ತುಮ್ಮಿನಕಟ್ಟೆಯಲ್ಲಿ ಇಂದಿನಿಂದ 3 ದಿನ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ

ರಾಣೇಬೆನ್ನೂರು ತಾಲ್ಲೂಕು ತುಮ್ಮಿನಕಟ್ಟೆ ಗ್ರಾಮದ ಬೆಲ್ಲದ ಪತೇಯಲ್ಲಿರುವ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದಿನಿಂದ ಇದೇ ದಿನಾಂಕ 7 ರವರೆಗೆ ಶ್ರೀ ಬಸವೇಶ್ವರ ರಥೋತ್ಸವ ಹಾಗೂ ಗುಗ್ಗಳ ಮಹೋತ್ಸವ ನಡೆಯಲಿದೆ.

ಇಂದು ಬೆಳಿಗ್ಗೆ ಶ್ರೀ ಬಸವೇಶ್ವರ ದೇವರ ರುದ್ರಾಭಿಷೇಕ, ಕಳಸಾರೋಹಣ, ಕಂಕಣಧಾರಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.ನಾಳೆ ದಿನಾಂಕ 6ನೇ ಗುರುವಾರ ಬೆಳಿಗ್ಗೆ ಹೂವಿನ ರಥೋತ್ಸವ ನಡೆಯಲಿವೆ. 

ದಿನಾಂಕ 7ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಬಸವೇಶ್ವರ ದೇವರ ರಥೋತ್ಸವ ಹಾಗೂ ಗುಗ್ಗಳ ಜರುಗಲಿದೆ.  ಮಧ್ಯಾಹ್ನ 1ಕ್ಕೆ ದೇವಸ್ಥಾನದ ಆವರಣದಲ್ಲಿ ಶ್ರೀಮತಿ ರಿಂದವ್ವ ಶಿಗ್ಲಿ ಹಾಗೂ ಕುಟುಂಬದವರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೆರವಣಿಗೆ ಅದ್ಧೂರಿಯಾಗಿ ನೆರವೇರಲಿದೆ.

error: Content is protected !!