ಕೊಡಗನೂರು ಕೆರೆ ಏರಿ ದುರಸ್ತಿ : ವಾಹನ ಸಂಚಾರ ಮಾರ್ಗ ಬದಲಾವಣೆಗೆ ಸೂಚನೆ

ಮಾಯಕೊಂಡ, ಮಾ. 11- ಹೋಬಳಿಯ ಕೊಡಗನೂರು  ಕೆರೆ ಏರಿಯ  ಸುಮಾರು 100 ಮೀಟರ್ ತುರ್ತು ದುರಸ್ತಿ ಕಾರ್ಯ ಪ್ರಾರಂಭವಾಗಿದ್ದು, ಕೆರೆ ಏರಿಯ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ದಾವಣಗೆರೆಯಿಂದ ಹೊಳಲ್ಕೆರೆ ಸಂಚರಿಸುವ ವಾಹನಗಳು ಕೊಡಗನೂರು ಕ್ರಾಸ್ ಗಂಗನಕಟ್ಟೆ ಚಿನ್ನಸಮುದ್ರ ಹೊನ್ನಾಯಕನಹಳ್ಳಿ ಮೂಲಕ ಓಬನಹಳ್ಳಿ ಗೇಟ್ಗೆ ಬಂದು ರಾಜ್ಯ ಹೆದ್ದಾರಿ ಮೂಲಕ ಹೊಳಲ್ಕೆರೆ ತಲುಪಬಹುದು. ಅಲ್ಲದೇ ಕೊಡಗನೂರು ಕ್ರಾಸ್‌ನಿಂದ ಕೊಡಗನೂರು, ಬೊಮ್ಮನಹಳ್ಳಿ, ಪರಶುರಾಮ ಪುರ ಮಾರ್ಗ ಬಳಸಿ ರಾಜ್ಯ ಹೆದ್ದಾರಿ ತಲುಪಬಹುದು.

ಹೊಳಲ್ಕೆರೆಯಿಂದ ದಾವಣಗೆರೆ ಹೋಗುವ ವಾಹನಗಳು ಓಬಣ್ಣನಹಳ್ಳಿ, ಚಿನ್ನಸಮುದ್ರ ಗಂಗನಕಟ್ಟೆ ಮಾರ್ಗ ಬಳಸಿಕೊಂಡು ಕೊಡಗನೂರು ಕ್ರಾಸ್‌ಗೆ ಬಂದು ದಾವಣಗೆರೆಗೆ ಪ್ರಯಾಣಿಸಬಹುದು. 

ಪರಶುರಾಮಪುರ ಕ್ರಾಸನಿಂದ ಪರಶುರಾಮಪುರ, ಬೊಮ್ಮನಹಳ್ಳಿ, ಕೊಡಗನೂರು ಮಾರ್ಗ ಬಳಸಿ ಕೊಡಗನೂರು ಕ್ರಾಸ್ಗೆ ಬಂದು ದಾವಣಗೆರೆಗೆ ಪ್ರಯಾಣಿಸಬಹುದು ಎಂದು ಸಣ್ಣ ನೀರಾವರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!