ರಾಜ್ಯ ಮಟ್ಟದ ಯುವಜನೋತ್ಸವದ ಅಂಗವಾಗಿ ಸೋಮವಾರ ಕುಂದುವಾಡ ಕೆರೆಯಲ್ಲಿ ವಿದ್ಯಾರ್ಥಿಗಳಿಗೆ ರಾಫ್ಟಿಂಗ್ ಹಾಗೂ ಕಾಯ್ಕಿಂಗ್ (ಹಾಯಿದೋಣಿ) ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಪಾರಂಪರಿಕ ವೈದ್ಯ ಪದ್ಧತಿ ಮನೆ ಮನೆಗೂ ತಲುಪಲಿ
ಅನುಭವ ಆಧರಿಸಿ ಚಿಕಿತ್ಸೆ ನೀಡುವಂಥ ಪಾರಂಪರಿಕ ವೈದ್ಯ ಪದ್ಧತಿ ಮನೆ ಮನೆಗೂ ತಲುಪಬೇಕಿದೆ ಎಂದು ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮೀಜಿ ಹೇಳಿದರು.
ಕಂಸಾಳೆ
ಜಾನಪದ ನೃತ್ಯದಲ್ಲಿ ಕಂಸಾಳೆಯ ಝಲಕ್ನಲ್ಲಿ ನೃತ್ಯ ಕೌಶಲ್ಯ ಮೆರೆದ ಯುವ ಕಲಾವಿದರು
ಎಸ್ಸೆಸ್ ಶತಾಯುಷಿಯಾಗಲಿ : ಸಿದ್ದೇಶ್ವರ
ಮಣಿಪಾಲ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳು ತ್ತಿರುವ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಇಂದು ಭೇಟಿ ಮಾಡಿ ಆರೋಗ್ಯ ಕುಲಶೋಪರಿ ವಿಚಾರಿಸಿದರು.
ಗ್ಯಾರಂಟಿ ಸಮರ್ಪಕ ಅನುಷ್ಟಾನ, ಕಾಂಗ್ರೆಸ್ನಿಂದ ಮಾತ್ರ ಅಭಿವೃದ್ಧಿ ಸಾಧ್ಯ
ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಈ ಹಿಂದೆ ಆಡಳಿತ ನಡೆಸಿದವರು ಅಭಿವೃದ್ಧಿ ಮಾಡದೇ ಕಾಲ ಹರಣ ಮಾಡಿದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿ ಜೊತೆಗೆ, ಅಭಿವೃದ್ಧಿಯ ಕೆಲಸಗಳಿಗೂ ವೇಗ ಸಿಕ್ಕಿದೆ
ಜಲಸಾಹಸ ತರಬೇತಿ ಅಕಾಡೆಮಿಗೆ ಪ್ರಸ್ತಾವನೆ
ಶಾಂತಿ ಸಾಗರ ಹಾಗೂ ಕೊಂಡಜ್ಜಿ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳ ತರ ಬೇತಿ ಅಕಾಡೆಮಿ ತೆರೆಯಲು ಸಾಕಷ್ಟು ಅವಕಾಶ ಗಳಿವೆ. ಜಿಲ್ಲೆಯ ಯುವಕರು ಇತರೆ ಕ್ರೀಡೆಗಳಂತೆ ಜಲಸಾಹಸ ಕ್ರೀಡೆಯಲ್ಲಿಯೂ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ಇದರಿಂದ ಉತ್ತೇಜನ ದೊರೆಯಲಿದೆ
ಜಾನಪದ ಮೇಳದಲ್ಲಿ ಕಣ್ಮನ ಸೆಳೆದ ಕಲಾ ತಂಡಗಳು
ರಾಜ್ಯ ಮಟ್ಟದ ಯುವಜನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಜಾನಪದ ಮೇಳದಲ್ಲಿ ಹೊರ ರಾಜ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಿವಿಧ ಪ್ರಕಾರಗಳ ಕಲಾತಂಡಗಳು ಭಾಗವಹಿಸಿದ್ದವು
ನಗರದ ಪುರಾಣ ಪ್ರವಚನದಲ್ಲಿ ಇಂದು
ಪ್ರತಿದಿನ ಸಂಜೆ 6.30ಕ್ಕೆ ನಡೆಯುತ್ತಿರುವ ಒಂದು ತಿಂಗಳ ಪರ್ಯಂತದ ಪುರಾಣದಲ್ಲಿ ಇಂದಿನ ಕಾರ್ಯಕ್ರಮದಲ್ಲಿ ಮೈಸೂರಿನ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾದ ಭೀಮಶಂಕರ ಬೀದೂರ್ ನೇತೃತ್ವದ 15 ಜನರ ತಂಡ ತಬಲಾ ಸೋಲೋ ನಡೆಸುವರು ಎಂದು ಸಂಚಾಲಕ ಅಜ್ಜಂಪುರ ಶೆಟ್ರು ಮೃತ್ಯುಂಜಯ ತಿಳಿಸಿದ್ದಾರೆ.
ಜಗಳೂರು : ಇಂದು ದೇವದಾಸಿ ಸಮರ್ಪಣೆ ನಿಷೇಧ ಅರಿವು ಕಾರ್ಯಕ್ರಮ
ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮ, ಚಿಕ್ಕಬಂಟನ ಹಳ್ಳಿಯ ಪ್ರತಿಭಾ ವಿಕಾಸ ವೇದಿಕೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ದೇವದಾಸಿ ಸಮರ್ಪಣೆ ನಿಷೇಧ ಕುರಿತು ಮಾಜಿ ದೇವದಾಸಿ ಮಹಿಳೆಯರಿಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ
ಕುಡಿಯುವ ನೀರು ಕಾಮಗಾರಿಗಳಲ್ಲಿ ಅವ್ಯವಹಾರ: ಕ್ರಮಕ್ಕೆ ಆಗ್ರಹ
2023-24ನೇ ಸಾಲಿನಲ್ಲಿ ದಾವಣಗೆರೆ ತಾಲ್ಲೂಕಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಸುಮಾರು 87.45 ಲಕ್ಷ ರೂ. ಅವ್ಯವಹಾರ ನಡೆದಿರುವುದಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ. ಓಬಳೇಶ್ ಆರೋಪಿಸಿದ್ದಾರೆ.
26ರಂದು 76ನೇ ಗಣರಾಜ್ಯೋತ್ಸವ
ಜಿಲ್ಲಾಡಳಿತದ ವತಿಯಿಂದ ಜ.26 ರಂದು 76ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ನಗರದಲ್ಲಿ ನಾಳೆ ವಿಶೇಷ ಚೇತನರ ಸ್ವ ಉದ್ಯೋಗ ಮಾಹಿತಿ ಕಾರ್ಯಗಾರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ, ರಾಷ್ಟ್ರೀಯ ಯುವ ದಿನ ದಿನಾಚರಣೆ ಅಂಗವಾಗಿ ನಾಡಿದ್ದು ದಿನಾಂಕ 24ರ ಶುಕ್ರವಾರ ಬೆಳಿಗ್ಗೆ 10 ಕ್ಕೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ವಿಶೇಷ ಚೇತನರ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ ನಡೆಯಲಿದೆ.
ಹರಿಹರದಲ್ಲಿ ಇಂದು ನಡೆಯಬೇಕಿದ್ದ ದೂಡಾ ಜನ ಸಂಪರ್ಕ ಸಭೆ ಮುಂದೂಡಿಕೆ
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಂದು (ಜ. 23) ಹರಿಹರದಲ್ಲಿ ನಡೆಬೇಕಿದ್ದ ಜನ ಸಂಪರ್ಕ ಸಭೆಯನ್ನು ಕಾರಣಾಂತರದಿಂದ ಮುಂದೂಡಲಾಗಿದೆ.
ಹರಿಹರದಲ್ಲಿ ನಾಳೆ ಬಿಸಿಯೂಟ ತಯಾರಕರಿಂದ ಪ್ರತಿಭಟನೆ
ಹರಿಹರದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರು ನಾಡಿದ್ದು ದಿನಾಂಕ 23ರ ಗುರುವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ಬಿಸಿ ಊಟ ತಯಾರಕರ ಫೆಡರೇಶನ್ನ ಜಿಲ್ಲಾಧ್ಯಕ್ಷ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ.
ದೊಡ್ಡಬಾತಿ : ಇಂದು ಉಡುಸಲಮ್ಮ ಜಾತ್ರೆ
ದಾವಣಗೆರೆ ತಾಲ್ಲೂಕು ದೊಡ್ಡಬಾತಿಯಲ್ಲಿ ಕಳೆದ ಎರಡು ದಿನಗಳಿಂದ ಶ್ರೀ ಉಡುಸಲಮ್ಮ ದೇವಿಯ ಜಾತ್ರಾ ಮಹೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ನಗರದಲ್ಲಿಂದು ಸಂದಲ್, ನಾಳೆ ಉರುಸ್
ಹೊಂಡದ ಸರ್ಕಲ್ ಸುಲ್ತಾನ್ ಪೇಟೆಯಲ್ಲಿರುವ ಹಜರತ್ ಸೈಯದ್ ರತನ್ ಷಾವಲಿ ಚಿಸ್ತಿ (ರತನ್ ಬುಡನ್ ಬಾದೇಷಾ ರ. ಅ) ಅವರ ಉರುಸ್ ನಾಡಿದ್ದು ದಿನಾಂಕ 23ರ ಗುರುವಾರ ಜರುಗಲಿದೆ.
ಬೈಕ್ ಅಪಘಾತ: ಅಪರಿಚಿತ ಶವ ಪತ್ತೆ
ಹರಿಹರ : ತಾಲ್ಲೂಕಿನ ಮಿಟ್ಲಕಟ್ಟೆ-ದೇವರಬೆಳಕೆರೆ ರಸ್ತೆಯಲ್ಲಿ ಬೈಕ್ ಅಪಘಾತವಾಗಿ ಅಪರಿಚಿತ ವ್ಯಕ್ತಿ (73) ಮೃತಪಟ್ಟಿದ್ದು, ವಾರಸು ದಾರರ ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ.
ರಾಣೇಬೆನ್ನೂರು : ನಗರಸಭೆ ಚುನಾವಣೆಗೆ ಶೀಘ್ರದಲ್ಲೇ ಮುಹೂರ್ತ ಫಿಕ್ಸ್..!
ರಾಣೇಬೆನ್ನೂರು : ವರ್ಷಕ್ಕೂ ಅಧಿಕ ಕಾಲದಿಂದ ಖಾಲಿ ಇರುವ ರಾಣೇಬೆನ್ನೂರು ನಗರಸಭೆಯ ಹಿಂದುಳಿದ `ಅ' ವರ್ಗದ ಮಹಿಳೆಯ ಅಧ್ಯಕ್ಷ ಸ್ಥಾನ, ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದ್ದು, ಚುನಾವಣೆ ನಡೆಸಲು ಚುನಾವಣಾಧಿಕಾರಿ ಹಾವೇರಿ ಉಪವಿಭಾಗಾಧಿಕಾರಿ ಜ.28 ರಂದು ಸಭೆ ಕರೆದಿದ್ದಾರೆ.
ಹರಿಹರದಲ್ಲಿ ನಾಳೆ ದೂಡಾದಿಂದ ಜನ ಸಂಪರ್ಕ ಸಭೆ
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಾಡಿದ್ದು ದಿನಾಂಕ 23ರ ಗುರುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ ಅವರ ನೇತೃತ್ವದಲ್ಲಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ. ಹ
ಬೆಂಗಳೂರು ಕ.ನಿ.ನಿ.ನಿ ಕಚೇರಿ ದಾವಣಗೆರೆಗೆ ಸ್ಥಳಾಂತರಿಸಲು ಆಗ್ರಹ
ಬೆಂಗಳೂರಿನಲ್ಲಿರುವ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಚೇರಿಯನ್ನು ಕೂಡಲೇ ದಾವಣಗೆರೆಗೆ ಸ್ಥಳಾಂತರಿಸಿ, ಕಾರ್ಯಾರಂಭಿಸಬೇಕು ಎಂದು ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಷ್ಠಾನ ಹಾಗೂ ಜಿಲ್ಲಾ ಸಾರ್ವಜನಿಕರ ಹಿತರಕ್ಷಣಾ ಒಕ್ಕೂಟವು ಸರ್ಕಾರಕ್ಕೆ ಒತ್ತಾಯಿಸಿದೆ.
ನಿಟುವಳ್ಳಿಗೆ ಇಂದು ಪಾರಂಪರಿಕ ವೈದ್ಯ ಮಹದೇವಯ್ಯ
ನಿಟುವಳ್ಳಿಯ ಹೆಚ್.ಕೆ.ಆರ್. ಸರ್ಕಲ್ ಹತ್ತಿರದ ಪತಂಜಲಿ ವೆಲ್ನೆಸ್ ಸೆಂಟರ್ಗೆ ಇಂದು ಮಧ್ಯಾಹ್ನ 3 ಗಂಟೆಗೆ ಕುದೂರಿನ ಮೂಳೆ ತಜ್ಞರೂ, ಪಾರಂಪರಿಕ ವೈದ್ಯರೂ ಆದ ಮಹದೇವಯ್ಯ ಅವರು ಭೇಟಿ ನೀಡಲಿದ್ದಾರೆ.
ಎಐಸಿಟಿಇ ಐಡಿಯಾ ಲ್ಯಾಬ್ ಯೋಜನೆ ಅಡಿಯಲ್ಲಿ ಜೈನ್ ಕಾಲೇಜಿಗೆ ಅನುದಾನ
ನಗರದ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಎಐಸಿಟಿಇ ಐಡಿಯಾ ಲ್ಯಾಬ್ ಯೋಜನೆ ಅಡಿಯಲ್ಲಿ ಆಯ್ಕೆಯಾಗಿದೆ.
ನಗರದಲ್ಲಿ ನಾಡಿದ್ದು ಉದ್ಯೋಗ ಮೇಳ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರ ಇವರ ವತಿಯಿಂದ ಇದೇ ದಿನಾಂಕ 24 ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ
ಅನುಭವಿ ನಾಯಕರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ : ಹರೀಶ್
ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಮುನ್ನಡೆಸುವ ಪ್ರಬಲವಾದ ಶಕ್ತಿ ಬಿ.ವೈ. ವಿಜಯೇಂದ್ರ ಅವರಿಗೆ ಇಲ್ಲವಾದ್ದರಿಂದ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಅನುಭವಿ ಮತ್ತು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಶಾಸಕ ಬಿ.ಪಿ. ಹರೀಶ್ ಆಗ್ರಹಿಸಿದರು.
ನಗರದಲ್ಲಿಂದು ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ, ಪುತ್ಥಳಿ ಅನಾವರಣ
ಡಾ. ಶಿವಕುಮಾರ ಸ್ವಾಮೀಜಿ ಸರ್ಕಲ್ ಗೆಳೆಯರ ಬಳಗದಿಂದ ತ್ರಿವಿಧ ದಾಸೋಹಿ, ಶ್ರೀಮನ್ನಿರಂಜನ ಪ್ರಣವಸ್ವರೂಪಿ ಸಿದ್ದಗಂಗಾ ಡಾ. ಶ್ರೀ ಶಿವಕುಮಾರ ಮಹಸ್ವಾಮಿಗಳ ಆರನೇ ವರ್ಷದ ಪುಣ್ಯ ಸ್ಮರಣೋತ್ಸವ ಮತ್ತು ಶ್ರೀಗಳ ಪುತ್ಥಳಿ ಅನಾವರಣ ಹಾಗೂ ದಾಸೋಹ ದಿನ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ನಗರದಲ್ಲಿ ಇಂದು `ಮುದುಕನ ಮದುವೆ’ ನಾಟಕ
ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಇಂದು `ಮುದುಕನ ಮದುವೆ' ನಾಟಕ ಉಚಿತ ಪ್ರದರ್ಶನ ನಡೆಯಲಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಅಖಾಡಕ್ಕೆ ನಾವೂ ಸಿದ್ಧ: ರೇಣುಕಾಚಾರ್ಯ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆ ಸಂಬಂಧ ಚುನಾವಣಾ ಅಖಾಡಕ್ಕೆ ನಾವೂ ಸಿದ್ಧರಿದ್ದೇವೆ. ತಾಕತ್ತಿದ್ದರೆ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಸ್ಪರ್ಧೆ ಮಾಡಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು.
ನಾಳೆ ವೇಮನ, ಅಂಬಿಗರ ಚೌಡಯ್ಯ ಜಯಂತಿ ಆಚರಣೆ
ಶ್ರೀ ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿಯನ್ನು ನಾಡಿದ್ದು ದಿನಾಂಕ 21 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಆಚರಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ತಿಳಿಸಿದ್ದಾರೆ.
ಕೈ ಕಸೂತಿ ತರಬೇತಿ
ಭಾರತ ವಿಕಾಸ ಪರಿಷತ್ ಗೌತಮ ಶಾಖೆ ದಾವಣಗೆರೆ ವತಿಯಿಂದ ಇಲ್ಲಿನ ವಿದ್ಯಾನಗರದಲ್ಲಿ ಮಹಿಳೆಯರಿಗೆ ಉಚಿತ ಕೈ ಕಸೂತಿ ತರಬೇತಿ ಅರ್ಜಿ ಆಹ್ವಾನಿಸಲಾಗಿದೆ ಆರ್ಥಿಕವಾಗಿ ಹಿಂದುಳಿದವರು ಇದರ ಉಪಯೋಗ ಪಡೆದೊಳ್ಳಬಹುದು.
28 ರಂದು ದಿಶಾ ಸಮಿತಿ ಸಭೆ
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ಇದೇ ದಿನಾಂಕ 28 ರಂದು ಬೆಳಿಗ್ಗೆ 11 ಕ್ಕೆ ಜಿ.ಪಂ. ಮುಖ್ಯ ಸಭಾಂಗಣದಲ್ಲಿ ದಿಶಾ ಸಮಿತಿ ಸಭೆ ನಡೆಯಲಿದೆ.
ದೊಡ್ಡಬಾತಿಯಲ್ಲಿ ಇಂದಿನಿಂದ 3 ದಿನ ಉಡಿಸಲಮ್ಮನ ಸಂಭ್ರಮೋತ್ಸವ
ಮಾನವನು ಮೂಲದಲ್ಲಿ ಕಾಡಿನಲ್ಲಿದ್ದು, ಕಾಡು ಮನುಷ್ಯನಾಗಿ ಪ್ರಾಣಿ ಜೀವನದಂತೆ ನಡೆಸುತ್ತಿದ್ದುದು ಪ್ರಾಗೈತಿಹಾಸಿಕದ ಅವಲೋಕನದಿಂದ ತಿಳಿದುಬರುತ್ತದೆ.
ಬೆಳವನೂರು ಗ್ರಾ.ಪಂ. ಅಧ್ಯಕ್ಷರಾಗಿ ಸರೋಜಮ್ಮ ಆಯ್ಕೆ
ತಾಲ್ಲೂಕಿನ ಬೆಳವನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಶ್ರೀಮತಿ ಸರೋಜಮ್ಮ ಅವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷರಾಗಿ ಮಂಜುಳಾ ಗಣೇಶ್
ಹೊನ್ನಾಳಿ : ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್ನ ಉಪಾಧ್ಯಕ್ಷರಾಗಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಎಚ್.ಜಿ ಮಂಜುಳಾ ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಸಾಪ ಸಮ್ಮೇಳನದಲ್ಲಿ ಕದಳಿ ಮಹಿಳಾ ವೇದಿಕೆಯಿಂದ ವಚನ ಗಾಯನ
ಚಿತ್ರದುರ್ಗ : ಇಲ್ಲಿನ ಶ್ರೀ ಮುರುಘರಾಜೇಂದ್ರ ಬೃಹನ್ಮಠ, ಅನುಭವ ಮಂಟಪದ ಆವರಣದಲ್ಲಿ ನಡೆದ 13 ನೇ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ದಾವಣಗೆರೆಯ ಕದಳಿ ಮಹಿಳಾ ವೇದಿಕೆ ವತಿಯಿಂದ ವಚನ ಗಾಯನ ನಡೆಯಿತು.
ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಟಿ.ಆರ್. ಶಂಕರಪ್ಪ ಜನ್ಮ ದಿನ
ನಗರದ ಬಾಡ ಕ್ರಾಸ್ ಬಳಿಯ ಶ್ರೀ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಬುಧವಾರ ಟಿ.ಆರ್. ಶಂಕರಪ್ಪ ಅವರ 75ನೇ ವರ್ಷದ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು.
ಸ್ನೇಹ ಮಹಿಳಾ ಬಳಗದ ವಾರ್ಷಿಕೋತ್ಸವ
ಸ್ನೇಹ ಮಹಿಳಾ ಬಳಗದ ವತಿಯಿಂದ ವಾರ್ಷಿಕೋತ್ಸವ ಮತ್ತು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಆಜೀವ ಗೌರವ ಅಧ್ಯಕ್ಷರಾದ ಮಂಜುಳಾ ನಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಲಿಂ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ಆಗ್ರಹ
ನಡೆದಾಡುವ ದೇವರು ಎಂದೇ ಹೆಸರಾಗಿರುವ ತ್ರಿವಿಧ ದಾಸೋಹಿ ಲಿಂಗೈಕ್ಯ ಸಿದ್ದಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಆಗ್ರಹಿಸಿದ್ದಾರೆ.
ವ್ಹೀಲಿಂಗ್ ಪುಂಡರ ಬಂಧನ : 2 ಬೈಕ್ ವಶ
ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬೈಕ್ ವೀಲಿಂಗ್ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಎರಡು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಎಂ ಮಾಡಿ ಎಂದು ಕೇಳಲ್ಲ, ಸಣ್ಣ-ಪುಟ್ಟ ಅವಕಾಶಗಳನ್ನಾದರೂ ಕೊಡಿ
ಮಲೇಬೆನ್ನೂರು : ಸಣ್ಣ ಪುಟ್ಟ ಅವಕಾಶಗಳನ್ನಾದರೂ ಗಂಗಾಮತ ಸಮಾಜಕ್ಕೆ ಎಲ್ಲಾ ಪಕ್ಷಗಳು ನೀಡಬೇಕೆಂದು ಪುರಸಭೆ ಸದಸ್ಯ ಗೌಡ್ರ ಮಂಜಣ್ಣ ಮನವಿ ಮಾಡಿದರು.
ಸಮಸಮಾಜ ಕಟ್ಟಲು ಯುವಕರು ಮುಂದಾಗಲಿ
ಮಾಯಕೊಂಡ : ಶರಣ ಧರ್ಮ ಪಾಲಿಸಿ, ಸಮಸಮಾಜ ಕಟ್ಟಲು ಯುವಕರು ಮುಂದಾಗಬೇಕು ಎಂದು ಹೊಳಲ್ಕೆರೆ ಒಂಟಿಕಂಬ ಮಠದ ತಿಪ್ಪೇರುದ್ರ ಸ್ವಾಮೀಜಿ ಕರೆ ನೀಡಿದರು.
ಕೆಂಚನಹಳ್ಳಿ ಪಿಎಸಿಎಸ್ ಚುನಾವಣೆ : ಕೆ.ಹೆಚ್. ಮಹೇಶ್ ಸೇರಿ 12 ಜನ ಆಯ್ಕೆ
ಮಲೇಬೆನ್ನೂರು : ಕೆಂಚನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 11 ಜನ ನಿರ್ದೇಶಕರು ಚುನಾವಣೆಯಲ್ಲಿ ಮತ್ತು ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುರುಹಿನಶೆಟ್ಟಿ ನೇಕಾರ ಸಮಾಜ ಸಂಘದಿಂದ ಪ್ರತಿಭಾ ಪುರಸ್ಕಾರ
ಕುರುಹಿನಶೆಟ್ಟಿ ನೇಕಾರ ಸಮಾಜ ಸಂಘ ಹಾಗೂ ಆರ್.ಎಲ್. ಹನುಮಂತಪ್ಪ ಚಾರಿಟೇಬಲ್ ಟ್ರಸ್ಟ್ ದಾವಣಗೆರೆ ಇವರ ಸಹಯೋಗದಲ್ಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ನಡೆಯಿತು.
ಗುಡಿಸಲು ವಾಸಿಗಳಿಗೆ ಆಹಾರ ಕಿಟ್ ವಿತರಣೆ
ಕಾಯಕಯೋಗಿ ಹಾಗೂ ತ್ರೀವಿಧ ದಾಸೋಹಿ ಸಿದ್ಧಗಂಗಾ ಮಠದ ಲಿಂ. ಡಾ. ಶಿವಕುಮಾರ ಸ್ವಾಮೀಜಿಯವರ 6ನೇ ಪುಣ್ಯಸ್ಮರಣೆ ನಿಮಿತ್ತ ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್. ಹಾಲೇಶಪ್ಪ ಅವರು, ನಗರದಲ್ಲಿನ ಗುಡಿಸಲು ವಾಸಿಗಳಿಗೆ ಆಹಾರ ಕಿಟ್ ಮತ್ತು ಮಕ್ಕಳಿಗೆ ಸಿಹಿ ಹಂಚಿದರು.
ಅಂಬಿಗರ ಚೌಡಯ್ಯ ವಿಚಾರಧಾರೆ ಮನುಕುಲಕ್ಕೆ ದಾರಿದೀಪ
ಹರಿಹರ : ನಿಜ ಶರಣ ಅಂಬಿಗರ ಚೌಡಯ್ಯನವರ ವಿಚಾರ ಧಾರೆಗಳು ಒಂದು ಜಾತಿಗೆ ಮಾತ್ರ ಸೀಮಿತವಾಗಿರದೇ ಮನು ಕುಲಕ್ಕೇ ಮಾರ್ಗದರ್ಶನ ಮಾಡತಕ್ಕಂತಹ ವಿಚಾರಗಳಾಗಿದ್ದಾವೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ರೈತರಿಗೆ ಆನ್ಲೈನ್ ತಂತ್ರಾಂಶದಲ್ಲಿ ಮಂಜೂರಾತಿ
ಹೊನ್ನಾಳಿ : ತಾಲ್ಲೂಕಿನ ಬೆನಕನ ಹಳ್ಳಿ ರೈತರಿಗೆ ಆನ್ಲೈನ್ ತಂತ್ರಾಂಶದಲ್ಲಿ ಮಂಜೂರಾತಿ ಆದೇಶ ನೀಡಲಾಗಿದೆ ಎಂದು ಬಗರ್ ಹುಕ್ಕುಂ ಸಮಿತಿ ತಾಲ್ಲೂಕು ಅಧ್ಯಕ್ಷರೂ ಆಗಿರುವ ಶಾಸಕ ಡಿ.ಜಿ.ಶಾಂತನಗೌಡರು ತಿಳಿಸಿದರು.
ನಗರದಲ್ಲಿ ಇಂದು ಸಿದ್ಧ ಕಣ್ಣಿನ ಹನಿ
ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದ ಆವರಣದಲ್ಲಿ ಇಂದು ಬೆಳಿಗ್ಗೆ 10 ರಿಂದ 12 ರವರೆಗೆ ಹಾಗೂ ಹರಿಹರ ಸಮೀಪದ ಕೋಡಿಯಾಲ - ಹೊಸಪೇಟೆಯ ಪುಣ್ಯಕೋಟಿ ಮಠದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ.
ಆದರ್ಶ ಶಾಲೆಗಳು ಪ.ಪೂ. ಕಾಲೇಜಾಗಿ ಮೇಲ್ದರ್ಜೆಗೆ
ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹೊಸಪೇಟೆ. ಹರಪನಹಳ್ಳಿ. ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿ ಸೇರಿ ಜಿಲ್ಲೆಯ ನಾಲ್ಕು ಕಾಲೇಜುಗಳನ್ನು ಆದರ್ಶ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸಲಾಗಿದೆ
ಅಪಘಾತದಲ್ಲಿ ಗಾಯಗೊಂಡ ವಿಜಯ್ಗೆ ಧರ್ಮಸ್ಥಳ ಯೋಜನೆಯಿಂದ ಪರಿಹಾರ
ಮಲೇಬೆನ್ನೂರು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡುವ ಸಹಾಯಧನ ಕಾರ್ಯಕ್ರಮದಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಲಗಾಲಿಗೆ ತೀವ್ರ ಹಾನಿಯಾಗಿ ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ವಿಜಯ್ ಅವರಿಗೆ 10 ಸಾವಿರ ರೂ.ಗಳ ಸಹಾಯಧನದ ವಿತರಣೆ ಮಾಡಿದರು.
ಕೊನೆ ಭಾಗದ ಜಮೀನಿಗೆ ನೀರು ತಲುಪಿಸುವಂತೆ ರೈತರ ಆಗ್ರಹ
ನಾಲೆಯ ನೀರು ನಿರ್ವಹಣೆ ಮಾಡುವ ಸೌಡಿಗಳ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆಗೊಳಿಸಿ, ಕೊನೆ ಭಾಗದ ರೈತರಿಗೆ ನೀರು ತಲುಪಿಸುವಂತೆ ಆಗ್ರಹಿಸಿ ರೈತರ ಒಕ್ಕೂಟವು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಹರಿಹರದಲ್ಲಿ ಶ್ರೀ ರಾಮ ಮೂರ್ತಿ ಮೆರವಣಿಗೆ
ಹರಿಹರ : ಅಯೋಧ್ಯೆ ನಗರದ ಶ್ರೀ ರಾಮ ಮಂದಿರದ ದೇವಸ್ಥಾನದಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಇಂದಿಗೆ ಒಂದು ವರ್ಷ ಕಳೆದಿರುವುದರಿಂದ ನಗರದ ಶ್ರೀರಾಮನ ಭಾವಚಿತ್ರದ ಮೆರವಣಿಗೆ ಯನ್ನು ಶ್ರದ್ಧಾ ಭಕ್ತಿಯಿಂದ ಮತ್ತು ಸಡಗರ, ಸಂಭ್ರಮದಿಂದ ಮಾಡಲಾಯಿತು.
ಶ್ರೀ ಶ್ರೀಶೈಲ ಕ್ರೆಡಿಟ್ ಸೊಸೈಟಿ ಚುನಾವಣೆ : ಮೇಕಾ ಸೇರಿ ಐವರು ಅವಿರೋಧ ಆಯ್ಕೆ
ನಗರದ ಶ್ರೀ ಶ್ರೀಶೈಲ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಯ ಹಿರಿಯ ನಿರ್ದೇಶಕರಾಗಿದ್ದ ಮೇಕಾ ಮುರುಳಿಕೃಷ್ಣ ಅವರು ಸೇರಿ ದಂತೆ ಐವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಬಸವಪ್ರಭು ಶ್ರೀಗೆ ಕುವೆಂಪು ವಿವಿಯಿಂದ ಪಿಹೆಚ್ಡಿ ಪದವಿ
ನಗರದ ಶ್ರೀ ಶಿವಯೋಗಾ ಶ್ರಮ - ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಯವರಿಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಹೆಚ್ಡಿ ಪದವಿ ಲಭಿಸಿದೆ.
ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಗಂಗಾಧರಯ್ಯ ಹಿರೇಮಠ
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರ ನ್ನಾಗಿ ನಗರದ ಲೇಖಕ, ವಿಶ್ರಾಂತ ಪ್ರಾಧ್ಯಾಪಕರೂ ಆದ ಡಾ.ಗಂಗಾಧರಯ್ಯ ಹಿರೇಮಠ ಇವರನ್ನು ಸಾಹಿತ್ಯ ಪರಿಷತ್ ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಎಸ್ಸೆಸ್ಗೆ ಆವರಗೊಳ್ಳ ಶ್ರೀಗಳಿಂದ ಗುರುರಕ್ಷೆ
ಆವರಗೊಳ್ಳದ ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಸ್ವಾಮೀಜಿ ಅವರು ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರನ್ನು ಇಂದು ನಗರದ ಅವರ ನಿವಾಸದಲ್ಲಿ ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿ ದರು. ಎಸ್ಸೆಸ್ ಅವರು ಶತಾಯುಷಿ ಗಳಾಗಲಿ ಎಂದು ಗುರುರಕ್ಷೆ ನೀಡಿದರು.
ನಿರ್ಲಕ್ಷ್ಯತೆ, ಮಾಹಿತಿ ಕೊರತೆಯಿಂದ ಬ್ಯಾಂಕ್ ದರೋಡೆ ಹೆಚ್ಚಳ
ಬ್ಯಾಂಕ್ಗಳ ದರೋಡೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಭದ್ರತಾ ಮಾನದಂಡದ ಜೊತೆಗೆ ಸಿಬ್ಬಂದಿಗಳ ಮಾಹಿತಿ ಸಂಗ್ರಹದಲ್ಲಿ ನಿರ್ಲಕ್ಷ್ಯತೆ ಕಾರಣವಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದರು.
ಪಾಲಿಕೆಯಿಂದ ಹೊಸ ಟ್ರ್ಯಾಕ್ಟರ್ ವಿತರಣೆ
ಮಹಾನಗರ ಪಾಲಿಕೆಯಿಂದ ವಾರ್ಡ್ ನಂ. 23 ಮತ್ತು 44ರ ತ್ಯಾಜ್ಯ ವಿಲೇವಾರಿಗೆ ಹೊಸ ಟ್ರ್ಯಾಕ್ಟರ್ ನೀಡಿದ್ದು, ಎಸ್ ನಿಜಲಿಂಗಪ್ಪ ಲೇಔಟ್ನ ಶ್ರೀ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾಲಿಕೆಯ ಕಾರ್ಯಪಾಲಕ ಅಭಿಯಂತರ (ಪರಿಸರ ) ಜಗದೀಶ್ ಚಾಲನೆ ನೀಡಿದರು.
ಮಾನವ ಕುಲಕ್ಕೆ ಉದ್ದಾರದ ಮಾರ್ಗ ತೋರಿದ ಅಂಬಿಗರ ಚೌಡಯ್ಯ
ಹರಪನಹಳ್ಳಿ : ಅಂಬಿಗರ ಚೌಡಯ್ಯ ಸಮಾಜ ಸುಧಾರಣೆಗೆ ನೇರ ನಿಷ್ಠೂರ ವಚನ ರಚಿಸಿ, ಸಮಾಜ ತಿದ್ದುವ ಕೆಲಸ ಮಾಡಿದರೆಂದು ಗಂಗಾಮತ ಸಮಾಜದ ಮುಖಂಡ ಹೇಮಣ್ಣ ಮೋರಿಗೆರೆ ಹೇಳಿದರು.
ಪೋಷಕರು ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯದ ಕಾಳಜಿ ವಹಿಸಿ
ಹಿಂದಿನ ಕಾಲದಲ್ಲಿ ಆಸ್ಪತ್ರೆಗಳ ಸಂಖ್ಯೆ ಕಡಿಮೆ ಇತ್ತು. ಪ್ರತಿಯೊಬ್ಬರೂ ನೂರು ವರ್ಷಗಳ ತನಕ ಬಾಳುತ್ತಿದ್ದರು. ಇತ್ತೀಚೆಗೆ ಆಹಾರದ ಬಗ್ಗೆ ಕ್ರಮಬದ್ಧತೆ ಇಲ್ಲದಿರುವುದರಿಂದ ಮನುಷ್ಯನ ಆಯಸ್ಸು ಕೂಡ ಕಡಿಮೆಯಾಗಿದೆ.
ಅಚ್ಚುಕಟ್ಟಿನ ಕೊನೆ ಭಾಗಕ್ಕೆ ಇನ್ನೂ ತಲುಪದ ನೀರು
ಮಲೇಬೆನ್ನೂರು : ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಿ 12 ದಿನ ಕಳೆದಿದ್ದರೂ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಕಾಲುವೆಗಳಿಗೆ ಇನ್ನೂ ನೀರು ತಲುಪಿಲ್ಲ ಎಂದು ಭಾನುವಳ್ಳಿ, ಹೊಳೆಸಿರಿಗೆರೆ, ಕೆ.ಎನ್.ಹಳ್ಳಿ, ಪಾಳ್ಯ, ಕೊಕ್ಕನೂರು, ಕಮಲಾಪುರ, ಯಲವಟ್ಟಿ ಗ್ರಾಮಗಳ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಾಲ್ಕು ರ್ಯಾಂಕ್ ಗಳು
ನಗರದ ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಆಂಗ್ಲ ವಿಭಾಗಕ್ಕೆ 2023-24ನೇ ಶೈಕ್ಷಣಿಕ ಸಾಲಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ನಾಲ್ಕು ರ್ಯಾಂಕ್ ಗಳು ಬಂದಿವೆ ಎಂದು ಕಾಲೇಜಿನ ಪ್ರಾಚಾರ್ಯ ಬಿ.ಸಿ. ತಹಶೀಲ್ದಾರ್ ತಿಳಿಸಿದ್ದಾರೆ.
ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ
ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ, ರಾಜ್ಯ ರೈತ ಸಂಘ, ಹಸಿರುಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ತಹಶೀಲ್ದಾರ್ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.
ನಗರದಲ್ಲಿ ನಾಳೆ ಸಿದ್ಧ ಕಣ್ಣಿನ ಹನಿ
ದಿನಾಂಕ 23 ರ ಗುರುವಾರ ಬೆಳಿಗ್ಗೆ 10 ರಿಂದ 12 ರವರೆಗೆ ಹಾಗೂ ಹರಿಹರ ಸಮೀಪದ ಕೋಡಿಯಾಲ - ಹೊಸಪೇಟೆಯ ಪುಣ್ಯಕೋಟಿ ಮಠದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ.
ಜಿಹ್ವೇಶ್ವರ ಮಂದಿರದಲ್ಲಿಂದು ರಾಮ ಪೂಜೆ
ಹೊಂಡದ ಸರ್ಕಲ್ನಲ್ಲಿನ ಸ್ವಕುಳಸಾಳಿ ಸಮಾಜದ ಜಿಹ್ವೇಶ್ವರ ಮಂದಿರದಲ್ಲಿ ಅಯೋಧ್ಯ ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಶ್ರೀ ರಾಮನ ಪೂಜೆ ನಡೆಸಲಾಗುವುದು.
ನಗರಕ್ಕೆ ಇಂದು ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ರಾಜ್ಯ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರು ಇಂದು ನಗರಕ್ಕೆ ಆಗಮಿಸಲಿದ್ದಾರೆ.