ಅ.5 ರಂದು `ಪುನೀತ್ ರಾಜ್ ಕಪ್’ ರಾಷ್ಟ್ರೀಯ ಚದುರಂಗ ಸ್ಪರ್ಧೆ

ದಾವಣಗೆರೆ, ಸೆ. 27 –   ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಹಾಗೂ ದಾವಣಗೆರೆ ಚೆಸ್ ಕ್ಲಬ್ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜಕುಮಾರ್ ಸವಿನೆನಪಿಗಾಗಿ ಅಕ್ಟೋಬರ್‌ 5 ಮತ್ತು 6 ರಂದು ಎರಡು ದಿನಗಳ ಕಾಲ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಫಿಡೇ ರೇಟಿಂಗ್ ಓಪನ್ ರಾಪಿಡ್ ಚದುರಂಗ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ದಾವಣಗೆರೆ ಚೆಸ್ ಕ್ಲಬ್ ಅಧ್ಯಕ್ಷ ದಿನೇಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 400 ಕ್ಕೂ ಅಧಿಕ ಸ್ಪರ್ಧಾಳುಗಳು ಪಾಲ್ಗೊ ಳ್ಳಲಿದ್ದಾರೆ. 9 ಸುತ್ತುಗಳಲ್ಲಿ ಪಂದ್ಯಾವಳಿ ನಡೆಯಲಿದ್ದು, ವಿಜೇತರಿಗೆ ಎರಡು ಲಕ್ಷ ರೂ. ಬಹುಮಾನದ ಮೊತ್ತ ಇದ್ದು, ಜೊತೆಗೆ 200 ಟ್ರೋಫಿಗಳನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಅ. 5 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಚೆಸ್ ಅಸೋಯೇಷನ್ ಸಿಇಓ ಅರವಿಂದ ಶಾಸ್ತ್ರಿ, ಆನಂದಪ್ಪ, ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಎ. ನಾಗರಾಜ್, ಎ.ಬಿ. ರಹೀಂ, ಕೆ. ಚಮನ್ ಸಾಬ್, ಸುರಭಿ ಶಿವಮೂರ್ತಿ, ಮುಖಂಡರಾದ ಎಸ್.ಮಲ್ಲಿಕಾರ್ಜುನ್, ನಲ್ಲೂರು ರಾಘವೇಂದ್ರ, ವೆಂಕಟೇಶ್ ನಾಯ್ಕ ಮತ್ತಿತರರು ಭಾಗವಹಿಸಲಿದ್ದಾರೆ.

ಅ.6 ರಂದು ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ `ಪುನೀತ್ ರಾಜಕುಮಾರ್ ಕಪ್’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 

ಅಂತರರಾಷ್ಟ್ರೀಯ ತೀರ್ಪುಗಾರರಾದ ಬಿ.ಹೆಚ್. ವಸಂತ್, ಪ್ರಮೋದ್ ರಾಜ್ ಮೋರೆ, ಫಿಡೆ ತೀರ್ಪುಗಾ ರರಾದ ಎಂ. ಬಸವರಾಜ್ ಆಗಮಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಯುವರಾಜ್, ಕರಿಬಸಪ್ಪ, ಪವನ್ ಕುಮಾರ್, ವೈ. ತರುಣ್, ಪ್ರತಾಪ್ ಕುಮಾರ್, ಶ್ರೀಕಾಂತ ಬಗಾರೆ ಉಪಸ್ಥಿತರಿದ್ದರು.

error: Content is protected !!