ಹೆದ್ದಾರಿ‌ 173 ಆನಗೋಡುವರೆಗೂ ವಿಸ್ತರಿಸಲು ಸಂಸತ್‌ನಲ್ಲಿ ಪ್ರಸ್ತಾಪ

ಹೆದ್ದಾರಿ‌ 173 ಆನಗೋಡುವರೆಗೂ ವಿಸ್ತರಿಸಲು ಸಂಸತ್‌ನಲ್ಲಿ ಪ್ರಸ್ತಾಪ

ದಾವಣಗೆರೆ. ಫೆ. 11 – ರಾಷ್ಟ್ರೀಯ ಹೆದ್ದಾರಿ-173  ಮೂಡಿಗೆರೆಯಿಂದ ಹೊಳಲ್ಕೆರೆವರೆಗೆ ಇದ್ದು NH 369 ಬಳಿ ಮುಕ್ತಾಯಗೊಂಡಿದೆ. ಇದೇ ಹೆದ್ದಾರಿಯನ್ನು ಹೊಳಲ್ಕೆರೆಯಿಂದ  ಚಿಕ್ಕಜಾಜೂರಿನ ಮೂಲಕ ಹಾದುಹೋಗಿರುವ ರಾಜ್ಯ ಹೆದ್ದಾರಿ 47ರ ಆನಗೋಡು ಸಮೀಪದ NH48 ವರೆಗೆ ಮೇಲ್ದರ್ಜೆಗೇರಿಸಲು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ನವದೆಹಲಿಯ‌ ಸಂಸತ್‌ನ ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಿಸಿದ್ದಾರೆ.  ಮುಂದುವರೆದು ಮಾತನಾಡಿದ  ಸಂಸದರು, ಇದನ್ನು ಮೇಲ್ದರ್ಜೆಗೇರಿ ಸುವುದರಿಂದ ಪ್ರಮುಖ ಮಾರ್ಗಗಳಿಗೆ ಪ್ರವೇಶವನ್ನು ಸುಗಮಗೊಳಿಸುವುದ ರೊಂದಿಗೆ ಮಧ್ಯ ಕರ್ನಾಟಕದ  ಪ್ರಮುಖ ಖನಿಜ, ಅಡಿಕೆ ಹಾಗೂ ವಾಣಿಜ್ಯ ಬೆಳೆಗಳನ್ನು ಬಂದರು ನಾಡಾದ ಮಂಗಳೂರಿಗೆ ಸಂಪರ್ಕಿಸುತ್ತದೆ‌. ಜೊತೆಗೆ ರಫ್ತು ಮಾಡಲು ಉತ್ತೇಜನ ದೊರಕಿದಂತಾಗುತ್ತದೆ ಎಂದು ಪ್ರಸ್ತಾಪಿಸಿದ್ದಾರೆ.

error: Content is protected !!