ದಾವಣಗೆರೆ ವಿಶ್ವವಿದ್ಯಾನಿಲಯದ ಸ್ನಾತಕ ಪದವಿಯ ಒಂದು, ಮೂರು ಮತ್ತು ಐದನೇ ಸೆಮಿಸ್ಟರ್ ಪರೀಕ್ಷೆಗಳು ಮುಗಿದಿದ್ದು, ಲಾಕ್ಡೌನ್ ಮುಗಿದ ನಂತರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕುಲಪತಿ ಪ್ರೊ. ಶರಣಪ್ಪ ಹಲಸೆ ತಿಳಿಸಿದ್ದಾರೆ.
ಕೊರೊನಾ ಭಯವಿಲ್ಲದೇ ಜನಜಂಗುಳಿ
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣಕ್ಕೆ ಸಿಗದಂತಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಸೋಮವಾರದಿಂದ 14 ದಿನಗಳ ಲಾಕ್ಡೌನ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ನಗರದ ಜನರು ತರಕಾರಿ, ದಿನಸಿ ಖರೀದಿಗೆ ಮಾರುಕಟ್ಟೆಗೆ ಮುಗಿ ಬಿದ್ದಿದ್ದರು.
ಕೊರೊನಾ ಭಯವಿಲ್ಲದೇ ಜನಜಂಗುಳಿ
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣಕ್ಕೆ ಸಿಗದಂತಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಸೋಮವಾರದಿಂದ 14 ದಿನಗಳ ಲಾಕ್ಡೌನ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ನಗರದ ಜನರು ತರಕಾರಿ, ದಿನಸಿ ಖರೀದಿಗೆ ಮಾರುಕಟ್ಟೆಗೆ ಮುಗಿ ಬಿದ್ದಿದ್ದರು.
ಕೋವ್ಯಾಕ್ಸಿನ್ ಲಸಿಕೆ ಕೊರತೆ : ನಾಗರಿಕರಲ್ಲಿ ಆತಂಕ
ಕೊರೊನಾ ಮಹಾಮಾರಿ ದಿನೇ ದಿನೇ ಹೆಚ್ಚಾಗುತ್ತಾ ಜನರನ್ನು ಕಾಡುವ ಜೊತೆಗೆ ಜೀವವನ್ನೇ ಬಲಿ ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜೀವ ಉಳಿದರೆ ಸಾಕು ಎಂದು ಜನ ಲಸಿಕೆ ಪಡೆಯಲು ಮುಗಿ ಬೀಳುತ್ತಿದ್ದಾರೆ. ಆದರೆ ಲಸಿಕೆ ಕೊರತೆ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ನಗರದಲ್ಲಿ ಇಂದು `ಗುರುದೇವರೊಂದಿಗೆ ಧ್ಯಾನ’ ಕಾರ್ಯಕ್ರಮ
ಆರ್ಟ್ ಆಫ್ ಲಿವಿಂಗ್ ವತಿಯಿಂದ ದಾವಣಗೆರೆ ಡಾ. ಸದ್ಯೋಜಾತ ಸ್ವಾಮೀಜಿ ಯವರ ಹಿರೇಮಠದ 1 ನೇ ಮಹಡಿಯಲ್ಲಿ ಇಂದು ಸಂಜೆ 7 ರಿಂದ 8 ರವರೆಗೆ ಗುರುಪೂಜೆ ಮತ್ತು ಸತ್ಸಂಗ ನಡೆಯಲಿದೆ.
ನಾಳಿನ ಜಿಲ್ಲಾ ಕುರುಬರ ಸಂಘದ ಸಭೆ ಮುಂದೂಡಿಕೆ
ನಾಳೆ ದಿನಾಂಕ 22ರ ಭಾನುವಾರ ಬೆಳಿಗ್ಗೆ 11 ಕ್ಕೆ ನಗರದ ಶ್ರೀ ಬೀರೇಶ್ವರ ಹಾಸ್ಟೆಲ್ನಲ್ಲಿ ಬಿ.ಹೆಚ್. ಪರಶುರಾಮಪ್ಪ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಜಿಲ್ಲಾ ಕುರುಬರ ಸಂಘದ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ
ನಗರದಲ್ಲಿ ನಾಳೆ ವಾಸ್ಕ್ಯುಲರ್ ಚಿಕಿತ್ಸೆ
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವಾಸ್ಕ್ಯುಲರ್ ತಜ್ಞ ಡಾ. ಬಿ. ರಾಜೇಂದ್ರ ಪ್ರಸಾದ್ ಅವರು ನಗರದ ಆರೈಕೆ ಆಸ್ಪತ್ರೆಯಲ್ಲಿ ನಾಡಿದ್ದು ದಿನಾಂಕ 22ರ ಭಾನುವಾರ ಬೆಳಿಗ್ಗೆ 10 ರಿಂದ ಮಧಾಹ್ನ 1 ರವರೆಗೆ ಸಮಾಲೋಚನೆಗೆ ಲಭ್ಯವಿರುತ್ತಾರೆ.
ನಗರದಲ್ಲಿಂದು ಸಾಂಸ್ಕೃತಿಕ ವೈಭವ
ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡರ ಬಣ) ಪಾದಚಾರಿ ವ್ಯಾಪಾರಿ ನಗರ ಘಟಕದಿಂದ 69ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃ ತಿಕ ವೈಭವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ನಾಳೆ ದಿನಾಂಕ 21ರ ಶನಿವಾರ ಹಮ್ಮಿಕೊಳ್ಳಲಾಗಿದೆ
ನಾಡಿದ್ದು ಶ್ರೀ ಮಾರ್ಕಂಡೇಶ್ವರ ಕಾರ್ತಿಕ
ಇಲ್ಲಿನ ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದ ವತಿಯಿಂದ ಇದೇ ದಿನಾಂಕ 23ರ ಸೋಮವಾರ ಬೆಳಿಗ್ಗೆ ಅಭಿಷೇಕ ಮತ್ತು ಇತರೆ ಪೂಜೆಗಳ ನಂತರ ರಾತ್ರಿ 7 ಗಂಟೆಗೆ ಕುಲದೇವರಾದ ಮಾರ್ಕಂಡೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಜರುಗಲಿದೆ
ಸಿ.ಟಿ. ರವಿ ವಿರುದ್ಧ ಅಗತ್ಯ ಕಾನೂನು ಕ್ರಮಕ್ಕೆ ಎಸ್ಸೆಸ್ ಒತ್ತಾಯ
ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಮಧ್ಯೆ ನಡೆದ ಮಾತಿನ ಚಕಮಕಿಯಲ್ಲಿ ರವಿ ಅವರು ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವುದನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಖಂಡಿಸಿದ್ದಾರೆ.
`ಗ್ರಾಮ ಕಾಯಕ ಮಿತ್ರ’ ಹುದ್ದೆಗೆ ಅರ್ಜಿ
ಹೊನ್ನಾಳಿ : ತಾಲ್ಲೂಕಿನ ಹನುಮಸಾಗರ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ `ಗ್ರಾಮ ಕಾಯಕ ಮಿತ್ರ' 1 ಹುದ್ದೆಗೆ ಗೌರವ ಧನ ಪಾವತಿ ಆಧಾರದ ಮೇಲೆ ಅರ್ಹ ಮಹಿಳೆಯರಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ರವಿ ಪರಿಷತ್ ಸದಸ್ಯತ್ವ ವಜಾಕ್ಕೆ ಒತ್ತಾಯ
ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತಾಗಿ ಕೆಟ್ಟ ಪದ ಬಳಸಿದ್ದು ಖಂಡನೀಯ. ತಕ್ಷಣವೇ ಅವರ ಸದಸ್ಯತ್ವ ವಜಾಗೊಳಿಸಬೇಕು ಎಂದು ಬಿ. ವೀರಣ್ಣ ಆಗ್ರಹ ಮಾಡಿದ್ದಾರೆ
ನಗರದಲ್ಲಿ ಇಂದು ಕನ್ನಡ ಹಬ್ಬ
ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 3ನೇ ವರ್ಷದ ಕನ್ನಡ ಹಬ್ಬ ಹಾಗೂ 69ನೇ ಕನ್ನಡ ರಾಜ್ಯೋತ್ಸವವನ್ನು ಡಿ.21ರ ಇಂದು ಸಂಜೆ 5.30ಕ್ಕೆ ಇಲ್ಲಿನ ಜಯದೇವ ವೃತ್ತದ ಶಿವಯೋಗಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ
ಸಿ.ಟಿ. ರವಿ ಬಂಧನ ಖಂಡಿಸಿ ನಗರದಲ್ಲಿ ಇಂದು ಬಿಜೆಪಿ ಪ್ರತಿಭಟನೆ
ಸಿ.ಟಿ. ರವಿ ಬಂಧನವನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ಎನ್. ತಿಳಿಸಿದ್ದಾರೆ.
22ಕ್ಕೆ ಸರ್.ಎಂ.ವಿ ವೈಭವ
ನಗರದ ಸರ್ ಎಂ.ವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇದೇ ದಿನಾಂಕ 22ರ ಸಂಜೆ 4ಕ್ಕೆ ಸರ್.ಎಂ.ವಿ ವೈಭವ-2024 ವಾರ್ಷಿಕೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ನಗರದಲ್ಲಿ ಇಂದಿನಿಂದ ಎಸ್ಎಸ್ವೈ ಶಿಬಿರ
ಸಿದ್ಧ ಸಮಾಧಿ ಯೋಗ ತರಬೇತಿ (ಎಸ್ಎಸ್ವೈ) ಶಿಬಿರವು ಲೋಕಿಕೆರೆ ರಸ್ತೆ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ರೇಣುಕಾ ಮಾತಾಜಿ ಸಾನ್ನಿಧ್ಯದಲ್ಲಿ ಆರಂಭವಾಗಲಿದೆ.
ಅಮಿತ್ ಷಾ-ಬಿಜೆಪಿ ವಿರುದ್ಧ ಇಂದು ನಗರದಲ್ಲಿ ಪ್ರತಿಭಟನೆ
ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ಡಾ|| ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಮತ್ತು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಬಿ.ಹೆಚ್.ವೀರಭದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ನಡೆಯಲಿದೆ
ನಗರದಲ್ಲಿ ಇಂದು ಉದ್ಯೋಗ ಮೇಳ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರ ವತಿಯಿಂದ ಇಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ (ಕೊಠಡಿ ಸಂಖ್ಯೆ 51) ದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ನಗರದಲ್ಲಿ ಇಂದು ಶ್ರೀ ಮಾತಾ ಪಂಚವಟಿ ನಾಗಕಾಳಿಕಾದೇವಿ ಕಾರ್ತಿಕೋತ್ಸವ
ಶಾಮನೂರಿನ ಶ್ರೀ ಜೆ.ಹೆಚ್. ಪಟೇಲ್ ಬಡಾವಣೆಯ ರೈಲ್ವೆ ಪಾರ್ಕ್ ಪಕ್ಕದ ಶ್ರೀ ಮಾತಾ ಪಂಚವಟಿ ನಾಗಕಾಳಿಕಾದೇವಿಯ 31ನೇ ವರ್ಷದ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಇಂದು ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಕಾರ್ಯಕ್ರಮವಿರುತ್ತದೆ.
ವರದಿಗಾರರ ಕೂಟದಿಂದ ನಾಳೆ ಪಿಪಿಎಲ್-2ಕೆ24
ಜಿಲ್ಲಾ ವರದಿಗಾರರ ಕೂಟದಿಂದ 3ನೇ ವರ್ಷದ ಪಿಪಿಎಲ್-2ಕೆ24ನ್ನು ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ನಾಡಿದ್ದು ದಿನಾಂಕ 21ರಿಂದ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ
ಇಂದು ಕಾರ್ತಿಕ ಮತ್ತು ದೀಪೋತ್ಸವ
ಆಂಜನೇಯ ಬಡಾವಣೆ ಬಿಐಇಟ ಕಾಂಪೌಂಡ್ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ 12ನೇ ವರ್ಷದ ಶ್ರೀ ಬನ್ನಿಮಹಾಂಕಾಳಿ ದೇವಿಯ ಕಡೇಕಾರ್ತಿಕ ಮತ್ತು ದೀಪೋತ್ಸವವು ಇಂದು ಸಂಜೆ 7.30ಕ್ಕೆ ನಡೆಯಲಿದೆ.
ಬೇತೂರಿನ ಕಾಳಿಕಾದೇವಿ ದೇವಸ್ಥಾನದಲ್ಲಿ ಇಂದು ಕಾರ್ತಿಕೋತ್ಸವ
ದಾವಣಗೆರೆ ಸಮೀಪದ ಬೇತೂರು ಗ್ರಾಮದ ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಇಂದು ಸಂಜೆ 7 ಗಂಟೆಗೆ ಜರುಗಲಿದೆ. ಭಕ್ತರು ಭಾಗವಹಿಸುವಂತೆ ದೇವಸ್ಥಾನ ಸಮಿತಿ ಕೋರಿದೆ.
ವಿನೋಬನಗರದಲ್ಲಿ ನಾಳೆ ಕಾರ್ತಿಕೋತ್ಸವ
ವಿನೋಬನಗರದ ರಾಮಕೃಷ್ಣ ಆಶ್ರಮದ ಹತ್ತಿರವಿರುವ ನವ ವೃಕ್ಷಧಾಮದಲ್ಲಿರುವ ಶ್ರೀ ಕಾಳಿಕಾದೇವಿಯ ಕಾರ್ತಿಕೋತ್ಸವವು ನಾಡಿದ್ದು ದಿನಾಂಕ 20ರ ಶುಕ್ರವಾರ ರಾತ್ರಿ 8 ಗಂಟೆಗೆ ನೆರವೇರಲಿದೆ ಎಂದು ಸಮಿತಿಯ ಪರವಾಗಿ ಹೆಚ್. ದಿವಾಕರ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ರಾಜ್ಯಮಟ್ಟದ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಕಲೋತ್ಸವ
ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದಿಂದ ನಾಳೆ ದಿನಾಂಕ 19 ರ ಗುರುವಾರ ಸಂಜೆ 5.30 ಕ್ಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ರಾಜ್ಯಮಟ್ಟದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಾಹಿತ್ಯ, ಸಾಂಸ್ಕೃತಿಕ ಕಲೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ
ಜಿಗಳಿ : ಇಂದು ಬೀರಪ್ಪನ ಕಾರ್ತಿಕೋತ್ಸವ, ನಾಳೆ ಸಾಮೂಹಿಕ ವಿವಾಹ, ದೊಡ್ಡಎಡೆ
ಜಿಗಳಿ ಗ್ರಾಮದ ಒಂಭತ್ತು ಕಟ್ಟೆಯ ಒಡೆಯನಾದ ಶ್ರೀ ಬೀರಲಿಂಘೇಶ್ವರ ಸ್ವಾಮಿಯ ಮಹಾಕಾರ್ತಿಕೋತ್ಸವ ಮತ್ತು ದೊಡ್ಡ ಎಡೆ ಜಾತ್ರೆ, ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿಂದು ವರಸಿದ್ಧಿ ವಿನಾಯಕ ಕಾರ್ತಿಕ
ಮಹಾರಾಜಪೇಟೆಯ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಕಡೆ ಕಾರ್ತಿಕೋತ್ಸವವು ಇಂದು ಸಂಜೆ 7.30 ಗಂಟೆಗೆ ನಡೆಯಲಿದೆ.
23 ರಂದು ಆಯವ್ಯಯ ಅಂದಾಜು ಪತ್ರಿಕೆ ತಯಾರಿಸುವ ಕುರಿತು ಸಭೆ
ಹರಪನಹಳ್ಳಿ : 2025-26ನೇ ಸಾಲಿನ ಪುರಸಭೆಯ ಆಯವ್ಯಯ ಅಂದಾಜು ಪತ್ರಿಕೆಯನ್ನು ತಯಾರಿಸುವ ಪ್ರಯುಕ್ತ ಸಾರ್ವಜನಿಕರಿಂದ, ಸಂಘ-ಸಂಸ್ಥೆಗಳಿಂದ ಹಾಗೂ ಹಿರಿಯ ನಾಗರಿಕರಿಂದ ಸಲಹೆ, ಸೂಚನೆಗಳನ್ನು ಪಡೆಯಲು ಪೂರ್ವ ಭಾವಿ ಸಭೆಯನ್ನು ಆಯೋಜಿಸಲಾಗಿದೆ.
ನಿಟ್ಟುವಳ್ಳಿ ಶಾಖಾ ಗ್ರಂಥಾಲಯಕ್ಕೆ ನಿವೇಶನ ಮಂಜೂರು
ನಿಟ್ಟುವಳ್ಳಿಯಲ್ಲಿ ಶಾಖಾ ಗ್ರಂಥಾಲಯದ ಕಟ್ಟಡ ನಿರ್ಮಿಸಲು ಸ್ವಂತ ನಿವೇಶನವನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲು ಹಾಗೂ ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕರಿಗೆ ವಾಚನಾಲಯ ಪ್ರಾರಂಭಿಸಲು ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಅನುಮೋದನೆ ನೀಡಿದರು.
ಅಂಬೇಡ್ಕರ್ ಬಗ್ಗೆ ಅವಹೇಳನ : ಅಮಿತ್ ಷಾ ಕ್ಷಮೆಗೆ ಸಂಸದೆ ಡಾ. ಪ್ರಭಾ ಆಗ್ರಹ
ಸಂಸತ್ತಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಅವರು ದೇಶದ ಜನತೆಯ ಮುಂದೆ ಕ್ಷಮೆ ಯಾಚಿಸಬೇಕು
ನಗರದ ಸವಿತಾ ಸಮಾಜದಲ್ಲಿ ಇಂದು ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ
ಕೊಂಡಜ್ಜಿ ರಸ್ತೆಯಲ್ಲಿರುವ ಸವಿತಾ ಸಮಾಜದ ಮಾರುತಿ ಮಂದಿರದಲ್ಲಿ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವವನ್ನು ಇಂದು ರಾತ್ರಿ 7.30 ಘಂಟೆಗೆ ನಡೆಸಲಾಗುವುದು.
ಕೊಕ್ಕನೂರಿನಲ್ಲಿ ಇಂದು ಹನುಮಪ್ಪನ ಕಾರ್ತಿಕೋತ್ಸವ
ಮಲೇಬೆನ್ನೂರು ಸಮೀಪದ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ದೇವರ ಕಡೇ ಕಾರ್ತಿಕ ಮಹೋತ್ಸವ ಮತ್ತು ಸ್ವಾಮಿಯ ಆಷ್ಟೋತ್ಸವವು ಇಂದು ಸಂಜೆ 6 ರಿಂದ ಜರುಗಲಿದೆ.
ನಗರದ ಐರಣಿ ಶಾಖಾ ಮಠದಲ್ಲಿ ಇಂದು ಕಾರ್ತಿಕೋತ್ಸವ
ನಗರದ ಶಿವಾಜಿನಗರದ ಬಳಿಯ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಬಳಿ ಇರುವ ರಾಣೇಬೆನ್ನೂರು ತಾಲ್ಲೂಕಿನ ಐರಣಿ ಹೊಳೆ ಮಠದ ಶಾಖಾ ಮಠದಲ್ಲಿ ಇಂದು ಸಂಜೆ 7.30ಕ್ಕೆ ಕಡೇ ಕಾರ್ತಿಕೋತ್ಸವ ನಡೆಯಲಿದೆ
ನಾಳೆ ಶ್ರೀ ಜಿಹ್ವೇಶ್ವರ ಸ್ವಾಮಿ ಕಾರ್ತಿಕ
ಶ್ರೀ ಜಿವ್ಹೇಶ್ವರ ಧ್ಯಾನ ಮಂದಿರದಲ್ಲಿ ಸ್ವಕುಳಸಾಳಿ ಸಮಾಜದ ಮಹಿಳಾ ಮಂಡಳಿ ವತಿಯಿಂದ ನಾಡಿದ್ದು ದಿನಾಂಕ 23ರ ಸೋಮವಾರ ಸಂಜೆ 5.30ಕ್ಕೆ ಶ್ರೀ ಜಿಹ್ವೇಶ್ವರ ಸ್ವಾಮಿಯ ಕಾರ್ತಿಕ ದೀಪೋತ್ಸವ ನಡೆಯಲಿದೆ.
ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದಿಂದ ದಿನದರ್ಶಿಕೆ
ನಗರದ ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದಿಂದ ಪ್ರಥಮ ಬಾರಿಗೆ 2025 ನೇ ಸಾಲಿನ ದಿನದರ್ಶಿಕೆಯನ್ನು ಬ್ರಹ್ಮ ಚೈತನ್ಯ ಮಂದಿರದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಪಿ.ಎಸ್ . ಸುರೇಶ್ ಬಾಬುಬಿಡುಗಡೆಗೊಳಿಸಿದರು.
ಇಂದು ನಂದಿಗಾವಿ ಶ್ರೀನಿವಾಸ ಹುಟ್ಟುಹಬ್ಬ
ಹರಿಹರ : ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಹರಿಹರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಅವರ ಹುಟ್ಟುಹಬ್ಬ ಹಾಗೂ ಅಭಿನಂದನಾ ಸಮಾರಂಭವನ್ನು ನಾಳೆ ದಿನಾಂಕ 21 ರ ಶನಿವಾರ ಇಲ್ಲಿನ ರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ ಆಯೋಜಿಸಲಾಗಿದೆ
ತರಳಬಾಳು ಬಡಾವಣೆ ಉದ್ಯಾನವನಕ್ಕೆ ಛೇರ್ಮನ್ ಸವಿತಾ ಗಣೇಶ್ ಭೇಟಿ
ಮಹಾನಗರ ಪಾಲಿಕೆಯ ವಾರ್ಡ್ ನಂ. 39 ರಲ್ಲಿ ತರಳಬಾಳು ಬಡಾವಣೆ 11ನೇ ಕ್ರಾಸ್ನಲ್ಲಿರುವ ಸಾರ್ವಜನಿಕ ಉದ್ಯಾನವನಕ್ಕೆ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಹುಲ್ಮನಿ ಗಣೇಶ್ ಭೇಟಿ ನೀಡಿದ್ದರು.
23ಕ್ಕೆ ಕಾಯಿಪೇಟೆ ಬಸವೇಶ್ವರ ಕಾರ್ತಿಕ 24ರಂದು ಶ್ರೀ ಮಹೇಶ್ವರ ಸ್ವಾಮಿ ಜಾತ್ರೆ
ನಗರದ ಕಾಯಿಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಂಘದ ವತಿಯಿಂದ ನಾಡಿದ್ದು ದಿನಾಂಕ 23ರ ಸೋಮವಾರ 9 ಗಂಟೆಗೆ ಕಡೆ ಕಾರ್ತಿಕೋತ್ಸವ ನಡೆಯಲಿದೆ.
ನಗರದಲ್ಲಿ ನಾಡಿದ್ದು ಸಿದ್ಧ ಕಣ್ಣಿನ ಹನಿ
ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದ ಆವರಣದಲ್ಲಿ ದಿನಾಂಕ 23.12.2024ರ ಸೋಮವಾರ ಬೆಳಿಗ್ಗೆ 10 ರಿಂದ 12 ರವರೆಗೆ ಹಾಗೂ ಹರಿಹರ ಸಮೀಪದ ಕೋಡಿ ಯಾಲ-ಹೊಸ ಪೇಟೆಯ ಪುಣ್ಯಕೋಟಿ ಮಠದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ.
ಶ್ಯಾಬನೂರಿನಲ್ಲಿ ಇಂದು ಕಾರ್ತಿಕೋತ್ಸವ, ಸಾಮೂಹಿಕ ವಿವಾಹ
ದಾವಣಗೆರೆ - ಶ್ಯಾಬನೂರಿನ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕ ದೀಪೋತ್ಸವವು ಇಂದು ಸಂಜೆ ನಡೆಯಲಿದೆ.
ನಗರದಲ್ಲಿ ಇಂದು ಭೀಮಾಂಜನೆಯ ಸ್ವಾಮಿ ಕಾರ್ತಿಕೋತ್ಸವ
ಹಳೆ ತಾಲ್ಲೂಕು ಕಚೇರಿ ಹತ್ತಿರ ಇರುವ ಶ್ರೀ ಭೀಮಾಂಜನೆಯ ಸ್ವಾಮಿ ಕಾರ್ತಿಕ ಉತ್ಸವವನ್ನು ಇಂದು ಸಂಜೆ ಆಚರಿಸಲಾಗುವುದು ಎಂದು ಪ್ರಧಾನ ಅರ್ಚಕ ಎಸ್.ವಿ. ಅಣ್ಣಪ್ಪ ತಿಳಿಸಿದ್ದಾರೆ.
ಸಿದ್ದವೀರಪ್ಪ ಬಡಾವಣೆಯಲ್ಲಿ ಬನ್ನಿ ಮಹಾಕಾಳಿ ಕಾರ್ತಿಕೋತ್ಸವ
ದಾವಣಗೆರೆ/ ಸಿದ್ದವೀರಪ್ಪ ಬಡಾವಣೆಯ 14ನೇ ಕ್ರಾಸ್ ಪಾರ್ಕ್ನಲ್ಲಿ ಇಂದು ಸಂಜೆ 6.30 ರಿಂದ ಬನ್ನಿ ಮಹಾಕಾಳಿ ಕಾರ್ತಿಕೋತ್ಸವ ನಡೆಯಲಿದೆ.
ನಂದಗೋಕುಲ ಶಾಲೆಯಲ್ಲಿ ತಾಲ್ಲೂಕು ಕಸಾಪ ದತ್ತಿ ಉಪನ್ಯಾಸ
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವು ಶ್ರೀ ಮಾತಾ ವಿದ್ಯಾಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ನಂದಗೋಕುಲ ಆಂಗ್ಲ ಮಾಧ್ಯಮ ನರ್ಸರಿ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆಯಿತು.
ಕೆ.ಎನ್.ಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ
ಮಲೇಬೆನ್ನೂರು : ಕಡರನಾಯ್ಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ ದೊರೆತಿದ್ದು, ವಿದ್ಯಾರ್ಥಿಗಳು ಹರ್ಷಗೊಂಡಿದ್ದಾರೆ.
ಕುಂಕುವ ಗ್ರಾ.ಪಂ. ಅಧ್ಯಕ್ಷರಾಗಿ ಕವಿತ ಜಗದೀಶ್, ಉಪಾಧ್ಯಕ್ಷರಾಗಿ ಚಂದ್ರಮ್ಮ ಬಸವಣ್ಯಪ್ಪ
ನ್ಯಾಮತಿ : ತಾಲ್ಲೂಕಿನ ಕುಂಕುವ ಗ್ರಾಮ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕವಿತ ಜಗದೀಶ್, ಉಪಾಧ್ಯಕ್ಷರಾಗಿ ಚಂದ್ರಮ್ಮ ಬಸವಣ್ಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್
ಮಲೇಬೆನ್ನೂರು : ಜಿ. ಬೇವಿನಹಳ್ಳಿ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ನೀಡುವ ಕಾರ್ಯಕ್ರಮವನ್ನು ಯೋಜನಾಧಿಕಾರಿ ವಸಂತ್ ದೇವಾಡಿಗ ಉದ್ಘಾಟಿಸಿದರು.
ಭಾರತ್ ಕಾಲೋನಿಯ ಚೌಡೇಶ್ವರಿ ದೇವಸ್ಥಾನದಲ್ಲಿ ಇಂದು ಕಾರ್ತಿಕೋತ್ಸವ
ಮಡ್ರಳ್ಳಿ ಶ್ರೀ ಚೌಡೇಶ್ವರಿ ದೇವಿ (ಹುತ್ತದ ಚೌಡೇಶ್ವರಿ) ದೇವಸ್ಥಾನದಲ್ಲಿ ಶ್ರೀ ದೇವಿಗೆ ಮತ್ತು ಶ್ರೀ ಸುಬ್ರಮಣ್ಯ ಸ್ವಾಮಿಗೆ ಇಂದು ಬೆಳಿಗ್ಗೆ 6.30ಕ್ಕೆ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಲಿದೆ. ಸಂಜೆ 6.30ಕ್ಕೆ ಕಡೆ ಕಾರ್ತಿಕೋತ್ಸವ ಜರುಗಲಿದೆ ಎಂದು ರೈಸ್ ಮಿಲ್ಲಿನ ಮಾಲೀಕ ಮುನಿಯಪ್ಪ ತಿಳಿಸಿದ್ದಾರೆ.
ಇಂದು ತುಳಜಾ ಭವಾನಿ ದೇವಸ್ಥಾನದಲ್ಲಿ ದೀಪೋತ್ಸವ
ಕೆಟಿಜೆ ನಗರ 3ನೇ ಮುಖ್ಯ ರಸ್ತೆ, 11 ಮತ್ತು 12ನೇ ಕ್ರಾಸ್ನ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ಇಂದು ಸಂಜೆ 7.15ಕ್ಕೆ ಶ್ರೀ ತುಳಜಾ ಭವಾನಿ ದೇವಿಯ ಕಾರ್ತಿಕ ದೀಪೋತ್ಸವ ನಡೆಯಲಿದೆ. ಭಕ್ತರು ಭಾಗವಹಿಸಲು ಕೋರಿದೆ.
ಶ್ಯಾಬನೂರಿನಲ್ಲಿ ನಾಳೆ ಕಾರ್ತಿಕ ದೀಪೋತ್ಸವ ಸಾಮೂಹಿಕ ವಿವಾಹ
ಶ್ಯಾಬನೂರಿನ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕ ದೀಪೋತ್ಸವವು ನಾಡಿದ್ದು ದಿನಾಂಕ 21ರ ಶನಿವಾರ ಸಂಜೆ ನಡೆಯಲಿದೆ.
ಬೇತೂರು ರಸ್ತೆಯ ಬನಶಂಕರಿ ದೇವಸ್ಥಾನದಲ್ಲಿ ಇಂದು ಕಾರ್ತಿಕ
ನಗರದ ಹಳೆ ಬೇತೂರು ರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ ಮತ್ತು ಹೂವಿನ ಅಲಂಕಾರ ಸಂಜೆ 8.30 ಗಂಟೆಗೆ ದೀಪಾರಾಧನೆ, ಕಾರ್ತಿಕ ಮಹೋತ್ಸವ ನಡೆಯಲಿದೆ.
ಸತ್ಯಾನ್ವೇಷಣೆಯ ಮಾರ್ಗದರ್ಶಿ ಗಾಂಧೀಜಿ
ಸತ್ಯಾನ್ವೇಷಣೆಗಾಗಿ ಬದುಕನ್ನೇ ಮುಡುಪಾಗಿಟ್ಟ ಮಹಾತ್ಮ ಗಾಂಧೀಜಿಯವರ ಕುರಿತು ಹೆಚ್ಚು ತಿಳಿಯಬೇಕಾಗಿರುವ ಸಂದರ್ಭದಲ್ಲಿ ಅನ್ವೇಷಣೆ ಸಾಹಿತ್ಯ ಪತ್ರಿಕೆಯು ಮಹಾತ್ಮ ಗಾಂಧೀಜಿ ಕುರಿತಾಗಿ ವಿಶೇಷ ಸಂಚಿಕೆಯನ್ನು ಹೊರತರುತ್ತಿರುವುದು ಸಂತೋಷದ ಸಂಗತಿ
ಸ್ವದೇಶಿ ಮೇಳದಲ್ಲಿ ವಿಜೃಂಭಿಸಿದ ನೃತ್ಯ ವಿದ್ಯಾನಿಲಯ ಜಾನಪದ ತಂಡ
ನಗರದಲ್ಲಿ ನಡೆದ ಸ್ವದೇಶಿ ಮೇಳದಲ್ಲಿ `ನೃತ್ಯ ವಿದ್ಯಾನಿಲಯದ' ನಾಟ್ಯಗುರು ವಿದುಷಿ ರಕ್ಷಾ ರಾಜಶೇಖರ್ ಅವರ ನಿರ್ದೇಶನದಲ್ಲಿ ಜೋಗತಿ ಪ್ರಸ್ತುತಿ ಮೆಚ್ಚುಗೆಗೆ ಪಾತ್ರವಾಯಿತು.
ಪ್ರತಿಯೊಬ್ಬರೂ ಕರ್ನಾಟಕದ ಗತವೈಭವದ ಇತಿಹಾಸವನ್ನು ಅರಿಯುವ ಅವಶ್ಯಕತೆ ಇದೆ
ನಗರದ ಜೈನ್ ಪದವಿ ಕಾಲೇಜು ಮತ್ತು ಜೈನ್ ಕಾಲೇಜ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಸಭಾಂಗಣದಲ್ಲಿ ಅದ್ಧೂರಿಯಾಗಿ 69 ನೇ ಕನ್ನಡ ರಾಜ್ಯೋತ್ಸವವನ್ನು `ತಿರುಳ್ಗನ್ನಡದ ಬೆಳ್ನುಡಿಯ ಹಬ್ಬ' ಎಂಬ ಹೆಸರಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
16ನೇ ವರ್ಷದ ಶಬರಿಮಲೆ ಪಾದಯಾತ್ರೆ
ನಗರದ ಲೇಬರ್ ಕಾಲೋನಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇರುಮುಡಿ ಕಟ್ಟಿಕೊಂಡು ಗುರುಸ್ವಾಮಿ ಮುರುಗನ್ ಸ್ವಾಮಿ ನೇತೃತ್ವದ ತಂಡವು ನಗರದಿಂದ ಶಬರಿಮಲೆಗೆ ಒಂದು ಸಾವಿರ ಕಿ.ಮೀ. ಪಾದಯಾತ್ರೆ ಮೂಲಕ ತೆರಳಿತು.
ಕ್ರೀಡಾಂಗಣದಲ್ಲಿ ಗರಡಿಮನೆ
ರಾಣೇಬೆನ್ನೂರು : ಇಂದು ಬೆಳಿಗ್ಗೆ ನಗರದ ನಗರಸಭೆ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟ ಶಾಸಕ ಪ್ರಕಾಶ ಕೋಳಿವಾಡ ಅವರು ಶಾಸಕರ ಅನುದಾನದ 60 ಹಣದಲ್ಲಿ ವಾಕಿಂಗ್ ಟ್ರ್ಯಾಕ್ ಹಾಗೂ ಗರಡಿ ಮನೆ ಸೇರಿದಂತೆ, ಕ್ರೀಡಾಂಗಣವನ್ನು ಅಭಿವೃದ್ಧಿ ಮಾಡಲಾಗುವುದು
ಹಿಂದೂ ರುದ್ರಭೂಮಿಗೆ ಹೆಚ್ಚುವರಿ ಭೂಮಿ ಮಂಜೂರು ಮಾಡಲು ಆಗ್ರಹ
ಹರಿಹರ : ನಗರದ ಹಿಂದೂ ರುದ್ರಭೂಮಿಗೆ ಹೆಚ್ಚುವರಿಯಾಗಿ ರುದ್ರಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ನಗರದ ಹಿಂದೂ ಮುಕ್ತಿಧಾಮ ಅಭಿವೃದ್ಧಿ ಸಮಿತಿಯ ವತಿಯಿಂದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ, ದಾವಣಗೆರೆ ಉಪ-ವಿಭಾಗಾಧಿಕಾರಿ ಸಂತೋಷ ಕುಮಾರ್ ರವರಿಗೆ ಮನವಿ ಸಲ್ಲಿಸಿದರು.
ಚಳ್ಳಕೆರೆ : ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಮನವಿ
ಚಳ್ಳಕೆರೆ : ಇಲ್ಲಿನ ಕ್ರೀಡಾಭಿಮಾನಿಗಳ ಬಹುದಿನಗಳ ಬೇಡಿಕೆಯಾದ ಕ್ರೀಡಾಂಗಣ ನಿರ್ಮಾಣಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನ ದಲ್ಲಿ ಶಾಸಕ ರಘುಮೂರ್ತಿ ಪ್ರಸ್ತಾಪಿಸಿದ್ದಾರೆ.
ಕಾಂತರಾಜ ವರದಿ ಜಾರಿ ಹೋರಾಟದ ಜೊತೆ ಮೇಲ್ವರ್ಗ ಮೀಸಲಾತಿ ವಿರುದ್ಧ ಹೋರಾಟ ಅಗತ್ಯ
ಕಾಂತರಾಜ ವರದಿ ಜಾರಿ ಹೋರಾಟದ ಜೊತೆಯಲ್ಲೇ ಮೇಲ್ವರ್ಗದ ಜನರಿಗೆ ನೀಡಿರುವ ಮೀಸಲಾತಿ ವಿರುದ್ಧವೂ ಹೋರಾಟ ಮಾಡುವ ಅಗತ್ಯವಿದೆ ಎಂದು ಚಿಂತಕ ಶಿವಸುಂದರ್ ಹೇಳಿದರು.
ಮಲೇಬೆನ್ನೂರು ಪ್ರಾ.ಕೃ. ಪ. ಸಹಕಾರ ಸಂಘದ ನೂತನ ಅಧ್ಯಕ್ಷ ಗಂಗಾಧರ್
ಮಲೇಬೆನ್ನೂರು : ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಪಿ. ಗಂಗಾಧರ್ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಲ್ಲ ಜನಾಂಗದ ಬಡವರಿಗೆ ಸಿಗಲಿದೆ `ಅರಮನೆ’
ರಾಣೇಬೆನ್ನೂರು : ಯಾವುದೇ ಜಾತಿ,ಮತ, ಪಂಥ ಎನ್ನದೇ ಸರ್ವ ಜನಾಂಗದ ಬಡವರಿಗೆ ಅನುಕೂಲವಾಗುವ ದೃಷ್ಠಿಯಿಂದ ನಗರದ ಹುಣಿಸಿಕಟ್ಟಿ ರಸ್ತೆಯಲ್ಲಿ ಜೆಸಿ ಅರಮನೆ ನಿರ್ಮಿಸಲಾಗಿದ್ದು, ಅದನ್ನು ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಆಚರಣೆಯೊಂದಿಗೆ ಲೋಕಾರ್ಪಣೆ ಮಾಡಲಾಗುವುದು
ತರಳಬಾಳು ಹುಣ್ಣಿಮೆ : ಇಂದು ಸಭೆ
ಚಿತ್ರದುರ್ಗ ಜಿಲ್ಲೆಯ ಪ್ರಮುಖ ಹೋಬಳಿ ಕೇಂದ್ರವಾದ ಭರಮಸಾಗರ ದಲ್ಲಿ ಫೆಬ್ರವರಿ ತಿಂಗಳಲ್ಲಿ 9 ದಿನಗಳ ಕಾಲ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವದ ಸಿದ್ಧತೆ ಕೈಗೊಳ್ಳಲು ಇಂದು ಮಧ್ಯಾಹ್ನ 3 ಗಂಟೆಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ನಗರದಲ್ಲಿ ನಾಳೆ ತುಳಜಾ ಭವಾನಿ ದೀಪೋತ್ಸವ
ಕೆ.ಟಿ.ಜೆ. ನಗರ 3ನೇ ಮುಖ್ಯ ರಸ್ತೆ, 11 ಮತ್ತು 12ನೇ ಕ್ರಾಸ್ನ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 20ರ ಶುಕ್ರವಾರ ಸಂಜೆ 7.15ಕ್ಕೆ ಶ್ರೀ ತುಳಜಾ ಭವಾನಿ ದೇವಿಯ ಕಾರ್ತಿಕ ದೀಪೋತ್ಸವ ನಡೆಯಲಿದೆ.