ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಎಸ್ಸಿ, ಎಸ್ಪಿ ಯೋಜನೆಯಡಿ ಹಾಗೂ ರಾಜ್ಯ ಶೈಕ್ಷಣಿಕ ಪ್ರವಾಸ ಕರ್ನಾಟಕ ದರ್ಶನ ಕಾರ್ಯಕ್ರಮದಡಿ ಎಸ್ಟಿ, ಎಸ್ಟಿ ವಿದ್ಯಾರ್ಥಿಗಳಿಗೆ ರಾಜ್ಯದ ವಿವಿಧ ಸ್ಥಳಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಗುವುದು.
ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ಇಂದು ಸೂರ್ಯ ನಮಸ್ಕಾರ
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ಇಂದು ಬೆಳಿಗ್ಗೆ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಲಿದೆ.
ಚಿತ್ರದುರ್ಗ ಬೃಹನ್ಮಠದಲ್ಲಿ ಇಂದು
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶ್ರೀ ಮುರಿಗಿ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಆವ ರಣದಲ್ಲಿ ಇಂದು ಬೆಳಿಗ್ಗೆ 8.30 ಕ್ಕೆ ಶ್ರೀ ಶಿವಯೋಗಿ ಸಿದ್ದರಾಮರ ಜಯಂತಿ ಆಚರಿಸಲಾಗುವುದು.
ಮಲೇಬೆನ್ನೂರಿನಲ್ಲಿ ಇಂದು ಆರೋಗ್ಯ ಮೇಳ
ಶ್ರೀ ಭದ್ರಕಾಳಿ ಸಮೇತ ವೀರ ಭದ್ರೇಶ್ವರ ದೇವಸ್ಥಾನದಲ್ಲಿ ಇಂದು ಸಂಕ್ರಾಂತಿಯ ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಕಾನೂನು ಪದವೀಧರರಿಗೆ ತರಬೇತಿ
ಹಿಂದುಳಿದ ವರ್ಗಗಳಿಗೆ ಸೇರಿದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ ಭತ್ಯೆ ನೀಡಲು ಅರ್ಹ ಕಾನೂನು ಪದವೀಧರ ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಹಿಳೆಯರಿಗೆ ಉಚಿತ ಕೈ ಕಸೂತಿ ತರಬೇತಿ
ಭಾರತ ವಿಕಾಸ ಪರಿಷತ್ ಗೌತಮ ಶಾಖೆ ದಾವಣಗೆರೆ ವತಿಯಿಂದ ಇಲ್ಲಿನ ವಿದ್ಯಾನಗರದಲ್ಲಿ ಮಹಿಳೆಯರಿಗೆ ಉಚಿತ ಕೈ ಕಸೂತಿ ತರಬೇತಿ ಅರ್ಜಿ ಆಹ್ವಾನಿಸಲಾಗಿದೆ.
ಎಕ್ಕೆಗೊಂದಿ : ಇಂದು ಆರೋಗ್ಯ ಶಿಬಿರ, ಸಿದ್ಧರಾಮೇಶ್ವರ ಉತ್ಸವ
ಶ್ರೀ ನಂದಿ ಸೌಹಾರ್ದ ಸಹಕಾರಿ ಸಂಘ (ಮಲೇಬೆನ್ನೂರು) ಮತ್ತು ಎಸ್.ಎಸ್.ಕೇರ್ ಟ್ರಸ್ಟ್ (ದಾವಣಗೆರೆ) ಇವರುಗಳ ಆಶ್ರಯದಲ್ಲಿ ಇಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸಂಶೋಧನೆ ಹೆಸರಲ್ಲಿ ಮಗುವಿಗೆ ಹಾನಿ: ಬೇಸತ್ತ ತಂದೆ ದಯಾಮರಣಕ್ಕೆ ಅರ್ಜಿ
ಪತ್ನಿ 8 ತಿಂಗಳ ಗರ್ಭಿಣಿಯಾಗಿದ್ದಾಗ ಆಸ್ಪತ್ರೆಗೆ ತೆರಳಿದ್ದಾಗ ಯಾವುದೇ ಮಾಹಿತಿ ನೀಡದೆ ಸಂಶೋಧನೆ ನಡೆಸುವ ನೆಪದಲ್ಲಿ ಮಗಳಿಗೆ ತೊಂದರೆ ಮಾಡಿದ್ದಾರೆ. ಇದರಿಂದಾಗಿ 1 ವರ್ಷದ ನನ್ನ ಹೆಣ್ಣು ಮಗು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದೆ
ನಗರದಲ್ಲಿ ಇಂದು ಚಿಂತನಾ ಗೋಷ್ಠಿ
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಲ್ಲಿ ಇಂದು ಸಂಜೆ 7 ರಿಂದ 9ರವ ರೆಗೆ ಆನ್ಲೈನ್ನಲ್ಲಿ ಶರಣ ಚಿಂತನ ಗೋಷ್ಠಿ ಕಾರ್ಯಕ್ರಮ ನಡೆಯಲಿದೆ
ವೃತ್ತಿ ರಂಗನಾಟಕ ರಚನಾ ಶಿಬಿರಕ್ಕೆ ಅರ್ಜಿ ಆಹ್ವಾನ
ಕರ್ನಾಟಕ ನಾಟಕ ಅಕಾಡೆಮಿ ಹಾಗೂ ವೃತ್ತಿ ರಂಗಭೂಮಿ ರಂಗಾಯಣದ ಸಹಯೋಗದಲ್ಲಿ 5 ದಿನಗಳ ಕಾಲ ನಡೆಯುವ ರಾಜ್ಯಮಟ್ಟದ `ವೃತ್ತಿ ರಂಗ ನಾಟಕ ರಚನಾ ಶಿಬಿರ'ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ನಾಳೆಯಿಂದ ಎಸ್ಎಸ್ವೈ ತರಬೇತಿ ಶಿಬಿರ
ನಗರದ ರಾಂ ಅಂಡ್ ಕೋ ವೃತ್ತದಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 15ರಿಂದ ಸಿದ್ಧ ಸಮಾಧಿ ಯೋಗ (ಎಸ್ಎಸ್ವೈ) ತರಬೇತಿ ಶಿಬಿರ ನಡೆಯಲಿದೆ
ಆಕಳ ಕೆಚ್ಚಲು ಕೊಯ್ದ ದುಷ್ಕೃತ್ಯ ಖಂಡಿಸಿ ಇಂದು ನಗರದಲ್ಲಿ ಬಿಜೆಪಿ ಪ್ರತಿಭಟನೆ
`ಹಸುಗಳ' ಕೆಚ್ಚಲನ್ನು ದುಷ್ಕರ್ಮಿಗಳು ಕೊಯ್ದು ಪೈಶಾಚಿಕ ಕೃತ್ಯವನ್ನು ಖಂಡಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಗೋವುಗಳೊಂದಿಗೆ ಬೃಹತ್ ಪ್ರತಿಭಟನೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ಡಾ. ಎಂ.ಸಿ. ಮೋದಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ
ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಕ್ಕೆ ಹರಾಜು
ದೇವನಗರಿ ಕ್ರೀಡಾ ಸಮಿತಿ, ಎಸ್.ಎಸ್. ಮಲ್ಲಿಕಾರ್ಜುನ್, ಮಣಿ ಸರ್ಕಾರ್ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 14, 15 ಹಾಗೂ 16 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡನೇ ಬಾರಿ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಕಬಡ್ಡಿ ಪ್ರೀಮಿಯರ್ ಲೀಗ್-2025 ಪಂದ್ಯಾವಳಿಯನ್ನು ಆಯೋಜಿಸಲಾಗಿದೆ
ಜಿಲ್ಲಾಡಳಿತದಿಂದ ನಗರದಲ್ಲಿ ಇಂದು ಶ್ರೀ ಶಿವಯೋಗಿ ಸಿದ್ದರಾಮ ಜಯಂತಿ
ದಾವಣಗೆರೆ ಜಿಲ್ಲಾಡಳಿತ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಶ್ರೀ ಶಿವಯೋಗಿ ಸಿದ್ದರಾಮ ಜಯಂತಿಯನ್ನು ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ತಿಳಿಸಿದ್ದಾರೆ.
ಮಾಕನೂರು ಮಲ್ಲೇಶಪ್ಪ ಶಿಕ್ಷಣ ಕಾಲೇಜಿಗೆ ಶೇ. 100 ಫಲಿತಾಂಶ
ದಾವಣಗೆರೆ ವಿಶ್ವವಿದ್ಯಾನಿಲಯದ 2022-24 ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ನಡೆದ ಬಿ.ಇಡಿ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ. 100 ರಷ್ಟು ಫಲಿತಾಂಶ ಬಂದಿದೆ.
ಚಿತ್ರದುರ್ಗದಲ್ಲಿ ಬ್ರಹ್ಮೋತ್ಸವ
ಮೆದೇಹಳ್ಳಿ ರಸ್ತೆಯಲ್ಲಿ ರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 25ನೇ ವರ್ಷದ 60 ದಿನಗಳ ಬ್ರಹ್ಮೋತ್ಸವವು ಇಂದು ನಡೆಯಲಿದೆ. ಮಾಲಾಧಾರಿ ಗಳಿಗೆ ದೇವಸ್ಥಾನದಲ್ಲಿ ಪ್ರತಿನಿತ್ಯ ಉಚಿತ ಅನ್ನದಾನ ಜರುಗಲಿದೆ.
ನಗರದಲ್ಲಿಂದು ವಿನಾಯಕ ಸ್ಕೂಲ್ ವಾರ್ಷಿಕೋತ್ಸವ
ಕೊಂಡಜ್ಜಿ ರಸ್ತೆಯ ವಿನಾಯಕ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ ಕಾರ್ಯಕ್ರಮವು ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಶಾಲಾ ಕಾರ್ಯದರ್ಶಿ ಡಾ. ವೀರೇಶ್ ಬಿ. ಬಿರಾದಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂಬಿಗರ ಚೌಡಯ್ಯ ಜಯಂತಿ ನಗರದಲ್ಲಿ ಇಂದು ಪೂರ್ವಭಾವಿ ಸಭೆ
ದಾವಣಗೆರೆ ಜಿಲ್ಲಾ ಗಂಗಾಮತಸ್ಥರ (ಬೆಸ್ತರ) ಸಂಘದಿಂದ ಇದೇ ದಿನಾಂಕ 21 ರಂದು ನಡೆಯಲಿರುವ ನಿಜ ಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದ ಪೂರ್ವಭಾವಿ ಸಭೆ ಇಂದು ಸಂಜೆ 4 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲಿದೆ
ಮಾಯಕೊಂಡದಲ್ಲಿ ಇಂದು ನಮ್ಮೂರ ಕನ್ನಡ ಹಬ್ಬ
ಕನ್ನಡ ಯುವಶಕ್ತಿ ಕೇಂದ್ರದ ವತಿಯಿಂದ ನಮ್ಮೂರ ಕನ್ನಡ ಕಾರ್ಯಕ್ರಮವು ಆಂಜನೇಯ ಸ್ವಾಮಿ ದೇವಸ್ಥಾನ ವೃತ್ತದಲ್ಲಿ ಇಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಜಿ. ಜಗದೀಶ್, ಎಸ್.ಆರ್. ಶರಣಪ್ಪ ತಿಳಿಸಿದ್ದಾರೆ.
ಭರಮಸಾಗರದಲ್ಲಿ ಇಂದು ಉಚಿತ ನೇತ್ರ ತಪಾಸಣಾ ಶಿಬಿರ
ಎಸ್.ಎಂ.ಎಲ್ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಸಮುದಾಯ ಆರೋಗ್ಯ ಕೇಂದ್ರ (ಸರ್ಕಾರಿ ಆಸ್ಪತ್ರೆ) ಭರಮಸಾಗರ ಇಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ.
ನಗರದಲ್ಲಿ ಇಂದು ಗಣೇಶ್ ಪೇಟೆಯ ವಿನಾಯಕ ಸ್ಕೂಲ್ ವಾರ್ಷಿಕೋತ್ಸವ
ಗಣೇಶ್ ಪೇಟೆಯ ವಿನಾಯಕ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ ಕಾರ್ಯಕ್ರಮವು ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಇಂದು ಸಂಜೆ 4 ಗಂಟೆಗೆ ನಡೆಯಲಿದೆ.
`ಸರಸ್ವತಿ ಸಾಧಕ ಸಿರಿ’ ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಆಶ್ರಯದಲ್ಲಿ 70ನೇ ವರ್ಷದ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ `ಸರಸ್ವತಿ ಸಾಧಕ ಸಿರಿ' ರಾಷ್ಟ್ರ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಒತ್ತಾಯದ ಮೇರೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಲಾಗಿದೆ.
ನಗರಕ್ಕೆ ಇಂದು ಸಾತಿ ಸುಂದರೇಶ್
ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಅವರು ಇಂದು ನಗರಕ್ಕೆ ಆಗಮಿಸಲಿದ್ದಾರೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ.
ಮಂಟರಘಟ್ಟದಲ್ಲಿ ಇಂದು ಗುಗ್ಗಳೋತ್ಸವ
ಚನ್ನಗಿರಿ ತಾಲ್ಲೂಕು ಮಂಟರಘಟ್ಟ ಗ್ರಾಮದಲ್ಲಿ ಜುಂಜೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ಇಂದು ಬೆಳಿಗ್ಗೆ ಜುಂಜೇಶ್ವರ ಸ್ವಾಮಿಯ ಮಹಾಮಂಗಳಾರತಿ ಹಾಗೂ ಗುಗ್ಗಳೋತ್ಸವ ಜರುಗಲಿದೆ.
ನಮ್ಮ ಜೊತೆ ಬರುವುದು ನಾವು ಕಲಿತ ವಿದ್ಯೆ ಮಾತ್ರ
ಹರಿಹರ : ನಾವು ಗಳಿಸಿದ ಆಸ್ತಿ, ಅಧಿಕಾರ, ಸಂಪತ್ತು, ಸಂಪಾದನೆ ಒಂದು ದಿನ ನಮ್ಮಿಂದ ದೂರವಾಗಬಹುದು, ಆದರೆ ನಾವು ಕಲಿತಂತಹ ವಿದ್ಯೆ ಮಾತ್ರ ನಮ್ಮ ಜೊತೆಗೆ ಬರು ವಂತಹದ್ದು ಎಂದು ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯ ಪಟ್ಟರು.
ಪಿಎಲ್ಡಿ ಬ್ಯಾಂಕ್ ಮತ್ತೆ ಕಾಂಗ್ರೆಸ್ ವಶಕ್ಕೆ
ರಾಣೇಬೆನ್ನೂರು : ನಿನ್ನೆ ನಡೆದ ರಾಣೇಬೆನ್ನೂರು ಪಿಎಲ್ಡಿ ಬ್ಯಾಂಕಿನ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷ ಮತ್ತೆ ಆಡಳಿತ ವಹಿಸಿಕೊಂಡಿದೆ.
ಕೊಂಡಜ್ಜಿ ಅರಣ್ಯದಲ್ಲಿ ಹಿಮಾಲಯನ್ ಅಕಾಡೆಮಿ ಚಾರಣ
ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದಿನಾಚರಣೆ ಅಂಗವಾಗಿ ಕೊಂಡಜ್ಜಿ ಅರಣ್ಯದಲ್ಲಿ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ವತಿಯಿಂದ ಚಾರಣ ವನ್ನು ಹಮ್ಮಿಕೊಳ್ಳಲಾಗಿತ್ತು.
ಎಸ್ಸೆಸ್ ಭೇಟಿ ಮಾಡಿದ ಕಿರುವಾಡಿ ಸೋಮಣ್ಣ
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಇಲ್ಲಿನ ಅವರ ನಿವಾಸದಲ್ಲಿ ದಾವಣಗೆರೆ ಆಯಿಲ್ ಮಿಲ್ ಅಸೋಸಿಯೇ ಷನ್ ಗೌರವ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾ ಸಭಾ ಜಿಲ್ಲಾ ಉಪಾಧ್ಯಕ್ಷ, ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ನಿರ್ದೇಶಕ ಕಿರುವಾಡಿ ಸೋಮಣ್ಣ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಎಸ್ಸೆಸ್ ಭೇಟಿ ಮಾಡಿದ ಮೇಯರ್
ಎಸ್ಸೆಸ್ ಅವರನ್ನು ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರ ಕೆ. ಚಮನ್ ಸಾಬ್ ಅವರು ಭೇಟಿ ಮಾಡಿ ಆರೋಗ್ಯ, ಯೋಗಕ್ಷೇಮ ವಿಚಾರಿಸಿದರು.
ಎಸ್ಸೆಸ್ ಭೇಟಿ ಮಾಡಿದ ಮಾಜಿ ಮೇಯರ್ ಅಶ್ವಿನಿ
ಎಸ್ಸೆಸ್ ಅವರನ್ನು ಪಾಲಿಕೆ ಮಾಜಿ ಮೇಯರ್ ಅಶ್ವಿನಿ, ಪ್ರಶಾಂತ್ ಹಾಗೂ ವಿನಾಯಕ ರೈಸ್ ಮಿಲ್ ಮಾಲೀಕ ವಿ. ಸಿದ್ದೇಶ್, ಹಿರೇತೊಗಲೇರಿ ಕುಮಾರ ಸ್ವಾಮಿ, ಕರೇಶಿವಪ್ಳ ಮಂಜುನಾಥ್, ದಾದು ಅವರುಗಳು ಭೇಟಿ ಮಾಡಿ, ಆರೋಗ್ಯ, ಯೋಗಕ್ಷೇಮ ವಿಚಾರಿಸಿದರು.
ಎಸ್ಸೆಸ್ ಭೇಟಿ ಮಾಡಿದ ನಂದಿಗಾವಿ ಶ್ರೀನಿವಾಸ್
ಎಸ್ಸೆಸ್ ಅವರನ್ನು ಹರಿಹರ ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಆಶೀರ್ವಾದ ಪಡೆದರು.
ಮಕರ ಸಂಕ್ರಾಂತಿ – ಪರಿಸರ ಸ್ನೇಹಿ ಸಂತೆ
ಡಾ. ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರದಂದು `ಮಕರ ಸಂಕ್ರಾಂತಿ-ಪರಿಸರ ಸ್ನೇಹಿ ಸಂತೆಯನ್ನು ಸಂಭ್ರಮದಿಂದ ಆಚರಿಸಿದರು. ವಿದ್ಯಾರ್ಥಿಗಳು ಹಾಡು, ನೃತ್ಯವನ್ನು ಪ್ರದರ್ಶನ ಮಾಡಿದರು.
ವಸತಿ ರಹಿತರ ಕಡೆಗಣಿಸಿದ ಸರ್ಕಾರ
ದೇಶದಲ್ಲಿ ಅನೇಕ ವರ್ಷಗಳಿಂದ ನಿವೇಶನ ಮತ್ತು ವಸತಿ ರಹಿತರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಭರವಸೆ ನೀಡಿ ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳು ಕಾಳಜಿ ತೋರದೆ ಕಡೆಗಣಿಸುತ್ತಾ ಬಂದಿವೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಆರೋಪಿಸಿದರು.
ಇಂದು ತಪೋಕ್ಷೇತ್ರ ಕಣ್ವಕುಪ್ಪೆಯಲ್ಲಿ ರಥೋತ್ಸವ
ಜಗಳೂರು ತಾಲ್ಲೂಕು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ಮಕರ ಸಂಕ್ರಾತಿಯಂದು ಮಹಾ ರಥೋತ್ಸವವು ಇಂದು ಜರುಗಲಿದೆ. ಮಕರ ಸಂಕ್ರಾತಿಯ ರಥೋತ್ಸವದ ಸಾನ್ನಿಧ್ಯವನ್ನು ತಪೋಕ್ಷೇತ್ರ ಗವಿಮಠದ ಪಟ್ಟಾಧ್ಯಕ್ಷರಾದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ವಹಿಸುವರು.
ನಾಳೆ ಕೊಂಡಜ್ಜಿಯಲ್ಲಿ ಅಯ್ಯಪ್ಪ ಸ್ವಾಮಿ ಪಡಿಪೂಜೆ, ಅನ್ನ ಸಂತರ್ಪಣೆ
ಕೊಂಡಜ್ಜಿಯ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ 17ನೇ ವರ್ಷದ ಶಬರಿಮಲೈ ಯಾತ್ರೆ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಪಡಿ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 15ರ ಬುಧವಾರ ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿಂದು ಅಯ್ಯಪ್ಪ ಸ್ವಾಮಿ ಪಡಿ ಪೂಜೆ
ಶ್ರೀ ಎಸ್. ನಿಜಲಿಂಗಪ್ಪ ಬಡಾವಣೆಯ ಬಕ್ಕೇಶ್ವರ ಶಾಲೆ ಹತ್ತಿರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಶ್ರೀ ಸ್ವಾಮಿಗೆ ಇಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಸಂಜೆ 7 ಗಂಟೆಗೆ ಪಡಿಪೂಜೆ ಮತ್ತು ಪ್ರಸಾದ ವಿನಿಯೋಗವಿರುತ್ತದೆ.
ಹೊನ್ನಾಳಿ ಶಿವ ಸಹಕಾರ ಸಂಘದ ಅಧ್ಯಕ್ಷರಾಗಿ ಕ್ಯಾಸಿನಕೆರೆ ಶಂಕರಗೌಡ
ಹೊನ್ನಾಳಿ ಶಿವ ಸಹಕಾರ ಸಂಘದ ಅಧ್ಯಕ್ಷರಾಗಿ ಕ್ಯಾಸಿನಕೆರೆ ಎ.ಸಿ. ಶಂಕರಗೌಡ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ನವೀನಕುಮಾರ್ ತಿಳಿಸಿದ್ದಾರೆ.
`ಹೇ ನೀನ್ಯಾರು.. ನೀನ್ಯಾಕೆ ಸ್ವಾಮೀಜಿ ಪಕ್ಕ ಕೂತಿದೀಯಾ.. ಈ ಕಡೆ ಬಾ’
`ಹೇ.. ನೀನ್ಯಾರು.. ನೀನ್ಯಾಕೆ ಸ್ವಾಮೀಜಿ ಪಕ್ಕ ಕೂತಿದೀಯಾ.. ಈ ಕಡೆ ಬಾ' ಎಂದು ವಿಜಯ ನಗರ ಜಿಲ್ಲೆಯ ಜಿಲ್ಲಾಧಿ ಕಾರಿ ದಿವಾಕರ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಗದರಿದ ಘಟನೆ ಭಾನುವಾರ ನಡೆದಿದೆ.
ನೀಲಮ್ಮನ ತೋಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿ ಪಡಿಪೂಜೆ
ನೀಲಮ್ಮನ ತೋಟದ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಇಂದು ಸಂಜೆ 7 ಗಂಟೆಗೆ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಿ.ಸಿ. ರಸ್ತೆಗಳ ದುರಸ್ತಿ ಕಾಮಗಾರಿಯ ಪರಿಶೀಲನೆ
ಸಿ.ಸಿ. ರಸ್ತೆಗಳಲ್ಲಿ ದುರಸ್ತಿ ಪಡಿಸದೇ ಬಿಟ್ಟಿರುವ ರೋಡ್ ಕಟ್ಟಿಂಗ್ಸ್ಗಳನ್ನು, ಅಪ್ರೋಚ್ ರಸ್ತೆಗಳಿಗೆ ಫೇವರ್ ಅಳವಡಿಸಿ, ದುರಸ್ತಿ ಪಡಿಸುವ ಕಾಮಗಾರಿಗಳನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನಿ ಭೇಟಿ ನೀಡಿ ಪರಿಶೀಲಿಸಿದರು.
ಉಪ ಕಾರಾಗೃಹದಲ್ಲಿ ಸಂಗೀತ ಕಾರ್ಯಕ್ರಮ
ಹರಪನಹಳ್ಳಿ : ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಭಾನುವಾರ ಇಲ್ಲಿನ ಉಪ ಕಾರಾಗೃಹದಲ್ಲಿ `ವಚನ ಗಾಯನ, ಜಾನಪದ ಸಂಗೀತ' ಕಾರ್ಯಕ್ರಮ ನಡೆಯಿತು.
ಹರಿಹರದಲ್ಲಿ ಭೂ ಸುರಕ್ಷಾ ಕಾರ್ಯಾಲಯ ಕಾರ್ಯಾರಂಭ
ಹರಿಹರ : ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸರ್ವೇ ಮತ್ತು ನೋಂದಣಿ ಇಲಾಖೆಯ ಎಲ್ಲಾ ದಾಖಲೆಗಳ ಡಿಜಿಟಲೀಕರಣ ಭೂ ಸುರಕ್ಷಾ ಯೋಜನೆಯ ಕಾರ್ಯಾಲಯ ವನ್ನು ಶಾಸಕ ಬಿ.ಪಿ. ಹರೀಶ್ ಉದ್ಘಾಟನೆ ಮಾಡಿದರು.
ಹುಣ್ಣಿಮೆ : ಉಚ್ಚಂಗಿದುರ್ಗಕ್ಕೆ ಹರಿದು ಬಂದ ಜನಸಾಗರ
ಹರಪನಹಳ್ಳಿ : ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಚ್ಚಂಗಿದುರ್ಗದ ಶ್ರೀ ಉಚ್ಚೆಂಗೆಮ್ಮ ದೇವಿಯ ದರ್ಶನಕ್ಕೆ ಜನಸಾಗರವೇ ಹರಿದುಬಂದಿತು.
ಪಂಚಮಸಾಲಿ ಮಠದಲ್ಲಿಂದು ಸರಳ ಹರ ಜಾತ್ರೆ
ಹರಿಹರ : ಪಂಚಮಸಾಲಿ ಮಠದಲ್ಲಿ ನಾಳೆ ಸರಳವಾಗಿ ಹರ ಜಾತ್ರಾ ಮಹೋತ್ಸವ ಆಚರಿಸಲಾಗುವುದು ಹಾಗಾಗಿ ಆಹ್ವಾನ ಪತ್ರಿಕೆಯನ್ನು ಮಾಡಿಸಿರುವುದಿಲ್ಲ ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ತಿಳಿಸಿದರು.
ನಿಂಗಪ್ಪ ಟಿ. ಅವರಿಗೆ ಪಿಹೆಚ್ಡಿ ಪದವಿ
ಬಳ್ಳಾರಿಯ ವಿಜಯ ನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ನಿಕಾಯದ, ವಾಣಿಜ್ಯಶಾಸ್ತ್ರ ವಿಭಾಗದ ಸಂಶೋಧಕರಾದ ನಿಂಗಪ್ಪ ಟಿ. ಅವರಿಗೆ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿ.ಹೆಚ್.ಡಿ. ಪದವಿ ಪ್ರದಾನ ಮಾಡಿದೆ.
ಶ್ರೀ ಶರಣ ಬಸವೇಶ್ವರರ 40 ಮೂರ್ತಿಗಳ ಪ್ರತಿಷ್ಠಾಪನೆ
ರಾಣೇಬೆನ್ನೂರು ತಾಲ್ಲೂಕು ಅರೇಮಲ್ಲಾಪುರ ಗ್ರಾಮದ ಶ್ರೀ ಶರಣ ಬಸವೇಶ್ವರ ಮಹಾಸಂಸ್ಥಾನದಲ್ಲಿ ಇದೇ ಏಪ್ರಿಲ್ 28ರ ಸೋಮವಾರ ಶ್ರೀ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಶರಣ ಬಸವೇಶ್ವರ 40 ಮೂರ್ತಿಗಳ ಪುನರ್ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಎಸ್ಸೆಸ್ ಭೇಟಿ ಮಾಡಿದ ಲೋಕಿಕೆರೆ ನಾಗರಾಜ್
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಇಲ್ಲಿನ ಅವರ ನಿವಾಸದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಅವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಬಾಲ್ಯದಲ್ಲಿ ಕಲಿತ ಸಂಸ್ಕಾರ ಜೀವನ ಪೂರ್ತಿ ಜೊತೆಗಿರುತ್ತದೆ
ಎಲೆಬೇತೂರು : ಬಾಲ್ಯದಲ್ಲಿ ಕಲಿತ ಸಂಸ್ಕಾರಗಳು ಜೀವನ ಪೂರ್ತಿ ಜೊತೆಯಾಗಿ ಬರುತ್ತವೆ. ಒಳ್ಳೆಯ ಸಂಸ್ಕಾರಗಳನ್ನು ಕಲಿಯಲು ಶಾಲಾ ಅವಧಿ ಸುವರ್ಣ ಕಾಲ ಎಂದು ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯ ಸ್ಥಳಿಯ ಸಲಹಾ ಸಮಿತಿಯ ಅಧ್ಯಕ್ಷ ಎಂ.ಬಸವರಾಜಪ್ಪ ಹೇಳಿದರು.
ಕ್ರೀಡೆಗಳಲ್ಲಿ ಭಾಗವಹಿಸಲು ಪೋಷಕರ ಪ್ರೋತ್ಸಾಹಬೇಕು
ಮಕ್ಕಳನ್ನು ಅಂಕ ಗಳನ್ನು ಪಡೆಯಲು ಪ್ರೋತ್ಸಾಹಿಸುವುದರ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಗಳಲ್ಲಿ ಭಾಗವಹಿಸುವಂತೆ ಶಿಕ್ಷಕರು - ಪೋಷಕರು ಪ್ರೋತ್ಸಾಹಿಸಬೇಕು ಎಂದು ಪೊಲೀಸ್ ಇನ್ಸ್ಪೆಕ್ಟರ್ ವೈ.ಎಸ್. ಶಿಲ್ಪ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಬಡವರು, ದೀನ ದಲಿತರು, ಹಿಂದುಳಿದವರ ಧ್ವನಿಯಾಗಿ ಕೆಲಸ ಮಾಡಲಿದೆ : ಶಾಸಕ ಪ್ರಕಾಶ ಕೋಳಿವಾಡ
ರಾಣೇಬೆನ್ನೂರು : ಕಾಂಗ್ರೆಸ್ ಸರ್ಕಾರ ಬಡವರು, ದೀನ ದಲಿತರು, ಹಿಂದುಳಿದವರ ಧ್ವನಿಯಾಗಿ ಕೆಲಸ ಮಾಡಲಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಮಲೇಬೆನ್ನೂರು ವೀರಭದ್ರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಸಂಕ್ರಾಂತಿ
ಮಲೇಬೆನ್ನೂರು : ಪಟ್ಟಣದ ಹೊರವಲಯದಲ್ಲಿರುವ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 14 ರ ಮಂಗಳವಾರ ಮಕರ ಸಂಕ್ರಾಂತಿಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಈ ವರ್ಷವೂ ಹಮ್ಮಿಕೊಳ್ಳಲಾಗಿದೆ
ಎಸ್ಸೆಸ್ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ಇಎನ್ಟಿ ವಿಭಾಗದಿಂದ ಜನ ಜಾಗೃತಿ
ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ ಇ.ಎನ್.ಟಿ ವಿಭಾಗದಲ್ಲಿ ನವಜಾತ ಶಿಶುಗಳಲ್ಲಿ ಶ್ರವಣ ಪರೀಕ್ಷೆ ಮಾಡುವ ಹಾಗೂ ಶ್ರವಣದೋಷಕ್ಕೆ ಪರಿಹಾರಗಳ ಬಗ್ಗೆ ಉಪನ್ಯಾಸ ನೀಡುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ಹಿಂಜರಿಕೆ ಮನೋಭಾವ ತೊರೆಯಲಿ
ವಿದ್ಯಾರ್ಥಿಗಳು ಹಿಂಜರಿಕೆ ಮನೋಭಾವ ತೊರೆದು ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಹೊಸ-ಹೊಸ ವಿಚಾರಗಳನ್ನು ತಿಳಿಯಲು ಸಾಧ್ಯ ಎಂದು ದಾವಣಗೆರೆ ವಿವಿಯ ಪ್ರೊ.ಎಸ್. ಸುಚಿತ್ರಾ ಹೇಳಿದರು.
ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ಸಹಾಯಕಾರಿ
ಸಾಹಸ ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ತುಂಬಾ ಸಹಾಯಕಾರಿಯಾಗುತ್ತದೆ. ಕೇವಲ ಪುಸ್ತಕಕ್ಕೆ ಅಂಟಿಕೊಳ್ಳಬೇಡಿ. ವಿದ್ಯೆ ಎಷ್ಟು ಮುಖ್ಯವೋ ಕ್ರೀಡೆಯೋ ಅಷ್ಟೇ ಮುಖ್ಯ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.
ಹೊಂಡದ ಹೂಳೆತ್ತುವ ಕಾಮಗಾರಿ ಪರಿಶೀಲನೆ : ಕೆ.ಎಸ್. ಬಸವಂತಪ್ಪ
ಹೂಳು ತುಂಬಿದ್ದ ಹೊಂಡವನ್ನು ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೆಂಗಾಪುರ ಗ್ರಾಮಸ್ಥರು ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಕನ್ನಡವನ್ನು ನಿರಂತರವಾಗಿ ಬಳಸುವ ಮೂಲಕ ತಾಯಿ ನುಡಿ ಸಂರಕ್ಷಿಸೋಣ
ಕನ್ನಡ ಭಾಷೆಗೆ ಸಾವಿಲ್ಲ. ನಾವು ಕನ್ನಡ ನುಡಿಯನ್ನು ನಿರಂತರವಾಗಿ ಬಳಸುವ ಮೂಲಕ ತಾಯಿ ನುಡಿ ಯನ್ನು ಸಂರಕ್ಷಿಸೋಣ ಎಂದು ಡಾ. ಹೆಚ್.ಎಸ್.ಮಂಜುನಾಥ ಕುರ್ಕಿ ಹೇಳಿದರು.
ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದ ಸಾವಿತ್ರಿಬಾಯಿ ಪುಲೆ
ಸ್ತ್ರೀ ಸಮಾನತೆ, ಸ್ತ್ರೀ ಹಕ್ಕುಗಳ ರಕ್ಷಣೆ ಸಂವಿಧಾನದ ಆಶಯ ವಾಗಿದ್ದು, ಇದಕ್ಕೆ ಮಾತೆ ಸಾವಿತ್ರಿ ಬಾಯಿ ಪುಲೆ ಅವರು ಅಡಿಪಾಯ ಹಾಕಿದರು ಎಂದು ಆರ್.ಎಲ್. ಕಾಲೇ ಜಿನ ಪ್ರಾಧ್ಯಾಪಕ ವಿದ್ಯಾಧರ ವೇದವರ್ಮ ತಿಳಿಸಿದರು.