ನಗರದಲ್ಲಿ ಇಂದು ಮಾಸ್ಟರ್ಸ್ ವೇಟ್, ಪವರ್‌ ಲಿಫ್ಟಿಂಗ್ ಪಂದ್ಯ

ದಾವಣಗೆರೆ, ಸೆ. 27- ಹಿರಿಯ ವೇಟ್‌ ಲಿಫ್ಟರ್ಸ್‌ಗಳಿ ಗಾಗಿ ನಗರದ ಕೆಇಬಿ ಸಮುದಾಯ ಭವನದಲ್ಲಿ ಇದೇ ದಿನಾಂಕ 28 ಮತ್ತು 29 ರಂದು ರಾಷ್ಟ್ರೀಯ ವೇಟ್‌ ಲಿಫ್ಟಿಂಗ್ ಮತ್ತು ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್-2024 ಆಯೋಜಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರೀಡಾಪಟು ಪಿ. ಸಾಯಿನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಳೆ 28 ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಪ್ಯಾನ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ನಟರಾಜ್, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಬಿಜೆಪಿ ಯುವ ಮುಖಂಡ ಶ್ಯಾಮ್ ಮತ್ತಿತರರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾಪಟುಗಳಾದ ಬಸವರಾಜ್, ಷಣ್ಮುಖಚಾರ್, ಜಿ.ಫಕೃದ್ಧೀನ್, ಜಕಣಾಚಾರ್, ರಾಜು, ಮಂಜುನಾಥ್, ವಿರೂಪಾಕ್ಷಪ್ಪ, ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು.

error: Content is protected !!