ಬಡತನ ರೇಖೆಗಿಂತ ಕಡಿಮೆ ಇರುವ ಹಾಗೂ ಮಧ್ಯಮ ವರ್ಗದವರೇ ಹೆಚ್ಚಾಗಿರುವ ದಾವಣಗೆರೆಯ ಭಾಷಾ ನಗರದಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಹೆರಿಗೆ ಆಸ್ಪತ್ರೆ ನಿರ್ಮಾಣಗೊಂಡಿದ್ದು, ಶೀಘ್ರವೇ ಉದ್ಘಾಟನೆಗೊಳ್ಳಲು ಸಿದ್ಧತೆ ನಡೆಯುತ್ತಿದೆ.
ಕಂಡ ಕನಸನ್ನು ನನಸಾಗಿಸುವ ಛಲ ಬೆಳೆಸಿಕೊಳ್ಳಿ: ಬೀಳಗಿ
ಪ್ರತಿ ವಿದ್ಯಾರ್ಥಿ ಮಹತ್ವಾಕಾಂಕ್ಷೆಯ ಕನಸು ಕಾಣಬೇಕು, ಆ ಕನಸನ್ನು ನನಸು ಮಾಡುವ ಛಲ ಬೆಳೆಸಿಕೊಳ್ಳ ಬೇಕು. ಗುರಿ ತಲುಪುವವರೆಗೂ ಯಾರೂ ವಿರಮಿ ಸಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಚಿತ್ರದುರ್ಗ : ಜಾನುವಾರು ಜಾತ್ರೆ
ಚಿತ್ರದುರ್ಗ ನಗರಕ್ಕೆ ಸಮೀಪದ ಶಿಬಾರ ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಹಾಗು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಜರುಗಿದ ಜಾನುವಾರು ಜಾತ್ರೆ ಕಾರ್ಯಕ್ರಮದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಭಾಗವಹಿಸಿದ್ದರು.
ಹರಿಹರ ತಾಲ್ಲೂಕಿನ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆ
ಮಲೇಬೆನ್ನೂರು : ಹರಿಹರ ತಾಲ್ಲೂಕಿನ 17 ಕೆರೆಗಳಿಗೆ ತುಂಗಭದ್ರಾ ನದಿ ಯಿಂದ ನೀರು ತುಂಬಿಸುವ ಯೋಜನೆಯ ಬಗ್ಗೆ ಶಾಸಕ ಎಸ್. ರಾಮಪ್ಪ ಅವರು ಮಂಗಳವಾರ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.
ದೇಶದ ಶಕ್ತಿಗೆ ಆರೋಗ್ಯವೇ ಮುಖ್ಯ
ಮಲೇಬೆನ್ನೂರು : ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 26 ಶುಕ್ರವಾರ ತಡರಾತ್ರಿ ಜರುಗಲಿದೆ.
ಇಂದು ರಾಣೇಬೆನ್ನೂರು ಬಂದ್ ಇಲ್ಲ
ಕೆಎಸ್ಆರ್ಟಿಸಿ ಬಸ್ ನಿರ್ವಾಹಕನಿಗೆ ಮಸಿ ಬಳೆದು, ಹಲ್ಲೆ ಮಾಡಿರುವುದನ್ನು ಖಂಡಿಸಿ ವಾಟಾಳ್ ನಾಗರಾಜ್ ಅವರು ಇಂದು ಕರೆದಿರುವ ಕರ್ನಾಟಕ ಬಂದ್ಗೆ ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಅರ್ಪಿಸಲಾಗುವುದು ಎಂದು ರೈತ ಸಂಘ ಹಾಗೂ ಕನ್ನಡ ಪರ ಸಂಘಟನೆಗಳ ನಿರ್ಣಯವನ್ನು ರವೀಂದ್ರಗೌಡ ಪಾಟೀಲ ತಿಳಿಸಿದ್ದಾರೆ.
ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ನೂತನ ಪದಾಧಿಕಾರಿಗಳ ಪದಗ್ರಹಣ ಇಂದು
ದಾವಣಗೆರೆ ಜಿಲ್ಲಾ ಪೋಟೋಗ್ರಾಫರ್, ವಿಡಿಯೋ ಗ್ರಾಫರ್ ಅಸೋಸಿಯೇಷನ್ ವತಿಯಿಂದ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇಂದು ಬೆಳಿಗ್ಗೆ 10.30ಕ್ಕೆ ಗುರುಭವನದಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಜಾಧವ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಜ್ಞಾನೇಶ್ವರಿ ಮಹಿಳಾ ಮಂಡಳಿಯಿಂದ ನಗರದಲ್ಲಿ ಇಂದು ಮಹಿಳಾ ದಿನಾಚರಣೆ
ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘ, ಧಾರವಾಡ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಹಾಗೂ ಶ್ರೀ ಜ್ಞಾನೇಶ್ವರಿ ಮಹಿಳಾ ಮಂಡಳಿ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 22ರ ಶನಿವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅನ್ನ ಪ್ರಸಾದ : ವಿಧಾನ ಸಭೆೆಯಲ್ಲಿ ಪ್ರಸ್ತಾಪ
ನಗರದ ವಿಲಾಸ್ ಕಪೂರ್ ಅವರು ಬೆಂಗಳೂರಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈಚೆಗೆ ಪ್ರಸಾದ ಹಾಳಾಗುವುದನ್ನು ತಡೆಗಟ್ಟಲು ಮಾಡಿದಂತಹ ಕಾರ್ಯದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಬಂದ್ಗೆ ನೈತಿಕ ಬೆಂಬಲ
ಬೆಳಗಾವಿಯಲ್ಲಿ ಪದೇ ಪದೇ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ ಕನ್ನಡಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ಗೆ ಜಿಲ್ಲಾ ಶಾಶ್ವತ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಸಂಘ ನೈತಿಕ ಬೆಂಬಲ ನೀಡಿದೆ ಎಂದು ಸಂಘದ ಅಧ್ಯಕ್ಷ ತ್ಯಾವಣಿಗಿ ವೀರಭದ್ರಸ್ವಾಮಿ, ಉಪಾಧ್ಯಕ್ಷ ಮಲ್ಲೇಶಪ್ಪ ಶ್ಯಾಗಲೆ, ಕಾರ್ಯದರ್ಶಿ ಹೆಚ್.ಜಿ. ಪ್ರಕಾಶ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಪ್ರತಿಭಟನೆ
ಬೆಳಗಾವಿಯಲ್ಲಿ ಇತ್ತೀಚಿಗೆ ಬಸ್ ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸುಳ್ಳು ಕೇಸುಗಳನ್ನು ದಾಖಲಿಸಿರುವ ಕ್ರಮವನ್ನು ಖಂಡಿಸಿ, ಇಂದು ಬೆಳಿಗ್ಗೆ 11 ಕ್ಕೆ ಅಂಬೇಡ್ಕರ್ ವೃತ್ತ, ಜಯದೇವ ವೃತ್ತದ ಮೂಲಕ ಎಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು.
ಯೋಗ ಪ್ರಶಸ್ತಿಗೆ ಅರ್ಜಿ
ಪ್ರಧಾನ ಮಂತ್ರಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಅತ್ಯುನ್ನತ ಯೋಗ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಈ ಸಂಬಂಧ ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆ ನೀಡಿರುವಂತಹ ಕ್ರೀಡಾ ಪಟುಗಳು ಅಥವಾ ಯೋಗ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅ
ನಗರದಲ್ಲಿ ಇಂದು ಅಟಲ್ ಜಿ ವಿರಾಸತ್ ಜಿಲ್ಲಾ ಸಮ್ಮೇಳನ
ಜಿಲ್ಲಾ ಬಿಜೆಪಿ ವತಿಯಿಂದ ದಾವಣಗೆರೆ - ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ 11ಕ್ಕೆ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಅಂಗವಾಗಿ `ಅಟಲ್ ಜಿ ವಿರಾಸತ್ ಜಿಲ್ಲಾ ಸಮ್ಮೇಳನ' ನಡೆಯಲಿದೆ.
ಹರಿಹರದಲ್ಲಿ ಇಂದು – ನಾಳೆ `ಹೋರಾಟದ ಹಾಡುಗಳ ಕಮ್ಮಟ’
ಮಾನವ ಬಂಧುತ್ವ ವೇದಿಕೆ, ದಲಿತ ಕಲಾ ಮಂಡಳಿ ಹಾಗೂ ಭಾರತೀಯ ಜನ ಕಲಾ ಸಮಿತಿ ಸಹಯೋಗದಲ್ಲಿ ನಾಳೆ ದಿನಾಂಕ 22 ಹಾಗೂ 23ರಂದು ಹರಿಹರದ ಪ್ರೊ.ಬಿ. ಕೃಷ್ಣಪ್ಪ ಭವನದಲ್ಲಿ `ಹೋರಾಟದ ಹಾಡುಗಳ ಕಮ್ಮಟ' ಹಮ್ಮಿಕೊಂಡಿರುವುದಾಗಿ ಮಾನವ ಬಂಧುತ್ವ ವೇದಿಕೆಯ ಡಾ.ಎ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಇಂದು ಹೃದಯ ತಪಾಸಣಾ ಶಿಬಿರ
ಎಸ್.ಎಸ್. ನಾರಾಯಣ ಹೆಲ್ತ್ ಸೆಂಟರ್ ಹಾಗೂ ಅಭಿ ಕಾಟನ್ ಸಹಯೋಗದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಜನ್ಮ ದಿನದ ಅಂಗವಾಗಿ ನಾಳೆ ದಿನಾಂಕ 22ರ ಶನಿವಾರ ಉಚಿತ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ದೂಡಾ ಸದಸ್ಯೆ ವಾಣಿ ಬಕ್ಕೇಶ್ ತಿಳಿಸಿದರು.
25 ರಂದು ಉದ್ಯೋಗ ಮೇಳ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ಇದೇ ದಿನಾಂಕ 25 ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ-51ರಲ್ಲಿನ ಉದ್ಯೋಗ ವಿನಿಮಯ ಕೇಂದ್ರದಲ್ಲಿ `ಉದ್ಯೋಗ ಮೇಳ' ನಡೆಯಲಿದೆ.
ಹರಿಹರ ಜಾತ್ರೆಯಲ್ಲಿ ದುರಂತ
ಹರಿಹರ : ಊರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಬೆಲ್ಲದ ಬಂಡಿ ಮೆರವಣಿಗೆಯಲ್ಲಿ ಹೋರಿಯೊಂದು ಬೆದರಿ ಚಿನ್ನಾಟವಾಡಿ ದ್ದರಿಂದ ರಾಮತೀರ್ಥ ಗ್ರಾಮದ ವೀರಾಚಾರಿ (72) ಎಂಬ ವೃದ್ಧ ಮೃತಪಟ್ಟಿದ್ದಾರೆ.
ವೃದ್ಧನ ಶವ ಪತ್ತೆ
ನಗರದ ರೈಲ್ವೆ ಹಳಿಯ ಹತ್ತಿರ ಸುಮಾರು 70 ವರ್ಷದ ಅಪರಿಚಿತ ವೃದ್ಧ ಸಾವಿಗೀಡಾಗಿದ್ದಾನೆ. ಸಾಧಾರಣ ಮೈಕಟ್ಟು ಹೊಂದಿದ್ದು, ಕೋಲು ಮುಖ, ಹಣೆಯ ಮೇಲೆ ಕೂದಲು ಇರುವುದಿಲ್ಲ.
ಹಗರಿಗಜಾಪುರದಲ್ಲಿ ಇಂದು ಪ್ರವಚನ
ಲಿಂಗೈಕ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಇಂದಿನಿಂದ ಇದೇ ದಿನಾಂಕ 30ರವರೆಗೆ ಹಗರಿ ಗಜಾಪುರದ ವರಗಳ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ಜರುಗಲಿದೆ.
ಹನಗವಾಡಿಯಲ್ಲಿ ಇಂದು ನಾಟಕ ಪ್ರದರ್ಶನ, ಸಾಣೇಹಳ್ಳಿ ಶ್ರೀ ಭಾಗಿ
ಮಾನವ ಬಂಧುತ್ವ ವೇದಿಕೆ ಹಾಗೂ ಶ್ರೀ ಜಯಲಕ್ಷ್ಮಿ ನಾಟಕ ಸಂಘ (ದಾವಣಗೆರೆ) ಇವರ ಸಹಯೋಗದಲ್ಲಿ ಯಲ್ಲೇಶ್ ಯಾಳಗಿ ವಿರಚಿತ `ಮಗ ಹೋದರೂ ಮಾಂಗಲ್ಯ ಬೇಕು' (ಹೆತ್ತವಳ ಹಾಲು ವಿಷವಾಯ್ತು) ಎಂಬ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಪರೀಕ್ಷೆ : ವಿದ್ಯಾರ್ಥಿಗಳಿಗೆ ಹೂವು ನೀಡಿ ಶುಭ ಹಾರೈಕೆ
ಮಲೇಬೆನ್ನೂರು : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ 7 ಪ್ರೌಢಶಾಲೆಗಳ ಎಲ್ಲಾ 264 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
25 ರಂದು ಉದ್ಯೋಗ ಮೇಳ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ಇದೇ ದಿನಾಂಕ 25 ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ-51ರಲ್ಲಿನ ಉದ್ಯೋಗ ವಿನಿಮಯ ಕೇಂದ್ರದಲ್ಲಿ `ಉದ್ಯೋಗ ಮೇಳ' ನಡೆಯಲಿದೆ.
ಬಾ ಗುರು ಚಾನಲ್ ಕಡೆ …
ಬೇಸಿಗೆ ತಾಪ ತಣಿಸಿಕೊಳ್ಳಲು ಯುವಕರು ಚಾನಲ್ ಕಡೆ ತೆರಳುತ್ತಿದ್ದಾರೆ. ಶಿರಮಗೊಂಡನಹಳ್ಳಿ ಬಳಿಯ ಚಾನಲ್ನಲ್ಲಿ ಹುಡುಗರು ಧುಮುಕುತ್ತಿರುವ ಚಿತ್ರವಿದು.
ನಗರದಲ್ಲಿ ಇಂದು ತಾ.ಕಸಾಪ ಉಪನ್ಯಾಸ
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವು ಎಸ್ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 11.30 ಗಂಟೆಗೆ ನಡೆಯಲಿದೆ.
ಪ್ರಕರಣ ದಾಖಲಾಗಿ 48 ಗಂಟೆಗಳಲ್ಲಿ ಕಳ್ಳನ ಬಂಧಿಸಿದ ಪೊಲೀಸರು
ಹೊನ್ನಾಳಿ : ಹೊನ್ನಾಳಿಯಲ್ಲಿ ಮನೆಯೊಂದನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪ್ರಕರಣ ದಾಖಲಾಗಿ 48 ಗಂಟೆಗಳಲ್ಲಿ ಬಂಧಿಸಿದ ಪೊಲೀಸರು, 5.50 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ಮಲೇಬೆನ್ನೂರಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ 260 ವಿದ್ಯಾರ್ಥಿಗಳು
ಮಲೇಬೆನ್ನೂರು : ನಾಳೆ ಶುಕ್ರವಾರದಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡವನ್ನು ಪರೀಕ್ಷಾ ಕೇಂದ್ರವನ್ನಾಗಿ ಮಾಡಿದ್ದು, 7 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ನಗರದಲ್ಲಿ ನಾಡಿದ್ದು ಸಿದ್ಧ ಕಣ್ಣಿನ ಹನಿ
ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದ ಆವರಣದಲ್ಲಿ ಇದೇ ದಿನಾಂಕ 23 ರ ಭಾನುವಾರ ಬೆಳಿಗ್ಗೆ 10 ರಿಂದ 12 ರವರೆಗೆ ಹಾಗೂ ಹರಿಹರ ಸಮೀಪದ ಕೋಡಿಯಾಲ - ಹೊಸಪೇಟೆಯ ಪುಣ್ಯಕೋಟಿ ಮಠದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ.
ಅತ್ಯಾಚಾರ ಪ್ರಕರಣ : ಅಪರಾಧಿಗೆ 20 ವರ್ಷ ಕಾರಾಗೃಹ ಶಿಕ್ಷೆ, 35 ಸಾವಿರ ರೂ ದಂಡ
ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ಪುಸಲಾಯಿಸಿ ಬಲಾತ್ಕಾರ ಮಾಡಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ-1 ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 35 ಸಾವಿರ ರೂ ದಂಡ ವಿಧಿಸಿದೆ.
ನಗರದಲ್ಲಿ ಇಂದು ಮಜ್ಜಿಗೆ ವಿತರಣೆ
ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ರಾಜನಹಳ್ಳಿ ಕಲಾ ಭೀಮಾನಂದ್ ಮತ್ತು ಮಕ್ಕಳು, ದಾವಣಗೆರೆ ಇವರು ಇಂದಿನ ದಾನಿಗಳಗಿದ್ದಾರೆ.
ನಗರದಲ್ಲಿ ಇಂದು ಶಾಲಾ – ಕಾಲೇಜು ಅಂಗಳದಲ್ಲಿ ತಾ.ಕಸಾಪ ಉಪನ್ಯಾಸ
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ-ಕಾಲೇಜು ಅಂಗಳ ದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪ ನ್ಯಾಸ ಕಾರ್ಯಕ್ರಮವು ಎಂ.ಎಂ. ಶಿಕ್ಷಣ ಮಹಾವಿ ದ್ಯಾಲಯದಲ್ಲಿ ಇಂದು ಮಧ್ಯಾಹ್ನ 2.30 ಗಂಟೆಗೆ ನಡೆಯಲಿದೆ.
ಬಿಎಸ್ಎನ್ಎಲ್ ಪ್ರಾಂಚೈಸಿಗಳು ರಜಾ ದಿನ ಕಾರ್ಯನಿರ್ವಹಣೆ
ದಾವಣಗೆರೆ ಮತ್ತು ಚಿತ್ರದುರ್ಗ ಪ್ರದೇಶಗಳ ಎಲ್ಲಾ ಬಿಎಸ್ಎನ್ಎಲ್ ಗ್ರಾಹಕರು ಪ್ರಸಕ್ತ ಹಣಕಾಸು ವರ್ಷ ಮುಕ್ತಾಯ ವನ್ನು ಪರಿಗಣಿಸಿ, ಎಲ್ಲಾ ಬಿಎಸ್ಎನ್ಎಲ್ ಸಿಎಸ್ಸಿ ಗಳನ್ನು ಇದೇ ದಿನಾಂಕ 23 ಮತ್ತು ದಿನಾಂಕ 30 ರಂದು ಸಾಮಾನ್ಯ ಕೆಲಸದ ಸಮಯದೊಂದಿಗೆ ತೆರೆದಿಡಲು ನಿರ್ಧರಿಸಲಾಗಿದೆ.
ಸಾಲಿಗ್ರಾಮ ಗಣೇಶ್ ಶೆಣೈಗೆ ಕನ್ನಡ ರತ್ನ
ರಾಯಭಾಗ ತಾಲ್ಲೂಕಿನ ಬ್ಯಾಕೂಡಿನ ಲಕ್ಕಮ್ಮದೇವಿ ಕಲಾ ಪೋಷಕರ ಸಂಘ ಕೊಡಮಾಡುವ `ಕನ್ನಡ ರತ್ನ' ಪ್ರಶಸ್ತಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಭಾಜನರಾಗಿದ್ದಾರೆ.
ಇಂದು ಅಕ್ಕಮಹಾದೇವಿ ಜಯಂತಿ
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ಶಿವ ಶರಣೆ ಅಕ್ಕಮಹಾದೇವಿ ಜಯಂತಿ ಆಚರಿಸಲಾಗುವುದು.

ಚೇತನಾ ಶಿವಕುಮಾರ್ಗೆ ಪ್ರಶಸ್ತಿ
ಇದೇ ದಿನಾಂಕ 24 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಸರ್ವೇಜನಾ ಆರ್ಟ್ ಅಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಿದ್ದಾರೆ.

ಯಲವಟ್ಟಿ : ನಾಳೆ ಆಂಜನೇಯ ಸ್ವಾಮಿ ರಥೋತ್ಸವ
ಮಲೇಬೆನ್ನೂರು : ಯಲವಟ್ಟಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋ ತ್ಸವವು ಜಿಗಳಿ ರಂಗನಾಥಸ್ವಾಮಿ ಜೊತೆಗೂಡಿ ನಾಡಿದ್ದು ದಿನಾಂಕ 23ರ ಭಾನುವಾರ ಬೆಳಿಗ್ಗೆ 7 ಗಂಟೆಗೆ ಜರುಗಲಿದೆ.

ಎಂ. ಬಸವರಾಜ್ ಸೇರಿದಂತೆ ಐವರಿಗೆ ಕನ್ನಡ ಫಿಲಂ ಚೇಂಬರ್ ಸಂಸ್ಥೆಯ ಪ್ರಶಸ್ತಿ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ರಾಜ್ಯಮಟ್ಟದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಾಡಿದ್ದು ದಿನಾಂಕ 23ರ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.

ಶಾಂತ ಯಾವಗಲ್ಗೆ `ಅಕ್ಕ’ ಪ್ರಶಸ್ತಿ
ನಗರದ ಅಕ್ಕಮಹಾದೇವಿ ಸಮಾಜದ ವತಿಯಿಂದ ಪ್ರತಿ ವರ್ಷ ಕೊಡ ಮಾಡುವ `ಅಕ್ಕ' ಪ್ರಶಸ್ತಿಗೆ ಈ ಬಾರಿ ಶ್ರೀಮತಿ ಶಾಂತಾ ಎಸ್. ಯಾವಗಲ್ ಆಯ್ಕೆಯಾಗಿದ್ದಾರೆ.

ಹರಿಹರ ತಾ. ಶಿಕ್ಷಕರ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ
ಮಲೇಬೆನ್ನೂರು : ಹರಿಹರ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿಆರ್ಪಿ ಕೆ.ಜಿ. ನಂಜುಂಡಪ್ಪ ಮತ್ತು ಉಪಾಧ್ಯಕ್ಷರಾಗಿ ಮಲೇಬೆನ್ನೂರಿನ ಲಯನ್ಸ್ ಶಾಲೆಯ ದೈಹಿಕ ಶಿಕ್ಷಕ ಎ.ಸಿ.ಹನುಮಗೌಡ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುಬ್ಬಿಗಳ ಸಂತತಿಯನ್ನು ಕಾಪಾಡಬೇಕು
ಅಳಿದು ಹೋಗುತ್ತಿರುವ ಗುಬ್ಬಿಗಳ ಸಂತತಿ ಕಾಪಾಡುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಸಾಮಾಜಿಕ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾ ನಾಯಕ್ ತಿಳಿಸಿದರು.

ರಂಜಾನ್ – ಯುಗಾದಿ : ಹೊನ್ನಾಳಿಯಲ್ಲಿ ಪಥ ಸಂಚಲನ
ಹೊನ್ನಾಳಿ : ರಂಜಾನ್ ಹಾಗೂ ಯುಗಾದಿ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಹಾಗೂ ಆರ್ಎ ಎಫ್ ಅವರಿಂದ ಶುಕ್ರವಾರ ಪಥಸಂಚಲನ ನಡೆಯಿತು.

ನಾಳೆ ಬಾಪೂಜಿ ವಿದ್ಯಾ ಸಂಸ್ಥೆಯಿಂದ ಮಿಸ್- ಪಾರ್ವತಿ ಕಾರ್ಯಕ್ರಮ
ಸ್ಥಳೀಯ ಬಾಪೂಜಿ ವಿದ್ಯಾಸಂಸ್ಥೆಯು ನೂತನ ರೀತಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ. ನಾಡಿದ್ದು ದಿನಾಂಕ 23ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಎಸ್.ಎಸ್.ಎಂ. ಕಲ್ಚರಲ್ ಸೆಂಟರ್ನಲ್ಲಿ ಪಾರ್ವತಿ ಹೆಸರಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಆಯೋಜಿಸಲಾಗಿದೆ

ಕೇಂದ್ರ ಸರ್ಕಾರ ತನ್ನದೇ ಬಜೆಟ್ನಲ್ಲಿ ಘೋಷಿಸಿದ ಜಲ ಶಕ್ತಿ ನಿಧಿಗಳನ್ನು ಬಿಡುಗಡೆ ಮಾಡುವಲ್ಲಿ ವಿಫಲ
ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ನಡಿಯಲ್ಲಿ ಶೇ. 80 ರಷ್ಟು ಮನೆಗಳಿಗೆ ನಳದ ಮೂಲಕ ನೀರಿನ ಸಂಪರ್ಕವಿದೆ ಎಂದು ಹೇಳುತ್ತದೆ. ಆದರೆ ಇದರಲ್ಲಿ ಕೇವಲ ಶೇ. 62 ರಷ್ಟು ನಳ ಸಂಪರ್ಕಗಳು ಮಾತ್ರ ಸಂಪೂರ್ಣ ಕಾರ್ಯ ನಿರ್ವಹಿಸುತ್ತಿದ್ದು, ದಿನಕ್ಕೆ 55 ಲೀಟರ್ ನೀರಿನ ಗುರಿಯನ್ನು ಪೂರೈಸುತ್ತಿವೆ.

ಬೋಧನಾ ಪ್ರಕ್ರಿಯೆಯಲ್ಲಿ ಹೊಸ ವಿಧಾನ ಕೂಡಿರಲಿ
ಶಿಕ್ಷಕರು ತಮ್ಮ ಬೋಧನಾ ಪ್ರಕ್ರಿಯೆಯಲ್ಲಿ ಹೊಸ-ಹೊಸ ವಿಧಾನ ಹಾಗೂ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕೆಂದು ದಾವಣಗೆರೆ ವಿವಿ ಭೌತಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಕೆ.ಎಂ. ಈಶ್ವರಪ್ಪ ತಿಳಿಸಿದರು.

ಸಮಾಜದಲ್ಲಿ ಲಿಂಗ ಅಸಮಾನತೆ ತೊಲಗಲಿ : ಎಸ್ಪಿ ಉಮಾ
ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಉನ್ನತ ಸ್ಥಾನ ಹೊಂದುತ್ತಿದ್ದರೂ ಲಿಂಗ ಅಸಮಾನತೆ ಇಂದಿಗೂ ಜೀವಂತವಾಗಿದೆ, ಇದು ತೊಲಗಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.

ನ್ಯಾಷನಲ್ ಯೂತ್ ಫೆಸ್ಟಿವಲ್ : ದೃಶ್ಯ ಕಲಾ ಕಾಲೇಜಿನ ವಿದ್ಯಾರ್ಥಿ ಸಿದ್ದಪ್ಪ ಕರಡಿ ಪ್ರಥಮ
ದೆಹಲಿಯ ಅಮಿತಿ ವಿಶ್ವವಿದ್ಯಾನಿಲಯದಲ್ಲಿ ನಡೆದ 38ನೇ ಇಂಟರ್ ಯುನಿವರ್ಸಿಟಿ ನ್ಯಾಷನಲ್ ಯೂತ್ ಫೆಸ್ಟಿವಲ್ನಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯದ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.

ವಿದ್ಯೆಯಿಂದ ವಿನಯ, ವಿನಯದಿಂದ ಸ್ಥಾನ – ಮಾನ
ಹರಪನಹಳ್ಳಿ : ವಿದ್ಯೆಯು ವಿನಯವನ್ನು ಕೊಡುತ್ತದೆ, ವಿನಯದಿಂದ ಸ್ಥಾನವು ಸಿಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಹೇಳಿದರು.

ಬ್ಯಾಂಕ್ ಗ್ರಾಹಕ ಮೃತ : 10.15 ಲಕ್ಷ ರೂ.ಗಳ ಪರಿಹಾರ
ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಹೊಸ ಸದಸ್ಯರನ್ನು ನೋಂದಾಯಿ ಸುವ ಮತ್ತು ನೋಂದಣಿಯಾದ ಸದಸ್ಯರನ್ನು ನವೀಕರಿಸಲು ಮತ್ತು ಯಾವುದೇ ಒಂದು ಸಹಕಾರ ಸಂಘದ ಸದಸ್ಯರಾಗಿದ್ದರೆ, ಈ ಯೋಜನೆಯ ಫಲಾನಭವಿಗಳಾಗ ಬಹುದು

ಜಗಳೂರು ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆ ವಿಸ್ತೀರ್ಣ ಹೆಚ್ಚಳ
ಜಗಳೂರು : ತಾಲ್ಲೂಕಿನಾದ್ಯಂತ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೆಚ್ಚುತ್ತಿದ್ದು, ಹಾಗಾಗಿ ಭೂಮಿಯಲ್ಲಿ ಅಂತರ್ಜಲ ಹೆಚ್ಚಿಸುವತ್ತ ರೈತರು ಗಮನಹರಿಸಬೇಕು ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಡಾ. ಎಂ.ಜಿ. ಬಸವನಗೌಡ ಸಲಹೆ ನೀಡಿದರು.

ಭೈರನಪಾದ ಏತ ನೀರಾವರಿ ಜಾರಿಗೊಳಿಸಿ, ಅಕ್ರಮ ಪಂಪ್ಸೆಟ್ ತೆರವುಗೊಳಿಸಿ
ಭದ್ರಾ ಅಚ್ಚುಕಟ್ಟಿನ ಕೊನೆ ಭಾಗ ವಾಗಿರುವ ಹರಿಹರ ತಾಲ್ಲೂಕಿನ ರೈತರಿಗೆ ಭದ್ರಾ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಭೈರನಪಾದ ಏತ ನೀರಾವರಿ ಯೋಜನೆಯನ್ನು ಕೂಡಲೇ ಜಾರಿಗೊಳಿಸುವಂತೆ ಶಾಸಕ ಬಿ.ಪಿ.ಹರೀಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶಿಥಿಲ ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನು ಪುನರ್ ನಿರ್ಮಿಸಿ
ಬಡ ರೋಗಿಗಳ ಜೀವನಾಡಿ ಆಗಿರುವ ಚಿಗಟೇರಿ ಜಿಲ್ಲಾಸ್ಪತ್ರೆ ಶಿಥಿಲ ಗೊಂಡಿ ದ್ದು, ಅದರ ಪುನರ್ ನಿರ್ಮಾಣ ಮಾಡಿ, ಅಗತ್ಯ ಸೌಲಭ್ಯಗಳನ್ನು ಒದಗಿ ಸುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ವಿಧಾನಸಭೆಯಲ್ಲಿ ಇಂದು ಆಗ್ರಹಿಸಿದರು.

ಹರಿಹರದಲ್ಲಿನ ಊರಮ್ಮ ಜಾತ್ರೆ ಎತ್ತುಗಳ ಅದ್ಧೂರಿ ಮೆರವಣಿಗೆ
ಹರಿಹರ : ನಗರದಲ್ಲಿ ಊರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಎತ್ತು ಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಹರಾಜು ಪ್ರಕ್ರಿಯೆ ಮುಂದೂಡಿಕೆ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ
ಹರಿಹರ : ನಗರದ ಕ್ರೀಡಾಂಗಣ ಇಲಾಖೆಯ ಅಡಿಯಲ್ಲಿ ಬರುವ 22 ಮಳಿಗೆಗಳ ಹರಾಜ್ ಪ್ರಕ್ರಿಯೆಯನ್ನು, ದಿಢೀರ್ ಮುಂದಕ್ಕೆ ಹಾಕಿರುವ ಕ್ರಮವನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಮುಖಂಡರು ಕ್ರೀಡಾ ಇಲಾಖೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.

ಪರೀಕ್ಷೆ ಬಗ್ಗೆ ಭರವಸೆ ಆತ್ಮವಿಶ್ವಾಸ ಇರಲಿ, ಭಯ ಬೇಡ
ಹರಿಹರ : ವಿದ್ಯಾರ್ಥಿಗಳೇ ನಿಮ್ಮ ಏಕಾಗ್ರತೆ ಮತ್ತು ಆತ್ಮವಿಶ್ವಾಸದಿಂದ ಮಾತ್ರ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಬಹುದು ಎಂದು ಹರಪನಹಳ್ಳಿ ಎಸ್.ಯು.ಜೆ.ಎಂ ಕಾಲೇಜಿನ ಉಪನ್ಯಾಸಕ ಹೆಚ್. ಮಲ್ಲಿಕಾರ್ಜುನ ಪರೀಕ್ಷಾ ತಂತ್ರಗಳನ್ನು ವಿವರಿಸಿದರು.

ಪಿಎಲ್ಡಿ ನಿರ್ದೇಶಕರಿಗೆ ಎಸ್ಎಆರ್ ಅಭಿನಂದನೆ
ನಗರದ ಪಿಎಲ್ಡಿ ಬ್ಯಾಂಕ್ಗೆ ನಡೆದ ಚುನಾವಣೆಯಲ್ಲಿ ನೂತನ ನಿರ್ದೇಶಕರುಗಳಾಗಿ ಆಯ್ಕೆಯಾಗಿರುವ ಎ.ಎಂ. ಮಂಜುನಾಥ್, ಕೆ.ಎಸ್. ವಸಂತ ಕುಮಾರ್, ಹೆಚ್.ಆರ್. ಅಶೋಕ್, ದೇವೇಂದ್ರಪ್ಪ, ಗೌಡ್ರ ಮಂಜುನಾಥ್ ಅವರುಗಳನ್ನು ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್ ಅವರು ಅಭಿನಂದಿಸಿದ್ದಾರೆ.

ಹೊನ್ನಾಳಿ : ಶೀಘ್ರವೇ ಕೃಷಿಕ ಸಮಾಜದ ಸಭೆ
ಹೊನ್ನಾಳಿ : ಶಾಸಕರು ಭಾಗವಹಿಸಿ ರುವ ಅಧಿವೇಶನ ಮುಗಿದ ನಂತರ ದಿನಾಂಕ ನಿಗದಿಗೊಳಿಸಿ, ಅವಳಿ ತಾಲ್ಲೂಕಿನ ಕೃಷಿಕ ಸಮಾಜದ ಸಭೆ ಕರೆದು ಕೃಷಿಕ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಕೃಷಿ ಉಪನಿರ್ದೇಶಕ ರೇವಣಸಿದ್ದನ ಗೌಡ ಹೇಳಿದರು.

ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿ ದಾವಣಗೆರೆಯಲ್ಲೇ ಮರುಸ್ಥಾಪಿಸಿ
ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ನ (ಒಐಸಿ) ವಿಭಾಗೀಯ ಕಚೇರಿ ಯನ್ನು ದಾವಣಗೆರೆಯಲ್ಲೇ ಮರುಸ್ಥಾಪಿಸಿ ಮುಂದುವರೆಸು ವಂತೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಪರೀಕ್ಷೆ ಒತ್ತಡ ಬೇಡ : ಧೈರ್ಯ, ಲವಲವಿಕೆಯಿಂದ ಪರೀಕ್ಷೆ ಎದುರಿಸಿ
ಮಲೇಬೆನ್ನೂರು : ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಖ್ಯವಾಗಿದ್ದು, ಇಲ್ಲಿ ನೀವು ಪರಿಶ್ರಮ ಹಾಕಿ, ಚೆನ್ನಾಗಿ ಓದಿ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ, ಮುಂದಿನ ಓದಿಗೆ ಅನುಕೂಲವಾಗಲಿದೆ ಎಂದು ಮಲೇಬೆನ್ನೂರಿನ ಮಕ್ಕಳ ತಜ್ಞ ಡಾ. ಶ್ರೀನಿವಾಸ್ ಹುರಿದುಂಬಿಸಿದರು.

ಎಂಇಎಸ್ ಉದ್ಧಟತನ ಹತ್ತಿಕ್ಕುವಂತೆ ಆಗ್ರಹ
ಮಹಾರಾಷ್ಟ್ರ ಏಕೀಕರಣ ಸಮಿತಿಯ ಉದ್ಧಟತನ ಹತ್ತಿಕ್ಕುವಂತೆ ಸರ್ಕಾರವನ್ನು ಒತ್ತಾಯಿಸಿ ನಗರದಲ್ಲಿ ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಸಾಂಕೇತಿಕ ಧರಣಿ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವು.

ಕಟ್ಟಡ ಅಲಂಕಾರಿಕವಾಗಿ ಕಾಣಬೇಕೆಂದರೆ, ಪರಿಣಿತಿ ಪಡೆದ ಫ್ಲಂಬರ್ನಿಂದ ಮಾತ್ರ ಸಾಧ್ಯ
ಕುಡಿಯುವ ನೀರಾಗಲೀ, ಒಳ ಚರಂಡಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮೂಲಕ ಯಾವುದೇ ಕಟ್ಟಡವನ್ನು ಅಲಂಕಾರಿಕವಾಗಿ ಕಾಣಬೇಕೆಂದರೆ, ಪರಿಣಿತಿ ಪಡೆದ ಫ್ಲಂಬರ್ನಿಂದ ಮಾತ್ರ ಸಾಧ್ಯ.

ಹರಿಹರ : ಹದಿಹರೆಯದ ಸಮಸ್ಯೆಗಳ ಉಪನ್ಯಾಸ
ಹರಿಹರ : ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ (ದಾವಣಗೆರೆ) ಹಾಗೂ ಎನ್ಎಸ್ಎಸ್ ಘಟಕ ಸರ್ಕಾರಿ ಪಾಲಿ ಟೆಕ್ನಿಕ್ (ಹರಿಹರ) ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹರಿಹರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಜಿಲ್ಲಾ ವಕೀಲರ ಸಂಘದಿಂದ ಮಜ್ಜಿಗೆ ವಿತರಣೆ ಕಾರ್ಯ ಆರಂಭ
ಜಿಲ್ಲಾ ವಕೀಲರ ಸಂಘದಿಂದ ವಕೀಲರ ಸಹಕಾರ ದೊಂದಿಗೆ ಬೇಸಿಗೆ ಪ್ರಯುಕ್ತ ಮಜ್ಜಿಗೆ ವಿತರಣೆಯು ನಿನ್ನೆ ಪ್ರಾರಂಭವಾಯಿತು.

ಅಕ್ರಮ ಗಣಿಗಾರಿಕೆ, ಕ್ರಷರ್ ಸ್ಥಗಿತಕ್ಕೆ ಜಿ.ಬಿ. ವಿನಯ್ ಆಗ್ರಹ
ಹೊನ್ನಾಳಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಆರುಂಡಿ ಗ್ರಾಮದಲ್ಲಿ ಕಲ್ಲು ಕ್ವಾರಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಉಪವಿಭಾಗಾಧಿಕಾರಿ ಅಭಿಷೇಕ್, ರಶ್ಮಿ ಸೇರಿದಂತೆ, ವಿವಿಧ ಇಲಾಖೆಯ ಅಧಿಕಾರಿಗಳು ನಿನ್ನೆ ಭೇಟಿ ನೀಡಿದ್ದರು.

ಹರಪನಹಳ್ಳಿಯಲ್ಲಿ ಅಲಿಕಲ್ಲು ಸಹಿತ ಮಳೆ
ಹರಪನಹಳ್ಳಿ : ಬಿರು ಬಿಸಿಲಿನಿಂದ ಬಸವಳಿದಿದ್ದ ತಾಲ್ಲೂಕಿನ ಜನತೆಗೆ ಕಳೆದ ಎರಡು ದಿನಗಳಿಂದ ಪೂರ್ವ ಮುಂಗಾರು ಮಳೆ ಸಿಂಚನವಾಗಿದ್ದು, ಬಿಸಿಲಿನ ಝಳಕ್ಕೆ ಬಸವಳಿದ ಜನತೆಗೆ ತುಸು ನೆಮ್ಮದಿ ಉಂಟಾಗಿದೆ.

ಐಎಂಎ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ
ಸ್ಥಳೀಯ ಭಾರತೀಯ ವೈದ್ಯಕೀಯ ಸಂಘದ ಮಹಿಳಾ ವಿಭಾಗದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸದಸ್ಯರಿಗೆ ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

ಬೆಟ್ಟದ ತುದಿಯಲ್ಲಿ `ತಾಯಿ ಮಮತೆ’
ತಾಯಿ ಮತ್ತು ಮಕ್ಕಳ ಮಮತೆಯ ಮಧ್ಯೆ ಇರುವ ಅವಿನಾಭಾವ ಸಂಬಂಧಕ್ಕೆ ಇಡೀ ವಿಶ್ವದಲ್ಲಿಯೇ ಬೇರೆ ಉದಾಹರಣೆಗಳಿಲ್ಲ ಎಂಬುದಕ್ಕೆ ಈ ವಾಯುಪುತ್ರನೇ ಮೂಕ ಸಾಕ್ಷಿಯಾಗಿದೆ.

ದಾವಣಗೆರೆ ಗೃಹಿಣಿ ಸ್ಪರ್ಧೆ ಕವಿತಾ ಚೇತನ್ ಪ್ರಥಮ
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಮಹಿಳಾ ವಿಭಾಗದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ನಡೆದ `ದಾವಣಗೆರೆ ಗೃಹಿಣಿ ಸ್ಪರ್ಧೆಯಲ್ಲಿ ಕವಿತಾ ಚೇತನ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.