ಮಕ್ಕಳ ಪೋಷಣೆಯಲ್ಲಿ ಪೋಷಕರು ಎದುರಿಸುತ್ತಿರುವ ಸಮಸ್ಯೆಗಳು…ಅವುಗಳ ಪರಿಹಾರ

ಮಕ್ಕಳ ಪೆೋಷಣೆಯಲ್ಲಿ ಪೋಷಕರ ಪಾತ್ರ ಅತ್ಯಂತ  ಜವಾಬ್ದಾರಿಯುತವಾದ ಪಾತ್ರವಾಗಿದೆ. ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ, ಮನೆಯ ಪರಿಸರ ಹಾಗೂ ಮನೆಯಲ್ಲಿ ಇರುವ ವ್ಯಕ್ತಿಗಳ ವರ್ತನೆ ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಆದ್ದರಿಂದ ಅವರ ಸೂಕ್ಷ್ಮ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳನ್ನು ತುಂಬುವ ಕೆಲಸವನ್ನು ಪೋಷಕರು ಮಾಡಬೇಕಾಗುತ್ತದೆ. 

ಮಕ್ಕಳು ಎಂದ ಮೇಲೆ ತುಂಟಾಟ ಇದ್ದೇ ಇರುತ್ತದೆ, ಕೆಲವು ಮಕ್ಕಳು ಸ್ವಲ್ಪ ಕೀಟಲೆ ಮಾಡಿದರೆ, ಕೆಲ ಮಕ್ಕಳು ಅಪ್ಪ-ಅಮ್ಮನ ತಲೆಯೇ ಕೆಟ್ಟುಬೋಗುವಂತೆ ಕೀಟಲೆ ಮಾಡುತ್ತಾರೆ. ಮನೆಯ ವಸ್ತುಗಳನ್ನು ಹಾಳು ಮಾಡುವುದು, ಹೊರಗಡೆ ಕರೆದುಕೊಂಡು ಹೋದಾಗ ಕಣ್ಣಿಗೆ ಕಂಡ ವಸ್ತುಗಳೆನ್ನೆಲ್ಲಾ ಬೇಕೆಂದು ಹಠ ಮಾಡುವುದು, ಕೋಪಗೊಳ್ಳುವುದು, ಚೀರುವುದು ಮಾಡುತ್ತಾರೆ. ಮಕ್ಕಳು ಈ ರೀತಿ ಹಠ ಮಾಡಿದಾಗ ಕೋಪಗೊಂಡು ಹೊಡೆಯಲು ಹೋಗಬೇಡಿ. ಹೊಡೆಯುವುದರಿಂದ ಮಕ್ಕಳು ಬುದ್ಧಿ ಕಲಿಯುತ್ತಾರೆ ಎಂಬ ಕಲ್ಪನೆ ಮೊದಲು ಬಿಡಿ. ಮಕ್ಕಳಲ್ಲಿರುವ ಹಠ, ಮೊಂಡುತನ, ಗ್ಯಾಡ್ಜೆಟ್ ಚಟ ಮುಂತಾದ ಕೆಟ್ಟ ಅಭ್ಯಾಸಗಳ್ನು ಬಿಡಿಸುವುದು ಹೇಗೆ ಎಂಬ ಬಗ್ಗೆ ಕೆಲವೊಂದು ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನ ನಮ್ಮದಾಗಲಿ.

ಮೊಂಡುತನ : ಮಕ್ಕಳು ತಮಗೆ ಬೇಕಾದ ವಸ್ತು ಸಿಗದೇ ಹೋದಾಗ, ಬೇಜಾರಾದಾಗ ಮೊಂಡುತನ ತೋರುತ್ತಾರೆ. ಈ ರೀತಿ ಮೊಂಡುತನ ತೋರಿದಾಗ ಗದರಿಸುವ ಬದಲು ಈ ಪ್ರಯೋಗ ಮಾಡಿದರೆ ಸ್ವಲ್ಪ ಮಟ್ಟಿನ ಯಶಸ್ವಿ ನಮ್ಮದಾಗ ಬಹುದು.  ಮಗುವಿನ ಬಳಿ ನೀನು ತಪ್ಪು ಮಾಡುತ್ತಿದ್ದೀಯಾ ಅಂತೆಲ್ಲಾ ಗದರಬೇಡಿ, ಯಾವುದೇ ಪ್ರತಿಕ್ರಿಯೆ ತೋರಬೇಡಿ, ಶಾಂತವಾಗಿರಿ. ನಿಮ್ಮ ಮಗು ಅಳುತ್ತಿದ್ದರೆ `ನೀನು ಅಳು ನಿಲ್ಲಿಸಿದರೆ ಮಾತ್ರ ನಾನು ನೀನು ಹೇಳುವುದನ್ನು ಕೇಳುತ್ತೇನೆ’ ಅಂತ ಹೇಳಿ ನೋಡಿ. ನಿಮ್ಮ ಮಗುವಿಗೆ ಗಮನವನ್ನು ಬೇರೆ ಕಡೆಗೆ ತಿರುಗಿಸಲು ಪ್ರಯತ್ನಿಸಿ.

ಮಾತು ಕೇಳದಿರುವುದು : ಮಕ್ಕಳ ಸ್ವತಂತ್ರ ಮನೋಭಾವ ಬೆಳೆಯುತ್ತಿದ್ದಂತೆ ಕೆಲವೊಮ್ಮೆ ಹೇಳಿದ ಮಾತು ಕೇಳುವುದಿಲ್ಲ. ಮಕ್ಕಳು ಹೀಗೆ ಮಾಡುವಾಗ ಅವರ ಮೇಲೆ ಕೋಪಗೊಂಡು ಹಾರಾಡುವುದಕ್ಕಿಂತ ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಮಗುವಿನ ಅಭಿಪ್ರಾಯಕ್ಕೂ ಬೆಲೆ ಕೊಡಿ. ಮಗುವಿನ ಅಭಿಪ್ರಾಯ ವ್ಯಕ್ತಪಡಿಸಲು ಪ್ರೋತ್ಸಾಹಿಸಿ. ನೀವು ಹೇಳಿದ ಮಾತು ಕೇಳುತ್ತಿಲ್ಲ ಅಂತ ಕೋಪಗೊಳ್ಳುವುದರಿಂದ ಅವರು ಮತ್ತಷ್ಟು ಹಠಮಾರಿಗಳಾಗುತ್ತಾರೆ. 

ಕೋಪದಿಂದ ಚೀರಾಡುವುದು : ಕೆಲ ಮಕ್ಕಳಿಗೆ ಕೋಪ ಬಂದರೆ ಚೀರಾಡುವುದು, ನೆಲದಲ್ಲಿ ಬಿದ್ದು ಹೊರಳಾಡುವುದು ಮಾಡುತ್ತಾರೆ. ಇಂತಹ ಮಕ್ಕಳನ್ನು ನಿಭಾಯಿಸುವುದು ಸುಲಭ ಮಾತಲ್ಲ. ನೀವು ಹೇಳಿದ್ದನ್ನು ಕೇಳಲ್ಲ, ಕೈಗೆ ಸಿಕ್ಕಿದ್ದನ್ನು ಬೀಳಿಸಿ ಹೊಡೆದು ಹಾಕುತ್ತವೆ, ಮಕ್ಕಳು ಬೇರೆಯವರ ಮುಂದೆ ಈ ರೀತಿ ವರ್ತಿಸಿದಾಗ ನಿಮಗೆ ಮುಜುಗರ ಉಂಟಾಗುವುದು. ಆದರೂ ಸ್ವಲ್ಪ ತಾಳ್ಮೆ ತಂದುಕೊಂಡು ಅವರೊಂದಿಗೆ ಈ ರೀತಿ ವರ್ತಿಸಿ ಆಗ ಅವರ ಸ್ವಭಾವದಲ್ಲಿ ಬದಲಾವಣೆಯಾಗುವುದು ಅವರ ಕೋಪಕ್ಕೆ ಕಾರಣ ಏನು ಎಂಬುದನ್ನು ತಿಳಿಯಲು ಪ್ರಯತ್ನಿಸಿ. ಮಕ್ಕಳು ಕೆಲವೊಮ್ಮೆ ಹೋಂ ವರ್ಕ್, ಪ್ರಾಜೆಕ್ಟ್ ಅಂತ ಮಾನಸಿಕ ಒತ್ತಡದಲ್ಲಿರುತ್ತಾರೆ. ಸಾಧ್ಯವಾದರೆ ನಿಮ್ಮ ಮಗುವಿನ ತರಗತಿ ಶಿಕ್ಷಕರ  ಜೊತೆಗೆ ಮಾತನಾಡಿ. ಒಂದು ವೇಳೆ ದಿನದಿಂದ ದಿನಕ್ಕೆ ಮಗುವಿನ ಕೋಪ ಸ್ವಭಾವ ಹೆಚ್ಚಾಗುತ್ತಿದ್ದರೆ ಕೋಪವನ್ನು ನಿಯಂತ್ರಿಸಲು ಮಕ್ಕಳ ಕೌನ್ಸಿಲರ್ ಬಳಿ ಕರೆದುಕೊಂಡು ಹೋಗುವುದು ಒಳ್ಳೆಯದು.

ಸುಳ್ಳು ಹೇಳುವುದು : ಮಕ್ಕಳು ಕೆಲವೊಮ್ಮೆ ಸುಳ್ಳು ಹೇಳುತ್ತಾರೆ, ಆದರೆ ಅದನ್ನೇ ಅಭ್ಯಾಸ ಮಾಡಿಕೊಳ್ಳಬಾರದು. ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದು ನಿಮಗೆ ಗೊತ್ತಾದರೆ ಅವರ ಸುಳ್ಳಿಗೆ ಪ್ರೋತ್ಸಾಹ ನೀಡಬೇಡಿ. ನಿಮ್ಮ ಮಗು ಆಗಾಗ ಸುಳ್ಳು ಹೇಳುತ್ತಿದ್ದರೆ ನಿಮ್ಮಿಂದ ಏನೋ ಬಚ್ಚಿಡುತ್ತಿದೆ ಎಂದು ಅಥವಾ  ಮಕ್ಕಳು ಸುಳ್ಳು ಹೇಳುತ್ತಿರುವುದು ನಿಮ್ಮ ಗಮನಕ್ಕೆ ಬಂದಾಗ ಈ ರೀತಿ ಮಾಡಿ:  ಸುಳ್ಳು ಹೇಳುತ್ತಿದ್ದೀಯಾ? ಅಂತ ಗದರಿಸಬೇಡಿ, ಬದಲಿಗೆ ಈ ಸುಳ್ಳು ಏಕೆ ಹೇಳಿದೆ ಅಂತಹ ಸಮಧಾನವಾಗಿ ಕೇಳಿ. ಮಗುವಿಗೆ ಸರಿ-ತಪ್ಪುವಿನ ಬಗ್ಗೆ ತಿಳಿ ಹೇಳಿ. ನೀವು ಬೈಯುವುದಿಲ್ಲ, ಹೊಡೆಯುವುದಿಲ್ಲ ಅಂತ ಮಕ್ಕಳಿಗೆ ಭರವಸೆ ಸಿಕ್ಕರೆ ಅವರು ಸುಳ್ಳು ಹೇಳುವುದಿಲ್ಲ. 

ಒಡಹುಟ್ಟಿದವರ ಜತೆ ಕಿತ್ತಾಟ: ಮನೆಯಲ್ಲಿ ಎರಡು ಮಕ್ಕಳಿದ್ದರೆ ಕಿತ್ತಾಟ ಸಾಮಾನ್ಯ. ಒಬ್ಬರು ತೆಗೆದ ವಸ್ತುವೇ ಮತ್ತೊಬ್ಬರಿಗೆ ಬೇಕು. ಇಬ್ಬರಿಗೆ ಒಂದೇ ರೀತಿಯ ಆಟ ಸಾಮಾನು ಕೊಡಿಸಿದರೂ ಕಿತ್ತಾಟ ಇದ್ದೇ ಇರುತ್ತದೆ. ಇವರ ಕಿತ್ತಾಟ ನೋಡಿ ರೋಸಿ ಹೋಗುವುದುಂಟು. ಮಕ್ಕಳು ಹೀಗೆ ಕಿತ್ತಾಡುವಾಗ ಪೋಷಕರು ಒಬ್ಬರ ಪರ ನಿಂತರೆ ಮತ್ತೊಬ್ಬರಿಗೆ ಬೇಜಾರು. ಮಕ್ಕಳು ಕಿತ್ತಾಡುವಾಗ ನೀವು ಯಾರ ಪರ ವಹಿಸಿ ಮಾತನಾಡಬೇಡಿ. ಸಮಧಾನವಾಗಿ ಕುಳಿತು ಇಬ್ಬರ ದೂರುಗಳನ್ನು ಆಲಿಸಿ, ನಂತರ ಇಬ್ಬರನ್ನು ಸಮಧಾನ ಮಾಡಿ ಕಿತ್ತಾಡದೆ ಆಡುವಂತೆ ಹೇಳಿ. ಇಬ್ಬರು ಕಿತ್ತಾಡಿದರೆ ನೀವು ಕೇಳಿದ ವಸ್ತು ಕೊಡಿಸುವುದಿಲ್ಲಾ ಅಂತ, ಇಲ್ಲಾ ಅವರು ಯಾವ ವಸ್ತುವಿಗೆ ಕಿತ್ತಾಡುತ್ತಿದ್ದಾರೋ ಅದನ್ನು ತೆಗೆದುಕೊಂಡು ಕಿತ್ತಾಡಿದರೆ ಆಡಲು ಇಬ್ಬರಿಗೂ ಕೊಡುವುದಿಲ್ಲ ಅಂತ ಹೇಳಿ. ಇದರಿಂದ ಮಕ್ಕಳು ಸುಮ್ಮನಾಗುತ್ತಾರೆ. 

ಮಕ್ಕಳ ತಿನ್ನುವ ಅಭ್ಯಾಸ : ಮಕ್ಕಳಿಗೆ ಊಟ ಮಾಡಿಸುವುದೇ ಪೋಷಕರ ಮುಂದೆ ಇರುವ ದೊಡ್ಡ ಸವಾಲು ಅಂದರೆ ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಊಟ ಅಥವಾ ತಿಂಡಿಗಳಿಗಿಂತ ಬೇಕರಿಗಳಲ್ಲಿ ಸಿಗುವ ಮಿಠಾಯಿ, ಐಸ್‍ಕ್ರೀಮ್, ಕುರುಕುಲು ತಿಂಡಿಗಳು, ಮ್ಯಾಗಿ ಇವುಗಳನ್ನು ತಿನ್ನಲು ತೋರುವ ಆಸಕ್ತಿಯನ್ನು ಮಕ್ಕಳು ಹಣ್ಣು, ಮತ್ತಿತರ ಆರೋಗ್ಯಕರ ಆಹಾರ ತಿನ್ನಲು ಬಯಸುವುದಿಲ್ಲ, ಮಕ್ಕಳು ಆಹಾರ ತಿನ್ನದೇ ಇರುವಾಗ ಮಗುವಿಗೆ ಇದೇ ಆಹಾರ ತಿನ್ನಿ ಅಂತ ಒತ್ತಾಯ ಮಾಡಬೇಡಿ ಪೋಷಕಾಂಶ ವಿರುವ ಆಹಾರವನ್ನು ಮಕ್ಕಳು ಇಷ್ಟ ಪಡುವ ರೀತಿಯಲ್ಲಿ ಮಾಡಿ. ಹೊರಗಿನ ಆಹಾರಗಳನ್ನು ಕೊಂಡು ತರುವುದಕ್ಕಿಂತ ಮನೆ ಆಹಾರ ಕೊಡ%

error: Content is protected !!