ಹರೀಶ್ ಮಾತಿನಲ್ಲಿ ಬದ್ದತೆ ಇರಲಿ : ಕಾಂಗ್ರೆಸ್

ದಾವಣಗೆರೆ, ಮಾ. 11 – ಶಾಸಕ ಬಿ.ಪಿ. ಹರೀಶ್ ಅವರು ಬದ್ದತೆಯಿಂದ ಮಾತನಾಡಬೇಕು, ಸಚಿವರ ಬಗ್ಗೆ ಏಕವಚನ ಬಳಸಿದರೆ ತಕ್ಕಪಾಠ ಕಲಿಸಬೇಕಾದಿತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಎಚ್ಚರಿಸಿದ್ದಾರೆ.

ಪಕ್ಷದ ಆಂತರಿಕ ಸಮಸ್ಯೆಗಳನ್ನೇ ಬಗೆಹರಿಸಿಕೊಳ್ಳ ಲಾಗದ ಹರೀಶ್ ಅವರು ಈ ಹಿಂದೆ  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಿಂಬಾಲಕರಾಗಿ ಇಂದು ಅವರ ವಿರುದ್ದ ಮಾತನಾಡುತ್ತಿದ್ದಾರೆ. ಮಾಜಿ ಸಚಿವ ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ, ರೇಣುಕಾಚಾರ್ಯ ವಿರುದ್ಧವೂ ಮನ ಬಂದಂತೆ ಮಾತನಾಡುತ್ತಿದ್ದಾರೆ. ಇದು ಅವರ ಆಂತರಿಕ ವಿಚಾರವಾಗಿದ್ದು, ಇದೀಗ ಈ ರಾಜ್ಯ, ದೇಶವೇ ಶಾಮನೂರು ಕುಟುಂಬವನ್ನು ಸೈ ಎನ್ನುತ್ತಿದ್ದರೆ, ಬಿ.ಪಿ. ಹರೀಶ್ ಮಾತ್ರ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದನ್ನು ನೋಡಿದರೆ, ಚಿಕಿತ್ಸೆಯ ಅವಶ್ಯವಿದೆ ಎಂಬುದನ್ನು ಕಾಣಬಹುದಾಗಿದ್ದು, ಬಿಜೆಪಿಗರು ಅವರಿಗೆ ಚಿಕಿತ್ಸೆ ಕೊಡಿಸಲು ಮುಂದಾಗಲಿ ಎಂದು ಸಲಹೆ ನೀಡಿದ್ದಾರೆ.

ಹರೀಶ್ ಅವರು ಇಂತಹ ಹೇಳಿಕೆಗಳನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ, ಸಚಿವರೊಂದಿಗೆ ಕೈಜೋಡಿಸಿ ಕೆಲಸ ಮಾಡುವುದನ್ನು ಮೊದಲು ಕಲಿಯಿರಿ ಎಂದವರು ತಿಳಿಸಿದ್ದಾರೆ.

error: Content is protected !!