ಹೊನ್ನಾಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಡದಕಟ್ಟೆ ಗ್ರಾಮದ ವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 11ಕ್ಕೆ `ವಚನ ಸಾಹಿತ್ಯದಲ್ಲಿ ವೈಚಾರಿಕತೆ’ ದತ್ತಿ ಉಪನ್ಯಾಸ ನಡೆಯಲಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಮುರಿಗಪ್ಪಗೌಡ ತಿಳಿಸಿದರು.
ವಿಜಯ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವಸಂತ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಉದ್ಘಾಟನೆಯನ್ನು ದಾವಣಗೆರೆ ಎಚ್.ಎಸ್ ಬಸವರಾಜ್ ನೆರವೇರಿಸಲಿದ್ದಾರೆ. ಎಂ.ಆರ್ ಲೋಕೇಶ್ ಉಪನ್ಯಾಸ ನೀಡಲಿರುವರು. ದತ್ತಿ ದಾನಿಗಳಾದ ಕೋಟೆಹಾಳ್ ಬಸವರಾಜ್, ದಾವಣಗೆರೆ ಸುನಂದಾ ದೇವಿ, ಶಿಕ್ಷಕ ಕೆ.ವಿ ಪ್ರಸನ್ನ ಸೇರಿದಂತೆ ಕೆ.ಶೇಖರಪ್ಪ, ಶಾರದಾ ಕಣಗೊಟಗಿ ಇನ್ನಿತರರು ಭಾಗವಹಿಸುವರು.