ಪ್ರತಿದಿನ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ನಡೆಸಿರುವುದನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.
ಪಾಲಿಕೆ ಸದಸ್ಯನ ವಿರುದ್ಧ ಪ್ರತಿ ದೂರು
ಯಶವಂತ್ ರಾವ್ ಜಾಧವ್ ವಿರುದ್ಧ ಪರಾಭವಗೊಂಡ ಸ್ವಪಕ್ಷೀಯ ಎದುರಾಳಿ ಪಕ್ಷೇತರ ಅಭ್ಯರ್ಥಿ ಮಂಜು ಪುರವಂತರ ಪರಿಚಿತನಾದ ಜಿ. ಮಂಜುನಾಥ ಎಂಬಾತ ಬಸವನಗರ ಪೊಲೀಸ್ ಠಾಣೆಯಲ್ಲಿ ಇಂದು ಪ್ರತಿ ದೂರು ದಾಖಲಿಸಿದ್ದಾರೆ.
ಪಂಚಮಿ ಖರೀದಿಯ ಸಡಗರದಲ್ಲಿ ಕೊರೊನಾ ಭಯ ಮರೆತರು
ಹರಿಹರ ನಗರದ ಜನತೆ ಪಂಚಮಿ ಹಬ್ಬದ ಸಡಗರದಲ್ಲಿ ಕೊರೊನಾ ರೋಗದ ಭಯವನ್ನು ಮರೆತಂ ತಿದ್ದು, ಸಂಭ್ರಮದಿಂದ ಖರೀದಿಯಲ್ಲಿ ತೊಡಗಿದ್ದಾರೆ.
4 ವರ್ಷದ ಬಾಲಕಿ, 98 ವರ್ಷದ ವೃದ್ಧೆ ಸೇರಿ ಜಿಲ್ಲೆಯಲ್ಲಿ 96 ಕೊರೊನಾ ಪಾಸಿಟಿವ್
4 ವರ್ಷದ ಬಾಲಕಿ, 98 ವರ್ಷದ ವೃದ್ಧೆ ಸೇರಿ ಜಿಲ್ಲೆಯಲ್ಲಿ ಬುಧವಾರ 96 ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿವೆ.
ತಾಲ್ಲೂಕುಗಳಲ್ಲಿ ಕೋವಿಡ್ ನಿರ್ವಹಣೆಗೆ ಅಧಿಕಾರಿಗಳ ಬದಲಾವಣೆ: ಡಿಸಿ ಸೂಚನೆ
ತಾಲ್ಲೂಕು ಕೇಂದ್ರಗಳಲ್ಲಿ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆಯನ್ನು ಮಾಡಲು ಕೆಲ ಅಧಿಕಾರಿಗಳ ಬದಲಾವಣೆಯೊಂದಿಗೆ ಉತ್ತಮ ತಂಡಗಳನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ದೂಡಾ ಆಯುಕ್ತರಾಗಿ ಹುಲ್ಲುಮನಿ ತಿಮ್ಮಣ್ಣ
ದಾವಣಗೆರೆ - ಹರಿ ಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರನ್ನಾಗಿ ಕಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರನ್ನು ಸರ್ಕಾರ ನಿಯುಕ್ತಿಗೊಳಿಸಿದೆ.
ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ಕ್ಷತ್ರಿಯ ಮರಾಠ ವಿದ್ಯಾ ಮತ್ತು ಕಲ್ಯಾಣಾಭಿವೃದ್ಧಿ ಟ್ರಸ್ಟ್ ವತಿಯಿಂದ 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ. 75 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದ ದಾವಣಗೆರೆ ನಗರ ವ್ಯಾಪ್ತಿಯಲ್ಲಿರುವ ಕ್ಷತ್ರಿಯ ಮರಾಠ ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ನೀಡಲಾಗುವುದು.
ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಐಟಿಐ ಪ್ರವೇಶಕ್ಕಾಗಿ ಆಫ್ಲೈನ್ ಮುಖಾಂತರ ಪ್ರವೇಶ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 31 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮಾಹಿತಿಗಾಗಿ ಆಯಾ ಸಂಸ್ಥೆಯ ಪ್ರಾಚಾರ್ಯರರನ್ನು ಸಂಪರ್ಕಿಸಬಹುದಾಗಿದೆ.
ಅಹಿಂದ ಒಕ್ಕೂಟಕ್ಕೆ ಮಾಲಾ ಆಯ್ಕೆ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಹಿಂದ ಅಲ್ಪಸಂ ಖ್ಯಾತರ, ಹಿಂದುಳಿ ದವರ, ದಲಿತರ ಒಕ್ಕೂಟದ ಅಧ್ಯಕ್ಷರಾಗಿ ಮಾಲಾ ನೇಮಕಗೊಂಡಿದ್ದಾರೆ.
ಸಂತೇಬೆನ್ನೂರಿನಲ್ಲಿ ಉದ್ಯೋಗ ಮೇಳ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಇದೇ ದಿನಾಂಕ 6 ರಂದು ಬೆಳಿಗ್ಗೆ 10 ಗಂಟೆಗೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ನೀಟ್ ಪರೀಕ್ಷೆ ಅಕ್ರಮ : ತನಿಖೆಗೆ ಆಗ್ರಹ
ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಶಹಬಾಜ್ ಖಾನ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ನೀಟ್-ಪಿಜಿ ಪರೀಕ್ಷೆ ಮುಂದೂಡಿಕೆ ಖಂಡನೀಯ
ಪರೀಕ್ಷೆಯ ಹಿಂದಿನ ರಾತ್ರಿ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡಿರುವುದನ್ನು ಎಐಡಿಎಸ್ಓ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಖಂಡಿಸಿದ್ದಾರೆ.
ಸಮವಸ್ತ್ರ ವೃತ್ತಿಯ ವಿವಿಧ ಹುದ್ದೆಗಳಿಗೆ ಸೇರಬಸುವ ಅಭ್ಯರ್ಥಿಗಳಿಗೆ ತರಬೇತಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಭಾರತೀಯ ಸೇನೆ ಸೇರಿದಂತೆ ಇತರೆ ಸಮವಸ್ತ್ರ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ - 1, 2 (ಎ), 3 (ಎ), 3 (ಬಿ) ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.
ನಗರದಲ್ಲಿ ಇಂದು
ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಇಂದು ಮಧ್ಯಾಹ್ನ 3.30 ಗಂಟೆಗೆ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ `ವಯಸ್ಕರನ್ನು ಕಾಡುವ ಬೆನ್ನು ನೋವು-ಕಾರಣ ಚಿಕಿತ್ಸೆ ಮತ್ತು ಪರಿಹಾರ' ವಿಷಯವಾಗಿ ಜೆಜೆಎಂಎಂಸಿ ಕೀಲು ಮೂಳೆ ವಿಭಾಗದ ಪ್ರಾಧ್ಯಾಪಕ ಡಾ.ಜೆ.ರಘುಕುಮಾರ್ ಉಪನ್ಯಾಸ ನೀಡುವರು.
ಮಾದಕ ವಸ್ತು ಬದುಕನ್ನು ಕಸಿದುಕೊಳ್ಳುತ್ತದೆ
ಮಾದಕ ವಸ್ತುಗಳು ನಮ್ಮ ಜೀವನವನ್ನು ಹಾಳು ಮಾಡುವುದಲ್ಲದೇ ನಮ್ಮನ್ನು ದೈಹಿಕ, ಮಾನಸಿಕವಾಗಿ ಹಾಳು ಮಾಡುತ್ತವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್ ತಿಳಿಸಿದರು.
ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ
ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ನಿಂದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಗದಾಗಿ ವಿದ್ಯಾರ್ಥಿ ವೇತನ ವಿತರಿಸುವ ಯೋಜನೆ ಹಮ್ಮಿಕೊಂಡಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಸಿ.ಆರ್. ವಿರೂಪಾಕ್ಷಪ್ಪ ತಿಳಿಸಿದ್ದಾರೆ.
ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಲಿ
ಮನ್ ಕೀ ಬಾತ್ ಅಂದರೆ ಮಾನದಾಳದ ಮಾತು. ದೇಶದ ಜನರ ಹೃದಯಕ್ಕೆ ಹತ್ತಿರವಾದ ಪ್ರಚಲಿತ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಬೇಕು.
ತೊಗಟವೀರ ಸಮಾಜ ವಿದ್ಯಾರ್ಥಿಗಳಿಗೆ ಪುರಸ್ಕಾರ
ನಗರದ ತೊಗಟವೀರ ಸಮಾಜದ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ತೊಗಟವೀರ ಸಮಾಜದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಗಂಗನರಸಿಯಲ್ಲಿ ನಾಳೆ ಮಣ್ಣೆತ್ತಿನ ಅಮಾವಾಸ್ಯೆ ವಿಶೇಷ ಪೂಜೆ
ಹರಿಹರ : ತಾಲ್ಲೂಕಿನ ಗಂಗ ನರಸಿ ಗ್ರಾಮದ ಶ್ರೀ ಗೋಣಿ ಬಸವೇಶ್ವರ ಹೊರ ಮಠದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ವಿಶೇಷ ಪೂಜಾ ಕಾರ್ಯಕ್ರಮಗಳು ನಾಡಿದ್ದು 5ರ ಶುಕ್ರವಾರ ಬೆಳಿಗ್ಗೆ 11ಕ್ಕೆ ನಡೆಯಲಿವೆ.
ಕಕ್ಕರಗೊಳ್ಳದಲ್ಲಿ ಇಂದು ಎನ್ನೆಸ್ಸೆಸ್ ಶಿಬಿರ
ದಾವಣಗೆರೆಯ ಚಾಣಕ್ಯ ಪ್ರಥಮ ದರ್ಜೆ ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಕಕ್ಕರಗೊಳ್ಳ ಗ್ರಾಮದ ಸಮುದಾಯ ಭವನದಲ್ಲಿ ಎನ್ಎಸ್ಎಸ್ ಶಿಬಿರದ ಕಾರ್ಯಕ್ರಮಗಳು ನಡೆಯಲಿವೆ.
ರಾಣೇಬೆನ್ನೂರಿಗೆ ಇಂದು ರಥಯಾತ್ರೆ
ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಕರ್ನಾಟಕ-50 ಸಂಭ್ರಮದ ಕರ್ನಾಟಕ ಜ್ಯೋತಿ ರಥಯಾತ್ರೆಯು ರಾಣೇಬೆನ್ನೂರಿಗೆ ಇಂದು ಬರಲಿದ್ದು ತಹಶೀಲ್ದಾರ್ರವರ ಕಛೇರಿಯಿಂದ ಬೆಳಿಗ್ಗೆ 10 ಗಂಟೆಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಹರಿಹರ ಜಿಟಿಟಿಸಿ ಕಾಲೇಜಿನಲ್ಲಿ ವಿವಿಧ ಕೋರ್ಸ್ಗಳಿಗೆ ಅರ್ಜಿ ಆಹ್ವಾನ
ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನ್ಯುಫ್ಯಾಕ್ಚರಿಂಗ್ ಡಿಪ್ಲೋಮಾ ಕೋರ್ಸುಗಳಿಗೆ ಎಸ್.ಎಸ್.ಎಲ್.ಸಿ ಪಾಸಾದ ಅರ್ಹ ವಿದ್ಯಾರ್ಥಿಗಳು ಜಿಟಿಟಿಸಿ ಹರಿಹರ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ
ಶಂಕರ್ ಕಾಟ್ವೆ, ವೆಂಕಟೇಶ್ಗೆ ಛಾಯಾರತ್ನ ಪ್ರಶಸ್ತಿ : ನಾಳೆ ಪ್ರದಾನ
ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ ಮತ್ತು ಬಸೆಲ್ ಇಂಟ್ರ್ಯಾಕ್ಷನ್ ಪ್ರೈ. ಲಿ. ಸಹಯೋಗದೊಂದಿಗೆ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ನಾಡಿದ್ದು ದಿನಾಂಕ 5ರಿಂದ 7ವರೆಗೆ ಫೋಟೋ ಟುಡೇ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಸಮಾರಂಭ ನಡೆಯಲಿದೆ
ಸರ್ಕಾರದ ಶಿಕ್ಷಣ ವ್ಯಾಪಾರೀಕರಣ ಧೋರಣೆ : ಎಐಡಿಎಸ್ಓ ಖಂಡನೆ
ರಾಜ್ಯ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟಾದ ಪ್ರಸ್ತಾವನೆಯನ್ನು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಖಂಡಿಸಿದ್ದಾರೆ.
ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ನಾಳೆ ಮಣ್ಣೆತ್ತಿನ ಅಮಾವಾಸ್ಯೆ
ನಗರದ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಇವರಿಂದ, ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಗುರು ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ನಾಡಿದ್ದು ದಿನಾಂಕ 5ರ ಶುಕ್ರವಾರ ಬೆಳಿಗ್ಗೆ 6.30ಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ.
ನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಳೆ ಅಮಾವಾಸ್ಯೆ ಪೂಜೆ
ನಗರದ ಡಿ. ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಡಿದ್ದು 5ರ ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
7 ರಂದು ಯಕ್ಷಗಾನ ಪ್ರದರ್ಶನ
ಸವಿಡೈನ್ ಮಹೇಶ್ ಶೆಟ್ಟಿ ಗೆಳೆಯರ ಬಳಗ ಮತ್ತು ಕರಾವಳಿ ಮಿತ್ರ ಮಂಡಳಿ ಇವರ ವತಿಯಿಂದ `ಮಹಾಶಕ್ತಿ ವೀರಭದ್ರ' ಯಕ್ಷಗಾನ ಪ್ರದರ್ಶನವನ್ನು ಇದೇ ದಿನಾಂಕ 7 ರ ಭಾನುವಾರ ಸಂಜೆ 7ಕ್ಕೆ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ.
ಸಣ್ಣ ಕೈಗಾರಿಕೆಗಳ ಸಂಘಕ್ಕೆ ಆಯ್ಕೆ
ಬೆಂಗಳೂರಿನಲ್ಲಿ ಈಚೆಗೆ ನಡೆದ ಕರ್ನಾಟಕ ಸಣ್ಣ ಕೈಗಾರಿಕೆ ಗಳ ಸಂಘದ ಚುನಾವಣೆಯಲ್ಲಿ ನೂತನ ವಾಗಿ ಮುಂದಿನ ಅಧ್ಯಕ್ಷರಾಗಿ ಎಂ.ಜಿ. ರಾಜಗೋಪಾಲ್, ಉಪಾಧ್ಯಕ್ಷರಾಗಿ ಗಣೇಶ್ ರಾವ್ ಆಯ್ಕೆಯಾಗಿದ್ದಾರೆ.
ರಾಣೇಬೆನ್ನೂರು: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ; ಯುವಕರಿಬ್ಬರ ಸಾವು
ರಾಣೇಬೆನ್ನೂರು : ನಗರದ ಹೊರವಲಯದ ನೇಕಾರ ಬಡಾವಣೆ ಬಳಿ ನಿನ್ನೆ ತಡರಾತ್ರಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾಗಿ ನಗರದ ನಂದನ ಶಿವಪ್ಪನವರ ಹಾಗೂ ವೈಭವ ಪಟ್ಟಣಶೆಟ್ಟಿ ಎನ್ನುವ ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
![04 HRP MADAKA 04.07.2024 ಮಾದಕ ದ್ರವ್ಯ ಸೇವನೆ ದೇಶದ ಅತಿ ದೊಡ್ಡ ಪಿಡುಗು](https://janathavani.com/wp-content/uploads/2024/07/04-HRP-MADAKA-04.07.2024--580x440.jpg)
ಮಾದಕ ದ್ರವ್ಯ ಸೇವನೆ ದೇಶದ ಅತಿ ದೊಡ್ಡ ಪಿಡುಗು
ಹರಪನಹಳ್ಳಿ : ಮಾದಕ ದ್ರವ್ಯ ಸೇವನೆ ನಮ್ಮ ದೇಶದ ಅತೀ ದೊಡ್ಡ ಪಿಡುಗು. ಈ ಪಿಡುಗನ್ನು ತಳ ಮಟ್ಟದಿಂದ ತೊಡೆದು ಹಾಕುವ ಪ್ರಯತ್ನ ನಡೆಯಬೇಕು ಎಂದು ದಾವಣಗೆರೆಯ ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ್ ಹೇಳಿದರು.
![03 kanakuppi 04.07.2024 ಕಾಯಕದಲ್ಲಿ ಶ್ರದ್ಧೆ, ನಿಷ್ಟೆ ಇದ್ದಾಗ ಸುಖ, ಶಾಂತಿ](https://janathavani.com/wp-content/uploads/2024/07/03-kanakuppi-04.07.2024--580x440.jpg)
ಕಾಯಕದಲ್ಲಿ ಶ್ರದ್ಧೆ, ನಿಷ್ಟೆ ಇದ್ದಾಗ ಸುಖ, ಶಾಂತಿ
ಹರಿಹರ : ನಾವು ಮಾಡುವಂತಹ ಕಾಯಕದಲ್ಲಿ ಶ್ರದ್ಧೆ, ಭಕ್ತಿ, ನಿಷ್ಠೆ, ತ್ಯಾಗ, ಸದಾಚಾರ, ಸದ್ಭಾವನಾ ಗುಣಗಳು ಇದ್ದಾಗ, ಭಗವಂತನು ನಮಗೆ ಆಶೀರ್ವಾದದ ರೂಪದಲ್ಲಿ ಬೇಡಿದ ಫಲಗಳನ್ನು ನೀಡುತ್ತಾನೆ ಎಂದು ಕಣಕುಪ್ಪಿ ಗವಿಮಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
![05 UKKADAGATHRI 04.07.2024 ಉಕ್ಕಡಗಾತ್ರಿಯಲ್ಲಿ ಜೆಸಿಬಿಯಿಂದ ರುದ್ರಭೂಮಿಯ ಸ್ವಚ್ಛತಾ ಕಾರ್ಯ](https://janathavani.com/wp-content/uploads/2024/07/05-UKKADAGATHRI-04.07.2024--580x440.jpg)
ಉಕ್ಕಡಗಾತ್ರಿಯಲ್ಲಿ ಜೆಸಿಬಿಯಿಂದ ರುದ್ರಭೂಮಿಯ ಸ್ವಚ್ಛತಾ ಕಾರ್ಯ
ಮಲೇಬೆನ್ನೂರು : ಉಕ್ಕಡಗಾತ್ರಿ ಗ್ರಾಮದ ಸಾರ್ವಜನಿಕ ರುದ್ರಭೂಮಿಯಲ್ಲಿ (ಸ್ಮಶಾನ) ಮುಳ್ಳು ಗಿಡಗಳು ಬೆಳೆದು ಶವ ಸಂಸ್ಕಾರಕ್ಕೆ ಅಡ್ಡಿ ಉಂಟಾಗಿತ್ತು.
![08 CYLINDER 04.07.2024 ಸಿಲಿಂಡರ್ ಸ್ಫೋಟ: ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಜಿಲ್ಲಾಧಿಕಾರಿ](https://janathavani.com/wp-content/uploads/2024/07/08-CYLINDER-04.07.2024--580x440.jpg)
ಸಿಲಿಂಡರ್ ಸ್ಫೋಟ: ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಜಿಲ್ಲಾಧಿಕಾರಿ
ಇಲ್ಲಿನ ರಾಮನಗರದ ಎಸ್ಒಜಿ ಕಾಲೋನಿ ಮನೆಯಲ್ಲಿ ಮಂಗಳವಾರ ಅಡುಗೆ ಅನಿಲದ ಸಿಲಿಂಡರ್ ಸ್ಫೋಟದಿಂದ ಐವರು ಗಂಭೀರವಾಗಿ ಗಾಯಗೊಂಡಿದ್ದು, ಎಸ್.ಎಸ್.ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
![11 Computer 04.07.2024 ಪಠ್ಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯ ಸೇರಿಸಲು ಮನವಿ](https://janathavani.com/wp-content/uploads/2024/07/11-Computer-04.07.2024--580x440.jpg)
ಪಠ್ಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯ ಸೇರಿಸಲು ಮನವಿ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಕಾಡೆಮಿಕ್ ಸಮಿತಿಯು ಬಿ.ಕಾಂ ಪದವಿಯ ಪಠ್ಯಕ್ರಮದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯ ಸೇರಿಸಬೇಕು ಎಂದು ವಿವಿಯ ಕುಲಪತಿಗಳಿಗೆ, ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರು ಹಾಗೂ ಪದವೀಧರ ಘಟಕದ ಮಾಜಿ ರಾಜ್ಯಾಧ್ಯಕ್ಷ ಡಾ.ಆರ್.ಎಂ ಕುಬೇರಪ್ಪ ಒತ್ತಾಯಿಸಿದ್ದಾರೆ.
![12 CA Blood 04.07.2024 ಚಾರ್ಟರ್ಡ್ ಅಕೌಂಟೆಂಟ್ಸ್ ಭವನದಲ್ಲಿ ರಕ್ತದಾನ ಶಿಬಿರ](https://janathavani.com/wp-content/uploads/2024/07/12-CA-Blood-04.07.2024--580x440.jpg)
ಚಾರ್ಟರ್ಡ್ ಅಕೌಂಟೆಂಟ್ಸ್ ಭವನದಲ್ಲಿ ರಕ್ತದಾನ ಶಿಬಿರ
ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಚಾರ್ಟರ್ಡ್ ಅಕೌಂಟೆಂಟ್ಸ್ ದಿನದ ಪ್ರಯುಕ್ತ ಚಾರ್ಟರ್ಡ್ ಅಕೌಂಟೆಂಟ್ಸ್ ಭವದಲ್ಲಿ ರಕ್ತದಾನ ಶಿಬಿರ ನಡೆಯಿತು.
![14 Vaidya dina 04.07.2024 ರೋಟರಿ, ಇನ್ನರ್ವ್ಹೀಲ್ ಸಂಸ್ಥೆಯಿಂದ ವೈದ್ಯರ ದಿನಾಚರಣೆ, ವೈದ್ಯಕೀಯ ಶಿಬಿರ](https://janathavani.com/wp-content/uploads/2024/07/14-Vaidya-dina-04.07.2024--580x440.jpg)
ರೋಟರಿ, ಇನ್ನರ್ವ್ಹೀಲ್ ಸಂಸ್ಥೆಯಿಂದ ವೈದ್ಯರ ದಿನಾಚರಣೆ, ವೈದ್ಯಕೀಯ ಶಿಬಿರ
ರೋಟರಿ ಮತ್ತು ಇನ್ನರ್ವ್ಹೀಲ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈಚೆಗೆ ವೈದ್ಯರ ದಿನಾಚರಣೆ ಮತ್ತು ಉಚಿತ ವೈದ್ಯಕೀಯ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
![13 Belalagere 04.07.2024 ವಿದ್ಯಾರ್ಥಿಗಳಿಗೆ ನೋಟ್ಬುಕ್, ಪೆನ್ ವಿತರಣೆ](https://janathavani.com/wp-content/uploads/2024/07/13-Belalagere-04.07.2024--580x440.jpg)
ವಿದ್ಯಾರ್ಥಿಗಳಿಗೆ ನೋಟ್ಬುಕ್, ಪೆನ್ ವಿತರಣೆ
ಮಲೇಬೆನ್ನೂರು : ಬೆಳಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗ ಳೂರಿನ ಕೆಡಿಪಿ ಫೌಂಡೇಶನ್ ವತಿಯಿಂದ ಸಂಸ್ಥೆಯ ತಿಪ್ಪೇಶ್, ಶಶಿಕುಮಾರ್, ರಮೇಶ್ ಅವರುಗಳು ನೋಟ್ ಬುಕ್ ಮತ್ತು ಪೆನ್ನು ವಿತರಣೆ ಮಾಡಿದರು.
![15 HNL 04.07.2024 ಗುಂಪುಗಾರಿಕೆ-ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಉಚ್ಛಾಟನೆಗೆ ವಿಜಯೇಂದ್ರ ಮುಂದಾಗಲಿ](https://janathavani.com/wp-content/uploads/2024/07/15-HNL-04.07.2024--580x440.jpg)
ಗುಂಪುಗಾರಿಕೆ-ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಉಚ್ಛಾಟನೆಗೆ ವಿಜಯೇಂದ್ರ ಮುಂದಾಗಲಿ
ಹೊನ್ನಾಳಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎ.ಬಿ.ಹನುಮಂತಪ್ಪ ಬಣದಿಂದ ಲೋಕಸಭಾ ಚುನಾವಣಾ ಸೋಲಿನ ಆತ್ಮಾವಲೋಕನದ ಬಗ್ಗೆ ಸಭೆ ನಡೆಯಿತು.
![16 SIHI HANI 04.07.2024 ಕೇಳುಗರ ಮನಗೆದ್ದ `ಸಿನಿ ಹನಿ’ ಗಾನ](https://janathavani.com/wp-content/uploads/2024/07/16-SIHI-HANI-04.07.2024--580x440.jpg)
ಕೇಳುಗರ ಮನಗೆದ್ದ `ಸಿನಿ ಹನಿ’ ಗಾನ
ನಗರದ ಕುವೆಂಪು ಕನ್ನಡ ಭವನದಲ್ಲಿ ಸ್ವರತಂತ್ರ ಗಾಯಕರ ತಂಡದ ವತಿಯಿಂದ `ನೂರೊಂದು ನೆನಪು ಹಾಡಾಗಿ ಬಂತು.......' ಶೀರ್ಷಿಕೆಯಡಿ ಏರ್ಪಡಿಸಿದ್ದ `ಸಿನಿಹನಿ' ಕಾರ್ಯಕ್ರಮ ಕೇಳುಗರ ಮನಗೆದ್ದಿತು.
![17 hlSG 04.07.2024 ಹೊಳೆಸಿರಿಗೆರೆ : ಮಲೇರಿಯಾ ವಿರೋಧಿ ಮಾಸಾಚರಣೆ](https://janathavani.com/wp-content/uploads/2024/07/17-hlSG-04.07.2024--580x440.jpg)
ಹೊಳೆಸಿರಿಗೆರೆ : ಮಲೇರಿಯಾ ವಿರೋಧಿ ಮಾಸಾಚರಣೆ
ಮಲೇಬೆನ್ನೂರು : ಹೊಳೆಸಿರಿಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶ್ರೀ ಮಾಗೋಡ ಹಾಲಪ್ಪ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ.ಚೇತನ್ ಉದ್ಘಾಟಿಸಿದರು.
![18 ATAL 04.07.2024 ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದಿಂದ ಶಸ್ತ್ರಚಿಕಿತ್ಸೆಗೆ ಧನಸಹಾಯ](https://janathavani.com/wp-content/uploads/2024/07/18-ATAL-04.07.2024--580x440.jpg)
ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದಿಂದ ಶಸ್ತ್ರಚಿಕಿತ್ಸೆಗೆ ಧನಸಹಾಯ
ಜಿಲ್ಲಾ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ವತಿಯಿಂದ ಅನಾರೋಗ್ಯದಿಂದ ಬಳುತ್ತಿರುವ ಶ್ರೀಮತಿ ಅಕ್ಷತಾ ಮತ್ತು ಮಲ್ಲೇಶ್ ಕಡೇಮನಿ ಅವರುಗಳಿಗೆ ಶಸ್ತ್ರಚಿಕಿತ್ಸೆಗೆ ಧನಸಹಾಯ ಮಾಡಲಾಯಿತು.
![19 Cylender 04.07.2024 ಸಿಲಿಂಡರ್ ಸ್ಫೋಟ : ಮೇಯರ್ ಭೇಟಿ](https://janathavani.com/wp-content/uploads/2024/07/19-Cylender-04.07.2024--580x440.jpg)
ಸಿಲಿಂಡರ್ ಸ್ಫೋಟ : ಮೇಯರ್ ಭೇಟಿ
ಸ್ಥಳೀಯ ರಾಮನಗರದ ಎಸ್ಒಜಿ ಕಾಲೋನಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದ ಮನೆಗೆ ಮಹಾನಗರ ಪಾಲಿಕೆಯ ಮೇಯರ್ ವಿನಾಯಕ ಪೈಲ್ವಾನ್, ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಪಾಮೇನಹಳ್ಳಿ ನಾಗರಾಜ್ ಭೇಟಿ ನೀಡಿದ್ದರು.
![23 vaidya 04.07.2024 ವೈದ್ಯ ಸಮೂಹಕ್ಕೆ ನಾಗರಿಕ ಸಮಾಜ ಋಣಿ](https://janathavani.com/wp-content/uploads/2024/07/23-vaidya-04.07.2024--580x440.jpg)
ವೈದ್ಯ ಸಮೂಹಕ್ಕೆ ನಾಗರಿಕ ಸಮಾಜ ಋಣಿ
ಗುಣಪಡಿಸುವ ಕೈಗಳ, ಕಾಳಜಿಯುಳ್ಳ ಹೃದಯಗಳ ಅವಿಶ್ರಾಂತವಾಗಿ ಕಾರ್ಯನಿರ್ವಹಿಸುವ ವೈದ್ಯ ಸಮೂಹಕ್ಕೆ ಸಮಾಜ ಎಂದೆಂದಿಗೂ ಋಣಿಯಾಗಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ನುಡಿದರು.
![26 palike 04.07.2024 ಪಾಲಿಕೆ ನಿವೃತ್ತ ನೌಕರರಿಗೆ ಸನ್ಮಾನ](https://janathavani.com/wp-content/uploads/2024/07/26-palike-04.07.2024--580x440.jpg)
ಪಾಲಿಕೆ ನಿವೃತ್ತ ನೌಕರರಿಗೆ ಸನ್ಮಾನ
ಮಹಾನಗರ ಪಾಲಿಕೆಯಲ್ಲಿ ನೌಕರರಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಮೊನ್ನೆ ನಿವೃತ್ತರಾಗಿರುವ ಹುಲುಗಮ್ಮ ಸೋಮಲಾಪುರ, ಸರೋಜಮ್ಮ ರಂಗಪ್ಪ, ಬಸವರಾಜ ಅವರನ್ನು ಪಾಲಿಕೆ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸನ್ಮಾನಿಸಲಾಯಿತು.
![31 Leelaji 03.07.2024 ಹೊಸ ಸಮಾಜ ನಿರ್ಮಾಣಕ್ಕಾಗಿ ಈಶ್ವರೀಯ ವಿವಿ ಸಂಕಲ್ಪ](https://janathavani.com/wp-content/uploads/2024/07/31-Leelaji-03.07.2024-580x440.jpg)
ಹೊಸ ಸಮಾಜ ನಿರ್ಮಾಣಕ್ಕಾಗಿ ಈಶ್ವರೀಯ ವಿವಿ ಸಂಕಲ್ಪ
ಮಲೇಬೆನ್ನೂರು : ಹೊಸ ಸಮಾಜ ನಿರ್ಮಾಣಕ್ಕಾಗಿ ಈಶ್ವರೀಯ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸುತ್ತಿದ್ದು, ಅಧ್ಯಾತ್ಮಿಕ ಹಾಗೂ ನೈತಿಕ ಶಿಕ್ಷಣದ ಮೂಲಕ ಜನರಲ್ಲಿ ಬದಲಾ ವಣೆಗೆ ಪ್ರಯತ್ನಿಸುತ್ತಿದೆ
![30 Anabur 03.07.2024 ನವಚೇತನ ಕಿಡ್ಸ್ನಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಕಾರ್ಯಾಗಾರ](https://janathavani.com/wp-content/uploads/2024/07/30-Anabur-03.07.2024-580x440.jpg)
ನವಚೇತನ ಕಿಡ್ಸ್ನಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಕಾರ್ಯಾಗಾರ
ನಗರದ ಶಿವಕುಮಾರ ಸ್ವಾಮಿ ಬಡಾವಣೆಯ ನವಚೇತನ ಕಿಡ್ಸ್ ಪ್ಲೇ ಹೋಂನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಡುಗೆ ಮನೆಯ ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿ ಪರಿವರ್ತಿಸುವ ಕಾರ್ಯಾಗಾರವನ್ನು ನಡೆಸಲಾಯಿತು.
![29 nabur 03.07.2024 ಜಗಳೂರು : ಅಣಬೂರಿನ ಜಯಣ್ಣ ನಿವೃತ್ತಿ](https://janathavani.com/wp-content/uploads/2024/07/29-nabur-03.07.2024-580x440.jpg)
ಜಗಳೂರು : ಅಣಬೂರಿನ ಜಯಣ್ಣ ನಿವೃತ್ತಿ
ಜಗಳೂರು : ಸುದೀರ್ಘ ಕಾಲ ಸೇವೆ ಸಲ್ಲಿಸಿ, ನಿವೃತ್ತಿಯಾಗುತ್ತಿರುವ ಎ.ಎಂ.ಜಯ್ಯಣ್ಣ ಅವರ ಮುಂದಿನ ಜೀವನ ಸುಖವಾಗಿರಲಿ ಎಂದು ಜ್ಞಾನ ವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮನೋಹರ್ ರೆಡ್ಡಿ ಹೇಳಿದರು.
![28 KN Halli 03.07.2024 ಕೆ.ಎನ್.ಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಗಿರಿಜಮ್ಮ](https://janathavani.com/wp-content/uploads/2024/07/28-KN-Halli-03.07.2024-580x440.jpg)
ಕೆ.ಎನ್.ಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಗಿರಿಜಮ್ಮ
ಮಲೇಬೆನ್ನೂರು : ಕೆ.ಎನ್.ಹಳ್ಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಗಿರಿಜಮ್ಮ ಕರಿಯಪ್ಪ ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ ಆವಿರೋಧವಾಗಿ ಆಯ್ಕೆಯಾಗಿದ್ದಾರೆ. ಶ್ರೀಮತಿ ಮಂಜಮ್ಮ ಶೇಖರಪ್ಪ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು.
![26 Ukkadagathri 03.07.2024 ಉಕ್ಕಡಗಾತ್ರಿ ಗ್ರಾ.ಪಂ. ಉಪಾಧ್ಯಕ್ಷರಾಗಿ ಗೀತಾ ಸಂಜೀವ ರೆಡ್ಡಿ](https://janathavani.com/wp-content/uploads/2024/07/26-Ukkadagathri-03.07.2024-580x340.jpg)
ಉಕ್ಕಡಗಾತ್ರಿ ಗ್ರಾ.ಪಂ. ಉಪಾಧ್ಯಕ್ಷರಾಗಿ ಗೀತಾ ಸಂಜೀವ ರೆಡ್ಡಿ
ಮಲೇಬೆನ್ನೂರು : ಉಕ್ಕಡಗಾತ್ರಿ ಗ್ರಾಮ ಪಂಚಾಯ್ತಿ ನೂತನ ಉಪಾಧ್ಯಕ್ಷರಾಗಿ ಶ್ರೀಮತಿ ಗೀತಾ ಸಂಜೀವ ರೆಡ್ಡಿ ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾ.ಪಂ ಇಓ ರಾಮಕೃಷ್ಣ ಅವರು ಚುನಾವಣಾಧಿಕಾರಿಯಾಗಿದ್ದರು.
![25 Tarif 03.07.2024 ಟ್ಯಾರಿಫ್ ದರ ಏರಿಕೆಗೆ ಎಐಡಿವೈಒ ಖಂಡನೆ](https://janathavani.com/wp-content/uploads/2024/07/25-Tarif-03.07.2024-580x440.jpg)
ಟ್ಯಾರಿಫ್ ದರ ಏರಿಕೆಗೆ ಎಐಡಿವೈಒ ಖಂಡನೆ
ಮೊಬೈಲ್ ಟ್ಯಾರಿಫ್ ದರ ಏರಿಕೆಯನ್ನು ಖಂಡಿಸಿ ಆಲ್ ಇಂಡಿಯಾ ಯೂತ್ ಆರ್ಗನೈಸೇಷನ್ ನಗರದ ಗಾಂಧಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.
![22 Kasa 03.07.2024 ಊರಿನ ಸ್ವಚ್ಛತೆಯಲ್ಲಿ ಹರಿಹರ ನಗರಸಭೆ ವಿಫಲ](https://janathavani.com/wp-content/uploads/2024/07/22-Kasa-03.07.2024-580x440.jpg)
ಊರಿನ ಸ್ವಚ್ಛತೆಯಲ್ಲಿ ಹರಿಹರ ನಗರಸಭೆ ವಿಫಲ
800 ವರ್ಷಗಳ ಇತಿಹಾಸ ಹೊಂದಿದ ಊರೇ ಹರಿಹರ. ಇಂತಹ ಐತಿಹಾಸಿಕ ನಗರ ಸ್ವಚ್ಛತೆಯಲ್ಲಿ ಎಡವಿದೆ. ಎಲ್ಲೆಂದರಲ್ಲಿ ಕಸದ ರಾಶಿ ಮತ್ತು ಹೂಳು ತುಂಬಿದ ಚರಂಡಿಗಳು, ಊರಿನ ಎಲ್ಲ ಬಡಾವಣೆಯಲ್ಲೂ ಕಾಣುತ್ತಿವೆ.
![21 mahaveera 03.07.2024 ಪರಿಸರ ಸಂರಕ್ಷಣೆ ಎಲ್ಲರ ಹೊಣೆ : ನ್ಯಾ.ಮಹಾವೀರ ಕರೆಣ್ಣವರ್](https://janathavani.com/wp-content/uploads/2024/07/21-mahaveera-03.07.2024-580x440.jpg)
ಪರಿಸರ ಸಂರಕ್ಷಣೆ ಎಲ್ಲರ ಹೊಣೆ : ನ್ಯಾ.ಮಹಾವೀರ ಕರೆಣ್ಣವರ್
ಮಾನವರಾಗಿ ನಾವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ತಿಳಿಸಿದರು.
![19 Vasavi 03.07.2024 ಹೊನ್ನೂರು ಗೊಲ್ಲರಹಟ್ಟಿ ವಾಸವಿ ವಿದ್ಯಾಲಯದಲ್ಲಿ ಅಕ್ಷರಾಭ್ಯಾಸ](https://janathavani.com/wp-content/uploads/2024/07/19-Vasavi-03.07.2024-580x440.jpg)
ಹೊನ್ನೂರು ಗೊಲ್ಲರಹಟ್ಟಿ ವಾಸವಿ ವಿದ್ಯಾಲಯದಲ್ಲಿ ಅಕ್ಷರಾಭ್ಯಾಸ
ಹೊನ್ನೂರು ಗೊಲ್ಲರಹಟ್ಟಿ ಬಳಿಯ ಶ್ರೀ ವಾಸವಿ ರಾಷ್ಟ್ರೀಯ ವಿದ್ಯಾಲಯದಲ್ಲಿ ಅಕ್ಷರ ಎಂದರೆ ನಾಶವಿಲ್ಲದ್ದು ಎಂಬಂತೆ ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
![33 HRR halakatti 03.07.2024 ಹರಿಹರದಲ್ಲಿ ಹಳಕಟ್ಟಿ ಜನ್ಮ ದಿನಾಚರಣೆ](https://janathavani.com/wp-content/uploads/2024/07/33-HRR-halakatti-03.07.2024-580x409.jpg)
ಹರಿಹರದಲ್ಲಿ ಹಳಕಟ್ಟಿ ಜನ್ಮ ದಿನಾಚರಣೆ
ಹರಿಹರ : ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶರಣರ ವಚನಗಳನ್ನು ಸಂಗ್ರಹಿಸುವಲ್ಲಿ ಅಪಾರವಾಗಿ ಶ್ರಮಿಸಿರುವ ಸಾಹಿತಿ ಡಾ. ಫ.ಗು. ಹಳಕಟ್ಟೆಯವರ ಜನ್ಮ ದಿನ ಮತ್ತು ಸಾಹಿತ್ಯ ಸಂರಕ್ಷಣಾ ದಿನಾಚರಣೆ ಆಚರಿಸಲಾಯಿತು.
![16 mekkejola 03.07.2024 ಮೆಕ್ಕೆಜೋಳಕ್ಕೆ ಸೈನಿಕ ಹುಳುವಿನ ಬಾಧೆ; ಹತೋಟಿ ಕ್ರಮಗಳು](https://janathavani.com/wp-content/uploads/2024/07/16-mekkejola-03.07.2024-580x440.jpg)
ಮೆಕ್ಕೆಜೋಳಕ್ಕೆ ಸೈನಿಕ ಹುಳುವಿನ ಬಾಧೆ; ಹತೋಟಿ ಕ್ರಮಗಳು
ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ತಾಲ್ಲೂಕಿನಾದ್ಯಂತ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಬಿತ್ತನೆಯಿಂದ ಹಿಡಿದು 15 ರಿಂದ 20 ದಿನದ ಮೆಕ್ಕೆಜೋಳ ಬೆಳೆಯನ್ನು ಕಾಣಬಹುದಾಗಿದೆ.
![15 Mudanambike 03.07.2024 ಮೂಢನಂಬಿಕೆ ವಿರುದ್ಧ ಧ್ವನಿ ಎತ್ತಿದ ನಾಯಕ ಬಸವಣ್ಣ](https://janathavani.com/wp-content/uploads/2024/07/15-Mudanambike-03.07.2024-580x440.jpg)
ಮೂಢನಂಬಿಕೆ ವಿರುದ್ಧ ಧ್ವನಿ ಎತ್ತಿದ ನಾಯಕ ಬಸವಣ್ಣ
ಅನ್ಯಾಯ, ಶೋಷಣೆ ಮತ್ತು ಮೂಢನಂಬಿಕೆ ವಿರುದ್ಧ ಧ್ವನಿ ಎತ್ತಿದ ಬಸವಣ್ಣ ಸಾವಿರಾರು ವೇಶ್ಯೆಯರನ್ನು ಶರಣೆಯರ ನ್ನಾಗಿಸಿ ಸಮಾಜವನ್ನು ಪರಿವರ್ತನೆ ಗೊಳಿಸಿದ್ದಾರೆ ಎಂದು ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಿ.ಎ. ವಿಶ್ವೇಶ್ವರಯ್ಯ ತಿಳಿಸಿದರು.