ಆಸ್ತಿ ತೆರಿಗೆ : ಶೇ. 5ರ ರಿಯಾಯಿತಿ ಸೌಲಭ್ಯ ಕಾಲಾವಧಿ ವಿಸ್ತರಣೆಗೆ ಮನವಿ

ಆಸ್ತಿ ತೆರಿಗೆ : ಶೇ. 5ರ ರಿಯಾಯಿತಿ ಸೌಲಭ್ಯ ಕಾಲಾವಧಿ ವಿಸ್ತರಣೆಗೆ ಮನವಿ - Janathavaniದಾವಣಗೆರೆ, ಏ.23- ಏಪ್ರಿಲ್‌ ನಂತರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಆಸ್ತಿ ತೆರಿಗೆ ಮೇಲಿನ ಶೇ. 5 ರ ರಿಯಾಯಿತಿ ಸೌಲಭ್ಯದ ಕಾಲಾವಧಿಯನ್ನು ಹಾಗೂ 2021-22ನೇ ಸಾಲಿನ ಜೂನ್‌ ನಂತರ ಪಾವತಿಸುವ ಆಸ್ತಿ ತೆರಿಗೆ ಮೇಲಿನ ದಂಡದ ಕಾಲಾವಧಿಯನ್ನೂ ಸಹ ವಿಸ್ತರಿಸಲು ಮೇಯರ್‌ ಎಸ್‌.ಟಿ. ವೀರೇಶ್‌ ನಗರಾಭಿವೃದ್ಧಿ ಸಚಿವರಲ್ಲಿ ಮನವಿ ಮಾಡಿದ್ದಾರೆ. ಸರ್ಕಾರದ ಸುತ್ತೋಲೆ ಪತ್ರದನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ಥಿರಾಸ್ತಿಗಳ ಆಸ್ತಿ ತೆರಿಗೆ ಪದ್ಧತಿ ಜಾರಿಗೊಳಿಸಬೇಕಾಗಿದ್ದು, ಇತ್ತೀಚಿನ ಸಾಮಾನ್ಯ ಸಭೆಯಲ್ಲಿ ಈ ಕಾಯಿದೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ.

ಪ್ರಸ್ತುತ ಈ ಕಾಯಿದೆಯಂತೆ ಆಸ್ತಿ ತೆರಿಗೆ ದರಗಳನ್ನು ಚಾಲ್ತಿ ಸಾಲಿನ ಮಾರುಕಟ್ಟೆ ಮಾರ್ಗಸೂಚಿ ಬೆಲೆಯ ಆಧಾರದ ಮೇಲೆ 2021-22ನೇ ಸಾಲಿನಿಂದ ಅನ್ವಯವಾಗುವಂತೆ ನಿಗದಿಪಡಿಸಿ, ಆಸ್ತಿ ತೆರಿಗೆ ತಂತ್ರಾಂಶದಲ್ಲಿ ಕಾಲೋಚಿತಗೊಳಿಗಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿರುವ ಕಾರಣ ಆಸ್ತಿ ತೆೆರಿಗೆ ಪಾವತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವೀರೇಶ್‌ ತಿಳಿಸಿದ್ದಾರೆ. ಹೀಗಾಗಿ 2021-22ನೇ ಸಾಲಿನ ಏಪ್ರಿಲ್‌ ತಿಂಗಳಿನಲ್ಲಿ 20 ದಿನಗಳು ಈಗಾಗಲೇ ಕಳೆದಿರುವುದರಿಂದ ಸಾರ್ವಜನಿಕರು ರಿಯಾಯಿತಿ ಸೌಲಭ್ಯ ಪಡೆದಿಲ್ಲವೆಂಬ ಅಂಶವನ್ನು ನಗರಾಭಿವೃದ್ಧಿ ಸಚಿವರ ಗಮನಕ್ಕೆ ತಂದಿರುವುದಾಗಿ ಹೇಳಿದ್ದಾರೆ.

error: Content is protected !!