ಮಯೂರ ಗ್ಲೋಬಲ್ ಸ್ಕೂಲ್‌ನ ಸಾಂಸ್ಕೃತಿಕ ಸಂಭ್ರಮ ಇಂಚರ-2024-25 ಇಂದು ಸಂಜೆ 4 ಗಂಟೆಗೆ ಬಿಐಇಟಿ ಇಂಜಿನಿಯರಿಗ್ ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ್ ಆಡಿಟೋರಿಯಂನಲ್ಲಿ ಆಯೋಜನೆಗೊಂಡಿದೆ.
ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ಸಂಪನ್ ಮುತಾಲಿಕ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಆಸ್ಟ್ರೇಲಿಯಾದ ಕ್ವೀನ್‌ಲ್ಯಾಂಡ್‌ನ ವೈದ್ಯ ಡಾ. ಡಿ.ಎಸ್. ವಿಷ್ಣು, ರಾಷ್ಟ್ರೀಯ ಹಿಂದೂಸ್ತಾನಿ ಸಂಗೀತ ಪ್ರಶಸ್ತಿ ಪುರಸ್ಕೃತ ಕಲಾವಿದ ಆನಂದ ಗೌಡ ಪಾಟೀಲ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಯೂರ ಗ್ಲೋಬಲ್ ಸ್ಕೂಲ್ ಆಡಳಿತಾಧಿಕಾರಿ ಬಿ.ಎನ್. ಮಲ್ಲೇಶ್ ವಹಿಸಲಿದ್ದಾರೆ.