ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಆನ್‌ಲೈನ್‌ನಲ್ಲಿ ಶರಣ ಚಿಂತನ ಗೋಷ್ಠಿ ಇಂದು ಸಂಜೆ 7 ರಿಂದ 9ರವರೆಗೆ ನಡೆಯಲಿದೆ. ಡಾ. ಲೋಕೇಶ್ ಅಗಸನಕಟ್ಟೆ ಬಸವಣ್ಣನವರ ಬಹುಮುಖ ವ್ಯಕ್ತಿತ್ವ ವಿಷಯವಾಗಿ ಅನುಭಾವದ ನುಡಿಗಳನ್ನಾಡುವರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಚಿತ್ರದುರ್ಗ ಜಿಲ್ಲಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷ ಡಾ. ಕೆ.ಎಂ. ವೀರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಗೂಗಲ್ ಮೀಟ್ ಜಾಯ್ನಿಂಗ್ ಇನ್ಫೋ ವಿಡಿಯೋ ಕಾಲ್ ಲಿಂಕ್: https://meet.google.com/nkt-jvkk-cyc.
February 12, 2025