ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಿ

ಹರಿಹರ, ಫೆ.2- ತಾಲ್ಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿನ ಒಟ್ಟು 124 ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ 58,335 ಅಂತ್ಯೋದಯ ಕಾರ್ಡ್‌, ಬಿ.ಪಿ.ಎಲ್ ಕಾರ್ಡ್‌ ಬಳಕೆದಾರರ ಪೈಕಿ 7,567 ಬಳಕೆದಾರರು ಇ-ಕೆವೈಸಿ ಮಾಡಿಸಿರುವುದಿಲ್ಲ. ಇ-ಕೆವೈಸಿ ಮಾಡಿಸಲು ಸರ್ಕಾರವು ಈಗಾ ಗಲೇ ಸಾಕಷ್ಟು ಸಮಯ ನೀಡಿದ್ದರೂ ಬಹುಸಂಖ್ಯೆಯ ಜನರು ಮಾಡಿಸಿರುವುದಿಲ್ಲ. ಕೂಡಲೇ ತಮ್ಮ ಕಾರ್ಡ್‌ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಬೇಕೆಂದು ತಹಶೀಲ್ದಾರ ಕೆ.ಎಂ. ಗುರುಬಸವರಾಜ ತಿಳಿಸಿದ್ದಾರೆ.

error: Content is protected !!