ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ : 340 ಮೆಟ್ರಿಕ್ ಟನ್ ಮರಳು ಜಪ್ತಿ

ಹರಿಹರ,ಫೆ.3- ತಾಲ್ಲೂಕಿನ ಮಳಲಹಳ್ಳಿ ಮತ್ತು ನಂದಿಗುಡಿ ಗ್ರಾಮದ ತುಂಗಭದ್ರಾ ನದಿ ದಡದಲ್ಲಿ 340 ಮೆಟ್ರಿಕ್ ಟನ್ ಅಕ್ರಮವಾಗಿ ಮರಳನ್ನು ದಾಸ್ತಾನು ಮಾಡಿದ ಅಡ್ಡೆಗಳ ಮೇಲೆ ದಿಢೀರ್ ದಾಳಿ ನಡೆಸಿದ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಶೀಲ್ದಾರ್ ಗುರುಬಸವರಾಜ್ ಮತ್ತು ಗಣಿ ಮತ್ತು ಭೂ ವಿಜ್ಞಾನಿ ತಂಡಗಳೊಂದಿಗೆ ಸೋಮವಾರ ಜಪ್ತಿ ಮಾಡಲಾಯಿತು. ನಂತರ ಉಪ ವಿಭಾಗಾಧಿಕಾರಿಗಳು ಸಂತೋಷ್ ಮಾತನಾಡಿ ನಂದಿಗುಡಿ, ಮಳಲಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಮರಳನ್ನು, ಜಪ್ತಿ ಮಾಡಿದ ಮರಳನ್ನು ಸ್ಟಾಕ್ ಯಾರ್ಡ್ ಅಥವಾ ಯಾವುದಾದರೂ ಸರ್ಕಾರಿ ಕಾಮಗಾರಿಗೆ ರಾಯಲ್ಟಿಯೊಂದಿಗೆ ಸರಿಪಡಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಗೆ ತಿಳಿಸಲಾಗಿದ್ದು ಮತ್ತು  ಪೊಲೀಸ್ ಇಲಾಖೆಯೊಂದಿಗೆ ತಂಡ ರಚನೆ ಮಾಡಿ ಬೀಟ್ ಮಾಡಲು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುಬಸವರಾಜ್, ಕಂದಾಯ ನಿರೀಕ್ಷಕ ಆನಂದ, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಕವಿತಾ ಹಾಗೂ ಮಲೇಬೆನ್ನೂರು ಪೊಲೀಸ್ ಠಾಣೆ ಸಿಬ್ಬಂದಿ ವರ್ಗದವರು ಇದ್ದರು.

error: Content is protected !!