಾಂಕ 5 ರ ಭಾನುವಾರ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾಮಟ್ಟದ 537 ನೇ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಮಕ್ಕಳ ಚಿತ್ರಕಲಾ ತರಗತಿಗಳ ಉದ್ಘಾಟನೆ
ದಾವಣಗೆರೆ ಕಲಾ ಪರಿಷತ್ ವತಿಯಿಂದ ಚಿತ್ರಕಲಾ ಪ್ರದರ್ಶನ ಮತ್ತು ಮಕ್ಕಳ ಚಿತ್ರಕಲಾ ತರಗತಿ ಗಳ ಉದ್ಘಾಟನೆ ಕಾರ್ಯಕ್ರಮವು ಪರಿಷತ್ತಿನ ಕಚೇರಿಯಲ್ಲಿ ಇಂದು ಸಂಜೆ 5:30ಕ್ಕೆ ನಡೆಯಲಿದೆ.
ಪಿಹೆಚ್ಡಿ ವ್ಯಾಸಂಗ ವೇತನಕ್ಕಾಗಿ ಅರ್ಜಿ
ಪ್ರಥಮ ವರ್ಷದಲ್ಲಿ ಪೂರ್ಣಾವಧಿ ಪಿಹೆಚ್ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ ಗೆ ಸೇರಿದ ಹೊಸ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ, ಫೆಲೋಶಿಪ್ ನೀಡಲು ಅರ್ಹ ವಿದ್ಯಾರ್ಥಿಗಳಿಗೆ ಆಫ್ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.
ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ರಸ್ತೆ ಅಪಘಾತದಲ್ಲಿ ಓರ್ವನ ಸಾವು
ಇಲ್ಲಿನ ತರಳಬಾಳು ಬಡಾವಣೆಯ ಎಂ.ಬಿ. ವಿನಯ್ (58) ಮೊನ್ನೆ ನಿಧನರಾದರು.
ನಗರದಲ್ಲಿ ಇಂದು ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಸಚಿನ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಇಂದು ಬೆಳಿಗ್ಗೆ 11.30ಕ್ಕೆ ಬಿಜೆಪಿ ಕಾರ್ಯಾಲಯದಿಂದ ಉಪ ವಿಭಾಗಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಎಲೆಬೇತೂರಿನಲ್ಲಿ ಇಂದು ತರಳಬಾಳು ಸಿರಿ ಸಂಭ್ರಮ
ಎಲೆಬೇತೂರು ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ, ಶ್ರೀ ತರಳಬಾಳು ಆಂಗ್ಲ ಮಾಧ್ಯಮ ನರ್ಸರಿ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿ ಸಂಘದ ಸಮಾರೋಪ ಮತ್ತು ತರಳಬಾಳು ಸಿರಿ ಸಂಭ್ರಮವು ಇಂದು ಎಲೆಬೇತೂರು ಶಾಲಾ ಆವರಣದಲ್ಲಿ ನಡೆಯಲಿದೆ.
ನಗರದಲ್ಲಿ ಇಂದು ಆಟೋ ಎಕ್ಸ್ಪೋ
ಸದರನ್ ಹೋಟೆಲ್ ಆವರಣದಲ್ಲಿ ನಾಳೆ ದಿನಾಂಕ 4 ಹಾಗೂ 5ರಂದು ಬೃಹತ್ ಆಟೋ ಎಕ್ಸ್ಪೋ ಆಯೋಜಿಸಲಾಗಿದೆ ಎಂದು ಆನಿ ಅಮೃತಾ ಶ್ರೀನಿವಾಸ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಇಂದು ಬಾಪೂಜಿ ಹೈಸ್ಕೂಲ್ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಸಮಾಜಮುಖಿ ಕಾರ್ಯಕ್ರಮ
ನಗರದ ಬಾಪೂಜಿ ಹೈಸ್ಕೂಲ್ ಹಿರಿಯ ವಿದ್ಯಾರ್ಥಿಗಳ ಸಂಘವು ಸಮಾಜಮುಖಿ ಕಾರ್ಯಕ್ರಮಗಳನ್ನು ಕಳೆದ ವರ್ಷದಿಂದ ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಬಾರಿ ಕಂದನಕೋವಿ ಸರ್ಕಾರಿ ಶಾಲೆ ನವೀಕರಣ ಹಾಗೂ ಆರೋಗ್ಯ ಶಿಬಿರವನ್ನು ನಾಳೆ ದಿನಾಂಕ 4 ರ ಶನಿವಾರ ಬೆಳಿಗ್ಗೆ 10 ಕ್ಕೆ ಹಮ್ಮಿಕೊಳ್ಳುತ್ತಿದೆ
ದಾವಣಗೆರೆ ಸೇರಿ 6 ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಸಂಪೂರ್ಣ ತನಿಖೆಗೆ ಸೂಚನೆ
ಸ್ಮಾರ್ಟ್ ಸಿಟಿ ಅಭಿಯಾನದಡಿ ಬೆಂಗಳೂರು ಹೊರತುಪಡಿಸಿ 6 ಸ್ಮಾರ್ಟ್ ಸಿಟಿ ಯೋಜನೆಗಳ ಕಾಮಗಾರಿಗಳ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಖಾತೆ ಸಚಿವ ಬೈರತಿ ಸುರೇಶ್ ಸೂಚಿಸಿದ್ದಾರೆ.
ಹಳ್ಳಿಹಾಳ್ ಮಟ್ಟಿ ಕ್ಯಾಂಪ್ನಲ್ಲಿ ಕಳ್ಳತನ ಪ್ರಕರಣ ಪತ್ತೆ
ಹರಿಹರ ತಾಲ್ಲೂಕು ಹಳ್ಳಿಹಾಳ್ ಮಟ್ಟಿ ಕ್ಯಾಂಪಿನ ಮನೆಯೊಂದರಲ್ಲಿ ಡಿಸೆಂಬರ್ 18ರಂದು ಬಾಗಿಲು ಮುರಿದು ಕಳವು ಮಾಡಿದ್ದ ಚಿನ್ನಾಭರಣ, ಹಣ ಹಾಗೂ ಗೂಡ್ಸ್ ವಾಹನವನ್ನು ಪೊಲೀಸರು ಗುರುವಾರ ಪತ್ತೆ ಮಾಡಿದ್ದಾರೆ.
ಎಲೆಬೇತೂರಿನಲ್ಲಿ ಇಂದು – ನಾಳೆ ತರಳಬಾಳು ಸಿರಿ ಸಂಭ್ರಮ
ಎಲೆಬೇತೂರು ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ, ಶ್ರೀ ತರಳಬಾಳು ಆಂಗ್ಲ ಮಾಧ್ಯಮ ನರ್ಸರಿ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿ ಸಂಘದ ಸಮಾರೋಪ ಮತ್ತು ತರಳಬಾಳು ಸಿರಿ ಸಂಭ್ರಮವು ಇಂದು ಮತ್ತು ನಾಳೆ ಎಲೆಬೇತೂರು ಶಾಲಾ ಆವರಣದಲ್ಲಿ ನಡೆಯಲಿದೆ.
ನಗರದಲ್ಲಿ ಅಯ್ಯಪ್ಪಸ್ವಾಮಿ ಪಡಿ ಪೂಜೆ
ವಿನೋಬನಗರ 4 ನೇ ಮೇನ್, 4 ನೇ ಮುಖ್ಯರಸ್ತೆಯಲ್ಲಿನ ಶಂಕರ್ನಾಗ್ ವೃತ್ತದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಸ್ನೇಹ ಬಳಗದ ವತಿಯಿಂದ ಇಂದು ಸಂಜೆ 5 ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ಪೂಜೆ ಪ್ರಾರಂಭವಾಗಿ 9.30 ಗಂಟೆಗೆ ಮಹಾ ಪಡಿ ಪೂಜೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ನಕಲಿ ಕೀ ಬಳಸಿ ಕಳ್ಳತನ ; ಬಂಧನ
ನಗರದ ಜಯನಗರ ‘ಬಿ’ ಬ್ಲಾಕ್ನ ಟವರ್ ಲೇಔಟ್ನಲ್ಲಿ ನಕಲಿ ಕೀ ಬಳಸಿ ಮನೆಯೊಂದರಲ್ಲಿ ಬಂಗಾರದ ಆಭರಣ ಹಾಗೂ ಹಣ ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಪೊಲೀಸರು ಆತನಿಂದ ಒಟ್ಟು 2.80 ಲಕ್ಷ ರೂ. ಮೌಲ್ಯದ ಆಭರಣ ಹಾಗೂ 30,000 ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ ನಕಲಿ ಕೀ ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ಇಂದು ಯುವ ಜನೋತ್ಸವ ಜಾಗೃತಿ ಜಾಥಾ
ಎಂಬಿಎ ಮೈದಾನದಲ್ಲಿ ಇದೇ ಜನವರಿ 5 ಮತ್ತು 6 ರಂದು ನಡೆಯಲಿರುವ ರಾಜ್ಯ ಮಟ್ಟದ ಯುವಜನೋತ್ಸವದ ಅಂಗವಾಗಿ ಇಂದು ಬೆಳಗ್ಗೆ 7.30 ರಿಂದ ಗುಂಡಿ ವೃತ್ತದಿಂದ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಶೇ. 50 ರಷ್ಟು ರಿಯಾಯಿತಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ. 50ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು.
ನಗರದಲ್ಲಿ ಇಂದು ಸಾಂಸ್ಕೃತಿಕ ಸಂಭ್ರಮ
`ಕಿವುಡ ಮಾಡಿದ ಕಿತಾಪತಿ' ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಸಂಜೆ 5.30 ರಿಂದ 6ರವರೆಗೆ ದರ್ಶನ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ವಿದ್ಯಾಭ್ಯಾಸಕ್ಕಾಗಿ ಲ್ಯಾಪ್ಟಾಪ್ ವಿತರಣೆ
ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್, ಸಫಾಯಿ ಕರ್ಮಚಾರಿ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್ಟಾಪ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಜೈನ್ ಕಾಲೇಜ್ಗೆ ಶಾಶ್ವತ ಸಂಯೋಜನೆ
ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಜೈನ್ ತಾಂತ್ರಿಕ ಮಹಾ ವಿದ್ಯಾಲಯದ ಕೆಲವು ವಿಭಾಗಗಳಿಗೆ ಶಾಶ್ವತ ಸಂಯೋಜನೆ ನೀಡಿದೆ
ಆರ್.ಟಿ. ಪ್ರಶಾಂತ್ ಅವರಿಗೆ ಪ್ರಶಸ್ತಿ
`ಧರ್ಮ ವಿಭೂಷಣ' ಪ್ರಶಸ್ತಿಯನ್ನು ಕಾಶಿ ಪೀಠದ ಹಿರಿಯ ಜಗದ್ಗುರುಗಳವರು ಹರಿಹರದ ಶ್ರೀ ಜಗದ್ಗುರು ಪಂಚಾಚಾರ್ಯ ವಿಶ್ವಧರ್ಮ ವಿದ್ಯಾಪೀಠದ ಕಾರ್ಯದರ್ಶಿಗಳೂ, ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ ಆದ ಆರ್.ಟಿ.ಪ್ರಶಾಂತ್ ದುಗ್ಗತ್ತಿಮಠ್ ಅವರಿಗೆ ನೀಡಿ ಆಶೀರ್ವದಿಸಿದರು.
ಕೊಕ್ಕನೂರು ಶಾಲೆಗೆ ಲೋಟ ಕೊಡುಗೆ
ಮಲೇಬೆನ್ನೂರು : ಕೊಕ್ಕನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ 240 ತಟ್ಟೆ ಹಾಗೂ ಲೋಟಗಳನ್ನು ಮತ್ತು ಕೊಕ್ಕನೂರು ಹಾಲು ಉತ್ಪಾದಕರ ಸಂಘದವರು ತಟ್ಟೆಸ್ಟ್ಯಾಂಡನ್ನು ಶುಕ್ರವಾರ ಕೊಡುಗೆಯಾಗಿ ನೀಡಿದರು.
ಕ್ರೀಡಾಪಟು ವೈಭವ್ ಜಿ. ಅವರಿಗೆ ಬಂಗಾರದ ಪದಕ
ಕಳೆದ ವಾರ ಉತ್ತರಪ್ರದೇಶದ ಲಕ್ನೋದಲ್ಲಿ ಎಂ.ಆರ್. ಜೈಪುರಿಯಾಗೋಲ್ ಕ್ಯಾಂಪಸ್ ನಲ್ಲಿ ನಡೆದ ರಾಷ್ಟ್ರಮಟ್ಟದ 15 ನೇ ನ್ಯಾಷನಲ್ ಇಂಡೋರ್ ಆರ್ಚರಿ ಚಾಂಪಿಯನ್ ಷಿಪ್ ನಲ್ಲಿ 7 ನೇ ತರಗತಿ ಓದುತ್ತಿರುವ ಕುಮಾರ ವೈಭವ್ . ಜಿ. ಬಂಗಾರದ ಪದಕ ಪಡೆದು ನಗರಕ್ಕೆ ಕೀರ್ತಿ ತಂದಿದ್ದಾರೆ.
ಶಿಕ್ಷಕ ಬಿ. ರೇವಣಸಿದ್ದಪ್ಪರಗೆ ಸೇವಾ ನಿವೃತ್ತಿ : ಬೀಳ್ಕೊಡುಗೆ
ತಾಲ್ಲೂಕಿನ ಕಡ್ಲೇಬಾಳು ಗ್ರಾಮದ ದೇವರಾಜ್ ಅರಸು ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಬಿ. ರೇವಣಸಿದ್ದಪ್ಪ ಅವರು ಸೇವಾ ನಿವೃತ್ತಿ ಹೊಂದಿದ್ದರ ಪ್ರಯುಕ್ತ ಅವರಿಗೆ ಸಡಗರ, ಸಂಭ್ರಮದಿಂದ ಬೀಳ್ಕೊಡುಗೆ ನೀಡಲಾಯಿತು.
ಆಸ್ಸಾಂನಲ್ಲಿ ರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ ಸ್ಪರ್ಧೆ : ಈಗಲ್ ಫಿಟ್ನೆಸ್ಗೆ 15 ಚಿನ್ನ, 4 ಬೆಳ್ಳಿ, 9 ಕಂಚಿನ ಪದಕ
ಕಳೆದ ಡಿಸೆಂಬರ್ 27, 28 ಮತ್ತು 29 ರಂದು ಅಸ್ಸಾಂನಲ್ಲಿ ನಡೆದ 6ನೇ ವಾರ್ಷಿಕ ರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ ಸ್ಪರ್ಧೆಗಳಲ್ಲಿ ನಗರದ ಈಗಲ್ ಫಿಟ್ನೆಸ್ನ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ 15 ಬಂಗಾರ, 4 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಕಬಡ್ಡಿ ಜಿಲ್ಲಾ ತಂಡಕ್ಕೆ ಸಮವಸ್ತ್ರ ವಿತರಣೆ, ಬೀಳ್ಕೊಡುಗೆ
ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಕೋಲಾರದಲ್ಲಿ ನಡೆಯುವ ಕರ್ನಾಟಕ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವ ಬಾಲಕ ಮತ್ತು ಬಾಲಕಿಯರ ತಂಡದ ಸದಸ್ಯರಿಗೆ ಸಮವಸ್ತ್ರ ವಿತರಿಸಿ ಬೀಳ್ಕೊಡುಗೆ ನೀಡಲಾಯಿತು.
ಶಿಕ್ಷಣದಿಂದ ಮಾತ್ರ ಶೋಷಿತ ಸಮುದಾಯಗಳ ಮುನ್ನಲೆ
ಜಗಳೂರು : ಶಿಕ್ಷಣದಿಂದ ಮಾತ್ರ ಶೋಷಿತ ಸಮುದಾಯಗಳು ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು. ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಆಯೋಜಿಸಲಾಗಿದ್ದ 207ನೇ ಭೀಮಾ ಕೊರೆಗಾಂವ್ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗಳೂರಿನಲ್ಲಿ ಇಂದು ಜೆ.ಎಂ. ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಸಮಾರಂಭ
ಜೆ.ಎಂ.ಇಮಾಂ ಟ್ರಸ್ಟ್ ಜಗಳೂರು, ಜೆ.ಎಂ. ಇಮಾಂ ಸ್ಮಾರಕ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಜೆ.ಎಂ.ಇಮಾಂ ಸ್ಮಾರಕ 6 ನೇ ವರ್ಷದ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ನಾಳೆ ದಿನಾಂಕ 4 ರ ಶನಿವಾರ ಸಂಜೆ 4 ಗಂಟೆಗೆ ಜೆ.ಎಂ. ಇಮಾಂ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ
ಮಗುವಿಗೆ ನಾಯಿ ಕಡಿತ : ಪಾಲಿಕೆ ವಿರುದ್ಧ ಮೊಕದ್ದಮೆ
ಮಗುವಿಗೆ ನಾಯಿ ಕಚ್ಚಿರುವುದರಿಂದ ಮಹಾನಗರ ಪಾಲಿಕೆ ಮತ್ತು ಪ್ರಾಣಿದಯಾ ಸಂಘಗಳ ವಿರುದ್ಧ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊಳೆಸಿರಿಗೆರೆ : ಭದ್ರಾ ಪಿಎಸಿಎಸ್ಗೆ ಅವಿರೋಧ ಆಯ್ಕೆ
ಮಲೇಬೆನ್ನೂರು : ಹೊಳೆಸಿರಿಗೆರೆ ಗ್ರಾಮದ ಭದ್ರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ.ದೇವೇಂದ್ರಪ್ಪ ಮತ್ತು ಉಪಾಧ್ಯಕ್ಷರಾಗಿ ಮಾಗೋಡ ಚಂದ್ರಪ್ಪ ಅವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹರಪನಹಳ್ಳಿ : ಐಗೋಳ ಚಿದಾನಂದ ಅವರಿಗೆ ಸನ್ಮಾನ
ಹರಪನಹಳ್ಳಿ : ಹಡಗಲಿ ತಾಲ್ಲೂಕಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ನಗರ ಮನೋರಂಜನಾ ಕೇಂದ್ರದ ಅಧ್ಯಕ್ಷ ಐಗೋಳ ಚಿದಾನಂದ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಯುವಜನೋತ್ಸವ, ಕೆಎಸ್ಆರ್ಟಿಸಿಯಿಂದ ಕಾರ್ಯಕ್ರಮ ಸ್ಥಳಗಳಿಗೆ ಬಸ್ ಸೌಕರ್ಯ
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ನಾಡಿದ್ದು ದಿನಾಂಕ 5 ಮತ್ತು 6 ರಂದು ರಾಜ್ಯ ಮಟ್ಟದ ಯುವಜನೋತ್ಸವವನ್ನು ಏರ್ಪಡಿಸಲಾಗಿದೆ.
ವಿದ್ಯೆಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ
ಮಲೇಬೆನ್ನೂರು : ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದ್ದು, ವಿದ್ಯೆಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಥಾನ ಸಮಿತಿಯ ಹರಿಹರ ತಾಲ್ಲೂಕು ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಹೇಳಿದರು.
ದಾವಣಗೆರೆಯಲ್ಲಿ ನಾಳಿನ ಕನಕ ಜಯಂತ್ಯೋತ್ಸವಕ್ಕೆ ಹರಿಹರದಿಂದ 10 ಸಾವಿರ ಜನ : ಎಸ್.ರಾಮಪ್ಪ
ಹರಿಹರ : ಜಿಲ್ಲಾ ಕುರುಬ ಸಮಾಜ ಹಾಗೂ ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ನಾಡಿದ್ದು ದಿನಾಂಕ 5 ರ ಭಾನುವಾರ ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಮಟ್ಟದ 537ನೇ ಕನಕದಾಸರ ಜಯಂತ್ಯೋತ್ಸವ ಆಯೋಜಿಸಲಾಗಿದೆ.
ಜಿಲ್ಲೆಯ ಐವರಿಗೆ `ಮಾಧ್ಯಮ ಅಕಾಡೆಮಿ’ ಪ್ರಶಸ್ತಿ
ಕರ್ನಾಟಕ ಮಾಧ್ಯಮ ಅಕಾಡೆಮಿಯು ತನ್ನ ವಾರ್ಷಿಕ ಪ್ರಶಸ್ತಿಗಳನ್ನು ಇಂದು ಸಂಜೆ ಘೋಷಿಸಿದ್ದು, ದಾವಣಗೆರೆ ಜಿಲ್ಲೆಯ ಐವರು ಪತ್ರಕರ್ತರು ಆಯ್ಕೆಯಾಗಿದ್ದಾರೆ.
ಶಿವ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಎಂ.ಬಿ. ಸಂಗಮೇಶ್ವರಗೌಡರು
ಸ್ಥಳೀಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲೊಂದಾದ ಶಿವ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ಹಾಲಿ ಅಧ್ಯಕ್ಷ ಮಾಗನೂರು ಸಂಗಮೇಶ್ವರ ಗೌಡ್ರು ಅಧ್ಯಕ್ಷರಾಗಿ ಮತ್ತು ಹಾಲಿ ಉಪಾಧ್ಯಕ್ಷ ಐಗೂರು ಸಿ. ಚಂದ್ರಶೇಖರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರೀತಿ, ಭಕ್ತಿ, ಗೌರವಗಳಿಂದ ಮಾತ್ರ ಶಾಂತಿ, ಸಾಮರಸ್ಯದ ಬದುಕು ಸಾಧ್ಯ
ಮಲೇಬೆನ್ನೂರು : ಪರಸ್ಪರ ಪ್ರೀತಿ, ಭಕ್ತಿ, ಗೌರವದಿಂದ ಮಾತ್ರ ಶಾಂತಿ, ಸಾಮರಸ್ಯದ ಬದುಕು ಸಾಧ್ಯವಾಗುತ್ತದೆ. ಅಂತಹ ಪ್ರೀತಿ, ಭಕ್ತಿ, ಗೌರವಗಳನ್ನು ನಮಗೆ ಮಠ-ಮಂದಿರಗಳು ಮೊದಲಿನಿಂದಲೂ ಕಲಿಸುತ್ತಾ ಬಂದಿವೆ
ಐದು ವರ್ಷಕ್ಕೊಮ್ಮೆ ನಡೆಯುವ ಹೋತನಹಳ್ಳಿ ಗ್ರಾಮದೇವಿ ಜಾತ್ರೆ
ಐದು ಮಂಗಳವಾರ ದಿನಪೂರ್ತಿ ಗ್ರಾಮ ತೊರೆದು ಹೊರವಲಯದ ಹೊಲ-ಗದ್ದೆಗಳಲ್ಲಿದ್ದು, ಸಂಜೆ ಮನೆಗೆ ತೆರಳುವ ಪದ್ದತಿ ಜಿಲ್ಲೆಯ ಶಿಗ್ಗಾಂವ್ ತಾಲ್ಲೂಕು ಹೋತನಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದು, ನಿನ್ನೆ ಆಚರಣೆಗೊಂಡ ಈ ಗ್ರಾಮ ತೊರೆಯುವ ಪದ್ಧತಿ ಜ.28 ರವರೆಗೆ ಒಟ್ಟು ಐದು ವಾರ ನಡೆಯುವುದು.
ಇಂದು `ಶಿಕ್ಷಣ ಅದಾಲತ್-ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ’ ಅಭಿಯಾನ ಮುಂದುವರಿಕೆ
ಸ್ವಾಭಿಮಾನಿ ಬಳಗದ ಶಿಕ್ಷಣ ಅದಾಲತ್ - ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನವು ಇಂದು ನ್ಯಾಮತಿ-ಹೊನ್ನಾಳಿ ತಾಲ್ಲೂಕುಗಳ ಹತ್ತು ಸರ್ಕಾರಿ ಶಾಲೆಗಳಲ್ಲಿ ಮುಂದುವರಿಯಲಿದೆ.
ನಗರದ ಬಾಪೂಜಿ ದೈಹಿಕ ಶಿಕ್ಷಣ ವಿದ್ಯಾಲಯದ ಸಾಧನೆ
ಅಂತರ್ ವಿಶ್ವ ವಿದ್ಯಾಲಯ ಖೋ ಖೋ ಪಂದ್ಯಾವಳಿಯಲ್ಲಿ ನಗರದ ಬಾಪೂಜಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ರಾಜು, ಆಕಾಶ್, ಲಕ್ಷ್ಮಣ್, ನೇಸರ್, ಕ್ರೀಡಾಪಟುಗಳು ದಾವಣಗೆರೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದು ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಕ್ಕೆ ಅರ್ಹತೆ ಪಡೆದಿದ್ದಾರೆ.
ಕನಕ ಜಯಂತಿಗೆ ಸಿಎಂ ಹಂದರಗಂಬ ಪೂಜೆ, ಸ್ಥಳ ಪರಿಶೀಲನೆ
ಕುರುಬ ಸಮಾಜದ ವತಿಯಿಂದ ಜಿಲ್ಲಾ ಮಟ್ಟದ 537ನೇ ಶ್ರೀ ಕನಕದಾಸರ ಜಯಂತ್ಯೋತ್ಸವ ನಗರದ ಹೈಸ್ಕೂಲ್ ಮೈದಾನದಲ್ಲಿ ಇದೇ ದಿನಾಂಕ 5 ರಂದು ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ಹಂದರಗಂಬ ಪೂಜೆ ಹಾಗೂ ಸ್ಥಳ ಪರೀಶಿಲನೆಯನ್ನು ಗುರುವಾರ ಕುರುಬ ಸಮಾಜದ ಮುಖಂಡರು ಮಾಡಿದರು.
ಮಹಿಳಾ ಸೇವಾ ಸಮಾಜದ ವಾರ್ಷಿಕೋತ್ಸವ
ಮಹಿಳಾ ಸಮಾಜದ ವಾರ್ಷಿಕೋತ್ಸವವು ಈಚೆಗೆ ನಡೆಯಿತು. ಶ್ರೀಮತಿ ಕೆ.ಕೆ. ಸುಶೀಲಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣಾಧಿಕಾರಿ ಜಿ.ಎಸ್. ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹರಿಹರ ನಗರಸಭೆ ಬಜೆಟ್ ಪೂರ್ವಭಾವಿ ಸಭೆ ಮುಂದೂಡಿಕೆ
ಹರಿಹರ : ನಗರಸಭೆ ಸಭಾಂಗಣದಲ್ಲಿ ಇಂದು ನಿಗದಿ ಆಗಿದ್ದ ಬಜೆಟ್ ಪೂರ್ವಭಾವಿ ಪ್ರಥಮ ಸಭೆಯನ್ನು ಸಾರ್ವಜನಿಕರಿಗೆ ಮಾಹಿತಿ ಕೊರತೆ ಕಾರಣದಿಂದ ಮುಂದೂಡಿರುವುದಾಗಿ ನಗರಸಭೆ ಅಧ್ಯಕ್ಷೆ ಕವಿತಾ ತಿಳಿಸಿದರು.
ಹರಪನಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕಗಳ ವಿತರಣೆ
ಹರಪನಹಳ್ಳಿ : ತಾಲ್ಲೂಕಿನ ಸಿಂಗ್ರಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮರು ಸಿಂಚನ ವಿದ್ಯಾರ್ಥಿ ಅಭ್ಯಾಸ ಪುಸ್ತಕಗಳನ್ನು 5, 6 ಮತ್ತು 7ನೇ ತರಗತಿಗಳಿಗೆ ವಿತರಿಸಲಾಯಿತು.
ಬನ್ನಿಕೋಡು ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ನಾಗರಾಜ್, ಉಪಾಧ್ಯಕ್ಷರಾಗಿ ಜಯದೇವಪ್ಪ ಆಯ್ಕೆ
ಹರಿಹರ : ನಗರದ ಹೊರ ವಲಯದ ಬನ್ನಿಕೋಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಹೆಚ್. ನಾಗರಾಜ್ ಮತ್ತು ಉಪಾಧ್ಯಕ್ಷರಾಗಿ ಎಸ್. ಜಯದೇವಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟದ ಯುವಜನೋತ್ಸವ ನಗರದಲ್ಲಿ ಇಂದು ಬೃಹತ್ ಜಾಥಾ
ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ಇದೇ ದಿನಾಂಕ 5 ಮತ್ತು 6 ರಂದು ನಗರದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆಗಳು ನಡೆಯಲಿದ್ದು, ಇದರ ಅಂಗವಾಗಿ ಯುವ ಜನರಲ್ಲಿ ಜಾಗೃತಿ ಮೂಡಿಸಲು ನಾಳೆ ದಿನಾಂಕ 3 ರಂದು ಯುವ ಸಮೂಹದಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಡಿಪ್ಲೋಮಾ ಇನ್ ಜೋತಿಷ್ಯದಲ್ಲಿ ದಾವಣಗೆರೆಯ ಶಾರದಾ ರಾಜ್ಯಕ್ಕೆ ಪ್ರಥಮ
ಕರ್ನಾಟಕ ಸಂಸ್ಕೃತ ವಿಶ್ವವಿ ದ್ಯಾಲಯ ಆಯೋಜಿಸಿದ್ದ ಡಿಪ್ಲೋಮಾ ಇನ್ ಜೋತಿಷ್ಯದಲ್ಲಿ ದಾವಣಗೆರೆ ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದ ವಿದ್ಯಾರ್ಥಿ ಶಾರದಾ ಡಿ.ಆರ್. 448 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಡಾ. ಎಸ್. ಶಿಶುಪಾಲರಿಗೆ ವರ್ಷದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ
ಸೇವ್ ಅರ್ಥ್ - ಫೋಟೋಗ್ರಫಿ ಗುಂಪಿನಿಂದ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್. ಶಿಶುಪಾಲ ಅವರನ್ನು 2024ರ ವರ್ಷದ 10 ಅತ್ಯುತ್ತಮ ಛಾಯಾಗ್ರಾಹಕರಲ್ಲಿ ಒಬ್ಬರೆಂದು ಪರಿಗಣಿಸಿ ಪ್ರಶಸ್ತಿ ಪತ್ರ ನೀಡಲಾಗಿದೆ.
ಹರಿಹರ : ವಿಶ್ವಮಾನವ ದಿನಾಚರಣೆ
ಹರಿಹರ : ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಹೊಳೆಸಿರಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಂಡೇರ ಪ್ರಭು
ಮಲೇಬೆನ್ನೂರು : ಹೊಳೆಸಿರಿಗೆರೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಬಂಡೇರ ಪ್ರಭು ಅವರು ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಬಂದೋಳ ಸಿದ್ದಪ್ಪ ಆಯ್ಕೆ
ಹರಪನಹಳ್ಳಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಯ ಮ್ಮನಹಳ್ಳಿಯ ಶಿಕ್ಷಕರಾದ ಬಂದೋಳ ಸಿದ್ದಪ್ಪ ಅವರು ಆಯ್ಕೆಯಾಗಿದ್ದಾರೆ.
ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರಿಗೆ ಬಡ್ತಿ
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿ ರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಅವರಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿದೆ.
ಮಠಗಳು ರಾಜಕೀಯದಿಂದ ದೂರ ಇದ್ದಾಗ ಸುಧಾರಣೆ ಸಾಧ್ಯ
ಹರಿಹರ : ಶ್ರೀ ಶರಣ ಬಸವಲಿಂಗ ಶ್ರೀಗಳು ತಮ್ಮ ಜ್ಞಾನ ಹಾಗೂ ಶಕ್ತಿಯ ಬಲದಿಂದ 256 ಅನುಷ್ಠಾನಗಳನ್ನು ಮಾಡಿ ರಾಷ್ಟ್ರೀಯ ಶ್ರೇಷ್ಠ ಸಂತರಾಗಿ ಹೊರಮ್ಮಿದ್ದಾರೆ ಎಂದು ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಹೇಳಿದರು.