ಹುಣ್ಣಿಮೆ ಮಹಾಮಂಟಪಕ್ಕೆ ಬಿಚ್ಚುಗತ್ತಿ ಭರಮಣ್ಣ ನಾಯಕರ ಹೆಸರು : ಹರ್ಷ

ದಾವಣಗೆರೆ, ಫೆ. 11- ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ಮಹಾಮಂಟಪಕ್ಕೆ ಬಿಚ್ಚುಗತ್ತಿ ಭರಮಣ್ಣ ನಾಯಕರ ಹೆಸರನ್ನಿಟ್ಟಿರುವುದಕ್ಕೆ ನಾಯಕ ಸಮುದಾಯ ಹರ್ಷ ವ್ಯಕ್ತಪಡಿಸಿದೆ.

ಈ ನಿರ್ಧಾರ ಕೈಗೊಂಡಿರುವ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ವಾಲ್ಮೀಕಿ ನಾಯಕ ಸಮುದಾಯದ ವತಿಯಿಂದ ಅಭಿನಂದಿಸಿದೆ.

ಚಿತ್ರದುರ್ಗ ಸಂಸ್ಥಾನದಲ್ಲಿ ಹಲವಾರು ಕೋಟೆ ಕೊತ್ತಲಗಳನ್ನು, ದೇಗುಲಗಳನ್ನು, ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ ಅತ್ಯಂತ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದ ಕೀರ್ತಿ ಬಿಚ್ಚುಗತ್ತಿ ಭರಮಣ್ಣ ನಾಯಕರಿಗೆ ಸಲ್ಲುತ್ತದೆ ಎಂದು ಸಮಾಜದ ಮುಖಂಡ ಪಿ.ಬಿ. ಅಂಜುಕುಮಾರ್ ತಿಳಿಸಿದ್ದಾರೆ.

ಇಂತಹ ಅರಸರ ದೂರಾಲೋಚನೆಯಿಂದ ಅಂದಿನ ಕಾಲದಲ್ಲೇ ಜನರ ಒಳಿತಿಗಾಗಿ ನೀರಿನ ಮೂಲಗಳನ್ನು ಉಳಿಸುವಂತಹ ಯೋಚನೆ ಮಾಡಿದ್ದು, ಅಂದಿನ ಅರಸರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಇಂತಹ ಯೋಜನೆಗೆ ಮರು ಕಾಯಕಲ್ಪ ಕೊಟ್ಟ ತರಳಬಾಳು ಜಗದ್ಗುರುಗಳನ್ನು ಪಿ.ಬಿ. ಅಂಜುಕುಮಾರ್, ಡಿ.ಆರ್. ಅರವಿಂದಾಕ್ಷ, ಎ. ಲೋಹಿತ್ ಕುಮಾರ್, ಎನ್. ಗುರುರಾಜ್, ಪಿ.ಬಸಪ್ಪ, ಪಿ.ಎ.ಚಿರಂತ್, ಸುನೀಲ್ ಪಾಳೇಗಾರ್ ಮತ್ತಿತರರು ಭಕ್ತಿಯ ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!