ಅತಿಥಿ ಉಪನ್ಯಾಸಕರು, ಶಿಕ್ಷಕರ ವೇತನಕ್ಕೆ ಎಐವೈಎಫ್‌ ಆಗ್ರಹ

ದಾವಣಗೆರೆ, ಜು.12- ರಾಜ್ಯದಲ್ಲಿ ಸಾವಿರಾರು ಅತಿಥಿ ಉಪನ್ಯಾಸ ಕರು ಮತ್ತು ಅತಿಥಿ ಶಿಕ್ಷಕರು ದುಡಿಯುತ್ತಿದ್ದು, ವೇತನವಿಲ್ಲದೆ ಕಷ್ಟಪಡು ತ್ತಿದ್ದು, ಕೂಡಲೇ ಬಾಕಿ ವೇತನವನ್ನು ಬಿಡುಗಡೆ ಮಾಡಬೇಕು ಹಾಗೂ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರು, ಅತಿಥಿಶಿಕ್ಷಕರ ಹೋರಾಟ ಸಮಿತಿ ಆಲ್‌ ಇಂಡಿಯಾ ಡೆಮಾಕ್ರಟಿಕ್ ಯೂತ್‌ ಆರ್ಗ್‌ನೈಸೇಷನ್ (ಎಐಡಿವೈಓ) ಆಗ್ರಹಿಸಿದೆ. 

ಲಾಕ್‌ಡೌನ್‌ನಿಂದ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಒಂದು ತಿಂಗಳಲ್ಲಿ ಆತ್ಮಹತ್ಯಾ ಪ್ರಕರಣಗಳು ನಡೆದು, ಶಿಕ್ಷಕರ ಕುಟುಂಬ ಬೀದಿ ಪಾಲಾಗಿದೆ. ಕೂಡಲೇ ಬಾಕಿ ವೇತನ ಬಿಡುಗಡೆಗೊಳಿಸಬೇಕು. ವಿವಿಧ ಕ್ಷೇತ್ರಗಳಿಗೆ ಸರ್ಕಾರ ಪರಿಹಾರ ನೀಡಿರುವಂತೆ ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕ ವೃಂದದವರಿಗೂ ಸಹ ಕನಿಷ್ಟ ಪಕ್ಷ ಒಂದು ಬಾರಿಯ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಬೇಕು.

ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇಮಿಸುವ ಪ್ರಕ್ರಿಯೆಯನ್ನು ನಡೆಸಬೇಕು ಹಾಗೂ ಇಲ್ಲಿಯವರೆಗೂ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರನ್ನು ಖಾಯಂಗೊಳಿಸಬೇಕೆಂದು ಸಮಿತಿ ಹಾಗೂ ಎಐಡಿವೈಓ ಒತ್ತಾಯಿಸುತ್ತಿದೆ ಎಂದು ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ಮಧು ತೊಗಲೇರಿ ತಿಳಿಸಿದ್ದಾರೆ.

error: Content is protected !!