ಕೊರೊನಾ ಸಾಮಾಜಿಕ ಅಂತರದ ನಡುವೆ ಪಿ.ಯು.ಸಿ. ಇಂಗ್ಲಿಷ್ ಪರೀಕ್ಷೆಗೆ ಹೋಲಿಸಿದರೆ, ಎಸ್ಸೆಸ್ಸೆಲ್ಸಿಯ ಮೊದಲ ದಿನದ ಇಂಗ್ಲಿಷ್ ಪರೀಕ್ಷೆ ಹೆಚ್ಚು ಶಿಸ್ತು ಬದ್ಧ ಹಾಗೂ ವ್ಯವಸ್ಥಿತವಾಗಿತ್ತು.
ನಿವೃತ್ತ ಇಂಜಿನಿಯರ್ ನಿವೃತ್ತಿ ಹಣ ಹೂಡಿಕೆ : ಲಾಭ ನೀಡುವುದಾಗಿ ವಂಚನೆ
ಲಾಭ ನೀಡುವುದಾಗಿ ನಂಬಿಸಿ ತಾವು ದುಡಿದ ಮತ್ತು ನಿವೃತ್ತಿಯ ಹಣವನ್ನು ಹೂಡಿಕೆ ಮಾಡಿಸಿಕೊಂಡು 21. 50 ಲಕ್ಷ ರೂ. ವಂಚಿಸಿರುವುದಾಗಿ ನಿವೃತ್ತ ಸಹಾಯಕ ಇಂಜಿನಿಯರ್ ಕೆ.ಎಂ. ಮುರುಗೇಂದ್ರಯ್ಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಗ್ಯ ಕಾರ್ಯಕರ್ತೆ ಸೇರಿ ಏಳು ಜನರಿಗೆ ಪಾಸಿಟಿವ್
ದಾವಣಗೆರೆ ನಗರದಲ್ಲಿ ಮೂರು, ಹೊನ್ನಾಳಿಯ ಕ್ಯಾಸಿನಕೆರೆಯಲ್ಲಿ ಎರಡು, ದಾವಣಗೆರೆ ತಾಲ್ಲೂಕಿನ ಮಾಗಾನಹಳ್ಳಿಯಲ್ಲಿ ಒಂದು ಪ್ರಕರಣ ಗಳು ದೃಢಪಟ್ಟಿವೆ. ಸೋಂಕು ದೃಢಪಟ್ಟಿರುವವರಲ್ಲಿ ಮಾಗಾನಹಳ್ಳಿಯ ಆರೋಗ್ಯ ಕಾರ್ಯಕರ್ತೆ ಸಹ ಸೇರಿದ್ದಾರೆ.
ಹರಪನಹಳ್ಳಿ: ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬರೆಸಿದ ಅಧಿಕಾರಿಗಳು
ಹರಪನಹಳ್ಳಿ : ತಾಲ್ಲೂಕಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು 13 ಪರೀಕ್ಷಾ ಕೇಂದ್ರಗಳಿಂದ 3788 ವಿದ್ಯಾ ರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಅದರಲ್ಲಿ 115 ಗೈರಾಗಿ, 3673 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಹರಪನಹಳ್ಳಿ: ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬರೆಸಿದ ಅಧಿಕಾರಿಗಳು
ಹರಪನಹಳ್ಳಿ : ತಾಲ್ಲೂಕಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು 13 ಪರೀಕ್ಷಾ ಕೇಂದ್ರಗಳಿಂದ 3788 ವಿದ್ಯಾ ರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಅದರಲ್ಲಿ 115 ಗೈರಾಗಿ, 3673 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ನ.5ಕ್ಕೆ ದಿವ್ಯಾಂಗರ ವೈದ್ಯಕೀಯ ತಪಾಸಣೆ, ಸಾಧನಾ ಸಲಕರಣೆಗಳ ಮೌಲ್ಯಾಂಕನ ಶಿಬಿರ
ಶಾಲಾ ಸಾಕ್ಷರತಾ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಬರುವ ನವೆಂಬರ್ 5ರ ಬೆಳಗ್ಗೆ 9.30ಕ್ಕೆ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ವಿಕಲ ಚೇತನ ಮಕ್ಕಳ ವೈದ್ಯಕೀಯ ತಪಾಸಣೆ ಮತ್ತು ಸಾಧನ ಸಲಕರಣೆಗಳ ಮೌಲ್ಯಾಂಕನ ಶಿಬಿರವನ್ನು ಆಯೋಜಿಸಲಾಗಿದೆ.
ಪಿಂಚಣಿದಾರರಿಗೆ ಮನೆಯಿಂದಲೇ ಡಿಜಿಟಲ್ ಜೀವನ ಪ್ರಮಾಣ ಪತ್ರ
ಭಾರತೀಯ ಅಂಚೆ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ಗಳ ಮೂಲಕ ಮನೆ ಬಾಗಿಲಿನಲ್ಲೇ ಪಿಂಚಣಿದಾರರು ಸುಲಭವಾಗಿ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ನಗರದಲ್ಲಿ ನಾಳೆ ಪಾಂರಪರಿಕ ವೈದ್ಯ ಪರಿಷತ್ನಿಂದ ಧನ್ವಂತರಿ ಜಯಂತ್ಯುತ್ಸವ
ಪಾರಂಪರಿಕ ವೈದ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಾಡಿದ್ದು ದಿನಾಂಕ 29 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಧನ್ವಂತರಿ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ
ಜನರಲ್ ಕೆ.ಎಸ್ ತಿಮ್ಮಯ್ಯ ನಗದು ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಎಸ್.ಎಸ್.ಎಲ್.ಸಿ ಮತ್ತು 2ನೇ ಪಿ.ಯು.ಸಿ ಸಾರ್ವತ್ರಿಕ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಪಡೆದ ಕರ್ನಾಟಕದ ಮೂಲ ನಿವಾಸಿ ಮಾಜಿ ಸೈನಿಕರ ಮಕ್ಕಳಿಗೆ `ಜನರಲ್ ಕೆ.ಎಸ್. ತಿಮ್ಮಯ್ಯ' ನಗದು ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಭೂ ಸುಧಾರಣೆ ಕಾಯ್ದೆ ರದ್ದುಪಡಿಸಲು ರೈತ ಸಂಘ ಆಗ್ರಹ
ಚಿತ್ರದುರ್ಗದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿಯನ್ನು ಪೂರ್ಣ ಪ್ರಮಾಣದಲ್ಲಿ ರಚಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರಿ ನೌಕರರ ಸಂಘಕ್ಕೆ ಚುನಾವಣೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆ ನವೆಂಬರ್ 16ರಂದು ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿರುವ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ನಗರದ ಮಾಸಬ ಕಾಲೇಜಿನಲ್ಲಿ ಇಂದು ಜಾಗೃತಿ ಅರಿವು ಸಪ್ತಾಹ
ಭ್ರಷ್ಟಾಚಾರದ ವಿರುದ್ದ ಜಾಗೃತಿ ಅರಿವು ಸಪ್ತಾಹ-2024 'ದೇಶದ ಅಭಿವೃದ್ಧಿಗಾಗಿ, ಭ್ರಷ್ಟಾಚಾರ ಮುಕ್ತ ಭಾರತ' ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 11ಕ್ಕೆ ನಗರದ ಶ್ರೀಮತಿ ಪಾರ್ವತಮ್ಮ ಸಭಾಂಗಣದಲ್ಲಿ ನಡೆಯಲಿದೆ.
ಹಿರಿಯ ಪತ್ರಕರ್ತ ವಿ.ಟಿ. ಸುಂದರ್ ನಿಧನ
ನಗರದ ಹಿರಿಯ ಪತ್ರಕರ್ತ ವಿ.ಟಿ. ಸುಂದರ್ ಅವರು ಇಂದು ರಾತ್ರಿ 11.30ಕ್ಕೆ ಹೃದಯಾಘಾತದಿಂದ ನಿಧನರಾದರು.
ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗೆ ನಗರದಲ್ಲಿ ಇಂದು ಸ್ಪರ್ಧಾತ್ಮಕ ಪರೀಕ್ಷೆ
ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯ ನೇಮಕಾತಿಗೆ ಇಂದು ಮತ್ತು ನಾಳೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚಿಸಿದ್ದಾರೆ.
ಕ್ರಮಕ್ಕೆ ಒತ್ತಾಯಿಸಿ ತಂಜೀಂ ಪ್ರತಿಭಟನೆ
ತಂಜೀಮುಲ್ ಮುಸ್ಲಿಂ ಮೀನ್ ಫಂಡ್ ಅಸೋಸಿಯೇಷನ್, ತಂಜೀಮ್ ಉಲೇಮಾ-ಎ-ಅಹಲೇ ಸುನ್ನತ್ ಸೇರಿದಂತೆ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ಇಂದು ಮಿಲಾದ್ ಮೈದಾನದಲ್ಲಿ ನಡೆದ ಪ್ರತಿ ಭಟನಾ ಸಮಾವೇಶದಲ್ಲಿ ರಾಷ್ಟ್ರ ಪತಿಗೆ ಮನವಿ ಸಲ್ಲಿಸಲಾಯಿತು.
ಮಲೇಬೆನ್ನೂರಿನಲ್ಲಿ ಇಂದು ಬಂಜೆತನ ನಿವಾರಣಾ ಸಮಾಲೋಚನಾ ಶಿಬಿರ
ಮಲೇಬೆನ್ನೂರು ಲಯನ್ಸ್ ಕ್ಲಬ್ ಮತ್ತು ಶ್ರೀ ವೀರಭದ್ರೇಶ್ವರ ಚಾರಿಟಬಲ್ ಟ್ರಸ್ಟ್ ಹಾಗೂ ಕಡ್ಲಿ ಐವಿಎಫ್ ಸೆಂಟರ್ (ದಾವಣಗೆರೆ) ಇವರ ವತಿಯಿಂದ ಬಂಜೆತನ ನಿವಾರಣಾ ಕುರಿತು ಉಚಿತ ಸಮಾಲೋಚನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ
ಜನರಲ್ ಕೆ.ಎಸ್ ತಿಮ್ಮಯ್ಯ ನಗದು ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಮತ್ತು 2ನೇ ಪಿ.ಯು.ಸಿ ಸಾರ್ವತ್ರಿಕ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಪಡೆದ ಕರ್ನಾಟಕದ ಮೂಲ ನಿವಾಸಿ ಮಾಜಿ ಸೈನಿಕರ ಮಕ್ಕಳಿಗೆ `ಜನರಲ್ ಕೆ.ಎಸ್. ತಿಮ್ಮಯ್ಯ' ನಗದು ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಲೋಕಿಕೆರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ
ತಾಲ್ಲೂಕಿನ ಲೋಕಿಕೆರೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಗ್ರಾಮಕ್ಕೆ ಆಗಮಿಸುವ ಶಾಸಕರು, ಸಚಿವರು ಹಾಗೂ ಅಧಿಕಾರಿಗಳಿಗೆ ಘೇರಾವ್ ಹಾಕಲಾಗುವುದು
ಲೋಕಾಯುಕ್ತ ಬಲೆಗೆ ಹರಿಹರ ನಗರಸಭೆ ಕಂದಾಯ ಇಲಾಖೆ ನೌಕರರು
ಹರಿಹರ : ಇಲ್ಲಿನ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ್ ಹಾಗೂ ಕಂದಾಯ ಅಧಿಕಾರಿ ಯು. ರಮೇಶ್ ಅವರು 20 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ನ.1ಕ್ಕೆ ಬೈಕ್ ರ್ಯಾಲಿ
ಕಲಾಕುಂಚ ಸಂಸ್ಥೆಯಿಂದ ನವೆಂಬರ್ 1ರ ಶುಕ್ರವಾರ ಬೆಳಗ್ಗೆ 8 ಗಂಟೆಗೆ ರಾಜ್ಯೋತ್ಸವ ಹಾಗೂ ಮಹಿಳೆಯರಿಂದ ಬೈಕ್ ರ್ಯಾಲಿ ನಡೆಯಲಿದೆ.
ಬಸವಾಪಟ್ಟಣದಲ್ಲಿ ಇಂದು ಅಂತರ ಕಾಲೇಜು ಗುಡ್ಡಗಾಡು ಓಟದ ಸ್ಪರ್ಧೆ
ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸಂಜೆ 5 ಕ್ಕೆ ಶ್ರೀ ಡಾ. ಸದ್ಯೋಜ್ಯಾತ ಶಿವಾಚಾರ್ಯ ಹಿರೇಮಠದ ಆವ ರಣದಲ್ಲಿ 150ನೇ ಸೈಕಲ್ ವಿತರಣೆ ಅಂಗವಾಗಿ ಇಂದು 50 ಸೈಕ ಲ್ಗಳ ವಿತರಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿಂದು ಯುಗಧರ್ಮ ಪ್ರತಿಷ್ಠಾನದ ಉದ್ಘಾಟನೆ, ಕೃತಿಗಳ ಲೋಕಾರ್ಪಣೆ
ನಾಳೆ ದಿನಾಂಕ 26 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಯುಗಧರ್ಮ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಯುಗಧರ್ಮ ರಾಮಣ್ಣ ವಿರಚಿತ ಆರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ನಗರದಲ್ಲಿ ಇಂದು ಸಾಹಿತ್ಯ – ಸಂವಾದ
ನಿಟ್ಟೂರು ಬಜ್ಜಿ ಹನುಮಂತಪ್ಪ ಚಾರಿಟೆಬಲ್ ಟ್ರಸ್ಟ್ (ದಾವಣಗೆರೆ) ಹಾಗೂ ತಿಂಗಳ ಅಂಗಳ ಸಾಹಿತ್ಯ ಸಾಂಸ್ಕೃತಿಕ ಬಳಗ (ದಾವಣಗೆರೆ) ಇವರ ಸಂಯುಕ್ತಾಶ್ರಯದಲ್ಲಿ ರೋಟರಿ ಬಾಲ ಭವನದಲ್ಲಿ ಇಂದು ಸಂಜೆ 4 ಗಂಟೆಗೆ ಸಾಹಿತ್ಯ - ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ
ಬೆಳೆ ಹಾನಿ ಪರಿಹಾರ ಹೆಚ್ಚಳದತ್ತ ಕೇಂದ್ರ ಗಮನಹರಿಸಲಿ: ಸಚಿವ ಕೃಷ್ಣ
ರಾಷ್ಟ್ರೀಯ ವಿಪತ್ತು ರೆಸ್ಪಾನ್ಸ್ ಫೋರ್ಸ್ (ಎನ್ಡಿಆರ್ಎಫ್) ಮಾರ್ಗಸೂಚಿಗಳನ್ನು ಪರಿಷ್ಕರಿಸಿ, ಬೆಳೆ ಹಾನಿ ಪರಿಹಾರ ಮೊತ್ತ ಹೆಚ್ಚಳ ಮಾಡುವ ಕಡೆ ಕೇಂದ್ರ ಸರ್ಕಾರ ಗಮನಹರಿಸಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ರಾಜನಹಳ್ಳಿ ಮಠದಲ್ಲಿ ಇಂದು ಸಭೆ
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಶ್ರೀ ವಾಲ್ಮೀಕಿ ಪ್ರಸನ್ನಾನಂದ
ದಲಿತರ ಮೇಲಿನ ದೌರ್ಜನ್ಯ : 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 98 ಅಪರಾಧಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೊನ್ನನಾಯ್ಕನಹಳ್ಳಿ : ರೈತನ ಆತ್ಮಹತ್ಯೆ
ರೈತ ಮಲ್ಲಿಕಾರ್ಜುನ ಅವರು ಆತ್ಮಹತ್ಯೆಗೊಳಗಾದ ಘಟನೆ ಸಮೀಪದ ಹೊನ್ನ ನಾಯ್ಕನಹಳ್ಳಿಯಲ್ಲಿ ಗುರುವಾರ ನಡೆದಿದೆ.
ಹರಪನಹಳ್ಳಿ : ಸತ್ತೂರಿನಲ್ಲಿ ಬಸ್ ಪಲ್ಟಿ, ಮಹಿಳೆ ಸಾವು
ಕೆಎಸ್ಸಾರ್ಟಿಸಿ ಬಸ್ ಪಲ್ಟಿಯಾಗಿ ಮಹಿಳೆ ಸಾವಿಗೀಡಾಗಿರುವ ಘಟನೆ ಸತ್ತೂರು ಬಳಿ ಜರುಗಿದೆ. ದಾವಣಗೆರೆಯಿಂದ ಹರಪನಹಳ್ಳಿಗೆ ಹೋಗುತ್ತಿದ್ದ
ಡೆಮೋ ವಿಶೇಷ ರೈಲುಗಳ ಸಂಚಾರ ರದ್ದು
ತಾಂತ್ರಿಕ ಮತ್ತು ಕಾರ್ಯಾಚರಣೆಯ ಕಾರಣಗಳಿಂದಾಗಿ, ರೈಲು ಸಂಖ್ಯೆ 07395 ಬಳ್ಳಾರಿ-ದಾವಣಗೆರೆ ಡೆಮೊ ಸ್ಪೆಷಲ್, ರೈಲು ಸಂಖ್ಯೆ 07396 ದಾವಣಗೆರೆ-ಬಳ್ಳಾರಿ ಡೆಮೊ ಸ್ಪೆಷಲ್
ಚನ್ನಗಿರಿ: ಅದ್ಧೂರಿ ರಾಜ್ಯೋತ್ಸವಕ್ಕೆ ಸಿದ್ಧತೆ
ಚನ್ನಗಿರಿ : 69 ನೇ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಿಸಲು ಸಕಲ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಚನ್ನಗಿರಿ ತಹಶೀಲ್ದಾರ್ ಜಿ.ಎಸ್.ಶಂಕರಪ್ಪ ತಿಳಿಸಿದರು.
34ನೇ ವಾರ್ಡಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ
ನಗರದ 34ನೇ ವಾರ್ಡ್ನಲ್ಲಿ ಬಿಜೆಪಿ ಸದಸ್ಯತಾ ಅಭಿಯಾನ ನಡೆಸಲಾಯಿತು.
ಭಾರೀ ಮಳೆಯಿಂದ ಕುಸಿದ ಮನೆಗಳು
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭಾನುವಾರ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಶ್ವಚೇತನ ಶಾಲೆಯಲ್ಲಿ ವಾಲ್ಮೀಕಿ ಜಯಂತಿ
ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಪೋದಾರ್ ಇಂಟರ್ನಾಷನಲ್ ಶಾಲೆಯಲ್ಲಿ ಬೆಳಕಿನ ಹಬ್ಬ
ನಗರದ ಪೋದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶನಿವಾರ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಯಿತು.
ಸಂತೇಬೆನ್ನೂರಿನ ಈಶ್ವರೀಯ ವಿವಿಯಲ್ಲಿ ಇಂಜಿನಿಯರ್ಗಳ ದಿನ
ಚನ್ನಗಿರಿ : ತಾಲ್ಲೂಕಿನ ಸಂತೇಬೆನ್ನೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಭಾನುವಾರ ಇಂಜಿನಿಯರ್ಗಳ ದಿನ ಆಚರಿಸಲಾಯಿತು.
ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ಗೆ ಆಯ್ಕೆ
ಜಗಳೂರು : ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಪಟ್ಟಣದ ಬಾಲ ಭಾರತಿ ಪ್ರೌಢಶಾಲೆಯ ಬಾಲಕಿಯರು `ಬಾಲ್ ಬ್ಯಾಡ್ಮಿಂಟನ್' ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಳೆ ಹಾನಿಗೆ ತಕ್ಷಣವೇ ಪರಿಹಾರ ನೀಡಲು ಒತ್ತಾಯ
ಹಿಂಗಾರು ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ರೈತರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದು, ಕೂಡಲೇ ಪರಿಹಾರ ನೀಡಬೇಕು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಒತ್ತಾಯಿಸಿದ್ದಾರೆ.
ಕಣವಿಹಳ್ಳಿ ಎಂ. ರಾಮಕೃಷ್ಣಗೆ ಸನ್ಮಾನ
ಎಂ.ರಾಮಕೃಷ್ಣ ಅವರನ್ನು ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆಯವರು ಈಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ 5ನೇ ವರ್ಷದ ದಿನಾಚರಣೆಯಲ್ಲಿ ಸನ್ಮಾನಿಸಿ, ಗೌರವಿಸಿದರು.
ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಅತ್ಯಗತ್ಯ
ಪದವಿ ಪಠ್ಯದ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯೂ ಸಹ ಇಂದು ತುಂಬಾ ಅಗತ್ಯವಾಗಿದೆ ಎಂದು ಚಿತ್ರದುರ್ಗದ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಪ್ರೊ. ಎಸ್.ಬಿ ಶಿವಪ್ರಸಾದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪೈಪ್ಲೈನ್ ಒಡೆದು ನೀರು ಪೋಲು; ಜಲಸಿರಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
ನಗರದಲ್ಲಿ ಕುಡಿಯುವ ನೀರಿಗಾಗಿ ಕಲ್ಪಿಸಿರುವ 24/7 ಜಲಸಿರಿ ಯೋಜನೆಯ ನೀರಿನ ಪೈಪ್ಲೈನ್ ಒಡೆದು ಕುಡಿಯುವ ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಇತ್ತ ಕಡೆ ಗಮನ ವಹಿಸದೇ ನಿರ್ಲಕ್ಷಿಸಿರುವುದು ಜಲಸಿರಿ ಯೋಜನೆಯು ಸಾರ್ವಜನಿಕರಿಗೆ ಎಷ್ಟರ ಮಟ್ಟಿಗೆ ತಲುಪಿದೆ ಎಂಬುದು ತಿಳಿಸಬೇಕಿದೆ
ಎಲ್.ಐ.ಸಿ. ಶಾಖೆ -1ರ ಏಜೆಂಟರ ಸಂಘದ ಸಭೆಯಲ್ಲಿ ಸಂಸದರಿಗೆ ಸನ್ಮಾನ
ಸ್ಥಳೀಯ ಎಲ್.ಐ.ಸಿ. ಏಜೆಂಟ್ಸ್ ಅಸೋಸಿಯೇಷನ್ ಶಾಖೆ-1ರ 18ನೇ ವಾರ್ಷಿಕ ಮಹಾಸಭೆಯು ಸಂಘದ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಎಸ್.ಜಿ. ಪಂಪಣ್ಣನವರ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆಯಿತು.
ಕುಂಬಳೂರು : ದೊಡ್ಡ ಎಡೆ ಜಾತ್ರೆ
ಮಲೇಬೆನ್ನೂರು : ಕುಂಬಳೂರು ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಮರಿ ಬನ್ನಿ ಅಂಗವಾಗಿ ದೊಡ್ಡ ಎಡೆ ಜಾತ್ರೆ ಭಾನುವಾರ ಭಕ್ತರ ಸಮ್ಮುಖ ದಲ್ಲಿ ಸಂಭ್ರಮದಿಂದ ಜರುಗಿತು.
ವಿದ್ಯಾನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ
ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವ ಅಭಿಯಾನವನ್ನು ವಿದ್ಯಾನಗರದಲ್ಲಿ ನಡೆಸಲಾಯಿತು.
ನಿಧಿ ಬೇತೂರ್, ಸಮರ್ಥ್ ಬೇತೂರ್ಗೆ ಚಿನ್ನದ ಪದಕ
ಕರಾಟೆ ಚಾಂಪಿಯನ್ ಶಿಪ್ 2024 ಸ್ಪರ್ಧೆಯ 10-11 ವರ್ಷದ ಸಬ್ ಜ್ಯೂನಿಯರ್ ವಿಭಾಗದಲ್ಲಿ ನಗರದ ನಿಧಿ ಬೇತೂರ್ ಹಾಗೂ 6 ವರ್ಷದ ವಿಭಾಗದಲ್ಲಿ ಸಮರ್ಥ್ ಬೇತೂರು ಕರಾಟೆ ಸ್ಪರ್ಧೆಯ ಕಟಾ ಹಾಗೂ ಕುಮಿಟೆ ವಿಭಾಗಗಳಲ್ಲಿ ತಲಾ 2 ಚಿನ್ನದ ಪದಕ ಪಡೆದಿದ್ದಾರೆ.
ಹೊನ್ನಾಳಿಯಲ್ಲಿ ಬಂಗಾರಪ್ಪ ಜನ್ಮ ದಿನಾಚರಣೆ
ಹೊನ್ನಾಳಿ : ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 92ನೇ ಜನ್ಮ ದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಬ್ರೆಡ್ - ಹಣ್ಣನ್ನು ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಬಣ್ಣಜ್ಜಿ ವಿತರಿಸಿದರು.
ಶೋಷಣೆ ವಿರುದ್ಧ ಹೋರಾಡುತ್ತಿದ್ದ ಕಬ್ಬಳ್ಳಿ ಬಸವರಾಜ್ ಸೇವೆ ಶ್ಲ್ಯಾಘನೀಯ
ಹರಪನಹಳ್ಳಿ : ಪ್ರಗತಿ ಪರ ಹೊರಾಟಗಾರ ದಿ. ಕಬ್ಬಳ್ಳಿ ಬಸವರಾಜ್ ಅವರ ನುಡಿ ನಮನ ಕಾರ್ಯಕ್ರಮವು ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠದಲ್ಲಿ ಅರಸಿಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶೀ ಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಇಂದು ನಡೆಯಿತು.
ಸಂಭ್ರಮದ ಕೇರಳದ ಓಣಂ
ಕೇರಳ ಸಮಾಜಂ (ದಾವಣಗೆರೆ) ವತಿಯಿಂದ ಓಣಂ-2024 ಕಾರ್ಯಕ್ರಮವನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಉದ್ಘಾಟಿಸಿದರು.
ಕೆರೆ ಏರಿಯನ್ನು ದುರಸ್ತಿ ಮಾಡಿದ ಕುರ್ಕಿ ಗ್ರಾಮಸ್ಥರು
ಮಾಯಕೊಂಡ : ಹಾನಿಗೊಳ ಗಾದ ಕೆರೆ ಏರಿಯನ್ನು ಸ್ವತಃ ಕುರ್ಕಿ ಗ್ರಾಮಸ್ಥರೇ ದುರಸ್ತಿ ಮಾಡಿ ಕಾಳಜಿ ಮೆರೆದಿದ್ದಾರೆ.
ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾಗಿ ಕುಮಾರಸ್ವಾಮಿ
ಜಿಲ್ಲಾ ಪತ್ರಿಕಾ ವಿತರಕರ ಸರ್ವ ಸದಸ್ಯರ ಸಭೆಯು ನಗರದ ಶ್ರೀ ಶಿವಯೋಗ ಮಂದಿರದ ಆವರಣದಲ್ಲಿ ಇಂದು ನಡೆಯಿತು.
ಬ್ಯಾಡಗಿಯಲ್ಲಿ ಕೊಪ್ಪಳ ಶ್ರೀಗಳ ಪ್ರವಚನ
ರಾಣೇಬೆನ್ನೂರು : ತಾಲ್ಲೂಕಿನ ಬ್ಯಾಡಗಿ ಎಸ್.ಜೆ.ಜೆ.ಎಂ ಕಾಲೇಜು ಕ್ರೀಡಾಂಗಣದಲ್ಲಿ ಬರುವ ನವೆಂಬರ್ 13 ರಿಂದ 24 ರವರೆಗೆ 12 ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ 7 ರವರೆಗೆ ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರಿಂದ ಪ್ರವಚನ ನಡೆಯಲಿದೆ.
ಬಂಜೆತನ ಶಾಪವೆಂದು ಗ್ರಹಿಸುವುದು ತಪ್ಪು : ಡಾ. ವರದಾ ಕಿರಣ್
ಮಲೇಬೆನ್ನೂರು : ಬಂಜೆತನ ಶಾಪ ಎಂದು ಗ್ರಹಿಸುವುದು ತಪ್ಪು ಎಂದು ದಾವಣಗೆರೆಯ ಕಡ್ಲಿ ಐವಿಎಫ್ ಸೆಂಟರ್ನ ಡಾ. ವರದಾಕಿರಣ್ ತಿಳಿಸಿದರು.
ಕುರ್ಕಿಯಲ್ಲಿ ಕನ್ನಡ ಜ್ಯೋತಿ ರಥಕ್ಕೆ ಭವ್ಯ ಸ್ವಾಗತ
ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಾ ದಾವಣಗೆರೆ ಮೂಲಕ ಕುರ್ಕಿ ಗ್ರಾಮಕ್ಕೆ ಬಂದಾಗ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಪೋಕ್ಸೋ : ಜಾಗೃತಿ ಹೆಚ್ಚಿಸಲು ಡಿಸಿ ಸೂಚನೆ
ಅನಾಥವಾಗಿರುವ ಮಕ್ಕಳನ್ನು ಹೆಚ್ಚು ದತ್ತು ಪ್ರಕ್ರಿಯೆಗೆ ಒಳಪಡಿಸಲು ಹಾಗೂ ಈ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಮಕ್ಕಳ ರಕ್ಷಣಾಧಿಕಾರಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚನೆ ನೀಡಿದರು.
ಸೊರಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಯಾಣಿ ಮರಿಯಪ್ಪ
ಹೊನ್ನಾಳಿ : ತಾಲ್ಲೂಕಿನ ಸೊರಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ. ಕಲ್ಯಾಣಿ ಮರಿಯಪ್ಪ ಇವರು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ಚುನಾವಣಾಧಿಕಾರಿ ಡಾ. ವಿಶ್ವನಟೇಶ್ ಘೋಷಿಸಿದರು.
ಹೊನ್ನಾಳಿ: ವಿಜಯೋತ್ಸವಕ್ಕೆ ಮೆರಗು ತಂದ ಕೇಂದ್ರ ಸರ್ಕಾರ
ಹೊನ್ನಾಳಿ : ಮಹಿಳೆಯರಿಗೆ ಸದಾ ಸ್ಫೂರ್ತಿ ಹಾಗೂ ಪ್ರೇರಣೆಯಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಹೋರಾಡಿ ಗೆದ್ದ ವಿಜಯೋತ್ಸವ ಸಂಭ್ರಮಾಚರಣೆ ದಿನವನ್ನು ನಾವೆಲ್ಲರೂ ಆಚರಿಸುವುದೇ ಒಂದು ಸಂಭ್ರಮದ ದಿನವಾಗಿದೆ
ಮಾದಿಗ ಸಮಾಜದ ಆಸ್ತಿ ಉಳಿವಿಗಾಗಿ ಪ್ರತಿಭಟನೆ
ಚಳ್ಳಕೆರೆ : ತಾಲ್ಲೂಕಿನ ಸಮಸ್ತ ಮಾದಿಗ ಸಮಾಜದ ಕೋಟ್ಯಾಂತರ ರೂ. ಬೆಲೆ ಬಾಳುವ ಆಸ್ತಿಯನ್ನು ಅತಿಕ್ರಮಣ ಮಾಡುವಂತಹ ಕಾನೂನು ಬಾಹಿರ ಕೆಲಸದ ವಿರುದ್ಧ ಪ್ರತಿಯೊಬ್ಬ ಪ್ರಜ್ಞಾವಂತ ಮಾದಿಗ ಬಂಧುಗಳು ಪ್ರತಿಭಟಿಸಲೇ ಬೇಕಾದ ಅನಿವಾರ್ಯತೆ ಮತ್ತು ಹೋರಾಟ ಮಾಡಿ ನಮ್ಮ ಆಸ್ತಿ ಉಳಿಸಬೇಕಾಗಿದೆ
ಬನ್ನಿಕೋಡು ಗ್ರಾಮದಲ್ಲಿ ಆಯುರ್ವೇದ ದಿನ ಹಾಗೂ ಸಪ್ತಾಹ
ಈಚೆಗೆ 9ನೇ ರಾಷ್ಟ್ರೀಯ ಆಯುರ್ವೇದ ದಿನ ಹಾಗೂ ನಾರಿ ಸ್ವಾಸ್ಥ್ಯ ಮತ್ತು ಸಬಲೀಕರಣಕ್ಕಾಗಿ ಆಯುರ್ವೇದ ಸಪ್ತಾಹದ ನಿಮ್ಮಿತ್ತ್ಯ 12ರಿಂದ 21 ವಯಸ್ಸಿನ ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಆಯುರ್ವೇದದ ಪಾತ್ರ ಎಂಬ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಪರ್ಯಾಯ ಹಸಿ ಮತ್ತು ಒಣಗಿಸುವ ಪದ್ಧತಿಯಿಂದ ಪರಿಸರದ ಸಂರಕ್ಷಣೆ
ತಾಲ್ಲೂಕಿನ ಬೆಳವನೂರು ಗ್ರಾಮದಲ್ಲಿ ಭತ್ತದ ಬೆಳೆಯಲ್ಲಿ ಪರ್ಯಾಯ ಹಸಿ ಮತ್ತು ಒಣಗಿಸುವ ಮುಂಚೂಣಿ ಪ್ರಾತ್ಯಕ್ಷಿಕೆಯ ತಾಕುಗಳಿಗೆ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿದರು.
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಉಪಯೋಗಿಸಿಕೊಳ್ಳಿ
ರಾಜ್ಯದಲ್ಲಿ ಕೋಟ್ಯಾಂತರ ಜನ ಅಸಂಘಟಿತ ವಲಯದಲ್ಲಿದ್ದಾರೆ. ಅವರೆಲ್ಲರೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಹೇಳಿದರು.
ನಿಜಲಿಂಗಪ್ಪ, ಬೊಮ್ಮಾಯಿ ಸೇರಿದಂತೆ ಹೊರಗಿನವರಿಗೇ ಮಣೆ ಹಾಕಿದ್ದೇ ಹೆಚ್ಚು…!
ಲಿಂಗಾಯತರಲ್ಲಿ ಪಂಚಮ ಸಾಲಿಗರೇ ಹೆಚ್ಚಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಅವಿ ರೋಧ ಆಯ್ಕೆಯಾಗಿ ಮುಖ್ಯ ಮಂತ್ರಿಯಾದ ಎಸ್.ನಿಜಲಿಂಗಪ್ಪ ಚಿತ್ರದುರ್ಗ ಜಿಲ್ಲೆಯವರು.
ಹಳೆಪೇಟೆ ಶಾಲೆಯ ಆರ್. ಬೃಂದಾ ರಾಜ್ಯಕ್ಕೆ ಪ್ರಥಮ
ಸ್ಥಳೀಯ ಹಳೆಪೇಟೆಯ ಶತಮಾನದ ಶಾಲೆಯಾದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಆರ್. ಬೃಂದಾ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ನಾಮದೇವ ಸಿಂಪಿ ಸಮಾಜದ ಅಧ್ಯಕ್ಷರಾಗಿ ಪುಂಡಲೀಕ ಪುಟಾಣಕರ್ ಆಯ್ಕೆ
ನಾಮದೇವ ಸಿಂಪಿ ಸಮಾಜದಲ್ಲಿ 2024-27ನೇ ಸಾಲಿಗೆ ನೂತನವಾಗಿ ತರುಣ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಪುಂಡಲೀಕ ಪುಟಾಣಕರ್ ಆಯ್ಕೆಯಾಗಿದ್ದಾರೆ.