11ರಂದು ಕೆ-ಸೆಟ್ ಪರೀಕ್ಷೆ

ದಾವಣಗೆರೆ, ಏ. 8- ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯನ್ನು ಇದೇ ದಿನಾಂಕ 11ರ ಭಾನುವಾರ ನಡೆಸಲಾಗುತ್ತಿದೆ. ದಾವಣಗೆರೆ ನಗರದಲ್ಲಿ ಒಟ್ಟು 9 ಕೇಂದ್ರಗಳಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಪರೀಕ್ಷೆಗೆ ಸಂಬಂಧಿಸಿದ ಸೂಚನೆ, ಪ್ರವೇಶ ಪತ್ರ ಹಾಗೂ ಇನ್ನಿತರೆ ಮಾಹಿತಿಯನ್ನು ಕೆ-ಸೆಟ್ ಅಂತರ್ಜಾಲ (http:/kset.uni.mysore.ac.in) ಇಲ್ಲಿಗೆ ಕಳುಹಿಸಲಾಗಿದೆ. ಅಭ್ಯ ರ್ಥಿಗಳು ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಂಡು, ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪರೀಕ್ಷೆಗೆ ಬರುವಾಗ ತರಬೇಕು. ಪ್ರವೇಶ ಪತ್ರವಿಲ್ಲದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ದಾವಿವಿ ನೋಡಲ್ ಅಧಿಕಾರಿ ಪ್ರೊ.ಜೆ.ಕೆ.ರಾಜು ತಿಳಿಸಿದ್ದಾರೆ.

ದಾವಣಗೆರೆಯ ಪರೀಕ್ಷಾ ಕೇಂದ್ರಗಳು:  ಎಸ್‍ಬಿಸಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು, ಬಿಐಇಟಿ ಕಾಲೇಜು ರಸ್ತೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎ.ಆರ್.ಜಿ.  ಕಾಲೇಜು, ಎ.ವಿ.ಕೆ ಕಾಲೇಜು, ಜಿ.ಎಂ. ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಿ.ಎಂ.ಎಸ್ ಅಕಾ ಡೆಮಿ ಪ್ರಥಮ ದರ್ಜೆ ಕಾಲೇಜು, ದವನ್ ನೂತನ ಅಲಯನ್ಸ್ ನೂತನ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್. 

error: Content is protected !!