ಹೈಸ್ಕೂಲ್ ಮೈದಾನದಲ್ಲಿ ಗುಂಡಿ ತೆಗೆಯಲು ಅವಕಾಶವಿಲ್ಲ

ಇಟಲಿಯ ರೋಮ್ ಮಾದರಿಯಲ್ಲಿ ವೃತ್ತಗಳ ನಿರ್ಮಾಣ : ಮೇಯರ್

ದಾವಣಗೆರೆ, ಅ. 7 – ಹೈಸ್ಕೂಲ್ ಮೈದಾನವನ್ನು ಸಾರ್ವಜನಿಕರ ಸಂಚಾರ ಹಾಗೂ ಕ್ರೀಡೆಗೆ ಅನುಕೂಲವಾಗುವ ರೀತಿಯಲ್ಲಿ ಮತ್ತು ಮಳೆಗಾಲದಲ್ಲಿ ಮಳೆ ನೀರು ನಿಲ್ಲದ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಪಾಲಿಕೆ ಮೇಯರ್ ಚಮನ್ ಸಾಬ್ ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಈ ಬಗ್ಗೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹೈಸ್ಕೂಲ್ ಮೈದಾನದಲ್ಲಿ ಗುಂಡಿ ತೆಗೆಯಲು ಅವಕಾಶ ನೀಡುವುದಿಲ್ಲ. ಯಾರೇ ಕಾರ್ಯಕ್ರಮ ಇಲ್ಲವೇ ವಾಣಿಜ್ಯ ಚಟುವಟಿಕೆ ನಡೆಸಿದಾಗಲೂ, ಗುಂಡಿಯ ಅಗತ್ಯವಿರದ ರೀತಿ ಜರ್ಮನ್ ಟೆಂಟ್‌ಗಳನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗು ವುದು ಎಂದರು.

ದಾವಣಗೆರೆಯ ವೃತ್ತಗಳನ್ನು ಸುಂದರವಾಗಿ ಅಭಿವೃದ್ಧಿಗೊಳಿಸಲೂ ಉದ್ದೇಶಿಸಲಾಗಿದೆ. ಒಂದೆರಡು ವೃತ್ತಗಳನ್ನು ಇಟಲಿಯ ರೋಮ್ ನಗರದಲ್ಲಿರುವ ವೃತ್ತಗಳ ರೀತಿ ಅಭಿವೃದ್ಧಿಪಡಿಸಲು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಯೋಜನೆ ಹೊಂದಿದ್ದಾರೆ. ಸ್ಮಾರ್ಟ್ ಸಿಟಿ ಸೇರಿದಂತೆ ಸರ್ಕಾರದ ಯೋಜನೆಗಳ ಮೂಲಕ ಅಗತ್ಯ ಅನುದಾನ ಪಡೆಯಲಾಗುವುದು ಎಂದು ಚಮನ್ ಸಾಬ್ ಹೇಳಿದರು.

error: Content is protected !!