ತಾಸು ನಿರಂತರ ವಿದ್ಯುತ್‌ಗಾಗಿ ರೈತರಿಂದ ಶಾಸಕ ಶಾಂತನಗೌಡರ ಮನೆಗೆ ಮುತ್ತಿಗೆ

ತಾಸು ನಿರಂತರ ವಿದ್ಯುತ್‌ಗಾಗಿ ರೈತರಿಂದ ಶಾಸಕ ಶಾಂತನಗೌಡರ ಮನೆಗೆ ಮುತ್ತಿಗೆ

 ಹೊನ್ನಾಳಿ,ಅ.16-  ರೈತರು ಬರದ ಛಾಯೆ ಯಲ್ಲಿ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದ ರ್ಭದಲ್ಲಿ ಸರ್ಕಾರವು ರೈತರಿಗೆ 7 ತಾಸು ನಿರಂತರ ವಿದ್ಯುತ್ ನೀಡಬೇಕು,  ಇಲ್ಲದಿದ್ದರೆ   ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅರಬಗಟ್ಟೆ ಕೆ.ಸಿ.ಬಸಪ್ಪ ಹೇಳಿದರು.

ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ಅಖಂಡ ಕರ್ನಾಟಕ ರೈತ ಸಂಘದವರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೈಕ್‍ ರಾಲಿ ನಡೆಸಿ, ಶಾಸಕರ ಮನೆ ಮುಂದೆ  ಧರಣಿ ಸತ್ಯಾಗ್ರಹ ನಡೆಸಿದರು. 

ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ಉತ್ಪಾದನೆಗೊಳ್ಳುವ ವಿದ್ಯು ತ್ತನ್ನು ಹೊರ ರಾಜ್ಯಕ್ಕೆ ಮಾರುತ್ತಿದ್ದಾರೆಂಬುದು ಎಲ್ಲಾ ರೈತರ ಆರೋಪವಾಗಿದೆ, ಅವಳಿ ತಾಲ್ಲೂಕುಗಳಲ್ಲಿ ಬರ ಘೋಷಣೆಯಾದರೂ ಇನ್ನೂ ಪರಿಹಾರ ಕಾರ್ಯ ಕೈಗೊಂಡಿಲ್ಲ. ರೈತರು  ಕಟ್ಟಿರುವ ಬೆಳೆ ವಿಮೆ ಬಂದಿಲ್ಲ. ಶಾಸಕರು ಇದರ ಬಗ್ಗೆ ಕ್ರಮ ಕೈಗೊಂಡು ರೈತರಿಗೆ ಬೆಳೆ ವಿಮೆ ಕೊಡಿಸುವಂತೆ ಒತ್ತಾಯಿಸಿದರು. 

ಪಂಪ್‍ಸೆಟ್ ಹೊಂದಿದ ರೈತರಿಗೆ  ವಿದ್ಯುತ್ ಇಲಾಖೆ ಸರ್ಮಪಕವಾಗಿ ವಿದ್ಯುತ್ ನೀಡುತ್ತಿಲ್ಲ,   7 ತಾಸು ನಿರಂತರ ವಿದ್ಯುತ್ ಕೊಡುವುದನ್ನು ಮುಂದುವರೆಸಬೇಕು. ನವೆಂಬರ್ 10ರ ತನಕ ಗಡುವು ನೀಡುತ್ತೇವೆ, ಕೊಡದಿದ್ದರೆ ಮತ್ತೆ  ಪ್ರತಿ ಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ನ್ಯಾಮತಿ ತಾಲ್ಲೂಕು ಅಧ್ಯಕ್ಷ ಬೆಳಗುತ್ತಿ ಉಮೇಶ್ ಮಾತನಾಡಿ, ರೈತರಿಗೆ ನಿರಂತರ ವಿದ್ಯುತ್ ನೀಡಿದರೆ ಆಹಾರ ಉದ್ಪಾದನೆ ಮಾಡಲು ಮುಂದಾಗುತ್ತಾರೆ. ಶಾಸಕರು ವಿಧಾನ ಸಭೆಯಲ್ಲಿ ರೈತರ ಧ್ವನಿಯಾಗಿ ಮಾತನಾಡಬೇಕು ಎಂದರು.

ರೈತರ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಶಾಂತನಗೌಡರು, ಈ ವರ್ಷ ಮಳೆ ಇಲ್ಲದೆ ಬರದ ಛಾಯೆ ಹೆಚ್ಚಾಗಿ, ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಪೂರೈಕೆ ಕಡಿಮೆಯಾಗಿದೆ. ರೈತರ ವಿದ್ಯುತ್ ಹಂಚಿಕೆಯ ಸಮಯ ನಿಗದಿ ಹಾಗೂ ಸಾಲ ಮನ್ನಾ ವಿಚಾರವು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಿದೆ.   ವಿಮೆ ಹಣದ ಬಗ್ಗೆ  ಕಂಪನಿಗಳಿಂದ ಇತ್ಯರ್ಥವಾಗಬೇಕಿದೆ. ತಾಲ್ಲೂಕಿನ ಚೀಲೂರು ವಿದ್ಯುತ್ ಘಟಕದಿಂದ ಲೋಡ್ ಶೆಡ್ಡಿಂಗ್ ಹೆಚ್ಚಾಗುತ್ತಿದೆ. ಚೀಲೂರು ಹತ್ತಿರ ಬಿಜೋಗಟ್ಟೆ ಮತ್ತು ಹಿರೇಗೋಣಿಗೆರೆ ಭಾಗದ ರೈತರ ಸಮಸ್ಯೆಗೆ ಇನ್ನೂ ಎರಡು ವಿದ್ಯುತ್ ಘಟಕ ಆಗಬೇಕಿದೆ ಎಂದರು.

ಬೆಸ್ಕಾಂ ಎಇಇ ಜಯಪ್ಪ ಮಾತನಾಡಿ, ಉತ್ಪತ್ತಿ ಮಾಡಿದ ವಿದ್ಯುತ್ತನ್ನು   ತಾಲ್ಲೂಕಿನಲ್ಲೇ ಬಳಕೆ ಮಾಡಬೇಕೆಂಬ ತೀರ್ಮಾನ ಸರಿಯಾದುದಲ್ಲ, ವಿದ್ಯುತ್ ಒಂದು ಜಾಲವಿದ್ದಂತೆ ಅದು ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ಹಿರೇಮಠದ ಬಸವರಾಜಪ್ಪ, ಜಿಲ್ಲಾ ಕಾರ್ಯದರ್ಶಿ ಸುಂಕದಕಟ್ಟೆ ಕರಿಬಸಪ್ಪ ಸೇರಿದಂತೆ ರೈತ ಮುಖಂಡರು ಮಾತನಾಡಿದರು. ಈ ಸಂದರ್ಭದಲ್ಲಿ ನ್ಯಾಮತಿ ಬೆಸ್ಕಾಂ ಎಇಇ ಶ್ರೀನಿವಾಸ್‌ ವಿವಿಧ ಘಟಕಗಳ ಅಧಿಕಾರಿಗಳಾದ ರವಿಪ್ರಕಾಶ್, ಶಿವರಾಜ್, ಕಾಂತರಾಜ್, ಹುತ್ತೇಶ್‍ನಾಯ್ಕ, ರವೀಶ್‍ಚಾರ್, ಉಮೇಶ್, ಅಯೂಬ್‍  ಖಾನ್, ಯೋಗೇಶ್ ಇತರರು ಇದ್ದರು.

error: Content is protected !!