ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಇಂದು ಸಂಜೆ 6.30 ಕ್ಕೆ `ಶರಣ ಸಾಹಿತ್ಯ ಮತ್ತು ಸಮಾಜ’ ವಿಷಯ ಕುರಿತು ಕಾರ್ಯಕ್ರಮ ನಡೆಯಲಿದೆ.
ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಧಾರವಾಡ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬೇಲಿಮಠದ ಶ್ರೀ ಶಿವಾನುಭವ
ಚರಮೂರ್ತಿ ಶಿವರುದ್ರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ.ಹಂಪಾ ನಾಗರಾಜಯ್ಯ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಮಹಾರಾಷ್ಟ್ರದ ನಾಸಿಕ್ ವಿಜ್ಞಾನಿ ಡಾ. ಶಿವಾನಂದ ಕಣವಿ, ಬೆಂಗಳೂರು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಮಹಾಂತೇಶ್ ಬೀಳಗಿ ಆಗಮಿಸಲಿದ್ದಾರೆ.
ವಿಜಯಪುರ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಡಾ.ಮಹಾಂತೇಶ್ ಬಿರಾದಾರ, ಶಾಸನಗಳು ಮತ್ತು ಹಸ್ತಪ್ರತಿ ಸಂಶೋಧಕ ಬೆಂಗಳೂರಿನ ಅಶೋಕ್ ದೊಮ್ಮಲೂರು ಉಪನ್ಯಾಸ ನೀಡುವರು.
ವಿಶೇಷ ಆಹ್ವಾನಿತರಾಗಿ ಚಿತ್ರದುರ್ಗ ಇತಿಹಾಸ ಸಂಶೋಧಕರು ಮತ್ತು ಶಾಸನ ತಜ್ಞ ಡಾ.ಬಿ. ರಾಜಶೇಖರಪ್ಪ, ಮೈಸೂರು ಸಾಹಿತಿಗಳೂ, ಸಂಶೋಧಕ ಡಾ. ರಾಜಶೇಖರ ಜಮದಂಡಿ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಪರಮ ರತ್ನ ಸಂಗೀತ ಸಂಸ್ಥೆಯ ಸುಜೀತ್ ಕುಲಕರ್ಣಿ ಮತ್ತು ತಂಡದವರಿಂದ ವಚನಗೀತೆ, ಸಿರಿಗೆರೆ ಎಂ.ಬಿ. ಆರ್. ಕಾಲೇಜಿನ ತಂಡದಿಂದ ವಚನ ನೃತ್ಯ, ಭೀಮಸಮುದ್ರ ಶ್ರೀ ಭೀಮೇಶ್ವರ ಪ್ರೌಢಶಾಲೆಯ ಜಡೆ ಕೋಲಾಟ ತಂಡದವರಿಂದ ಜಾನಪದ ಸಿರಿ, ಸಿರಿಗೆರೆ ತರಳಬಾಳು ಕಲಾ ಸಂಘದ ಕಲಾವಿದರಿಂದ ಶರಣ ಸಂಕುಲ ಶಿವಶರಣ ಹರಳಯ್ಯ ನೃತ್ಯ ರೂಪಕ ಹಾಗೂ ಭರಮಸಾಗರ ಜನರೇಷನ್ ಅರೇನಾ ಕಲಾ ಸಂಸ್ಥೆಯ ಕಲಾವಿದರಿಂದ ಭರತ ನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.